- Home
- Entertainment
- TV Talk
- ಬಲ್ ನನ್ಮಗ ಈ ಆಕಾಶ್; ತಂದೆಯನ್ನೇ ಬಾಡಿಗೆ ಅಪ್ಪನಾಗಿ ಮಾಡ್ಕೊಂಡ! ಗೌತಮ್ ಭಾವುಕ ನಟನೆಗೆ ವೀಕ್ಷಕರ ಕಣ್ಣೀರು!
ಬಲ್ ನನ್ಮಗ ಈ ಆಕಾಶ್; ತಂದೆಯನ್ನೇ ಬಾಡಿಗೆ ಅಪ್ಪನಾಗಿ ಮಾಡ್ಕೊಂಡ! ಗೌತಮ್ ಭಾವುಕ ನಟನೆಗೆ ವೀಕ್ಷಕರ ಕಣ್ಣೀರು!
ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ತನ್ನೊಂದಿಗಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದು, ತಂದೆ-ಮಗನ ಈ ಭಾವುಕ ಮಿಲನದ ದೃಶ್ಯ ವೀಕ್ಷಕರ ಮನಗೆದ್ದಿದೆ.

ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ನೋಡಿ ವೀಕ್ಷಕರು ಭಾವುಕರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ತನ್ನೊಂದಿಗೆ ತಮಾಷೆ ಮಾಡಿಕೊಂಡಿದ್ದ ಹುಡುಗನೇ ತನ್ನ ಮಗ ಎಂಬ ವಿಷಯ ತಿಳಿದು ಗೌತಮ್ ಭಾವುಕನಾಗಿದ್ದಾನೆ. ರಾಜೇಶ್ ನಟರಂಗ ತಂದೆಯಾಗಿ ಮಗನನ್ನು ಅಪ್ಪಿಕೊಳ್ಳುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿವೆ.
ಗೌತಮ್ ಮತ್ತು ಆನಂದ್
ಮಗನನ್ನು ಹುಡುಕಿಕೊಂಡು ಗೌತಮ್ ಮತ್ತು ಆನಂದ್ ಶಾಲೆಯೊಳಗೆ ಬಂದಿದ್ದಾರೆ. ಮಗನನ್ನು ಹುಡುಕಲು ಅಪ್ಪು ಬಳಿಯೇ ಗೌತಮ್ ಮತ್ತು ಆನಂದ್ ಸಹಾಯ ಕೇಳಿದ್ದಾರೆ. ಆದ್ರೆ ಅಪ್ಪು ಭಲೇ ಕಿಲಾಡಿ. ಸಹಾಯಕ್ಕೆ ಪ್ರತಿಯಾಗಿ ಸಹಾಯ ಕೇಳಿದ್ದಾನೆ. ಗೌತಮ್ ದಿವಾನ್ ತನ್ನ ನಿಜವಾದ ತಂದೆ ಎಂದು ತಿಳಿಯದೇ ಬಾಡಿಗೆ ಅಪ್ಪನನ್ನಾಗಿ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಸರಿಗಮಪ ಖ್ಯಾತಿಯ ಸುಹಾನಾ ಪ್ರೀತಿಯ ಪೋಸ್ಟ್‌ಗೆ ನೆಟ್ಟಿಗರು ಮಾಡಿದ ಕಮೆಂಟ್ ಏನು?
ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾನ್
ಇಷ್ಟು ಮಾತ್ರವಲ್ಲ ಹೆಸರಿಗೆ ತಕ್ಕಂತೆ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾನ್. ಅವರಂತಯೇ ಡ್ರೆಸ್ ಮಾಡ್ಕೊಂಡು ಬಂದು ಪ್ರಿನ್ಸಿಪಾಲ್ ಅವರನ್ನು ಮೀಟ್ ಮಾಡುವಂತೆ ಹೇಳಿದ್ದಾನೆ. ಗೌತಮ್ ಸಹ ರಾಯಲ್ ಲುಕ್‌ನಲ್ಲಿ ಶಾಲೆಗೆ ಬಂದಿದ್ದಾನೆ. ಈ ವಿಡಿಯೋಗೆ ಬಲ್ ನನ್ ಮಗ ಕಣೋ ನೀನು ಆಕಾಶ್ ದಿವಾನ್ ಎಂದು ವೀಕ್ಷಕರು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ: ನಿತಿನ್ ಜೊತೆಗಿನ ಪ್ರೇಮ ಪಯಣದ ಗುಟ್ಟು ಹಂಚಿಕೊಂಡ ಸರಿಗಮಪ ಶೋ ಗಾಯಕಿ ಸುಹಾನಾ ಸೈಯದ್
ಭಾವುಕನಾದ ಗೌತಮ್
ಗೌತಮ್ ಜೊತೆಗಿರುವಾಗಲೇ ಶಾಲೆಯಲ್ಲಿ ತಾಯಿ ಭೂಮಿಕಾಳನ್ನು ನೋಡುತ್ತಲೇ ಅಪ್ಪು ಅಡಗಿಕೊಂಡಿದ್ದಾಳೆ. ಈ ವೇಳೆ ಅಲ್ಲಿ ಬರುತ್ತಿರೋದು ನನ್ನ ತಾಯಿ ಮತ್ತು ನಿಜವಾದ ಹೆಸರು ಆಕಾಶ್ ಎಂಬ ವಿಷಯ ಹೇಳಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಭಾವುಕನಾದ ಗೌತಮ್, ಮಗನನ್ನು ತಬ್ಬಿಕೊಂಡು ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್
ಪಾದರಸದಂತಹ ಅಭಿನಯ
ಈ ದೃಶ್ಯದ ತುಣಕನ್ನು ಝೀ ಕನ್ನಡದ ವಾಹಿನಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಲಲಿತಾ ಎಂಬವರು, ಇವತ್ತಿನ ಸಂಚಿಕೆ ತುಂಬಾ ಚೆನ್ನಾಗಿದೆ. ಪಾದರಸದಂತಹ ಅಭಿನಯ ಈ ಅಪ್ಪು ಮತ್ತು ಗೌತಮನದು. ಅಪ್ಪ ಮತ್ತು ಮಗನ ಜೋಡಿಯನ್ನು ನೋಡುವುದೇ ಒಂದು ಸಂತೋಷ. ಈ ಚಿಕ್ಕ ಹುಡುಗ ವಿಪರೀತ ಅಧಿಕ ಪ್ರಸಂಗ ಮಾತನಾಡುತ್ತಾನೆ. ಅವನ ತಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿ ಗೌತಮನ ಹೆಗಲ ಮೇಲಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಗೌತಮ್‌ಗೆ ಹೆಂಡ್ತಿ-ಮಗ ಸಿಕ್ಕಾಯ್ತು; ಮುಂದೆ ತೆರೆದುಕೊಳ್ಳಲಿದೆ ಹೊಸ ತಿರುವು