Published : May 26, 2026, 07:20 AM ISTUpdated : May 26, 2026, 11:30 PM IST

ನದಿಗಳಿಗೆ ತ್ಯಾಜ್ಯ ನೀರು ಬಿಟ್ಟರೆ ಕ್ರಿಮಿನಲ್ ಕೇಸ್ - ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ

ಸಾರಾಂಶ

ಗ್ಯಾರಂಟಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗಷ್ಟೇ ದೊರೆಯುವಂತೆ ಮಾಡಲು ಎರಡು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲು ಸರ್ಕಾರ ಚಿಂತನೆ ನಡೆಸಿದೆ. ಗ್ಯಾರಂಟಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಅಗತ್ಯವಿದ್ದು, ಈ ಕುರಿತು ಪರಿಶೀಲನೆ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಕೆಲ ಫಲಾನುಭವಿಗಳು ಮೃತಪಟ್ಟಿದ್ದು, ಸುಮಾರು 100 ಕೋಟಿಯಷ್ಟು ಹಣ ಬೇರೆಯವರ ಖಾತೆಗೆ ಹೋಗಿ ದುರ್ಬಳಕೆಯಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Eshwar Khandre

11:30 PM (IST) May 26

ನದಿಗಳಿಗೆ ತ್ಯಾಜ್ಯ ನೀರು ಬಿಟ್ಟರೆ ಕ್ರಿಮಿನಲ್ ಕೇಸ್ - ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ

ತ್ಯಾಜ್ಯ ನೀರನ್ನು ಸಂಸ್ಕರಿಸದೆ ನದಿಗೆ ಬಿಡುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಸ್ಥಳೀಯ ಆಡಳಿತಗಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಎಚ್ಚರಿಸಿದ್ದಾರೆ.

Read Full Story

11:12 PM (IST) May 26

BREAKING - ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಾಧ್ಯತೆ

ಕರ್ನಾಟಕ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಸೂತ್ರದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ಹೈಕಮಾಂಡ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದೊಯ್ಯುವ ಯೋಜನೆ ರೂಪಿಸಿದ್ದು, ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿದ್ದಾರೆ. 

Read Full Story

10:17 PM (IST) May 26

ಬೆಂಗಳೂರಿನಲ್ಲಿ ಎಬೋಲಾ ಆತಂಕ - ಉಗಾಂಡಾದಿಂದ ಬಂದ ಮಹಿಳೆ ಆಸ್ಪತ್ರೆಗೆ ಶಿಫ್ಟ್, ಏನಿದು ಪ್ರಕರಣ?

ರಾಜಧಾನಿ ಬೆಂಗಳೂರಿನಲ್ಲಿ ಎಬೋಲಾ ವೈರಸ್ ರೋಗ (EVD) ಶಂಕಿತ ಪ್ರಕರಣ ಪತ್ತೆಯಾಗಿರುವ ಮಾಹಿತಿ ಆತಂಕ ಮೂಡಿಸಿದೆ. ಉಗಾಂಡಾ ದೇಶದಿಂದ ಭಾರತಕ್ಕೆ ಆಗಮಿಸಿದ್ದ 28 ವರ್ಷದ ವಿದೇಶಿ ಮಹಿಳೆಯಲ್ಲಿ..

Read Full Story

09:54 PM (IST) May 26

ಚಳಿಗಾಲದ ಅಧಿವೇಶನ ಸ್ಥಳ ಬದಲಾಗುತ್ತಾ? ಸಚಿವ ಎಚ್.ಕೆ.ಪಾಟೀಲ ಹೇಳಿದ್ದೇನು?

ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ನಡೆಸಲಾಗುವುದು. ಅದನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

Read Full Story

09:24 PM (IST) May 26

ಶಿಕ್ಷಣ ಸಚಿವ ಮಧು ಬಂಗಾರಪ್ಪರನ್ನು ಬದಲಿಸಿ - ಸಿಎಂಗೆ ಎಚ್.ವಿಶ್ವನಾಥ್ ಮನವಿ ಮಾಡಿದ್ದೇಕೆ?

ರಾಜ್ಯದಲ್ಲಿ ಶಾಲಾ ಶಿಕ್ಷಣ ಅದೋಗತಿಗೆ ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಮನವಿ ಮಾಡಿದರು.

Read Full Story

08:50 PM (IST) May 26

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು - ಸಚಿವ ಎನ್.ಚಲುವರಾಯಸ್ವಾಮಿ

ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ನಂಬಿಕೆ ಬೆಳೆಸಿಕೊಳ್ಳಬೇಕು. ವೈದ್ಯರು ತಮ್ಮ ಬಳಿಗೆ ಬರುವ ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷೆ ಮಾಡಿ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.

Read Full Story

08:11 PM (IST) May 26

'ಲೋ ನವೀನ' ಸಿನಿಮಾ ವೀಕ್ಷಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ - ನವೀನ್ ಸಜ್ಜುಗೆ ಹೇಳಿದ ಮಾತು ವೈರಲ್!

ಗಾಯಕ, ಸಂಗೀತ ನಿರ್ದೇಶಕ ಹಾಗೂ ಇದೀಗ ನಾಯಕನಟನಾಗಿ ಗುರುತಿಸಿಕೊಂಡಿರುವ ನವೀನ್ ಸಜ್ಜು ಅಭಿನಯದ ಚೊಚ್ಚಲ ಸಿನಿಮಾ ‘ಲೋ ನವೀನ’ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಇದೀಗ ದೊಡ್ಮನೆ ಕುಟುಂಬದಿಂದಲೂ ವಿಶೇಷ ಪ್ರಶಂಸೆ ಸಿಕ್ಕಿದೆ.

Read Full Story

07:50 PM (IST) May 26

ಕರ್ನಾಟಕದ ‘ದ್ವೇಷ ಭಾಷಣ ತಡೆ ವಿಧೇಯಕ’ಕ್ಕೆ ಕೇಂದ್ರದ ಬ್ರೇಕ್ - ಹಾಲಿ ಕಾನೂನುಗಳೇ ಸಾಕು ಎಂದ ಗೃಹ ಸಚಿವಾಲಯ

ಕರ್ನಾಟಕದಲ್ಲಿ ದ್ವೇಷ ಭಾಷಣ ಮತ್ತು ಅಪರಾಧಗಳನ್ನು ತಡೆಯಲು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ 'ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷದ ಅಪರಾಧಗಳ (ತಡೆಗಟ್ಟುವಿಕೆ) ವಿಧೇಯಕ'ವನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ. 

Read Full Story

07:27 PM (IST) May 26

ಹೊಸ ಹೇರ್‌ಸ್ಟೈಲ್‌ನಲ್ಲಿ ಗುರುತೇ ಸಿಗದಷ್ಟು ಬದಲಾದ್ರಾ 'ಕೃಷ್ಣ ರುಕ್ಕು' ನಟಿ - ಇಲ್ಲಿವೆ ಮೌನಾ ಗುಡ್ಡೆಮನೆ ಫೋಟೋಸ್!

ಹೊಸ ಹೇರ್‌ಸ್ಟೈಲ್ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮನಗೆದ್ದಿರುವ ಕಿರುತೆರೆಯ ಜನಪ್ರಿಯ ನಟಿ ಮೌನಾ ಗುಡ್ಡೆಮನೆ ಅವರ ಈ ಲುಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

07:11 PM (IST) May 26

ರಾಜ್ಯ ರಾಜಕೀಯದಲ್ಲಿ ಹೈವೋಲ್ಟೇಜ್‌ ಸಸ್ಪೆನ್ಸ್ - ಸಿಎಂ ಸಿದ್ದರಾಮಯ್ಯಗೆ ರಾಜ್ಯಸಭೆ ಆಫರ್ ನೀಡಿದ ಕಾಂಗ್ರೆಸ್ ಹೈಕಮಾಂಡ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ರಾಜ್ಯಸಭೆ ಸ್ಥಾನದ ಆಫರ್ ನೀಡಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ತಕ್ಷಣವೇ ಒಪ್ಪಿಕೊಂಡಿಲ್ಲ.

Read Full Story

06:52 PM (IST) May 26

ಬೆಂಗಳೂರಲ್ಲಿ ಭಾರೀ ಮಳೆ - ಮೆಟ್ರೋ ಹಳಿ ಮೇಲೆ ಬಿದ್ದ ಮರದ ಕೊಂಬೆ, ಪರ್ಪಲ್ ಲೈನ್ ಮೆಟ್ರೋ ಸಂಚಾರ ತಾತ್ಕಲಿಕ ಸ್ಥಗಿತ!

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮೆಟ್ರೋ ಹಳಿಯ ಮೇಲೆ ಮರದ ಕೊಂಬೆ ಬಿದ್ದ ಪರಿಣಾಮ, ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಗರುಡಾಚಾರ್ ಪಾಳ್ಯ ನಡುವಿನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಜೆ ಪೀಕ್ ಅವರ್‌ನಲ್ಲಿ ಘಟನೆ ನಡೆದಿದ್ದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದರು.

Read Full Story

06:50 PM (IST) May 26

ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ - ಬ್ರೇಕಪ್ ಬಗ್ಗೆ ಹೇಳಿ ಕಣ್ಣೀರಿಟ್ಟ ನಟಿ ಕೃಷಿ ತಾಪಂಡ!

ನಟಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಇದೀಗ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

Read Full Story

06:32 PM (IST) May 26

ಸಿಎಂ ಬದಲಾವಣೆ ಚರ್ಚೆ ಬರೀ ನಿಮ್ಮ ಊಹೆ, ರಾಜ್ಯಸಭೆ ಚುನಾವಣೆ ಬಗ್ಗೆ ಮಾತ್ರ ಚರ್ಚೆ ಎಂದ ಕೆಸಿ ವೇಣುಗೋಪಾಲ್‌

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಉನ್ನತ ಮಟ್ಟದ ಸಭೆಯ ಬಳಿಕ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಎಲ್ಲಾ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.

Read Full Story

06:11 PM (IST) May 26

'ಸುಪ್ರೀಂ ತೀರ್ಪಿನ ಉಲ್ಲಂಘನೆ' ಮೇಕೆದಾಟು ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌ ವಿರೋಧ, ಪ್ರಧಾನಿಗೆ ಪತ್ರ!

ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಯೋಜನೆಯು ಸುಪ್ರೀಂ ಕೋರ್ಟ್ ತೀರ್ಪು ಮತ್ತು ಕಾವೇರಿ ನ್ಯಾಯಾಧೀಕರಣದ ಆದೇಶದ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಆರೋಪಿಸಿದ್ದಾರೆ.

Read Full Story

04:52 PM (IST) May 26

ಶಿವಾನಂದ ನೀಲಣ್ಣನವರ್ 5 ಕೋಟಿ ಮೌಲ್ಯದ ನಾಲ್ಕು ಐಷಾರಾಮಿ ಕಾರು ಸೀಜ್, ಬೆಳಗಾವಿ ವಂಚನೆ ಕೇಸ್

ಬೆಳಗಾವಿಯಲ್ಲಿನ ಬಹುಕೋಟಿ ವಂಚನೆ ಪ್ರಕರಣದ ತನಿಖೆ ತೀವ್ರಗೊಂಡಿದೆ. 45000 ಕೋಟಿ ರೂಪಾಯಿ ಹಗರಣದಲ್ಲಿ ಅರೆಸ್ಟ್ ಆಗಿರುವ ಶಿವಾನಂದ ನೀಲಣ್ಣನವರ್ ಐಷಾರಾಮಿ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

Read Full Story

04:25 PM (IST) May 26

ಭಟ್ಕಳ ದುರಂತ - ಇವರು ಎಣಿಸಿದ್ದೇ ಒಂದು, ವಿಧಿಯಾಟವೇ ಮತ್ತೊಂದು! ಒಂದು ತುತ್ತು ಊಟಕ್ಕೆ 11 ಜೀವಗಳು ಬಲಿ!

ವರದಿ: ರಾಘವೇಂದ್ರ ಹೆಬ್ಬಾರ

ಭಟ್ಕಳದ ಸಾರದಹೊಳೆ ಗ್ರಾಮದ 11 ಬಡ ಕೂಲಿ ಕಾರ್ಮಿಕರು ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ದುರಂತದಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು, ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ ಮೃತರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿತು.

Read Full Story

03:53 PM (IST) May 26

ಬೆಳಗಾವಿಯ ಅಥಣಿಯಿಂದ ಮಹಾರಾಷ್ಟ್ರ, ಆಂಧ್ರಕ್ಕೆ ಹೊಸ ಸಾರಿಗೆ ಬಸ್ ಆರಂಭ, ಅಂತಾರಾಜ್ಯ ಬಸ್ ಸೇವೆಯ ಸಮಯ ಹೀಗಿದೆ

ಶಾಸಕ ಲಕ್ಷ್ಮಣ ಸವದಿ ಅವರು ಅಥಣಿಯಿಂದ ನೆರೆಯ ಮಹಾರಾಷ್ಟ್ರದ ಪುಣೆ ಮತ್ತು ಕೊಲ್ಲಾಪುರಕ್ಕೆ ನೂತನ ಅಂತಾರಾಜ್ಯ ಬಸ್ ಸೇವೆಗೆ ಚಾಲನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಆಂಧ್ರಪ್ರದೇಶದ ಶ್ರೀಶೈಲಂಗೆ ಹಾಗೂ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ಸೇವೆ ಆರಂಭಿಸುವ ಭರವಸೆಯನ್ನೂ ನೀಡಿದ್ದಾರೆ.
Read Full Story

03:39 PM (IST) May 26

ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಚಿಕ್ಕಮಗಳೂರಿನಲ್ಲಿ ಬೆಳಗ್ಗಿನಿಂದಲೇ ಮಳೆ

ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದಾದ್ಯಂತ ಮುಂದಿನ 5-6 ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದು, ಶೀಘ್ರದಲ್ಲೇ ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ.
Read Full Story

03:39 PM (IST) May 26

ಬೆಂಗಳೂರು ವಾಹನ ಸವಾರರೇ ಗಮನಿಸಿ - ಕಾಮರಾಜ್ ರಸ್ತೆ 60 ದಿನ ಬಂದ್, ಸಂಚಾರ ಮಾರ್ಗ ಬದಲಾವಣೆ, ಇಲ್ಲಿದೆ ಕಂಪ್ಲೀಟ್ ಗೈಡ್

ಬೆಂಗಳೂರಿನ ಕಾಮರಾಜ್ ರಸ್ತೆಯಲ್ಲಿ ಕಲ್ವರ್ಟ್ ನಿರ್ಮಾಣ ಕಾಮಗಾರಿಯಿಂದಾಗಿ, ಮುಂದಿನ 60 ದಿನಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪುಲಕೇಶಿನಗರ ಮತ್ತು ಬಾಣಸವಾಡಿ ಕಡೆಗೆ ಹೋಗುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
Read Full Story

03:09 PM (IST) May 26

ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ಇಲ್ಲಿ ಮಾತಾಡಿದ್ದಕ್ಕೆ, ತಮಿಳುನಾಡಲ್ಲಿ ಹೊತ್ತಿಕೊಂಡ ಜ್ವಾಲೆ, ತೀವ್ರ ರಾಜಕೀಯ ಸಂಘರ್ಷ

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಕೆದಾಟು ಯೋಜನೆ ಕುರಿತ ಹೇಳಿಕೆಯು ತಮಿಳುನಾಡಿನಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ತಮಿಳುನಾಡಿನ ಆಡಳಿತ ಮತ್ತು ವಿರೋಧ ಪಕ್ಷಗಳು, ಕರ್ನಾಟಕದ ವಿರುದ್ಧ ಕಾನೂನು ಹೋರಾಟವನ್ನು ತೀವ್ರಗೊಳಿಸಲು ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಈ ಬೆಳವಣಿಗೆಯು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
Read Full Story

02:37 PM (IST) May 26

ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!

ಬೆಂಗಳೂರಿನಲ್ಲಿ ನಂಬಿಕೆದ್ರೋಹದ ಪ್ರಕರಣ ಬೆಳಕಿಗೆ ಬಂದಿದೆ. ರಾಜರಾಜೇಶ್ವರಿನಗರದಲ್ಲಿ ವಾಸವಿರುವ ಅಂಧ ಮಹಿಳೆಯ ಮನೆಗೆ ಸ್ನೇಹಿತರಂತೆ ಮನೆಗೆ ಬರುತ್ತಿದ್ದ ದಂಪತಿಗಳು ಚಿನ್ನಾಭರಣ ದೋಚಿದ್ದಾರೆ, ವರ್ಷದ ಬಳಿಕ ಕಳ್ಳತನ ಗೊತ್ತಾಗಿ ಎಫ್‌ಐಆರ್ ದಾಖಲಿಸಿದಾಗ ಪೊಲೀಸರು ಖದೀಮರನ್ನ ಹೇಗೆ ಪತ್ತೆಹಚ್ಚಿದರು ಗೊತ್ತಾ?.

Read Full Story

02:14 PM (IST) May 26

ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ

ಗದಗದ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಕಲ್ಯಾಣ ಚಾಲುಕ್ಯರ ಕಾಲದ, 2ನೇ ಜಗದೇಕಮಲ್ಲನ ಆಳ್ವಿಕೆಯನ್ನು ಉಲ್ಲೇಖಿಸುವ ಹೊಸ ತುಂಡು ಶಾಸನ ಪತ್ತೆಯಾಗಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 12ನೇ ಶತಮಾನದ ಕುಂತಳನಾಡು ಹಾಗೂ ಮಾಸವಾಡಿ ಆಡಳಿತ ಘಟಕಗಳ ಬಗ್ಗೆ ಮಾಹಿತಿ ನೀಡುತ್ತದೆ.
Read Full Story

02:07 PM (IST) May 26

ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!

ಬೆಂಗಳೂರಿನ ಹೆಸರಘಟ್ಟದಲ್ಲಿರುವ ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ನುಗ್ಗಿದ ಕಳ್ಳರ ಗ್ಯಾಂಗ್, ಬಂಗಾರವನ್ನು ಮುಟ್ಟದೆ ಕೆಜಿಗಟ್ಟಲೆ ಬೆಳ್ಳಿ ಮಾತ್ರ ದೋಚಿತ್ತು. ಈ ಪ್ರಕರಣವನ್ನು ಭೇದಿಸಿದ ಬಾಗಲಗುಂಟೆ ಪೊಲೀಸರು, ರಾಜಸ್ಥಾನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 36 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

Read Full Story

01:58 PM (IST) May 26

ಪುರುಷರಿಗೆ ನಾಚಿಕೆ ಆಗಬೇಕು- ಸಿಕ್ಸ್‌ ಪ್ಯಾಕ್‌ ಮಾಡಿ ತೋರಿಸಿದ ಕನ್ನಡದ ಸ್ಟಾರ್‌ ನಟನ ಮಗಳು! ಯಾರದು?

Kannada Star Actor Daughter: ಕನ್ನಡದ ಸ್ಟಾರ್‌ ನಟನ ಮಗಳೋರ್ವರು ಸಿಕ್ಸ್‌ ಪ್ಯಾಕ್‌ ಮಾಡಿದ್ದಾರೆ. ಈಗ ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಹಾಗಾದರೆ ಯಾರದು? ಅವರು ಯಾರು? 

Read Full Story

01:49 PM (IST) May 26

ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕೊಲೆಗಾರ ವೈದ್ಯ ಗಂಡನ ರಹಸ್ಯ ಬಯಲು ಮಾಡಿದ 6 ಸಾಕ್ಷಿಗಳಿವು!

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ, ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ ಡಾ. ಕೃತಿಕಾ ರೆಡ್ಡಿ ಅವರಿಗೆ ಅರಿವಳಿಕೆ ಔಷಧಿಯ ಅಧಿಕ ಡೋಸ್ ನೀಡಿ ಕೊಲೆ ಮಾಡಿದ್ದಾನೆ. ಪರಸ್ತ್ರೀ ಸಂಬಂಧದ ಹಿನ್ನೆಲೆಯಲ್ಲಿ, ಗೂಗಲ್‌ನಲ್ಲಿ ಕೊಲೆಗೆ ಸಂಚು ರೂಪಿಸಿದ್ದು, ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Read Full Story

01:27 PM (IST) May 26

ಸಿದ್ದರಾಮಯ್ಯ, ಡಿಕೆಶಿ ಅಲ್ಲ, 'ನಾನೇ ಮುಂದಿನ ಸಿಎಂ' ವಾಟಾಳ್ ನಾಗರಾಜ್ ಸ್ಫೋಟಕ ಹೇಳಿಕೀ

ಬೆಳಗಾವಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆ ಅಂಗೀಕರಿಸದಿದ್ದರೆ ಕಂಡರಿಯದ ಕ್ರಾಂತಿ ಮಾಡುವುದಾಗಿ ಎಚ್ಚರಿಸಿದ್ದಾರೆ. ಮುಂದಿನ ಬಾರಿ ತಾವೇ ಮುಖ್ಯಮಂತ್ರಿಯಾಗುವುದಾಗಿಯೂ ಹೇಳಿದ್ದಾರೆ.

Read Full Story

12:59 PM (IST) May 26

ದೈವಕ್ಕೆ ಅವಮಾನ, ಚಿತ್ರರಂಗದಿಂದ ಬ್ಯಾನ್ ಚಾಮುಂಡಿ ಬೆಟ್ಟಕ್ಕೆ ಓಡೋಡಿ ಬಂದು ತಾಯಿ ಮುಂದೆ ಮಂಡಿಯೂರಿದ ರಣವೀರ್ ಸಿಂಗ್!

ಕರಾವಳಿಯ ಪವಿತ್ರ ದೈವಾರಾಧನೆಯನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಕಾನೂನು ಹೋರಾಟಕ್ಕೆ ಮಣಿದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಅವರು ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮಂಡಿಯೂರಿ ಬೇಷರತ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
Read Full Story

12:50 PM (IST) May 26

ಎರಡು ಕಣ್ಣು ಸಾಲದು.. ಕಂಗೊಳಿಸಿದ ಮಗಳು ಐಶ್ವರ್ಯಾ; ಮೊಬೈಲ್‌ನಲ್ಲಿ ಫೋಟೋ ತೆಗೆದು ಖುಷಿಪಟ್ಟ ನಟ ಉಪೇಂದ್ರ

Actor Upendra: ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ನಿರಂಜನ್‌ ಸುಧೀಂದ್ರ ಅವರ ನಿಶ್ಚಿತಾರ್ಥದಲ್ಲಿ ಭಾಗಿ ಆಗಿದ್ದಾರೆ. ಇನ್ನು ಉಪೇಂದ್ರ ಮಕ್ಕಳು ಕೂಡ ಅಣ್ಣನ ಎಂಗೇಜ್‌ಮೆಂಟ್‌ನಲ್ಲಿ ಖುಷಿಯಿಂದ ಸಮಯ ಕಳೆದಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

12:33 PM (IST) May 26

Mahalakshmi Maduve Serial - ಮದುವೆ ಆದ್ಮೇಲೂ ತಂದೆ ಮನೆಗೆ ಹಣ ಕೊಡ್ತೀನಿ ಎಂದು ಹಠ ಹಿಡಿದ ಮಹಾಲಕ್ಷ್ಮೀ!

Mahalakshmi Maduve Serial: ನಟಿ ಅಮೂಲ್ಯ ಗೌಡ, ಭರತ್‌ ಶಿವಣ್ಣ, ಶಿವಾಜಿರಾವ್‌ ಜಾಧವ್, ಸೀತಾ ಕೋಟೆ, ಅಮೃತಾ ರಾಮಮೂರ್ತಿ, ಪದ್ಮಿನಿ, ಹರಿಪ್ರಿಯಾ, ಮಂಜು ಪಾವಗಡ, ಮಾನಸ, ಮೇಘಶ್ರೀ, ‌ಪ್ರತೀಕ್ಷಾ, ಸ್ನೇಹಾ ಭಟ್‌, ಧನುಷ್‌ ಗೌಡ ನಟಿಸುತ್ತಿರುವ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿ ಉದಯ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

 

Read Full Story

12:18 PM (IST) May 26

'ದೆಹಲಿಗೆ ಅಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ..' ರಾಜಕೀಯ ಗೊಂದಲದ ಮಧ್ಯೆ ರಾಜಣ್ಣ ಹೊಸ ಬಾಂಬ್!

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಅಮೆರಿಕ ಪ್ರವಾಸ, ಸಿಎಂ ಬದಲಾವಣೆ, ಮತ್ತು ಸಂಪುಟ ಪುನರ್‌ರಚನೆ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮತ್ತೆ ಮಾತನಾಡಿದ್, ಡಾ.ಜಿ. ಪರಮೇಶ್ವರ್ ಸಿಎಂ ಆಗಬೇಕೆಂಬ ತಮ್ಮ ಅಭಿಪ್ರಾಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. 

Read Full Story

11:34 AM (IST) May 26

ಕೆಪಿಎಸ್ ಶಾಲೆಗಳಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚಲಿವೆಯೇ? ಬಸವರಾಜ ಹೊರಟ್ಟಿ ಆತಂಕ

ಕೆಪಿಎಸ್ ಶಾಲೆಗಳ ಸ್ಥಾಪನೆಯಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಅಪಾಯವಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ, ಶಿಕ್ಷಕರ ಕೊರತೆ, ಮತ್ತು ಅವೈಜ್ಞಾನಿಕ ಮೌಲ್ಯಮಾಪನದ ಬಗ್ಗೆಯೂ ಅವರು ತೀವ್ರ ಅಸಮಾಧಾನ 

Read Full Story

10:33 AM (IST) May 26

ಮನೆಯೊಳಗೆ ನಡೆದಿದ್ದೇನು? ಸೊಸೆ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ 75 ವರ್ಷದ ಮುದುಕ ಮಾವನಿಗೆ ಜಾಮೀನು!

ಸೊಸೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ 75 ವರ್ಷದ ಮಾವನಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಸಂತ್ರಸ್ತ ಸೊಸೆಯೇ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ನ್ಯಾಯಾಲಯ ಈ ಆದೇಶ ಮಾಡಿದೆ.
Read Full Story

10:27 AM (IST) May 26

ಕರ್ನಾಟಕದಲ್ಲಿ ಹೋಟೆಲ್ ತಿಂಡಿ ದರ ಶೇ.60ರಷ್ಟು ಏರಿಕೆ ಸಾಧ್ಯತೆ! ಮಸಾಲೆ ದೋಸೆಗೆ ದುಪ್ಪಟ್ಟು, ಕಾರಣ ಗ್ಯಾಸ್ ಅಲ್ಲ!

ರಾಜ್ಯ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಹೆಚ್ಚಿಸಿರುವುದರಿಂದ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರ ಶೇ.60ರಷ್ಟು ಹೆಚ್ಚಳವಾಗಲಿದೆ ಎಂದು ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಇದರಿಂದ ಮಸಾಲೆ ದೋಸೆ ದರ 150 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು  ಸಂಘ ಹೇಳಿದೆ.

Read Full Story

10:04 AM (IST) May 26

Ballari shock - ಬಕ್ರೀದ್‌ಗಾಗಿ ಗೋವುಗಳ ಕೂಡಿಹಾಕಿದ ಆರೋಪ - ಬಳ್ಳಾರಿ ಹಳೇ ಬೈಪಾಸ್‌ನಲ್ಲಿ ಪೊಲೀಸರ ದಾಳಿ; 50ಕ್ಕೂ ಹೆಚ್ಚು ಗೋವುಗಳ ರಕ್ಷಣೆ

ಬಳ್ಳಾರಿಯ ಕೊಟ್ಟಿಗೆಯೊಂದರಲ್ಲಿ 50ಕ್ಕೂ ಹೆಚ್ಚು ಗೋವುಗಳನ್ನು ಕೂಡಿಹಾಕಿದ್ದನ್ನು ಹಿಂದೂ ಸಂಘಟನೆಗಳ ಮಾಹಿತಿಯ ಮೇರೆಗೆ ಪೊಲೀಸರು ಪತ್ತೆಹಚ್ಚಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಸಾಯಿಖಾನೆಗೆ ಸಾಗಿಸಲು ಇವುಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

Read Full Story

07:22 AM (IST) May 26

ಗೃಹಲಕ್ಷ್ಮಿ-ಗೃಹಜ್ಯೋತಿ ದುರ್ಬಳಕೆಯಿಂದ ಸರ್ಕಾರಕ್ಕೆ 100 ಕೋಟಿ ನಷ್ಟ, ಇನ್ಮುಂದೆ ಎಲ್ಲರಿಗೂ ಸಿಗಲ್ಲ ಗ್ಯಾರಂಟಿ! ಸರ್ಕಾರದ ಮಾಸ್ಟರ್ ಪ್ಲಾನ್ ಏನು?

ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಗ್ಯಾರಂಟಿ ಯೋಜನೆಗಳಲ್ಲಿನ ದುರ್ಬಳಕೆ ಮತ್ತು ಹಣ ಸೋರಿಕೆ ತಡೆಯಲು ಸರ್ಕಾರ ಮುಂದಾಗಿದೆ. ಮೃತಪಟ್ಟವರು ಮತ್ತು ಅನರ್ಹರ ಹೆಸರಿನಲ್ಲಿ ಹಣ ದುರ್ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಿ, ಹೊಸದಾಗಿ ಅರ್ಜಿ ಪಡೆಯಲು ಸರ್ಕಾರ ಚಿಂತನೆ.

Read Full Story

More Trending News