Published : May 23, 2026, 04:18 AM ISTUpdated : May 23, 2026, 09:59 PM IST

Karnataka News Live: ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ - ಶಿಕ್ಷಕನ ಹೊಸ ಪ್ರಯತ್ನವೇನು?

ಸಾರಾಂಶ

ಬೆಂಗಳೂರು: ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಲಭ್ಯವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆಗೆ ಕೃಷಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ 8960 ಕ್ವಿಂಟಲ್‌ ಸೋಯಾಬೀನ್‌, 1344 ಕ್ವಿಂಟಲ್ ಶೇಂಗಾ ಬೀಜಕ್ಕೆ ಅಂದಾಜು ಬೇಡಿಕೆ ಇದೆ. ಈಗಾಗಲೇ 2733 ಕ್ವಿಂಟಲ್ ಸೋಯಾಬೀನ್, 305 ಕ್ವಿಂಟಲ್ ಶೇಂಗಾ ಬೀಜ ದಾಸ್ತಾನು ಮಾಡಲಾಗಿದೆ. ಉಳಿದ ಬೇಡಿಕೆಯನ್ನು ಅಗತ್ಯದ ಆಧಾರದಲ್ಲಿ ಪೂರೈಸಲಾಗುವುದು ಎಂದು ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಜ್ಯ ಮಟ್ಟದಲ್ಲಿಯೂ ಸೋಯಾಬೀನ್‌ ಬೀಜಕ್ಕೆ 1.80 ಲಕ್ಷ ಕ್ವಿಂಟಲ್ ಬೇಡಿಕೆ ಅಂದಾಜಿದ್ದು, 2.09 ಲಕ್ಷ ಕ್ವಿಂಟಲ್ ದಾಸ್ತಾನಿದೆ. 70 ಸಾವಿರ ಕ್ವಿಂಟಲ್‌ ಶೇಂಗಾ ಬೀಜಕ್ಕೆ ಬೇಡಿಕೆ ಇದ್ದು, 74 ಸಾವಿರ ಕ್ವಿಂಟಲ್ ದಾಸ್ತಾನಿದೆ. ಒಟ್ಟಾರೆ ರಾಜ್ಯದಲ್ಲಿ ಎಲ್ಲಾ ಬೆಳೆಗಳ 4.71 ಲಕ್ಷ ಕ್ವಿಂಟಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 5.46 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ಹೇಳಿದ್ದಾರೆ.

09:59 PM (IST) May 23

ಸರ್ಕಾರಿ ಶಾಲೇಲಿ 1ನೇ ತರಗತಿ ವಿದ್ಯಾರ್ಥಿಗಳಿಗೆ ₹2 ಸಾವಿರ ಠೇವಣಿ - ಶಿಕ್ಷಕನ ಹೊಸ ಪ್ರಯತ್ನವೇನು?

ಮಕ್ಕಳು ಖಾಸಗಿ ಶಾಲೆಗಳಿಗೆ ಹೋಗದಂತೆ ತಡೆದು, ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಕರೊಬ್ಬರು ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ಮಕ್ಕಳಿಗೂ ತಲಾ 2 ಸಾವಿರ ಠೇವಣಿ ಮಾಡಿಸಲು ಮುಂದಾಗಿದ್ದಾರೆ.

Read Full Story

09:46 PM (IST) May 23

ನಕಲಿ ಬಯೋಮೆಟ್ರಿಕ್‌ - 80ಕ್ಕೂ ಹೆಚ್ಚು ಪಿಡಿಒಗಳ ಹಾಜರಿ ಹಿಂದಿನ ಮುಖವಾಡ ಕಳಚಿದ ಸಿಇಒ ಲವೀಶ್‌

ಗ್ರಾಮಗಳಲ್ಲೇ ಹಾಜರಿದ್ದು, ಸಮಸ್ಯೆಗಳ ಬಗೆಹರಿಸುವಿಕೆಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಸುಳ್ಳು ಹೇಳುತ್ತ, ಬಯೋಮೆಟ್ರಿಕ್‌ ಹಾಜರಿಯನ್ನು ಬೇರೊಬ್ಬರಿಗೆ ನೀಡಿ, ದಿನನಿತ್ಯದ..

Read Full Story

09:43 PM (IST) May 23

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಿಂದ ಅವಾಂತರ, ಸಿಡಿಲಿನ ಅಬ್ಬರಕ್ಕೆ ಹೊತ್ತಿ ಉರಿದ ತೆಂಗಿನ ಮರ

ರಾಜ್ಯದ ಹಲೆವೆಡೆ ಇಂದು ಭಾರಿ ಮಳೆಯಾಗಿದೆ. ಹಲವೆಡೆ ಮರಗಳು ಉರುಳಿ ಬಿದ್ದಿದೆ. ಇತ್ತ ಸಿಡಿಲಿನ ಅಬ್ಬರಕ್ಕೆ ತೆಂಗಿನ ಮರ ಹೊತ್ತಿ ಉರಿದ ಘಟನೆಯೂ ನಡೆದಿದೆ. ರಸ್ತೆಗಳು ನೀರಿನೀಂದ ತುಂಬಿ ಹೋಗಿದ್ದು ವಾಹನ ಸವಾರರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ.

Read Full Story

09:13 PM (IST) May 23

ಕರ್ನಾಟಕದಲ್ಲೂ ಸಾಮ್ರಾಜ್ಯ ವಿಸ್ತರಣೆಗೆ ದಳಪತಿ ಸ್ಕೆಚ್.. ಯಾರ ಸಪೋರ್ಟ್, ಏನಾಗ್ತಿದೆ ಇಲ್ಲಿ? ಸೀಕ್ರೆಟ್..

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವ 5 ನಗರ ಪಾಲಿಕೆಗಳಿಗೆ 2026ರ ಆಗಸ್ಟ್ 31ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಸೋ ಚುನಾವಣೆಗೆ ತಯಾರಿ ಶುರುವಾಗಿದೆ. ಈ ನಡುವೆ ತಮಿಳು ಮತದಾರರು ಹೆಚ್ಚು ಇರುವ ವಾರ್ಡ್‌ಗಳಲ್ಲಿ ಟಿವಿಕೆ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಅನ್ನುವ ಸುದ್ದಿ ಹರಿದಾಡ್ತಾ ಇದೆ..!

Read Full Story

07:53 PM (IST) May 23

ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ - ಮಾಜಿ ಸಚಿವ ಎಚ್.ಆಂಜನೇಯ

ಸಮಾಜದ ಪರವಾದ ನನ್ನ ಗಟ್ಟಿಧ್ವನಿ ಅಡಗಿಸಲು ದುಷ್ಟಶಕ್ತಿಗಳು ಪ್ಯಾಕೇಜ್ ಮಾಡಿಕೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ನೋವಿನಿಂದ ಹೇಳಿಕೊಂಡರು.

Read Full Story

07:36 PM (IST) May 23

ರಾಷ್ಟ್ರೀಯತೆ ಎನ್ನುವುದು ತಾಯಿ ಮಕ್ಕಳ ಸಂಬಂಧ ಇದ್ದಂತೆ - ಸಿ.ಟಿ.ರವಿ ಹೇಳಿದ್ದೇನು?

ಭಾರತೀಯ ಜನತಾ ಪಕ್ಷ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಒಂದು ಸೈದ್ದಾಂತಿಕ ಆಂದೋಲನ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಹರಡಿದೆ ಎಂದು ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

Read Full Story

07:16 PM (IST) May 23

ಮಕ್ಕಳನ್ನು ಪ್ರಾಣಿಗಳಂತ ತಿಳ್ಕೊಂಡಿದಿರೇನ್ರೀ - ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ

ಇವರೇನು ಮಕ್ಕಳೂ ಅಂತ ತಿಳ್ಕೊಂಡಿದೀರಾ ಅಥವಾ ಪ್ರಾಣಿಗಳಂತ ತಿಳ್ಕೊಂಡಿದಿರಾ. ನೀವೆಲ್ಲಾ ಮನುಷ್ಯರೇನ್ರೀ. ನಿಮಗೆ ಮನುಷ್ಯತ್ವ ಇದೆಯಾ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

Read Full Story

07:14 PM (IST) May 23

ಮೆಟ್ರಿಮೋನಿಯಲ್​ ಸೈಟ್​ನಲ್ಲಿ 'ಹ್ಯಾಂಡ್​ಸಮ್​ ಡಾಕ್ಟರ್​' - ಲಕ್ಷ ಲಕ್ಷ ಕಳಕೊಂಡ ಕರ್ನಾಟಕದ ಯುವತಿಯರು

ತಾನು ಪಿಎಚ್‌ಡಿ ಪದವೀಧರ, ಕೋಟ್ಯಧಿಪತಿ ಡಾಕ್ಟರ್ ಎಂದು ಮೆಟ್ರಿಮೋನಿಯಲ್ ಸೈಟ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿದ ಪ್ರದೀಪ್ ಜೋಸೆಫ್ ಎಂಬಾತ, ಬೆಂಗಳೂರು ಮತ್ತು ಮೈಸೂರಿನ ವಿದ್ಯಾವಂತ ಯುವತಿಯರಿಗೆ ಮೋಸ ಮಾಡಿದ್ದಾನೆ. ಬಣ್ಣದ ಮಾತುಗಳಿಂದ ನಂಬಿಸಿ, ಲಕ್ಷಾಂತರ ರೂಪಾಯಿ ಪೀಕಿದ್ದು, ಈತನ ವಿರುದ್ಧ ದೂರು ದಾಖಲಾಗಿದ್ದರೂ, ಆತ ಇನ್ನೂ ಸಕ್ರಿಯನಾಗಿದ್ದಾನೆ.
Read Full Story

06:57 PM (IST) May 23

ಸಿದ್ದರಾಮಯ್ಯನವರದ್ದು ಅತಿಯಾಯ್ತು - ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಯತ್ನಾಳ ವಾಗ್ದಾಳಿ

ಮುಸ್ಲಿಮರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಂಡಂತೆ ಹಿಂದೂಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಿ. ಈ ಮೂಲಕ ಜಾತ್ಯಾತೀತ ಎಂದು ಎಲ್ಲರನ್ನೂ ನೋಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Read Full Story

06:40 PM (IST) May 23

ಈಕೆಯ ಎಲ್ಲಾದ್ರೂ ನೋಡಿರುವಿರಾ? ನಿಮ್ಮ ಅಂಗಡಿಗೂ ಬಂದಾಳು ಹುಷಾರ್​- ಕಂಡ್ರೆ ಕೂಡಲೇ ತಿಳಿಸಿ

ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ, ಮಹಿಳೆಯೊಬ್ಬಳು ಅಂಗಡಿಯಲ್ಲಿ ಡ್ರೆಸ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕರು ಇತರರನ್ನು ಎಚ್ಚರಿಸಲು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Read Full Story

06:37 PM (IST) May 23

ಹೀರೋಯಿನ್ ಇಲ್ಲ, ಮೇಕಪ್ ಇಲ್ಲ.. ಆದರೂ ಗಮನ ಸೆಳೆಯುತ್ತಿರುವ ಈ ಕನ್ನಡ ಸಿನಿಮಾ ಯಾವುದು?

ಕಾಶೀನಾಥ್‌ ಗರಡಿಯಲ್ಲಿ ಪಳಗಿದ ನಟ, ನಿರ್ದೇಶಕ ಪ್ರಸಾದ್‌ ಪುತ್ತೂರು ನಿರ್ದೇಶನದ ಚಿತ್ರ ‘ಮಂಗಮಾಯ’ ಇದೀಗ ಥಿಯೇಟರ್‌ನಲ್ಲಿದೆ. ಸಿನಿಮಾ ಬಗ್ಗೆ ನಿರ್ದೇಶಕ ಪ್ರಸಾದ್‌ ಪುತ್ತೂರು, ಶ್ರೀಸಾಮಾನ್ಯನೊಬ್ಬನ ಶಕ್ತಿಯನ್ನು ಹೇಳುವ ಸಸ್ಪೆನ್ಸ್‌ ಥ್ರಿಲ್ಲರ್‌.

Read Full Story

05:35 PM (IST) May 23

ಸೊಂಟದ ಅಂದ ಹೆಚ್ಚಿಸೋ ಈ ಜ್ಯುವೆಲರಿ ಈಗ ಎಲ್ಲೆಡೆ ಟ್ರೆಂಡ್ - ಡಿಸೈನ್ ನೋಡಿದ್ರೆ ನೀವೂ ಟ್ರೈ ಮಾಡ್ತೀರಾ!

ನಿಮ್ಮ ಎಥ್ನಿಕ್ ಅಥವಾ ಫ್ಯೂಷನ್ ಲುಕ್‌ಗೆ ಒಂದು ಸ್ಟೈಲಿಶ್ ಮತ್ತು ರಾಯಲ್ ಟಚ್ ನೀಡಬೇಕಾ? ಹಾಗಿದ್ರೆ, ಈ ಮಾಡರ್ನ್ ಸಿಲ್ವರ್ ಕಮರ್‌ಬಂದ್ ಡಿಸೈನ್‌ಗಳು ನಿಮ್ಮ ಸೊಂಟದ ಅಂದವನ್ನು ಹೆಚ್ಚಿಸಿ, ನಿಮ್ಮ ಇಡೀ ಲುಕ್‌ಗೆ ಗ್ಲಾಮರ್ ತುಂಬಲಿವೆ.

Read Full Story

05:12 PM (IST) May 23

ಬಿಸಾಕುವ ಖರ್ಜೂರದ ಬೀಜದಿಂದ ಕಾಫಿ ಮಾಡೋ ಸೀಕ್ರೆಟ್ ಗೊತ್ತಾ? ಈ ಡ್ರಿಂಕ್ ಈಗ ಫುಲ್ ಟ್ರೆಂಡ್!

ಸಾಮಾನ್ಯವಾಗಿ ಬಿಸಾಕೋ ಖರ್ಜೂರದ ಬೀಜಗಳಿಂದ್ಲೇ ಸಖತ್ ಟೇಸ್ಟಿ ಮತ್ತು ಹೆಲ್ದೀ ಕಾಫಿ ಮಾಡ್ಬಹುದು ಗೊತ್ತಾ? ಕೆಫೀನ್ ಇಲ್ಲದ ಈ ಡ್ರಿಂಕ್ ಕುಡಿಯೋಕೆ ರುಚಿಯಾಗಿರೋದು ಮಾತ್ರವಲ್ಲ, ಶಕ್ತಿ ಕೂಡ ಕೊಡುತ್ತೆ.

Read Full Story

04:36 PM (IST) May 23

IPL Playoffs - ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?

19ನೇ ಐಪಿಎಲ್ ಪ್ಲೇಆಫ್‌ನ ಕೊನೆಯ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜಸ್ಥಾನಕ್ಕೆ ಹೆಚ್ಚಿನ ಅವಕಾಶಗಳಿದ್ದರೆ, ಉಳಿದ ತಂಡಗಳ ಭವಿಷ್ಯವು ನೆಟ್ ರನ್‌ರೇಟ್ ಮತ್ತು ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿದೆ.

Read Full Story

01:48 PM (IST) May 23

ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!

ಬೆಂಗಳೂರು: ತಾಳಗುಪ್ಪ-ಬೆಂಗಳೂರು ನಡುವಿನ ರೈಲುಗಳು ಕೆಲವೊಮ್ಮೆ ತಾಳಗುಪ್ಪ ತಲುಪುವುದು ತುಂಬಾ ತಡವಾಗುತ್ತಿದೆ ಎನ್ನುವ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದಿದ್ದವು. ಇದೀಗ ಮಲೆನಾಡಿನ ರೈಲ್ವೇ ಪ್ರಯಾಣಿಕರಿಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

Read Full Story

01:28 PM (IST) May 23

ಜೂನ್ 1ರಿಂದ ಹೊಸ ಕೋರ್ಟ್‌ನಲ್ಲಿ ದರ್ಶನ್‌ ಕೇಸ್‌ ವಿಚಾರಣೆ - 1 ವರ್ಷದಲ್ಲಿ ಮುಗಿಯುತ್ತಾ ಕೇಸ್?

ರೇಣುಕಾಸ್ವಾಮಿ ಕೊಲೆ ಪ್ರಕರಣವು ನಿರ್ಣಾಯಕ ಹಂತ ತಲುಪಿದ್ದು, ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು 59ನೇ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದ್ದು, ಐವರು ಆರೋಪಿಗಳ ಜಾಮೀನು ರದ್ದತಿ ಕುರಿತ ಹೈಕೋರ್ಟ್ ತೀರ್ಪು ಕಾಯ್ದಿರಿಸಲಾಗಿದೆ. 

Read Full Story

12:35 PM (IST) May 23

IPL ಅಬ್ಬರದ ನಡುವೆಯೂ ಗೃಹಿಣಿಯರ ಮನಗೆದ್ದು TRP ಚಾರ್ಟ್‌ನಲ್ಲಿ ಮುನ್ನುಗ್ಗುತ್ತಿರುವ ಟಾಪ್ 5 ಕನ್ನಡ ಸೀರಿಯಲ್ಸ್

ಪ್ರಸಕ್ತ 19ನೇ ವಾರದ ಕನ್ನಡ ಕಿರುತೆರೆ ಟಿಆರ್‌ಪಿ ರೇಟಿಂಗ್ಸ್ ಬಿಡುಗಡೆಯಾಗಿದ್ದು, ಧಾರಾವಾಹಿಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. 'ಕರ್ಣ' ಧಾರಾವಾಹಿ ಅಗ್ರಸ್ಥಾನದಲ್ಲಿದ್ದರೆ, 'ಅಣ್ಣಯ್ಯ', 'ಲಕ್ಷ್ಮಿ ನಿವಾಸ', 'ನಂದಗೋಕುಲ' ಮತ್ತು 'ಅಮೃತಧಾರೆ' ಕ್ರಮವಾಗಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 

Read Full Story

12:22 PM (IST) May 23

ನಜ್ಮಾ ನಜೀರ್ ಚಿಕ್ಕನೇರಳೆ ಮದುವೆ - ಕಾಂಗ್ರೆಸ್ ಯುವ ನಾಯಕಿಯ 'ಕೈ' ಹಿಡಿದ ಹುಡುಗ ಯಾರು?

ಕಾಂಗ್ರೆಸ್ ಯುವ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಡಾ.ಹಕೀಮ್ ತೀರ್ಥಹಳ್ಳಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ರಾಜಕೀಯ ಗಣ್ಯರು ಮತ್ತು ಚಂದನವನದ ಕಲಾವಿದರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

Read Full Story

11:56 AM (IST) May 23

ಜೂನ್ ತಿಂಗಳಲ್ಲಿ ಹುಟ್ಟಿದವರ ಮೇಲೆ ವಿಷ್ಣು-ಶುಕ್ರನ ಡಬಲ್ ಕೃಪೆ - ಇವರ ಆ ಅದ್ಭುತ ಗುಣಗಳ ಬಗ್ಗೆ ನಿಮಗೊತ್ತಾ?

ಜೂನ್‌ನಲ್ಲಿ ಜನಿಸಿದವರ ಮೇಲೆ ಶುಕ್ರ ಗ್ರಹ ಮತ್ತು ಭಗವಾನ್ ವಿಷ್ಣುವಿನ ವಿಶೇಷ ಕೃಪೆ ಇರುತ್ತದೆ. ಇವರು ಆಕರ್ಷಕ ವ್ಯಕ್ತಿತ್ವದವರಾಗಿದ್ದು, ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ ಮತ್ತು ಶಾಂತಿಪ್ರಿಯರಾಗಿರುತ್ತಾರೆ. 

Read Full Story

11:09 AM (IST) May 23

ಆ ಥರ ಕಂಟೆಂಟ್‌ಗೆ ಆಪ್ಶನ್‌ ಕೊಟ್ಟು, IT BT ಉದ್ಯೋಗಿಗಳಿಗಿಂತ ಹೆಚ್ಚು ದುಡಿಯುತ್ತಿರೋ Sonu Srinivas Gowda!

Bigg Boss Sonu Srinivas Gowda: ಸೋನು ಶ್ರೀನಿವಾಸ್ ಗೌಡ‌ ಅವರು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಾರೆ. ಆಗಾಗ ವಿದೇಶಕ್ಕೆ ಟ್ರಿಪ್‌ ಹೋಗುವ ಸೋನು ಈ ಬಾರಿ ಇನ್‌ಸ್ಟಾಗ್ರಾಮ್‌ ಆದಾಯದಿಂದ ಅಚ್ಚರಿಗೊಳಿಸಿದ್ದಾರೆ. ಡಬಲ್‌ ಡಿಗ್ರಿ ಮಾಡಿದವರಿಗೂ ಇಷ್ಟು ಹಣ ಸಿಗೋದಿಲ್ಲ.

 

Read Full Story

11:02 AM (IST) May 23

ಸಿಕ್ಕಾಪಟ್ಟೆ ರೊಚ್ಚಿಗೆದ್ದ ತನಿಷಾ ಕುಪ್ಪಂಡ, 'ರೇಟ್ ಎಷ್ಟು' ಕೇಳಿದ ಕಿಡಿಗೇಡಿಗೆ ಬಿಗ್ ಶಾಕ್ ಕೊಟ್ಟ 'ಬಿಗ್ ಬಾಸ್' ನಟಿ!

ಇನ್‌ಸ್ಟಾಗ್ರಾಮ್‌ನಲ್ಲಿ ಅನಿಲ್ ಕುಮಾರ್ ಎಂಬ ಹೆಸರಿನ ಈ ವ್ಯಕ್ತಿ, ಆರಂಭದಲ್ಲಿ ತಾನೊಬ್ಬ ಸಭ್ಯ "ಸ್ಟ್ರೀಟ್ ಫೋಟೋಗ್ರಾಫರ್" ಎಂದು ಪೋಸ್ ಕೊಟ್ಟಿದ್ದಾನೆ. ತನಿಷಾ ಅವರ ಇನ್‌ಬಾಕ್ಸ್ ಪ್ರವೇಶಿಸಿದ ಈತ, ಮೊದಲಿಗೆ ಫೋಟೋಗ್ರಫಿ ಬಗ್ಗೆ ಮಾತನಾಡುತ್ತಲೇ ತನ್ನ ಅಸಲಿ ಬಣ್ಣ ಬಯಲು ಮಾಡಿದ್ದಾನೆ. ಏನಿದು ಸ್ಟೋರಿ?

Read Full Story

10:38 AM (IST) May 23

ಜೈಲಿನಲ್ಲಿ ದರ್ಶನ್‌ ಆ*ತ್ಮಹ*ತ್ಯೆ ಯತ್ನ ವದಂತಿ ಬಗ್ಗೆ ಪರಮೇಶ್ವರ್‌ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಕಾರಾಗೃಹ ಇಲಾಖೆ ಸ್ಪಷ್ಟಪಡಿಸಿದ್ದು, ಇಂತಹ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Read Full Story

10:07 AM (IST) May 23

Bengaluru - ಮೆಜೆಸ್ಟಿಕ್‌ನಲ್ಲಿ ಮತ್ತೊಂದು ಹೊಸ ಬಸ್ ನಿಲ್ದಾಣ - ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ವಾಣಿಜ್ಯ ಸಂಕೀರ್ಣದೊಂದಿಗೆ 3 ಅಂತಸ್ತಿನ ನೂತನ ಬಸ್ ನಿಲ್ದಾಣ ನಿರ್ಮಿಸುವ ಚಿಂತನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇದರೊಂದಿಗೆ, ಹೊಸಕೋಟೆ ತಾಲೂಕಿನಲ್ಲಿ ಎರಡು ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್ ಡಿಪೋಗಳನ್ನು ಸ್ಥಾಪಿಸಲು ಸ್ಥಳ ನಿಗದಿಪಡಿಸಲಾಗಿದೆ.
Read Full Story

09:19 AM (IST) May 23

ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ? ಎಲ್ಲೆಲ್ಲಿ ಆಗಲಿದೆ ಮಳೆ? IMDಯಿಂದ ಅಧಿಕೃತ ಮಾಹಿತಿ

ಮೇ 26ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಆಗಮಿಸಲಿದೆ. ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story

09:17 AM (IST) May 23

ದಿನಕ್ಕೆ 10 ಕರಿಬೇವಿನ ಎಲೆ ಜಗಿದು ತಿಂದ್ರೆ ಸಾಕು - ದೇಹದಲ್ಲಿ ನಡೆಯುತ್ತೆ ಈ 5 ಅದ್ಭುತ ಪವಾಡಗಳು!

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ, ತೂಕ ನಿಯಂತ್ರಣಕ್ಕೆ ಸಹಾಯವಾಗುತ್ತದೆ ಮತ್ತು ಮಧುಮೇಹವನ್ನು ನಿರ್ವಹಿಸಲು ನೆರವಾಗುತ್ತದೆ.

Read Full Story

08:05 AM (IST) May 23

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು; ಕ್ರೂಸರ್-ಲಾರಿ ನಡುವೆ ಡಿಕ್ಕಿ

ಚಿತ್ತಾಪೂರ ತಾಲೂಕಿನ ಲಾಡ್ಲಾಪೂರ ಬಳಿ ಕ್ರೂಸರ್ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಆಸ್ಪತ್ರೆಯಿಂದ ವಾಪಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

07:25 AM (IST) May 23

ನೈಜ ಕಾರಣವಿಲ್ಲದೆ ಎಸ್‌ಐಆರ್‌ಗೆ ಕಾಂಗ್ರೆಸ್‌ ವಿರೋಧ - ಸಂಸದ ಕೋಟ ಶ್ರೀನಿವಾಸ ಪೂಜಾರಿ

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು, ಪಾರದರ್ಶಕ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಅಗತ್ಯವೆಂದು ಪ್ರತಿಪಾದಿಸಿದ್ದಾರೆ. ನಕಲಿ ಮತದಾರರು ಮತ್ತು ಅಕ್ರಮ ವಲಸಿಗರನ್ನು ತೆಗೆದುಹಾಕುವ ಈ ಪ್ರಕ್ರಿಯೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನಿಲುವನ್ನು ಅವರು ಟೀಕಿಸಿದ್ದು, ನೈಜ ಭಾರತೀಯರಿಗೆ ಮಾತ್ರ ಮತದಾನದ ಹಕ್ಕು ಸಿಗಬೇಕೆಂದು ಸ್ಪಷ್ಟಪಡಿಸಿದ್ದಾರೆ.
Read Full Story

06:53 AM (IST) May 23

ದರ ಇಳಿಕೆಯಾದ್ರೂ ಹಳೆ ಬೆಲೆಯಲ್ಲಿ ಮದ್ಯದ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ಮೋಸ

ಕರ್ನಾಟಕದಲ್ಲಿ ಹೊಸ ಎಐಬಿ ತೆರಿಗೆ ಪದ್ಧತಿಯಿಂದಾಗಿ ಹಲವು ಬಿಯರ್‌ ಹಾಗೂ ಮದ್ಯಗಳ ಬೆಲೆ ಕಡಿಮೆಯಾಗಿದ್ದರೂ, ಬಹುತೇಕ ಮದ್ಯದಂಗಡಿಗಳು ಹಳೆಯ ದರದಲ್ಲೇ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿವೆ. ಈ ಬಗ್ಗೆ ಅಬಕಾರಿ ಇಲಾಖೆಯು ಅಧಿಕ ದರ ವಸೂಲಿ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
Read Full Story

06:34 AM (IST) May 23

Haveri - ಬಿತ್ತನೆ ಬೀಜಕ್ಕೆ ಕೃಷಿ ಕೇಂದ್ರ ಮುಂದೆ ಮಲಗಿದ ರೈತರು; ವಿಳಂಬ ಧೋರಣೆಗೆ ಆಕ್ರೋಶ

ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆ ಬೀಜಗಳಿಗೆ ಬೇಡಿಕೆ ಹೆಚ್ಚಿದೆ. ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯಲ್ಲಿ ಸೋಯಾಬೀನ್, ಶೇಂಗಾ ಬೀಜಗಳಿಗಾಗಿ ರೈತರು ಕೃಷಿ ಕೇಂದ್ರದ ಮುಂದೆ ರಾತ್ರಿಯಿಡೀ ಸರದಿ ಸಾಲಿನಲ್ಲಿ ಕಾಯುತ್ತಿದ್ದು, ಅಧಿಕಾರಿಗಳ ವಿಳಂಬ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

06:25 AM (IST) May 23

ಎಸ್‌ಐಆರ್‌ನಿಂದ ಹೆಸ್ರು ಹೋದ್ರೆ ಗೃಹಲಕ್ಷ್ಮಿ, ಪಿಂಚಣಿ ಸೌಲಭ್ಯ ಸಿಗಲ್ಲ - ಡಿಕೆ ಶಿವಕುಮಾರ್

ಬಡವರ ಮತಗಳನ್ನು ತೆಗೆದುಹಾಕಲು 'ಎಸ್‌ಐಆರ್‌' ಮೂಲಕ ಸಂಚು ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡರೆ ಗೃಹಲಕ್ಷ್ಮಿ, ಪಿಂಚಣಿ ಸೌಲಭ್ಯಗಳು ಸಿಗುವುದಿಲ್ಲವಾದ್ದರಿಂದ, ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.
Read Full Story

06:18 AM (IST) May 23

Bengaluru - ದೇಶದ 2ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗಿಂದು ಶಂಕುಸ್ಥಾಪನೆ; 80 ಸಾವಿರ ಆಸನ

ಬೆಂಗಳೂರಿನ ಆನೇಕಲ್ ಬಳಿಯ ಸೂರ್ಯನಗರದಲ್ಲಿ 76,000 ಆಸನ ಸಾಮರ್ಥ್ಯದ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಯು ಪೂರ್ಣಗೊಂಡರೆ, ಇದು ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಇದರೊಂದಿಗೆ ವಸತಿ ಯೋಜನೆಗಳಿಗೂ ಚಾಲನೆ ನೀಡಲಾಗುತ್ತಿದೆ.
Read Full Story

05:58 AM (IST) May 23

Bengaluru - ಕಾಕ್ರೋಚ್‌ ಜನತಾ ಪಕ್ಷದ ಮೊದಲ ಬಹಿರಂಗ ಸಭೆಗೆ ಬೆಂಗಳೂರು ಪೊಲೀಸರ ನಿರ್ಬಂಧ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 'ಕಾಕ್ರೋಚ್ ಜನತಾ ಪಾರ್ಟಿ'ಯು ಬೆಂಗಳೂರಿನ ಪುರಭವನದ ಮುಂದೆ ಮಾನವ ಸರಪಳಿ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ ಮತ್ತು ಅಕ್ರಮವಾಗಿ ಗುಂಪು ಸೇರಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Read Full Story

05:44 AM (IST) May 23

ಧರ್ಮಸ್ಥಳದ ಬಂಗ್ಲೆಗುಡ್ಡೆ ರಹಸ್ಯ - ಬುರುಡೆ ಬೇಟೆಗೆ ಮತ್ತೆ ಇಳಿದ SIT? ಘಟನೆ ಮರುಸೃಷ್ಟಿ

ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದ್ದು, ಎಸ್‌ಐಟಿ ಮತ್ತು ವಿಧಿವಿಜ್ಞಾನ ತಂಡವು ಬಂಗ್ಲೆಗುಡ್ಡೆಗೆ ಭೇಟಿ ನೀಡಿದೆ. 8 ತಿಂಗಳ ಹಿಂದೆ ಅಸ್ಥಿಪಂಜರಗಳು ಪತ್ತೆಯಾಗಿದ್ದ ಸ್ಥಳದಲ್ಲಿ, ತಲೆಬುರುಡೆಯ ವಿಡಿಯೋ ಮಾಡಿದ ಘಟನೆಯನ್ನು ಮರುಸೃಷ್ಟಿಸಿ, ಹೊಸದಾಗಿ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ.

Read Full Story

05:28 AM (IST) May 23

ಗ್ಲೋಬಲ್ ವಾಟರ್ ಸಮಿಟ್‌ನಲ್ಲಿ ವಿಶ್ವದ ಗಮನ ಸೆಳೆದ ಬೆಂಗಳೂರಿನ ಜಲಮಂಡಳಿಯ ಪಂಚಸೂತ್ರ

ಬೆಂಗಳೂರು ಜಲಮಂಡಳಿಯು ಸ್ಪೇನ್‌ನಲ್ಲಿ ನಡೆದ 'ಗ್ಲೋಬಲ್ ವಾಟರ್ ಸಮಿಟ್'ನಲ್ಲಿ ಜಾಗತಿಕ ಮನ್ನಣೆ ಗಳಿಸಿದೆ. ನೀರು ಪೂರೈಕೆ, ನೈರ್ಮಲ್ಯ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಸಾಧನೆಗಾಗಿ 'ಯುಟಿಲಿಟಿ ಆಫ್ ದಿ ಇಯರ್' ಸೇರಿದಂತೆ ಮೂರು ವಿಭಾಗಗಳಲ್ಲಿ ವಿಶ್ವದ ಟಾಪ್ 5 ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

Read Full Story

05:23 AM (IST) May 23

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಪೋಷಕರಿಗೆ ಆತಂಕ; ತಂದೆ ಹೇಳಿದ್ದೇನು?

ಸಾಮಾಜಿಕ ಮಾಧ್ಯಮದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಹುಟ್ಟುಹಾಕಿ ಜನಪ್ರಿಯರಾದ ಅಭಿಜೀತ್ ದೀಪ್ಕೆ, ಭಾರತಕ್ಕೆ ಮರಳಿದರೆ ಬಂಧನವಾಗುವ ಭಯದಲ್ಲಿ ಅವರ ಪೋಷಕರು ಆತಂಕಗೊಂಡಿದ್ದಾರೆ. ಮಗನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಅವರು, ಆತನನ್ನು ರಾಜಕೀಯಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ, ದೀಪ್ಕೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ.
Read Full Story

05:14 AM (IST) May 23

ಜೂನ್‌ನಿಂದ ಬೀದರ್‌-ಕಲಬುರಗಿಗೆ ಬೆಂಗ್ಳೂರಿಂದ ವಿಮಾನ ಸೇವೆ ಪುನರಾರಂಭ; ಮುಂಗಡ ಬುಕ್ಕಿಂಗ್ ಶುರು

ಕಲ್ಯಾಣ ಕರ್ನಾಟಕ ಭಾಗದ ಬೀದರ್‌ ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಸ್ಟಾರ್‌ ಏರ್‌ಲೈನ್ಸ್‌ ಈ ಸೇವೆಯನ್ನು ಒದಗಿಸಲಿದ್ದು, ಪ್ರಾದೇಶಿಕ ಸಂಪರ್ಕ ವೃದ್ಧಿಸುವ ಉದ್ದೇಶದಿಂದ ಸರ್ಕಾರವು ವಯಾಬಲಿಟಿ ಗ್ಯಾಪ್‌ ಫಂಡಿಂಗ್‌ ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ.
Read Full Story

05:08 AM (IST) May 23

ಸಿಂದಗಿ-ಇಂಡಿ-ಲಚ್ಯಾಣ-ಸೋಲಾಪುರಕ್ಕೆ ಕೊನೆಗೂ ಆರಂಭವಾದ ಬಸ್; ಯಶವಂತಗೌಡ ಪಾಟೀಲರು ಚಾಲನೆ

ಇಂಡಿ ತಾಲೂಕಿನ ಲಚ್ಯಾಣ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸಿಂದಗಿ-ಇಂಡಿ-ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಹೊಸ ಬಸ್ ಸೇವೆಗೆ ಶಾಸಕ ಯಶವಂತಗೌಡ ಪಾಟೀಲರು ಚಾಲನೆ ನೀಡಿದರು. ಈ ಬಸ್ಸು ಸಿದ್ದಲಿಂಗೇಶ್ವರ ಭಕ್ತರಿಗೆ, ವ್ಯಾಪಾರಸ್ಥರಿಗೆ ಮತ್ತು ನೌಕರರಿಗೆ ಅನುಕೂಲವಾಗಲಿದೆ.

Read Full Story

05:00 AM (IST) May 23

ಸಂಜೆ 5.30ಕ್ಕೆ ಬೆಳಗಾವಿ ವಿಟಿಯು ಪರೀಕ್ಷೆ ಅಂತ್ಯ, ಸಂಜೆ 5.40ಕ್ಕೆ ರಿಸಲ್ಟ್‌ ; ಹತ್ತೇ ನಿಮಿಷಕ್ಕೆ ಫಲಿತಾಂಶ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಅಂತಿಮ ಸೆಮಿಸ್ಟರ್ ಎಂಜಿನಿಯರಿಂಗ್ ಪರೀಕ್ಷೆ ಮುಗಿದ ಕೇವಲ 10 ನಿಮಿಷಗಳಲ್ಲಿ ಫಲಿತಾಂಶ ಪ್ರಕಟಿಸಿ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. ಡಿಜಿಟಲ್ ಮೌಲ್ಯಮಾಪನ ಪದ್ಧತಿಯಿಂದಾಗಿ ಈ ತ್ವರಿತ ಪ್ರಕ್ರಿಯೆ ಸಾಧ್ಯವಾಗಿದ್ದು, 56,192 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 

Read Full Story

04:55 AM (IST) May 23

Rain - ರಾಜಧಾನಿ ಬೆಂಗಳೂರಿನಲ್ಲಿ ಸುರಿದ 1 ಗಂಟೆಯ ಮಳೆಗೆ 150ಕ್ಕೂ ಹೆಚ್ಚು ಮರ ಧರೆಗೆ

ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ 157ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅವಘಡದಿಂದಾಗಿ ನೂರಾರು ವಾಹನಗಳು ಜಖಂಗೊಂಡಿದ್ದು, ಬಿದ್ದ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ.

Read Full Story

04:50 AM (IST) May 23

ಬೌರಿಂಗ್‌ ಕಾಂಪೌಂಡ ಕುಸಿತ ದುರಂತಕ್ಕೆ ಕಾರಣ ಏನು? ಲೋಕಾಯುಕ್ತ ತನಿಖಾ ವರದಿಯಲ್ಲಿ ಬಹಿರಂಗ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವನ್ನಪ್ಪಿದ ಪ್ರಕರಣದ ಲೋಕಾಯುಕ್ತ ತನಿಖಾ ವರದಿಯು ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. 2008-09ರಲ್ಲಿ ಲಾರಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಕಾಂಪೌಂಡ್‌ನ ಕೆಲ ಭಾಗ ಒಡೆದಿತ್ತು. ಈ ಭಾಗವನ್ನು ಸಿಮೆಂಟ್ ಬ್ಲಾಕ್‌ ಬಳಸಿ ಮರು ನಿರ್ಮಿಸಲಾಗಿತ್ತು.

Read Full Story

More Trending News