- Home
- Astrology
- ಒಂದೇ ದಿನ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ: ಇಂದು ಈ ಕೆಲಸ ಮಾಡಿದರೆ ಪುಣ್ಯ ಸಿಗತ್ತೆ: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
ಒಂದೇ ದಿನ ಸೂರ್ಯಗ್ರಹಣ, ಮಹಾಲಯ ಅಮಾವಾಸ್ಯೆ: ಇಂದು ಈ ಕೆಲಸ ಮಾಡಿದರೆ ಪುಣ್ಯ ಸಿಗತ್ತೆ: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
Surya Grahan And Mahalaya Amavasya: ಇಂದು ಸೂರ್ಯಗ್ರಹಣ ಹಾಗೂ ಮಹಾಲಯ ಅಮಾವಾಸ್ಯೆ ಕೂಡ ಇದೆ. ಆದರೆ ಭಾರತದ ಮೇಲೆ ಸೂರ್ಯಕ್ರಹಣ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಹೇಳಲಾಗಿದೆ. ಇದರ ನಡುವೆ ಇಂದು ಏನು ಮಾಡಿದರೆ ಶುಭ?. ಇದಕ್ಕೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಏನು ಹೇಳಿದ್ದಾರೆ?

ಭಾರತದಲ್ಲಿ ಸೂರ್ಯಗ್ರಹಣ ಇಲ್ಲ
“ಗೊಂದಲ ಬೇಡ. ಇಂದಿನ ಸೂರ್ಯಗ್ರಹಣದ ಗೋಚರವು ಭಾರತಕ್ಕಿರೋದಿಲ್ಲ. ಹಾಗಾಗಿ ಆಚರಣೆಯೂ ಇಲ್ಲ. ಆದರೂ ಸೂರ್ಯಾರ್ಘ್ಯಾದಿ ಸತ್ಕಾರ್ಯ ಕರ್ಮಗಳನ್ನು ಮಾಡಿದರೆ ಅನುಗ್ರಹವಿದೆ” ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
ಪಿತೃ ತರ್ಪಣ ಕೊಡಿ
ತರ್ಪಣಾರ್ಹರು ಪಿತೃ ತರ್ಪಣವನ್ನೂ ಕೊಟ್ಟರೆ ಮಹಾಲಯ ಅಮವಾಸ್ಯೆಯ ಪುಣ್ಯ ಪರ್ವಕಾಲದ ಉತ್ತಮ ಫಲವಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾಗೆ ಬಲಿ ತಿಂದರೆ ಪಿತೃ ತಿಂದರು ಅಂತ ಅರ್ಥವೇ?
ಪಿತೃ ಕಾರ್ಯದಲ್ಲಿ ಕಾಗೆ ಬಲಿಯನ್ನು ತಿಂದರೆ ಪಿತೃಗಳು ತಿಂದರು ಎಂದರ್ಥವಲ್ಲ. ಅಲ್ಲಿ ಇಡೋದು ಪಿತೃ ಶೇಷವನ್ನು. ಇದನ್ನು ವಾಯಸ ಬಲಿ ಎನ್ನುತ್ತಾರೆ ಎಂದು ಅವರು ಹೇಳಿದ್ದಾರೆ.
ವಿಜ್ಞಾನಿಗಳಿಗೆ ವಿಶೇಷ
ಒಂದು ವಾರದ ಹಿಂದೆ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಿತ್ತು. ಈಗ ಸೂರ್ಯಗ್ರಹಣ ನಡೆಯಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣ ಎನ್ನಲಾಗಿದೆ. ಹೀಗಾಗಿ ಇದು ವಿಜ್ಞಾನಿಗಳಿಗೆ ವಿಶೇಷ ಎನ್ನಬಹುದು.
ಈ ರಾಶಿಗಳು ಹುಷಾರಾಗಿರಿ
ಭಾರತದ ಮೇಲೆ ಪರಿಣಾಮ ಬೀರದಿದ್ದರೂ ಕೂಡ ಕನ್ಯಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿಯವರ ಮೇಲೆ ಪರಿಣಾಮ ಬೀರುವುದು. ಹೀಗಾಗಿ ಈ ಮೂರು ರಾಶಿಗಳು ಹುಷಾರಾಗಿರಬೇಕು.