LIVE NOW
Published : Jan 25, 2026, 04:58 AM ISTUpdated : Jan 25, 2026, 09:51 AM IST

Karnataka News Live: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸಲು ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಮುಂದೆ ಮಾನಸಿಕ ಆರೋಗ್ಯ ಸಮಾಲೋಚಕರ ನೇಮಕ!

ಸಾರಾಂಶ

ಹಾಸನ: ‘ಸ್ವಲ್ಪ ಕಾಯಿರಿ, ನಮಗೂ ಕಾಲ ಬರುತ್ತೆ. ನಾವು ಯಾರೆಂದು ಈ ಸರ್ಕಾರಕ್ಕೆ ಮತ್ತೆ ತೋರಿಸುತ್ತೇವೆ. ಆ ನಂಬಿಕೆ ನನಗಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಶನಿವಾರ ನಡೆದ ಜೆಡಿಎಸ್‌ ಜನತಾ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ‘ರಾಜ್ಯದ ಕಾಂಗ್ರೆಸ್‌ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ಮೂಲಕ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹಿಂದೆ ನನ್ನ ಮನೆಯಲ್ಲಿ ನನ್ನ ಪುತ್ರ ಎಚ್.ಡಿ.ರೇವಣ್ಣ ಇದ್ದಾಗ ಎಸ್‌ಐಟಿ ಅಧಿಕಾರಿಗಳು ಬಂದು ಯಾವುದೋ ಕೇಸಿನ ಸಂಬಂಧ ರೇವಣ್ಣ ಅವರನ್ನು ಅರೆಸ್ಟ್‌ ಮಾಡುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆದೊಯ್ದರು. ಆಗ ನಾನೂ ಕೂಡ ಅಲ್ಲಿಯೇ ಇದ್ದೆ. ಈಗ ಅದೇ ಸರ್ಕಾರ ರೇವಣ್ಣ ಅವರನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಉಡುಗೊರೆ ರೂಪದಲ್ಲಿ ಲಕ್ಷಾಂತರ ರುಪಾಯಿಗಳನ್ನು ನೀಡಿದೆ’ ಎಂದು ಆರೋಪಿಸುತ್ತಾ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯೊಂದನ್ನು ಜನರ ಮುಂದಿಟ್ಟರು.

 

09:51 AM (IST) Jan 25

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಬಲಪಡಿಸಲು ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಮುಂದೆ ಮಾನಸಿಕ ಆರೋಗ್ಯ ಸಮಾಲೋಚಕರ ನೇಮಕ!

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಖಿನ್ನತೆ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸುವ ಸಲುವಾಗಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನೆಲ್ಲಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನೇಮಕವನ್ನು ಕಡ್ಡಾಯಗೊಳಿಸಿದೆ.  

Read Full Story

09:03 AM (IST) Jan 25

ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಸಮಯ ಬದಲಾವಣೆ!

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯುವ ಹೊಸ ನಿಯಮದಂತೆ, ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ-2 ಮತ್ತು 3ರ ಸಮಯವನ್ನು ಪರಿಷ್ಕರಿಸಿದೆ. ವಿದ್ಯಾರ್ಥಿಗಳ ಊಟದ ಸಮಯದ ಅನಾನುಕೂಲತೆ ತಪ್ಪಿಸಲು, ಪರೀಕ್ಷೆಯನ್ನು  10.30 ಗಂಟೆಗೆ ಆರಂಭಿಸಲು ನಿರ್ಧರಿಸಲಾಗಿದೆ.

Read Full Story

08:33 AM (IST) Jan 25

ಪಾಂಡವಪುರ - ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ಪರವಾನಿಗೆ ನೀಡುವಂತೆ ಮೀನುಗಾರರ ಒತ್ತಾಯ

ಪಾಂಡವಪುರದ ತೊಣ್ಣೂರು ಕೆರೆಯಲ್ಲಿ ಮೀನು ಹಿಡಿಯಲು ನೇರ ಪರವಾನಗಿ ನೀಡಬೇಕೆಂದು ಒತ್ತಾಯಿಸಿ, ಸುತ್ತಮುತ್ತಲಿನ ಗ್ರಾಮಗಳ ಮೀನುಗಾರರು ಪ್ರತಿಭಟನೆ ನಡೆಸಿದರು. ಸಹಕಾರ ಸಂಘಗಳ ಬದಲು ತಮಗೇ ನೇರವಾಗಿ ಲೈಸೆನ್ಸ್ ನೀಡುವಂತೆ ಆಗ್ರಹಿಸಿ, ಮೀನುಗಾರಿಕೆ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
Read Full Story

08:32 AM (IST) Jan 25

ಕಡಬ - ತಂದೆಗೆ ಚಾಕುವಿನಿಂದ ಇರಿದು ಬಳಿಕ ಗುಂಡಿಕ್ಕಿಕೊಂಡ ಬಾಲಕ - ಮಂಗಳೂರಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ, ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಚಾಕುವಿನಿಂದ ಇರಿದು, ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

07:41 AM (IST) Jan 25

2026ರ ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಮಾಣೆಕ್‌ ಷಾ ಮೈದಾನ ಸಜ್ಜು; ಈ ಬಾರಿ ಏನು ಹೊಸತು?

ಬೆಂಗಳೂರಿನ ಮಾಣೆಕ್‌ ಶಾ ಪರೇಡ್‌ ಮೈದಾನದಲ್ಲಿ 77ನೇ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. 10 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, 2 ಸಾವಿರಕ್ಕೂ ಹೆಚ್ಚು ಪೊಲೀಸರ ಭದ್ರತೆ ಜೊತೆಗೆ 30 ತುಕಡಿಗಳಿಂದ ಪಥ ಸಂಚಲನ ನಡೆಯಲಿದ್ದು, ಈ ಬಾರಿ ವಾಯುಸೇನೆಯ ಬೈಕ್‌ ಸಾಹಸ ಪ್ರದರ್ಶನ ಇರುವುದಿಲ್ಲ.
Read Full Story

07:31 AM (IST) Jan 25

Ballari - ಜನಾರ್ದನ ರೆಡ್ಡಿ ಮಾಡೆಲ್ ಹೌಸ್‌ಗೆ ಬೆಂಕಿ ಇಟ್ಟವರು ಯಾರು ಪ್ರಶ್ನೆಗೆ ಸಿಕ್ತು ಉತ್ತರ

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್‌ಗೆ ಬೆಂಕಿ ಬಿದ್ದಿದ್ದು, ರೀಲ್ಸ್ ಮಾಡಲು ಬಂದಿದ್ದ 8 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇದು ರೀಲ್ಸ್ ಮಾಡುವ ಹುಡುಗರ ಕೃತ್ಯವಲ್ಲ, ಇದರ ಹಿಂದೆ ಶಾಸಕ ಭರತ್ ರೆಡ್ಡಿ ಕೈವಾಡವಿದೆ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
Read Full Story

07:12 AM (IST) Jan 25

ನಂಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ - ವೇದಿಕೆಯಲ್ಲಿ ಭಾವುಕರಾದ ಮಾಜಿ ಪ್ರಧಾನಿ ದೇವೇಗೌಡ

ಎಚ್‌.ಡಿ.ದೇವೇಗೌಡರು, ತಮ್ಮ ತೀವ್ರ ಅನಾರೋಗ್ಯ ಮತ್ತು ಡಯಾಲಿಸಿಸ್ ಚಿಕಿತ್ಸೆಯ ನಡುವೆಯೂ ರಾಜ್ಯದ ಜನರಿಗಾಗಿ ಹೋರಾಡುವುದಾಗಿ ಗುಡುಗಿದ್ದಾರೆ.  ಪುತ್ರ ರೇವಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನಮಗೂ ಕಾಲ ಬರುತ್ತದೆ ಎಂದು ಎಚ್ಚರಿಸಿದರು.

Read Full Story

06:43 AM (IST) Jan 25

ಬೃಹತ್ ಕಟೌಟ್ ಬಿದ್ದು ಗಾಯಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಸಿಎಂ

ಹುಬ್ಬಳ್ಳಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಮನೆ ಹಂಚಿಕೆ ಕಾರ್ಯಕ್ರಮದಲ್ಲಿ ಬೃಹತ್ ಕಟೌಟ್ ಬಿದ್ದು ಮೂವರು ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಘಟನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Read Full Story

06:37 AM (IST) Jan 25

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌; ಆತಂಕಕ್ಕೆ ಕಾರಣವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೂಚನೆ

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಒಳಮೀಸಲಾತಿ ಅನ್ವಯ ಹೊಸ ಜಾತಿ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಈ ಸೂಚನೆ ಬಂದಿರುವುದರಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೊಳಗಾಗಿದ್ದಾರೆ.

Read Full Story

06:12 AM (IST) Jan 25

ದೇಶದ ಅತಿದೊಡ್ಡ ದರೋಡೆ - ₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವಿಯಲ್ಲಿ ನಾಪತ್ತೆ!

ಗೋವಾದಿಂದ ಮಹಾರಾಷ್ಟ್ರಕ್ಕೆ ₹400 ಕೋಟಿ ನಗದು ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳು ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಆಗಿವೆ. ದೇಶದ ಅತಿದೊಡ್ಡ ದರೋಡೆ ಎನ್ನಲಾದ ಈ ಪ್ರಕರಣ ತಿಂಗಳುಗಳ ನಂತರ ಬೆಳಕಿಗೆ ಬಂದಿದ್ದು, ಮೂರು ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ.

Read Full Story

05:55 AM (IST) Jan 25

ಗಣರಾಜ್ಯ ದಿನದಲ್ಲೂ ಸರ್ಕಾರ V/s ಗೌರ್ನರ್‌ ಸಂಘರ್ಷ? - ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದ್ತಾರಾ?

ಗಣರಾಜ್ಯೋತ್ಸವ ಸಮಾರಂಭಕ್ಕಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಈ ಭಾಷಣವನ್ನು ಓದಲಿದ್ದಾರೆಯೇ ಅಥವಾ ತಿದ್ದುಪಡಿಗೆ ಸೂಚಿಸಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
Read Full Story

05:47 AM (IST) Jan 25

ಮನೆ ಮುಂದೆ ಕಾರು ನಿಲ್ಲಿಸಿದ್ದಕ್ಕೆ ಕಾಂಗ್ರೆಸ್‌ ನಾಯಕನ ಕುಟುಂಬದವರ ಜತೆ ಸ್ಥಳೀಯರ ಜಗಳ

ವಿದ್ಯಾರಣ್ಯಪುರದಲ್ಲಿ ಹೊಸ BMW ಕಾರು ಪೂಜೆ ವಿಚಾರವಾಗಿ ಕಾಂಗ್ರೆಸ್‌ ನಾಯಕನ ಕುಟುಂಬ ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದಿದೆ. ದೇವಾಲಯದ ಬಳಿ ಕಾರು ನಿಲ್ಲಿಸಿದ್ದಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದ್ದು, ಎರಡೂ ಕಡೆಯವರು ದೂರು-ಪ್ರತಿ ದೂರು ದಾಖಲಿಸಿದ್ದಾರೆ.
Read Full Story

05:42 AM (IST) Jan 25

ಲ್ಯಾಂಬೊರ್ಗಿನಿ ಕಾರು ಅಪಾಯಕಾರಿ ಚಾಲನೆ ಕೇಸ್‌ - ಮಾಲೀಕನ ವಿರುದ್ಧ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಮೈಸೂರು ರಸ್ತೆಯಲ್ಲಿ ಲ್ಯಾಂಬೊರ್ಗಿನಿ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಿದ್ದು, ಸಮುದಾಯ ಸೇವೆ ಮಾಡಲು ಸಿದ್ಧ ಎಂದು ಕಾರು ಮಾಲೀಕರು ತಿಳಿಸಿದ್ದಾರೆ.
Read Full Story

05:34 AM (IST) Jan 25

ಬಡವರಿಗೆ ಮನೆ ಹಂಚಿಕೆಯಿಂದ ಬಿಜೆಪಿಗೆ ಹೊಟ್ಟೆ ಕಿಚ್ಚು - ವಸತಿ ಸಚಿವ ಜಮೀರ ಅಹಮದ್‌ ಖಾನ್‌

ಹುಬ್ಬಳ್ಳಿಯಲ್ಲಿ 42,354 ಮನೆಗಳನ್ನು ಹಂಚಿಕೆ ಮಾಡಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಬಡವರಿಗೆ ಮನೆ ನೀಡುತ್ತಿರುವುದನ್ನು ಕಂಡು ಬಿಜೆಪಿಗೆ ಹೊಟ್ಟೆಕಿಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು. ಹಿಂದಿನ ಬಿಜೆಪಿ ಸರ್ಕಾರ ಒಂದೂ ಮನೆ ನೀಡಿಲ್ಲ, 

Read Full Story

05:28 AM (IST) Jan 25

ತಲಾ ಆದಾಯದಲ್ಲಿ ದೇಶದಲ್ಲಿ ರಾಜ್ಯವೇ ನಂಬರ್‌ ಒನ್‌ - ಖಜಾನೆ ಖಾಲಿ ಅಂದರಿಗೆ ಸಿಎಂ ತಿರುಗೇಟು

ಹುಬ್ಬಳ್ಳಿಯಲ್ಲಿ ವಸತಿ ಯೋಜನೆ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿಲ್ಲ, ಬದಲಿಗೆ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಪ್ರತಿಪಾದಿಸಿದರು. 

Read Full Story

05:23 AM (IST) Jan 25

592ರಲ್ಲಿ 243 ಭರವಸೆ ಈಡೇರಿಸಿ, ನುಡಿದಂತೆ ನಡೆಯುವ ಸರ್ಕಾರ ನಮ್ಮದು - ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿಯಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿ, ಭರವಸೆ ಈಡೇರಿಕೆ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿಗೆ ಸವಾಲೆಸೆದರು. 

Read Full Story

05:17 AM (IST) Jan 25

9ನೇ ದಿನ ಉತ್ಖನನದಲ್ಲಿ ಲಕ್ಕುಂಡಿ ಮನೆಯ ಗೋಡೆಗಳಲ್ಲೂಅದ್ಭುತ ಐತಿಹಾಸಿಕ ಕುರುಹು ಪತ್ತೆ

 9ನೇ ದಿನದ ಉತ್ಖನನದಲ್ಲಿ, ಸಾಮಾನ್ಯ ಮನೆಗಳ ಗೋಡೆಗಳು ಮತ್ತು ಬಾವಿ ಕಟ್ಟೆಗಳಲ್ಲಿ 12ನೇ ಶತಮಾನದ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ಅಪರೂಪದ ಶಿಲಾಕೃತಿಗಳು ಪತ್ತೆಯಾಗಿವೆ. ದಾನ ಶಿಲೆ, ದ್ವಾರಪಾಲಕ ಶಿಲೆ ಸೇರಿದಂತೆ ಈ ಆವಿಷ್ಕಾರಗಳು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.

Read Full Story

More Trending News