Published : Sep 21, 2025, 07:05 AM ISTUpdated : Sep 21, 2025, 11:54 PM IST

karnataka news live: ನಾಲ್ಕು ವರ್ಷದ ಮಗುವನ್ನ ಕಲ್ಲಿನಿಂದ ಜಜ್ಜಿ ಕೊಂದ 15 ವರ್ಷದ ಬಾಲಕ!

ಸಾರಾಂಶ

ಬೆಂಗಳೂರು: ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್.. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್ ಜತೆ ತಳಕು ಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್‌ಲೈನ್ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ. ಆದರೆ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವವರು ಬಯಸಿದರೆ ತಮ್ಮ ಮೂಲ ಜಾತಿ ಹೆಸರನ್ನು ಇತರೆ ಕಾಲಂನಲ್ಲಿ ನಮೂದಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ. ಕ್ರಿಶ್ಚಿಯನ್ ಧರ್ಮದ ಜತೆಗಿರುವ ಜಾತಿಗಳನ್ನು ಕೈಬಿಡಲಾಗುತ್ತಿದ್ದರೂ ಮುಸ್ಲಿಂ ಹಾಗೂ ಜೈನ ಧರ್ಮದ ಜತೆಗೂ ಹಿಂದು ಜಾತಿಗಳ ಹೆಸರು ಪಟ್ಟಿ ಎಂದಿನಂತೆಯೇ ಮುಂದುವರೆಯಲಿದೆ. ಮುಸ್ಲಿಮರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, ಬಗವಾನ್ ಮುಸ್ಲಿಂ ಹೀಗೆ ಕೆಲ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಇನ್ನು ಜೈನ ಧರ್ಮದಲ್ಲಿ ಜೈನ ಬ್ರಾಹ್ಮಣ, ಜೈನ ಬಣಜಿಗ, ಜೈನ ಬಿಲ್ಲವ, ಜೈನ ಹೂಗಾರ, ಜೈನ ಬಂಟರು ಹೀಗೆ ಹಲವು ಜಾತಿ ಇವೆ. ಅವನ್ನು ಜಾತಿ ನಮೂನೆಯಿಂದ ಕೈಬಿಟ್ಟಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

 

11:54 PM (IST) Sep 21

ನಾಲ್ಕು ವರ್ಷದ ಮಗುವನ್ನ ಕಲ್ಲಿನಿಂದ ಜಜ್ಜಿ ಕೊಂದ 15 ವರ್ಷದ ಬಾಲಕ!

ದೆಹಲಿ ಕ್ರೈಂ ಅಲರ್ಟ್: ಆನಂದ್ ಪರ್ವತ್‌ನಲ್ಲಿ 15 ವರ್ಷದ ಹುಡುಗನೊಬ್ಬ 4 ವರ್ಷದ ಮಗುವನ್ನು ಕಲ್ಲಿನಿಂದ ಹೊಡೆದು ಕೊಂದಿದ್ದೇಕೆ? ಸೇಡಿನ ಕಿಚ್ಚು ಇಷ್ಟು ಭಯಾನಕವೇ? ಮಗು ಐಸಿಯುನಲ್ಲಿದ್ದು ನಂತರ ಸಾವನ್ನಪ್ಪಿದೆ. ಆರೋಪಿಯನ್ನು ಬಾಲಾಪರಾಧಿ ತಿದ್ದುಪಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. 

Read Full Story

11:17 PM (IST) Sep 21

ಫ್ರೆಂಚ್ ಮಹಿಳೆಯರು ಚಾಕೊಲೇಟ್, ಬಟರ್ ತಿಂದ್ರೂ ದಪ್ಪವಾಗುವುದಿಲ್ಲ ಏಕೆ? ಪ್ರಸಿದ್ಧ ಲೇಖಕಿ ರಿವೀಲ್

ಬ್ರೆಡ್, ಚೀಸ್, ವೈನ್‌ನಂತಹ ಆಹಾರಗಳನ್ನು ಸೇವಿಸಿದರೂ ಫ್ರೆಂಚ್ ಮಹಿಳೆಯರು ತೆಳ್ಳಗಿರುವುದರ ಹಿಂದಿನ ಕಾರಣವನ್ನು ಲೇಖಕಿ ಮಿರೆಲ್ಲೆ ಗಿಲಿಯಾನೊ ವಿವರಿಸಿದ್ದಾರೆ. ಅವರ ಪ್ರಕಾರ, ಸಂತೋಷಕ್ಕಾಗಿ, ನಿಧಾನವಾಗಿ ಮತ್ತು ಸರಿಯಾದ ಪ್ರಮಾಣದಲ್ಲಿ ತಿನ್ನುವುದೇ ಅವರ ತೆಳ್ಳಗಿನ ದೇಹದ ರಹಸ್ಯವಾಗಿದೆ.
Read Full Story

09:40 PM (IST) Sep 21

ಎರಡು ತಿಂಗಳ ಕಂದಮ್ಮ ಕಾಣೆಯಾದ ಬಗ್ಗೆ ತಾಯಿ ದೂರು, ತನಿಖೆ ವೇಳೆ ಬೆಚ್ಚಿಬಿದ್ದ ಪೊಲೀಸರು!

ಬಳ್ಳಾರಿಯ ತೋರಣಗಲ್ಲಿನಲ್ಲಿ, ಹೆಣ್ಣು ಮಗು ಹುಟ್ಟಿತೆಂಬ ಕಾರಣಕ್ಕೆ ತಾಯಿಯೊಬ್ಬಳು ತನ್ನ ಎರಡು ತಿಂಗಳ ಶಿಶುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿದ್ದಾಳೆ. ಮಗು ಕಾಣೆಯಾಗಿದೆ ಎಂದು ನಾಟಕವಾಡಿದ ಆರೋಪಿ ತಾಯಿಯನ್ನು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.

Read Full Story

09:22 PM (IST) Sep 21

ಯುವ ದಸರಾದಲ್ಲಿ ಧೂಳೆಬ್ಬಿಸಿದ ಚಿಪ್ಸ್ ಮಾರೋ ಹುಡುಗನ ಡಾನ್ಸ್.. ಸಾಥ್ ಕೊಟ್ಟ ಮೈಸೂರ್ ಹುಡ್ಗಿ... ವೀಡಿಯೋ ಭಾರಿ ವೈರಲ್

ಮೈಸೂರಿನ ಯುವ ದಸರಾ ವೇದಿಕೆ ಹೊರಗೆ, ಚಿಪ್ಸ್ ಮಾರುವ ಯುವಕ ಮತ್ತು ಕಾಲೇಜು ಯುವತಿಯೊಬ್ಬರು 'ಹಂಗೆ ಕುಣಿರೋ ಹಿಂಗೆ ಕುಣಿರೋ' ಹಾಡಿಗೆ ಹಾಕಿದ ಬಿಂದಾಸ್ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅನಿರೀಕ್ಷಿತ ನೃತ್ಯ ಜುಗಲ್ಬಂದಿಯ ವೀಡಿಯೋಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

Read Full Story

09:11 PM (IST) Sep 21

Asia Cup ಭಾರತ ಪಾಕಿಸ್ತಾನ ಪಂದ್ಯದಲ್ಲಿ ವಿವಾದ, ಅಂಪೈರ್ ವಿರುದ್ಧ ಸಿಡಿದೆದ್ದ ಫಕಾರ್, ವಿಡಿಯೋ

Asia Cup ಭಾರತ ಪಾಕಿಸ್ತಾನ ಪಂದ್ಯದಲ್ಲಿ ವಿವಾದ, ಅಂಪೈರ್ ವಿರುದ್ಧ ಸಿಡಿದೆದ್ದ ಫಕಾರ್, ನೀಡಿದ ತೀರ್ಪಿನ ವಿರುದ್ದ ಆಕ್ರೋಶ ಹೊರಹಾಕಿದ್ದು ಮಾತ್ರವಲ್ಲ, ಭಾರಿ ವಿವಾದವಾಗಿ ಮಾರ್ಪಟ್ಟಿದೆ, ಅಷ್ಟಕ್ಕೂ ಏನಿದು ವಿವಾದ, ವಿಡಿಯೋದಲ್ಲಿ ಏನಿದೆ?

 

Read Full Story

09:09 PM (IST) Sep 21

ವಿಶ್ವವಿಖ್ಯಾತ ಮೈಸೂರು ದಸರಾ ಆರಂಭ, ನಾಳೆ ಎಲ್ಲೆಲ್ಲಿ ಏನೇನು? ಕಾರ್ಯಕ್ರಮದ ವಿವರ ಇಲ್ಲಿದೆ

Mysuru Dasara 2025: 415ನೇ ನಾಡಹಬ್ಬ ಮೈಸೂರು ದಸರಾಕ್ಕೆ ಲೇಖಕಿ ಬಾನು ಮುಸ್ತಾಕ್ ಚಾಮುಂಡಿ ಬೆಟ್ಟದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಮತ್ತೊಂದೆಡೆ, ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

Read Full Story

09:02 PM (IST) Sep 21

ಬಲ್ ನನ್ಮಗ ಈ ಆಕಾಶ್; ತಂದೆಯನ್ನೇ ಬಾಡಿಗೆ ಅಪ್ಪನಾಗಿ ಮಾಡ್ಕೊಂಡ! ಗೌತಮ್ ಭಾವುಕ ನಟನೆಗೆ ವೀಕ್ಷಕರ ಕಣ್ಣೀರು!

ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ತನ್ನೊಂದಿಗಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದು, ತಂದೆ-ಮಗನ ಈ ಭಾವುಕ ಮಿಲನದ ದೃಶ್ಯ ವೀಕ್ಷಕರ ಮನಗೆದ್ದಿದೆ.

Read Full Story

08:10 PM (IST) Sep 21

ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್

ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ವೇಳೆ 'ಪಾಕಿಸ್ತಾನಕ್ಕೆ ಹೋಗು' ಎಂದವರಿಗೆ, ತಮ್ಮ ಜಾತ್ಯತೀತ ನಿಲುವು ಮತ್ತು ಭಾರತೀಯತೆಯ ಬಗ್ಗೆ ಸುದೀರ್ಘವಾಗಿ ಉತ್ತರಿಸಿದ್ದರು. ಆ ದಿಟ್ಟ ಉತ್ತರ ಹಾಗೂ ಅವರ ಭಾವನೆಗಳ ಸಂಪೂರ್ಣ ವಿವರ ಇಲ್ಲಿದೆ.

Read Full Story

08:02 PM (IST) Sep 21

ಕೂಡಲಸಂಗಮ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಹಾಕಿದ ಕಾಶೆಪ್ಪನವರ್!

ಕೂಡಲಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಚಾಟಿಸಲಾಗಿದೆ ಎಂದು ವಿಜಯಾನಂದ ಕಾಶಪ್ಪನವರ ಘೋಷಿಸಿದ್ದಾರೆ. ಸ್ವಾಮೀಜಿಗಳ ಸಿಡಿ ಹಾಗೂ ಆಸ್ತಿಗಳ ಬಗ್ಗೆ ಸಮಯ ಬಂದಾಗ ದಾಖಲೆ ಸಮೇತ ಬಯಲು ಮಾಡುವುದಾಗಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

Read Full Story

07:56 PM (IST) Sep 21

ನಿತಿನ್‌ ಶಿವಾಂಶ್‌ ಜೊತೆ ಈಗ ಲವ್;‌ ಸರಿಗಮಪದಿಂದ ಕುಂಕುಮದವರೆಗೆ ಸುಹಾನಾ ಸೈಯದ್ ಎದುರಿಸಿದ ಕಾಂಟ್ರವರ್ಸಿಗಳಿವು

Suhaana Syed Saregamapa Controversy:‌ ಸರಿಮಗಪ ರಿಯಾಲಿಟಿ ಶೋನಲ್ಲಿ ಹಾಡಿದ ಮೊದಲ ಹಾಡಿನಿಂದ ಹಿಡಿದು, ಇಲ್ಲಿಯವರೆಗೆ ಸಾಕಷ್ಟು ಕಾಂಟ್ರವರ್ಸಿಗಳು ಬೆನ್ನು ಬಿದ್ದಿದ್ದರೂ ಕೂಡ ಅವುಗಳಿಗೆ ಸವಾಲಾಗಿ ನಿಂತ ಸುಹಾನಾ ಸೈಯದ್‌ ಈಗ ಲವ್‌ನಲ್ಲಿದ್ದಾರೆ. ಹಾಗಾದರೆ ಅವರು ಎದುರಿಸಿದ ಕಾಂಟ್ರವರ್ಸಿಗಳು ಯಾವುವು?

Read Full Story

07:50 PM (IST) Sep 21

ಬೇಲೂರಿನಲ್ಲಿ ಗಣಪತಿಗೆ ಚಪ್ಪಲಿ ಇಟ್ಟ ಲೀಲಮ್ಮನನ್ನ ಬಂಧಿಸಿದ ಪೊಲೀಸರು; ನಾಳೆ ಬೇಲೂರು ಬಂದ್‌ಗೆ ಕರೆ!

ಬೇಲೂರಿನ ವರಸಿದ್ಧಿ ವಿನಾಯಕನ ಮೂರ್ತಿಗೆ ಚಪ್ಪಲಿ ಇಟ್ಟು ಅಪಮಾನ ಮಾಡಿದ ಪ್ರಕರಣದಲ್ಲಿ, ಪೊಲೀಸರು ಲೀಲಮ್ಮ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿಯು ಮಾನಸಿಕವಾಗಿ ಅಸ್ವಸ್ಥಳಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಈ ಘಟನೆ ಖಂಡಿಸಿ ಹಿಂದೂ ಸಂಘಟನೆಗಳು ಬೇಲೂರು ಬಂದ್‌ಗೆ ಕರೆ ನೀಡಿವೆ.

Read Full Story

07:10 PM (IST) Sep 21

'ನನ್ನೊಬ್ಬನ ನಿರ್ಣಯ ಅಲ್ಲ..' ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ, ಕಾಶೆಪ್ಪನವರ್ ಸ್ಫೋಟಕ ಹೇಳಿಕೆ!

ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಕೂಡಲಸಂಗಮ ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಉಚ್ಚಾಟನೆಗೆ ಕಾರಣಗಳೇನು ತಿಳಿಯಿರಿ

Read Full Story

07:08 PM (IST) Sep 21

ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?

ಸುಹಾನಾ ಪ್ರೀತಿಯ ಪೋಸ್ಟ್‌: ಸರಿಗಮಪ ಸೀಸನ್ 13ರ ಖ್ಯಾತಿಯ ಗಾಯಕಿ ಸುಹಾನಾ ಸೈಯದ್, 'ಶ್ರೀಕಾರ' ಹಾಡಿನ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ತಮ್ಮ ಬದುಕಿನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದು, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆಗಿನ ತಮ್ಮ ಪ್ರೇಮವನ್ನು ಜಗತ್ತಿಗೆ ಸಾರಿದ್ದಾರೆ.

Read Full Story

07:06 PM (IST) Sep 21

ಮೈಸೂರು ದಸರಾ ಆನೆಗಳು ಆನೆ ಲದ್ದಿ ಹಾಕಿದಾಕ್ಷಣ ಜನರು ಬರಿಗಾಲಲ್ಲಿ ತುಳಿಯೋದೇಕೆ? ಆರೋಗ್ಯಕ್ಕೂ ಉಂಟಾ ಆನೆಲದ್ದಿ ನಂಟು!

ಮೈಸೂರು ದಸರಾದಲ್ಲಿ ಆನೆ ಲದ್ದಿ ತುಳಿಯುವ ವಿಡಿಯೋ ವೈರಲ್ ಆಗಿದ್ದು, ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈ ಲೇಖನವು ಕಾಲು ನೋವು ನಿವಾರಣೆ, ದೇಹದ ಉಷ್ಣಾಂಶ ಕಡಿಮೆ ಮಾಡುವಂತಹ ಜಾನಪದ ನಂಬಿಕೆಗಳನ್ನು ಮತ್ತು ಇದರ ಹಿಂದಿನ ವೈಜ್ಞಾನಿಕ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತದೆ.
Read Full Story

06:39 PM (IST) Sep 21

ಇದಪ್ಪಾ ಸಾಧನೆ ಅಂದ್ರೆ.. ಹಿಂದಿ ಸೀರಿಯಲ್‌ ಹೀರೋಯಿನ್‌ ಆದ ಉಡುಪಿ ಮೂಲದ ನಟಿ! ಯಾರದು?

ಉಡುಪಿ ಮೂಲದ ನಟಿ ಈಗ ಹಿಂದಿ ಧಾರಾವಾಹಿಯಲ್ಲಿ ಹೀರೋಯಿನ್‌ ಆಗುವ ಅವಕಾಶವನ್ನು ಪಡೆದಿದ್ದಾರೆ. ಈ ಮೂಲಕ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೀರಿಯಲ್‌ಗಳಲ್ಲಿ ಕೂಡ ಆ ನಟಿ ನಟಿಸಿದ್ದಾರೆ, ಹಾಗಾದರೆ ಅವರು ಯಾರು?

Read Full Story

06:27 PM (IST) Sep 21

Mahanati ವೇದಿಕೆಯಲ್ಲಿ ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ! ಬಿಟ್ಟ ಕಣ್ಣುಗಳಿಂದ ನೋಡಿದ ವೀಕ್ಷಕರು

36 ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿರುವ ನಟಿ ಮಾಲಾಶ್ರೀ ಮತ್ತು 'ಓಂ' ಖ್ಯಾತಿಯ ನಟಿ ಪ್ರೇಮಾ ಅವರ ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ,'ಮಹಾನಟಿ' ರಿಯಾಲಿಟಿ ಶೋ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.

Read Full Story

06:11 PM (IST) Sep 21

ಟೆಂಪೋ ಡ್ರೈವರ್ ಕೊಲೆ ಯತ್ನ ಪ್ರಕರಣ - 24 ಗಂಟೆಯೊಳಗೆ ಐವರು ಆರೋಪಿಗಳನ್ನ ಬಂಧಿಸಿದ ಮಲ್ಲೇಶ್ವರಂ ಪೊಲೀಸರು!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಟೆಂಪೋ ಡ್ರೈವರ್ ಜಾವೀದ್ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಐವರು ದುಷ್ಕರ್ಮಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಮಲ್ಲೇಶ್ವರಂ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read Full Story

05:50 PM (IST) Sep 21

ಚಿಕ್ಕಮಗಳೂರಿನಿಂದ ಬಂದು ಬೇಲೂರು ಗಣಪನಿಗೆ ಚಪ್ಪಲಿ ಹಾಕಿಹೋದ ಮಾನಸಿಕ ಅಸ್ವಸ್ಥೆ, ಈಗ ಪೊಲೀಸರಿಗೆ ಲಾಕ್!

ಬೇಲೂರಿನ ಪ್ರಸಿದ್ಧ ಚೆನ್ನಕೇಶವ ದೇವಾಲಯದ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾಕಿ ಅಪಮಾನ ಮಾಡಿದ್ದ ಚಿಕ್ಕಮಗಳೂರಿನ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಯಾದ ಈ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎನ್ನಲಾಗುತ್ತಿದೆ.

Read Full Story

05:43 PM (IST) Sep 21

ಜನ್ಮ ದಿನಕ್ಕೆ ಅನುಗುಣವಾಗಿ ನಾಳೆಯಿಂದ ನಿಮ್ಮ ಭವಿಷ್ಯ ಹೇಗಿದೆ? ಯಾವ ಕಾರ್ಯ ಆರಂಭಿಸಬಹುದು?

ಈ ಲೇಖನವು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ನಿಮ್ಮ ಜನ್ಮದಿನಾಂಕಕ್ಕೆ ಅನುಗುಣವಾಗಿ ಸೆಪ್ಟೆಂಬರ್ 22 ರಿಂದ 28ರವರೆಗಿನ ವಾರ ಭವಿಷ್ಯವನ್ನು ನೀಡುತ್ತದೆ. ಸಂಖ್ಯೆ 1 ರಿಂದ 9 ರವರೆಗಿನ ಜನರಿಗೆ ವೃತ್ತಿ, ಆರೋಗ್ಯ, ಮತ್ತು ಆರ್ಥಿಕ ಜೀವನದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಇಲ್ಲಿ ವಿವರವಾದ ಮಾಹಿತಿ ಇದೆ.
Read Full Story

05:28 PM (IST) Sep 21

ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್

 'ಸರಿಗಮಪ' ವೇದಿಕೆಯಲ್ಲಿ ಸಂಚಲನ ಸೃಷ್ಟಿಸಿದ್ದ ಗಾಯಕಿ ಸುಹಾನಾ ಸೈಯದ್, ಇದೀಗ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರೊಂದಿಗೆ ತಮ್ಮ ಮುಂದಿನ ಜೀವನವನ್ನು ಕಳೆಯುವ ನಿರ್ಧಾರವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Read Full Story

04:46 PM (IST) Sep 21

ರಾಜ್ಯ ಜನತೆಗೆ ದಸರಾ ಶಾಕ್ - ವೈಜ್ಞಾನಿಕತೆ ಹೆಸರಲ್ಲಿ ಬೇಕೆಂದಾಗ ದರ ಹೆಚ್ಚಿಸಲು KSRTCಯಲ್ಲೂ ಸಮಿತಿ ರಚಿಸಿದ ಸರ್ಕಾರ!

ಹೆಚ್ಚುತ್ತಿರುವ ಡೀಸೆಲ್ ಮತ್ತು ಸಿಬ್ಬಂದಿ ವೆಚ್ಚಗಳಿಂದಾಗಿ ಕರ್ನಾಟಕದ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟದಲ್ಲಿವೆ. ಈ ಸಮಸ್ಯೆಯನ್ನು ವೈಜ್ಞಾನಿಕವಾಗಿ ಪರಿಹರಿಸಲು  ರಾಜ್ಯ ಸರ್ಕಾರವು ‘ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ’ ರಚಿಸಿದೆ. ಈ ಸಮಿತಿಯು ಕಾಲಕಾಲಕ್ಕೆ ದರ ಪರಿಷ್ಕರಣೆಗೆ ಶಿಫಾರಸು ಮಾಡಲಿದೆ.

Read Full Story

03:49 PM (IST) Sep 21

ವೈನ್​, ಬಿಯರ್​, ಜಿನ್​, ವೋಡ್ಕಾ, ಬ್ರಾಂಡಿ... ಅರೆರೆ.. ಇದೇನು ಅಂತೀರಾ? ಇಲ್ನೋಡಿ ಅಸಲಿ ವಿಷ್ಯ....

ವೈನ್, ಬಿಯರ್, ಜಿನ್, ವೋಡ್ಕಾ, ರಮ್‌ನಂತಹ ವಿವಿಧ ಆಲ್ಕೋಹಾಲ್ ಪಾನೀಯಗಳ ನಡುವಿನ ವ್ಯತ್ಯಾಸವನ್ನು ಈ ಲೇಖನವು ವಿವರಿಸುತ್ತದೆ. ದ್ರಾಕ್ಷಿಯಿಂದ ವೈನ್, ಬಾರ್ಲಿಯಿಂದ ಬಿಯರ್ ಮತ್ತು ಕಬ್ಬಿನ ರಸದಿಂದ ರಮ್ ತಯಾರಿಸುವಂತಹ ಪ್ರತಿಯೊಂದು ಪಾನೀಯದ ತಯಾರಿಕಾ ವಿಧಾನ ಮತ್ತು ಬಳಸುವ ಪದಾರ್ಥಗಳನ್ನು ಇದು ವಿವರಿಸುತ್ತದೆ.
Read Full Story

03:44 PM (IST) Sep 21

ಮುಕಳೆಪ್ಪ ಲವ್ ಜಿಹಾದ್ ಬಗ್ಗೆ ವಿಡಿಯೋ ಹರಿಬಿಟ್ಟ ಖ್ವಾಜಾ ಹೆಂಡ್ತಿ ಗಾಯತ್ರಿ; ಅಸಲಿ ಸತ್ಯ ಬಹಿರಂಗವಾಯ್ತು ನೋಡಿ!

ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಅವರೊಂದಿಗಿನ ವಿವಾಹದ ಬಗ್ಗೆ ಆತನ ಪತ್ನಿ ಗಾಯತ್ರಿ ಜಾಲಿಹಾಳ ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಲವ್ ಜಿಹಾದ್ ನಡೆದಿದೆ ಎಂದು ಬಜರಂಗದಳ ಆರೋಪ ಬೆನ್ನಲ್ಲಿಯೇ ಗಾಯತ್ರಿ ಸ್ವಇಚ್ಛೆಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Read Full Story

03:13 PM (IST) Sep 21

ಬೇಲೂರು ಗಣಪತಿಗೆ ಚಪ್ಪಲಿ ಇಡಲು ಮಾನಸಿಕ ಅಸ್ವಸ್ಥೆ; CCTV ಮುಂದೆ ಮುಖಮುಚ್ಚಿಕೊಳ್ಳಲು ಬುದ್ಧಿ ಇದೆ- ಸಿ.ಟಿ. ರವಿ

ಬೇಲೂರಿನಲ್ಲಿ ಗಣಪತಿ ಮೂರ್ತಿಗೆ ಚಪ್ಪಲಿ ಇಟ್ಟ ಪ್ರಕರಣವನ್ನು ಸಿ.ಟಿ. ರವಿ ವ್ಯವಸ್ಥಿತ ಷಡ್ಯಂತ್ರ ಎಂದು ಕರೆದಿದ್ದಾರೆ. ಇದು ಮಾನಸಿಕ ಅಸ್ವಸ್ಥರ ಕೃತ್ಯವಲ್ಲ, ಬದಲಾಗಿ ಹಿಂದೂ ಸಮಾಜವನ್ನು ಕೆರಳಿಸುವ ಹುನ್ನಾರ ಎಂದಿರುವ ಅವರು, ಇದರ ಹಿಂದೆ ದೇಶಿ ಹಾಗೂ ವಿದೇಶಿ ರಾಷ್ಟ್ರವಿರೋಧಿ ಶಕ್ತಿಗಳ ಕೈವಾಡವಿದೆ ಎಂದರು.

Read Full Story

02:09 PM (IST) Sep 21

ನರೇಶ್‌ರನ್ನು ಪವಿತ್ರಾ ಲೋಕೇಶ್ ಪ್ರೀತಿಯಿಂದ ಏನೆಂದು ಕರೆಯುತ್ತಾರೆ? ಆ ಹೆಸರಿನ ಅರ್ಥವೇನು?

ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದೀಗ ಇವರಿಗೆ ಸಂಬಂಧಿಸಿದ ಒಂದು ವಿಷಯ ವೈರಲ್ ಆಗಿದೆ. ಪವಿತ್ರಾ ಲೋಕೇಶ್, ನರೇಶ್ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಗೊತ್ತಾ?

 

Read Full Story

01:49 PM (IST) Sep 21

ಪ್ರಭಾಸ್ ಹೀರೋಯಿನ್ ತ್ರಿಶಾ ಭುಜದ ಮೇಲಿದೆ ಆ ಟ್ಯಾಟೂ.. ಅದರ ಅರ್ಥವಾದ್ರೂ ಏನು ಗೊತ್ತಾ?

ದಕ್ಷಿಣ ಭಾರತದ ಎವರ್‌ಗ್ರೀನ್ ಬ್ಯೂಟಿ ತ್ರಿಶಾ ಕೃಷ್ಣನ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಈ ನಟಿ ಹಾಕಿಸಿಕೊಂಡಿರೋ ಒಂದು ಟ್ಯಾಟೂ ಈಗ ವೈರಲ್ ಆಗಿದೆ. ಅಷ್ಟಕ್ಕೂ ಆ ಟ್ಯಾಟೂ ವಿಶೇಷತೆ ಏನು ಗೊತ್ತಾ?

Read Full Story

01:28 PM (IST) Sep 21

ಬೇಲೂರು ಗಣಪತಿ ದೇವರಿಗೆ ಚಪ್ಪಲಿನ ಹಾರ - ಪೊಲೀಸರಿಗೆ ಸಿಸಿಟಿವಿಯಲ್ಲಿ ಸಿಕ್ಕಿತು ವಿಕೃತಿಯ ಸುಳಿವು!

ಬೇಲೂರಿನಲ್ಲಿ ಗಣಪತಿ ಮೂರ್ತಿಯ ಮೇಲೆ ಚಪ್ಪಲಿ ಇಟ್ಟ ಘಟನೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಮಾನಸಿಕ ಅಸ್ವಸ್ಥ ಮಹಿಳೆಯನ್ನು ಶಂಕಿಸಿದ್ದು, ತಪ್ಪಿತಸ್ಥರ ಬಂಧನಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿವೆ.
Read Full Story

01:08 PM (IST) Sep 21

ಒಂದೇ ದಿನ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ - ಇಂದು ಈ ಕೆಲಸ ಮಾಡಿದರೆ ಪುಣ್ಯ ಸಿಗತ್ತೆ - ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ

Surya Grahan And Mahalaya Amavasya: ಇಂದು ಸೂರ್ಯಗ್ರಹಣ ಹಾಗೂ ಮಹಾಲಯ ಅಮಾವಾಸ್ಯೆ ಕೂಡ ಇದೆ. ಆದರೆ ಭಾರತದ ಮೇಲೆ ಸೂರ್ಯಕ್ರಹಣ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಹೇಳಲಾಗಿದೆ. ಇದರ ನಡುವೆ ಇಂದು ಏನು ಮಾಡಿದರೆ ಶುಭ?. ಇದಕ್ಕೆ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಏನು ಹೇಳಿದ್ದಾರೆ?

 

Read Full Story

01:00 PM (IST) Sep 21

ದೇಶದ ಆರ್ಥಿಕತೆಗೆ ಅಡಕೆಯ ಕೊಡುಗೆ ಅಪಾರ - ಸಂಸದ ಬಿ.ವೈ.ರಾಘವೇಂದ್ರ

ಅಡಕೆ ಬೆಳೆ ವಾಣಿಜ್ಯ ಬೆಳೆಯೂ ಹೌದು , ಧಾರ್ಮಿಕ ಸಂಕೇತವು ಹೌದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಈ ಮೂಲಕ ರಾಜ್ಯದ ಮತ್ತು ದೇಶದ ಆರ್ಥಿಕತೆಗೆ ತನ್ನದೇ ಅತ್ಯಮೂಲ್ಯ ಕೊಡುಗೆ ನೀಡುತ್ತಿದೆ ಎಂದರು.

Read Full Story

12:53 PM (IST) Sep 21

ಸೋಡಾಬುಡ್ಡಿ ದೀಪಾ, ದಿಶಾ ಆಗಿ ಬದಲಾಗಿದ್ದು ನೋಡಿ ಚಿರು ಶಾಕ್; ಸೌಂದರ್ಯಾಳ ಅಂದಕ್ಕೆ ಸವಾಲೆಸೆದ ದಿಶಾ!

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಪ್ರೇಕ್ಷಕರು ಕಾಯುತ್ತಿದ್ದ ರೋಚಕ ತಿರುವು ಬಂದಿದೆ. ನಾಯಕಿ ದೀಪಾ ತನ್ನ ದಪ್ಪ, ಕಪ್ಪು ವೇಷವನ್ನು ಕಳಚಿ, 'ದಿಶಾ' ಎಂಬ ಮಾಡೆಲ್ ಆಗಿ ಸುಂದರ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ.

Read Full Story

12:22 PM (IST) Sep 21

Bigg Boss ಫ್ಯಾನ್ಸ್​ಗೆ ಒಳ್ಳೆ ಆಫರ್​ - ಹೋಲ್ಡ್ ಮಾಡಿ ಸ್ಕ್ರಾಲ್ ಮಾಡಿ- ಏನು ಕಾಣಿಸ್ತು ಹೇಳಿ....

ಕಿಚ್ಚ ಸುದೀಪ್ ನಿರೂಪಣೆಯ ಬಿಗ್​ಬಾಸ್​ ಕನ್ನಡ ಸೀಸನ್​ 12 ಇದೇ 28ರಿಂದ ಆರಂಭವಾಗಲಿದೆ. ಈ ಸೀಸನ್‌ಗಾಗಿ ವಜ್ರ ಖಚಿತವಾದ ಹೊಸ ಲೋಗೋವನ್ನು ಅನಾವರಣಗೊಳಿಸಲಾಗಿದ್ದು, ಹೋಲ್ಡ್​ ಮಾಡಿ ಸ್ಕ್ರಾಲ್​  ಮಾಡಿ ಎನ್ನಲಾಗಿದೆ. ಏನಿದು ನೋಡಿ… 

Read Full Story

12:14 PM (IST) Sep 21

ದಸರಾ ಪ್ರವಾಸ ಟಿಪ್ಸ್‌ - ಮಕ್ಕಳ ರಜೆ, ಕುಟುಂಬ ಸಂಭ್ರಮಕ್ಕೆ ಸೂಪರ್‌ ಐಡಿಯಾಸ್‌

ಈಗೀಗಂತೂ ಪ್ರವಾಸಗಳೂ ಬಹಳ ಹೆಚ್ಚಾಗಿವೆ. ಮಕ್ಕಳಿಗೆ ರಜೆ ಸಿಕ್ಕ ತಕ್ಷಣ ಪ್ರವಾಸ ಹೊರಡಲಾಗುತ್ತದೆ. ಈ ವೇಳೆಯಲ್ಲಿ ಪಾರಂಪರಿಕ ಸ್ಥಳಗಳನ್ನು ನೋಡುವುದಾದರೆ ಮೈಸೂರು ಅಥವಾ ಹಂಪಿಯಂತಹ ಸಾಂಸ್ಕೃತಿಕ ಕೇಂದ್ರಗಳಿಗೆ ಕಿರು ಪ್ರವಾಸ ಯೋಜಿಸಬಹುದು.

Read Full Story

11:55 AM (IST) Sep 21

ನಾಳೆಯಿಂದ ಜಿಎಸ್‌ಟಿ 2.0 ಅನ್ವಯ - ಬೈಕ್, ಸ್ಕೂಟರ್ ಬೆಲೆ ₹12,000ವರೆಗೆ ಕುಸಿತ ದರಪಟ್ಟಿ!

ಕೇಂದ್ರ ಸರ್ಕಾರದ ಜಿಎಸ್‌ಟಿ 2.0 ಪರಿಷ್ಕರಣೆಯಿಂದಾಗಿ ಬೈಕ್ ಮತ್ತು ಸ್ಕೂಟರ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಂದಿರುವ ಈ ಬೆಲೆ ಇಳಿಕೆಯು, ಹೀರೋ ಸ್ಪ್ಲೆಂಡರ್, ಹೋಂಡಾ ಆಕ್ಟಿವಾದಂತಹ ಜನಪ್ರಿಯ ವಾಹನಗಳನ್ನು ಕಡಿಮೆ ದರ.

Read Full Story

11:37 AM (IST) Sep 21

ಕಿಡಲ್ಟ್‌ ಟಾಯ್‌ ಸ್ಟೋರೀಸ್‌ - ಇದು ದೊಡ್ಡೋರ ಮಕ್ಕಳಾಟ, ಮಿಲೇನಿಯಲ್ಸ್‌ ಕ್ರೇಜ್

ತನಯ್‌ನ ಹವ್ಯಾಸವೊಂದನ್ನು ತಪ್ಪಾಗಿ ಅರ್ಥೈಸಿದ್ದೇ ಅವಳ ಆ ವರ್ತನೆಗೆ ಕಾರಣವಾಗಿತ್ತು. ಅಲೀಶ ತನ್ನ ಕ್ರಶ್‌ ತನಯ್‌ ಮನೆಗೆ ಬಂದಾಗ ಅವಳನ್ನಲ್ಲಿ ಸ್ವಾಗತಿಸಿದ್ದು ಹೊಚ್ಚ ಹೊಸ ಆಟಿಕೆಗಳು. ತನಯ್‌ ಜೊತೆ ಜೀವನ ಕಟ್ಟಿಕೊಳ್ಳುವ ಕನಸಿನಲ್ಲಿದ್ದ ಹುಡುಗಿ.

Read Full Story

11:26 AM (IST) Sep 21

ದಂಗೆಗಳಿಂದ ದೇಶದ ಆರ್ಥಿಕತೆ ಕುಸಿಯಬಹುದೇ? - ಭಾರತದ ಜೆನ್‌ ಝೀಗಳಿಗೊಂದು ಎಚ್ಚರಿಕೆಯ ಕರೆ

2025 ಜಾಗತಿಕವಾಗಿ ಹಲವು ಮಹತ್ವದ ವಿದ್ಯಮಾನಗಳು ನಡೆದ ವರ್ಷ. ಭಾರತ-ಪಾಕ್‌ ಸಂಘರ್ಷ, ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆ, ಹಲವು ದೇಶಗಳ ವಿರುದ್ಧ ಟ್ರಂಪ್ ನಡೆಸಿದ ವ್ಯಾಪಾರ ಸಮರ.. ಇವೆಲ್ಲವುಗಳ ಜೊತೆ ಮತ್ತೊಂದು ಮಹತ್ವದ ವಿದ್ಯಮಾನ ನಡೆಯಿತು.

Read Full Story

10:49 AM (IST) Sep 21

ನಾಳೆಯಿಂದ ದಸರಾ ಹಬ್ಬಕ್ಕೆ ಜಿಎಸ್‌ಟಿ 2.0 ಬಂಪರ್ ಗಿಫ್ಟ್; ದಿನಸಿ, ದಿನಬಳಕೆ ವಸ್ತುಗಳ ದರ ಇಳಿಕೆ ಪಟ್ಟಿ ಇಲ್ಲಿದೆ!

ದಸರಾ ಹಬ್ಬದ ವೇಳೆ ಕೇಂದ್ರ ಸರ್ಕಾರವು ಜಿಎಸ್‌ಟಿ 2.0 ಅನ್ನು ಜಾರಿಗೆ ತರುತ್ತಿದ್ದು, ಇದರಿಂದ ದಿನಬಳಕೆಯ ವಸ್ತುಗಳ ಬೆಲೆಗಳು ಗಣನೀಯವಾಗಿ ಇಳಿಕೆಯಾಗಲಿವೆ. ಈ ಹೊಸ ತೆರಿಗೆ ನೀತಿಯಿಂದಾಗಿ ಟೂತ್‌ಪೇಸ್ಟ್, ಶಾಂಪೂ, ಸೋಪ್, ದಿನಸಿ ಹಾಗೂ ಕೆಎಂಎಫ್ ಮತ್ತು ಅಮುಲ್‌ ಹಾಲಿನ ಉತ್ಪನ್ನಗಳ ದರಗಳು ಕಡಿಮೆಯಾಗಲಿವೆ.

Read Full Story

10:09 AM (IST) Sep 21

ಮನೆ ಕೆಲಸದವರಿಗೆ ಸರ್ಕಾರದಿಂದಲೇ ಕರ್ತವ್ಯದ ಸಮಯ, ಸಂಬಳ ನಿಗದಿ? ಮಸೂದೆ ಸಿದ್ಧ

ಗಿಗ್‌ ಕಾರ್ಮಿಕರ ಕಲ್ಯಾಣಕ್ಕಾಗಿ ಕಾಯ್ದೆ ರೂಪಿಸಿದ್ದ ಬೆನ್ನಲ್ಲೇ ಕಾರ್ಮಿಕ ಇಲಾಖೆ ಇದೀಗ ಮನೆಕೆಲಸದವರ ಸಾಮಾಜಿಕ ಭದ್ರತೆಗೂ ಮುಂದಾಗಿದ್ದು ಕಾಯ್ದೆಗೆ ಸಂಬಂಧಿಸಿ ಕರಡು ಸಿದ್ಧಪಡಿಸುತ್ತಿದೆ. ಕಾಯ್ದೆಯ ಸಾಧಕ-ಬಾಧಕಗಳನ್ನು ಚರ್ಚಿಸಲಾಗಿದೆ.

Read Full Story

08:34 AM (IST) Sep 21

ಧರ್ಮಸ್ಥಳ ಪ್ರಕರಣ - ಬಂಗ್ಲೆಗುಡ್ಡ 7 ಬುರುಡೆ ಪತ್ತೆಗಾಗಿ ಪೊಲೀಸರಿಗೆ ಎಸ್‌ಐಟಿ ದೂರು

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ಮಹಜರು ವೇಳೆ ಬಂಗ್ಲೆಗುಡ್ಡದಲ್ಲಿ ದೊರೆತ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ಎಸ್‌ಐಟಿ ಸಿದ್ಧತೆ ನಡೆಸಿದೆ.

Read Full Story

08:21 AM (IST) Sep 21

ಎಐ ಬಂದ ಬಳಿಕ ಬದಲಾದ ಬದುಕು - ಅಂಚೆ ಕಚೇರಿ ಉದ್ಘಾಟಿಸಿದ ಸಂಸದ ಬೊಮ್ಮಾಯಿ

ಎಐ ಬಂದ ಮೇಲೆ ನಮ್ಮ ಬದುಕು ಇನ್ನಷ್ಟು ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ನಮ್ಮ ಮೌಲ್ಯಗಳು ಬದಲಾವಣೆಯಾಗದಂತೆ ನೋಡಿಕೊಳ್ಳುವುದು ಮುಖ್ಯ. ಧಾರ್ಮಿಕ, ಸಾಮಾಜಿಕ ಮೌಲ್ಯಗಳು ಅಷ್ಟೇ ಅಲ್ಲ. ನ್ಯಾಯಾಂಗದ ಮೌಲ್ಯ ಕೂಡ ಮುಖ್ಯ ಎಂದು ಸಂಸದ ಬೊಮ್ಮಾಯಿ ತಿಳಿಸಿದರು.

Read Full Story

More Trending News