MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Mahanati ವೇದಿಕೆಯಲ್ಲಿ ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ! ಬಿಟ್ಟ ಕಣ್ಣುಗಳಿಂದ ನೋಡಿದ ವೀಕ್ಷಕರು

Mahanati ವೇದಿಕೆಯಲ್ಲಿ ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ! ಬಿಟ್ಟ ಕಣ್ಣುಗಳಿಂದ ನೋಡಿದ ವೀಕ್ಷಕರು

36 ವರ್ಷಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿರುವ ನಟಿ ಮಾಲಾಶ್ರೀ ಮತ್ತು 'ಓಂ' ಖ್ಯಾತಿಯ ನಟಿ ಪ್ರೇಮಾ ಅವರ ವೃತ್ತಿಜೀವನದ ಬಗ್ಗೆ ಈ ಲೇಖನ ವಿವರಿಸುತ್ತದೆ. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿಲ್ಲವಾದರೂ,'ಮಹಾನಟಿ' ರಿಯಾಲಿಟಿ ಶೋ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ.

2 Min read
Author : Suchethana D
Published : Sep 21 2025, 06:27 PM IST
Share this Photo Gallery
  • FB
  • TW
  • Linkdin
  • Whatsapp
17
36 ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಮಾಲಾಶ್ರೀ
Image Credit : Social Media

36 ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಮಾಲಾಶ್ರೀ

52 ವರ್ಷದ ಮಾಲಾಶ್ರೀ (Malashree Ramu) ಅವರು ಚಿತ್ರರಂಗಕ್ಕೆ ಬಂದು 36 ವರ್ಷಗಳೇ ಕಳೆದು ಹೋಗಿವೆ. 1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಕಂಡವರು. ಒಬ್ಬ ಅಹಂಕಾರದ, ಗಂಡುಬೀರಿ ಮಹಿಳೆಯಾಗಿ ಅವರ ಅಭಿನಯ ಅವರಿಗೆ ಅಪಾರ ಮನ್ನಣೆ ತಂದಿತು ಮತ್ತು ಕನ್ನಡ ಚಿತ್ರರಂಗದ ಪ್ರಮುಖ ನಟಿಯಾಗಿ ಅವರ ಆಗಮನವನ್ನು ಸೂಚಿಸಿತು. ಅವರ ಮುಂದಿನ ಕೆಲವು ಚಿತ್ರಗಳು ಅವರಿಗಾಗಿಯೇ ಬರೆದಂಥವಾಗಿದ್ದವು ಮತ್ತು ಇವಲ್ಲವುಗಳಲ್ಲಿ ಅವರು ಮುಖ್ಯ ಪಾತ್ರದಲ್ಲಿದ್ದರು.

27
ಎಲ್ಲಾ ಚಿತ್ರಗಳೂ ಯಶಸ್ವಿ
Image Credit : social media

ಎಲ್ಲಾ ಚಿತ್ರಗಳೂ ಯಶಸ್ವಿ

ಈ ಎಲ್ಲ ಚಿತ್ರಗಳು ಭಾರಿ ಯಶಸ್ಸು ಕಂಡವು. ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು ಮತ್ತು ಅವರು ಮುಂದೆ ಕನ್ನಡ ಚಿತ್ರರಂಗದ ಅತ್ಯಧಿಕ ಸಂಭಾವನೆ ಪಡೆದ ನಟಿಯೆನಿಸಿದರು. ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗಿನ ಅವರ ಚೊಚ್ಚಲ ಚಿತ್ರ ನಂಜುಂಡಿ ಕಲ್ಯಾಣವು ಪ್ರಮುಖ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು, ಇದು ಅವರ ಪ್ರಗತಿಯಾಗಿದೆ.

ಇದನ್ನೂ  ಓದಿ: 'ವಿಷ ಕೊಡಿ' ಎಂದು ಅವಲತ್ತುಕೊಂಡಿದ್ದ Darshan: ನಟ ರಮೇಶ್​ ಅರವಿಂದ್​ ರಿಯಾಕ್ಷನ್​ ಏನು?

Related Articles

Related image1
ಬಿಡುಗಡೆಗೂ ಮುನ್ನವೇ ಈ ಪರಿ ದಾಖಲೆ ಬರೆದ Kantara-1: ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿ
Related image2
ಪ್ರಕಾಶ್​ ರಾಜ್​ ಪತ್ನಿ ಜೊತೆ ಷರ್ಟ್​ಲೆಸ್​ Salman Khan ಹಾಟ್​ ಡಾನ್ಸ್​? ಈ ವಿಡಿಯೋ ವೈರಲ್ಲಾದ ಕಾರಣವೇ ಬೇರೆ!
37
90ರ ದಶಕದಲ್ಲಿ ಹಿಟ್​ ಸಿನಿಮಾ
Image Credit : our own

90ರ ದಶಕದಲ್ಲಿ ಹಿಟ್​ ಸಿನಿಮಾ

90 ರ ದಶಕದುದ್ದಕ್ಕೂ, ಅವರು ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಗಜಪತಿ ಗರ್ವಭಂಗ (1989), ಪೋಲೀಸನ ಹೆಂಡ್ತಿ (1990), ಕಿತ್ತೂರಿನ ಹುಲಿ (1990), ರಾಣಿ ಮಹಾರಾಣಿ (1990), ಮೃತ್ಯುಂಜಯ (1990), ಹೃದಯ ಹಾಡಿತು (1991), ರಾಮಾಚಾರಿ ( 1991), ಬೆಳ್ಳಿ ಕಾಲುಂಗುರ (1992), ಸೊಲಿಲ್ಲದ ಸರದಾರ (1993) ಮತ್ತು ಗಡಿಬಿಡಿ ಅಳಿಯ (1995) ಹೀಗೆ ಹಲವು ಸಿನಿಮಾಗಳಲ್ಲಿ ಯಶಸ್ವಿಯಾಗಿದ್ದಾರೆ.

47
2ನೇ ಚಿತ್ರದಲ್ಲಿ ಆರಾಧಾನಾ ರಾಮ್​
Image Credit : Instagram

2ನೇ ಚಿತ್ರದಲ್ಲಿ ಆರಾಧಾನಾ ರಾಮ್​

ಇದೀಗ ಅವರ ಪುತ್ರಿ ಆರಾಧಾನಾ ರಾಮ್​ (Aradhana Ram) ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕಿರಣ್‌ ಚಂದ್ರ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ 'ನೆಕ್ಸ್ಟ್‌ ಲೆವೆಲ್' ಸಿನಿಮಾ ನಾಯಕಿಯಾಗಿ ನಟಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟಿಸುತ್ತಿದ್ದಾರೆ. . 'ಕಾಟೇರ' ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದ ಆರಾಧನಾ ಅವರೀಗ ಉಪೇಂದ್ರ ಜತೆಗೆ ನಟಿಸುತ್ತಿದ್ದಾರೆ. ಮಾಲಾಶ್ರೀ ಕೂಡ ಸಿನಿಮಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. 2021ರಲ್ಲಿ ಕೋವಿಡ್​ನಲ್ಲಿ ಪತಿ ರಾಮು ಅವರನ್ನು ಮಾಲಾಶ್ರೀ ಕಳೆದುಕೊಂಡರು.

57
ನಟಿ ಪ್ರೇಮಾ ಕುರಿತು...
Image Credit : Instagram

ನಟಿ ಪ್ರೇಮಾ ಕುರಿತು...

ಇನ್ನು ನಟಿ ಪ್ರೇಮಾ (Actress Prema) ಅವರ ಕುರಿತು ಹೇಳುವುದಾದರೆ, ಇವರಿಗೆ 48 ವರ್ಷ ವಯಸ್ಸು. ಕನ್ನಡ ಸೇರಿದಂತೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು 1995ರಲ್ಲಿ ಶಿವರಾಜ್​ ಕುಮಾರ್​ (Shivraj Kumar) ಜೊತೆ ಸವ್ಯಸಾಚಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ಓಂ ಚಿತ್ರದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. ಪ್ರಸ್ತುತ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಟಿ ಸೀಸನ್ 2 ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

67
ಪತಿಯಿಂದ ವಿಚ್ಛೇದನ
Image Credit : our own

ಪತಿಯಿಂದ ವಿಚ್ಛೇದನ

2006ರಲ್ಲಿ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು ಮತ್ತು 2016ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದರು. ತಮ್ಮ ಮದುವೆಯ ನಂತರ ಸ್ವಾತಂತ್ರ್ಯದ ಕೊರತೆಯ ಅನುಭವವಾಯಿತೆಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇವರ ಎರಡನೆಯ ಮದುವೆಯ ಬಗ್ಗೆಯೂ ಭಾರಿ ಸದ್ದು ಮಾಡಿತ್ತು.

77
ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ
Image Credit : Instagram

ಪ್ರೇಮಾ-ಮಾಲಾಶ್ರೀ ಇತಿಹಾಸ ಸೃಷ್ಟಿ

ನಟಿ ಮಾಲಾಶ್ರೀ ಮತ್ತು ನಟಿ ಪ್ರೇಮಾ ಅವರು ಇದುವರೆಗೆ ಯಾವುದೇ ಸಿನಿಮಾದಲ್ಲಿ ಒಟ್ಟಿಗೆಯಾಗಿ ಕಾಣಿಸಿಕೊಂಡಿಲ್ಲ. ಆದರೆ ಇದೀಗ ಮಹಾನಟಿ ರಿಯಾಲಿಟಿ ಷೋ (Mahanati Reality Show)ನಲ್ಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಇವರಿಬ್ಬರೂ ಚಿತ್ರದ ಡೈಲಾಗ್​ ಒಂದನ್ನು ಹೇಳುವ ಮೂಲಕ ಭೇಷ್​ ಎನ್ನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸುವಂತೆ ಅದೇ ಅದ್ಭುತ ಅಭಿನಯದಲ್ಲಿ ಇವರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಅಭಿನಯಕ್ಕೆ ಎಲ್ಲರೂ ತಲೆದೂಗಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ಈ ಪರಿ ದಾಖಲೆ ಬರೆದ Kantara-1: ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿ

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ರಿಯಾಲಿಟಿ ಶೋ
ನೃತ್ಯ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Mammootty: ಸೂಪರ್ ಸ್ಟಾರ್ ಮಮ್ಮೂಟ್ಟಿಗೆ ಕೊರೋನಾ ಪಾಸಿಟಿವ್, ಭಾರತದಲ್ಲಿ ಮತ್ತೆ ಭುಗಿಲೆದ್ದ ವೈರಸ್ ಭೀತಿ!
Recommended image2
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!
Recommended image3
Toxic: 'ರಾಯ'ನ ಜೊತೆ ಎಂಟ್ರಿ ಕೊಟ್ಟ 'ಟಿಕೆಟ್'! ಯಶ್ ಹಳೇ ವಿಡಿಯೋಗೂ ಸಿನಿಮಾಗೂ ಇದೆಯೇ ನಂಟು?
Related Stories
Recommended image1
ಬಿಡುಗಡೆಗೂ ಮುನ್ನವೇ ಈ ಪರಿ ದಾಖಲೆ ಬರೆದ Kantara-1: ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಸೃಷ್ಟಿ
Recommended image2
ಪ್ರಕಾಶ್​ ರಾಜ್​ ಪತ್ನಿ ಜೊತೆ ಷರ್ಟ್​ಲೆಸ್​ Salman Khan ಹಾಟ್​ ಡಾನ್ಸ್​? ಈ ವಿಡಿಯೋ ವೈರಲ್ಲಾದ ಕಾರಣವೇ ಬೇರೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved