ಬೆಳಗಾವಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಜೋರಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಧ್ಯದ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ದೆಹಲಿಯಲ್ಲಿ ಅವರಿಬ್ಬರ ಮಧ್ಯೆ ಟಾಸ್ ಆಗಿದ್ದು, ಆ ವೇಳೆ ನಾವು ಇರಲಿಲ್ಲ. ಹಾಗಾಗಿ ಹೆಡ್ಡೋ, ಟೇಲೋ ಅವರನ್ನೇ ಕೇಳಿ ಎಂದು ಮಾರ್ಮಿಕವಾಗಿ ಹೇಳಿದರು. ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ಸಿಎಂ ಮತ್ತು ಡಿಸಿಎಂ ಅವರಿಬ್ಬರ ಮಧ್ಯೆ ಟಾಸ್ ಆಗಿದೆ. ನಾವು ಕ್ಯಾಪ್ಟನ್ ಜಾಗದಲ್ಲಿ ಇಲ್ಲ. ಆವಾಗ ಥರ್ಡ್ ಅಂಪೈರ್ ಕೂಡ ಇರಲಿಲ್ಲ. ಇಬ್ಬರೇ ಟಾಸ್ ಹಾಕಿದ್ದು, ಆ ವೇಳೆ ಹೆಡ್ ಬಿದ್ದಿದೆಯೋ ಟೇಲ್ ಬಿದ್ದಿದೆಯೋ ಅವರನ್ನೇ ಕೇಳಬೇಕು ಎಂದಿದ್ದಾರೆ.
11:02 AM (IST) Dec 21
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದಿಂದಲೂ ಕಾವ್ಯ ಶೈವ ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ನಡೆಯುತ್ತಲೇ ಇದೆ. ಇವರಿಬ್ಬರು ಸಾಕಷ್ಟು ಬಾರಿ ಜಗಳ ಆಡಿಕೊಂಡಿದ್ದಾರೆ. ಈ ವಾರ ಕೂಡ ಅದೇ ಆಯ್ತು. ಕಿಚ್ಚ ಸುದೀಪ್ ಕ್ಲಾಸ್ ಕೂಡ ತಗೊಂಡ್ರು.
10:58 AM (IST) Dec 21
ಮಂಗಳೂರು ಪೊಲೀಸರು ಮುಸ್ಲಿಂ ಸಂಘಟನೆಗಳನ್ನು ಮಾತ್ರ ಗುರಿಯಾಗಿಸಿ ಪ್ರತಿಭಟನೆಗೆ ಬಾಂಡ್ ಪಡೆಯುತ್ತಿದ್ದಾರೆ ಎಂಬ SDPI ಆರೋಪಕ್ಕೆ ಪೊಲೀಸ್ ಆಯುಕ್ತರು ಅಂಕಿ-ಅಂಶಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈವರೆಗೆ 521 ಹಿಂದೂಗಳು ಮತ್ತು 351 ಮುಸ್ಲಿಮರಿಂದ ಮುಚ್ಚಳಿಕೆ ಬರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.
10:40 AM (IST) Dec 21
Sivakarthikeyan's car accident in Chennai: ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದ್ದು, ಅವರೇ ಮಧ್ಯಸ್ಥಿಕೆ ವಹಿಸಿ ಜಗಳ ಬಗೆಹರಿಸಿದ್ದಾರೆ.
10:26 AM (IST) Dec 21
ದಾವಣಗೆರೆಯಲ್ಲಿ ₹150 ಕೋಟಿ ಎಂದು ಭಾವಿಸಲಾಗಿದ್ದ ಸೈಬರ್ ವಂಚನೆ ಪ್ರಕರಣವು ಇದೀಗ ₹1000 ಕೋಟಿಗೂ ಅಧಿಕ ವಹಿವಾಟು ನಡೆಸಿರುವುದು ತನಿಖೆಯಿಂದ ಬಯಲಾಗಿದೆ. ದೂರುದಾರನೇ ಪ್ರಮುಖ ಆರೋಪಿಯಾಗಿದ್ದು, ದುಬೈನಿಂದ ಹಣ ವರ್ಗಾವಣೆಗಾಗಿ ಕರೆಂಟ್ ಅಕೌಂಟ್‌ಗಳನ್ನು ಮಾರಾಟ ಮಾಡುವ ದಂಧೆ ಬೆಳಕಿಗೆ ಬಂದಿದೆ.
10:19 AM (IST) Dec 21
ಸೀಕ್ರೆಟ್ ರೂಮ್‌ನಿಂದ ಮರಳಿದ ರಕ್ಷಿತಾ ಶೆಟ್ಟಿ, ತಾನಿಲ್ಲದೆ ಮನೆಗೆ ಸ್ಪಾರ್ಕ್ ಇರಲಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ, 'ಭ್ರಮೆಯಲ್ಲಿರುವ ಸ್ಪರ್ಧಿ' ಟಾಸ್ಕ್‌ನಲ್ಲಿ ಬಹುತೇಕ ಸದಸ್ಯರು ರಕ್ಷಿತಾ ಅವರ ಬಲೂನ್ ಒಡೆದು, ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
10:12 AM (IST) Dec 21
ಬಾಗಲಕೋಟೆಯ ಅನಧಿಕೃತ ದಿವ್ಯಜ್ಯೋತಿ ಬುದ್ಧಿಮಾಂದ್ಯ ಶಾಲೆಯಲ್ಲಿ, ಶಿಕ್ಷಕ ದಂಪತಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಕಾರದಪುಡಿ ಎರಚಿ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಮೂರು ತಿಂಗಳ ಹಿಂದಿನ ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೋಷಕರ ದೂರು. ಪೊಲೀಸರು ಆರೋಪಿ ದಂಪತಿಯನ್ನು ವಶಕ್ಕೆ
10:07 AM (IST) Dec 21
Bigg Boss Kannada Season 12 Episode: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಗೆಲ್ಲಲೇಬಾರದು ಎಂದು ಪ್ಲ್ಯಾನ್ ಮಾಡಿದ್ರಿ. ನೀವು ಮನೆಯೊಳಗಡೆ ಬಂದಾಗ, ಅವರು ಕ್ಯಾಪ್ಟನ್ ಆಗಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆ ಬಗ್ಗೆ ಚರ್ಚೆ ನಡೆದಿದೆ. ರಕ್ಷಿತಾ ಮಾತನ್ನು ಉಳಿದವರು ವಿರೋಧ ಮಾಡಿದ್ದಾರೆ.
09:45 AM (IST) Dec 21
ಮಳವಳ್ಳಿಯಲ್ಲಿ ನಡೆದ ಸುತ್ತೂರು ಶ್ರೀಗಳ ಜಯಂತೋತ್ಸವದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನಗಳು ವಿಫಲವಾಗಲಿವೆ ಎಂದಿದ್ದಾರ ಎಂದರು.
09:26 AM (IST) Dec 21
ನರೇಗಾ ಹೆಸರು ಬದಲು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರದ ದ್ವೇಷದ ರಾಜಕಾರಣವನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಬಿಡುವುದಿಲ್ಲ ಎಂದು ಸವಾಲು ಹಾಕಿದರು.
09:08 AM (IST) Dec 21
ನಟಿ ಶುಭಾ ಪೂಂಜಾ 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಕೋಳಿ ಕಳ್ಳ ಖ್ಯಾತಿಯ ಮನು ಜೊತೆ ನಟಿಸಿದ್ದಾರೆ. ಅವರ ಸರಳತೆಗೆ ಸಹನಟ ಮನು ಮನಸೋತರೆ, ಹಿರಿಯ ನಟ ಜಗ್ಗೇಶ್ ಅವರ ನಟನೆ ಹಾಗೂ ಕಲಿಯುವ ಆಸಕ್ತಿಯನ್ನು ಮೆಚ್ಚಿಕೊಂಡಿದ್ದಾರೆ.
08:38 AM (IST) Dec 21
Kollur temple fake website scam :ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಆನ್‌ಲೈನ್ ರೂಮ್ ಬುಕ್ಕಿಂಗ್ ಹೆಸರಿನಲ್ಲಿ ಭಕ್ತರಿಂದ ಹಣ ಪಡೆದು ವಂಚಿಸುತ್ತಿದ್ದ ರಾಜಸ್ಥಾನ ಮೂಲದ ನಾಸೀರ್ ಹುಸೇನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
08:36 AM (IST) Dec 21
ಪಶ್ಚಿಮ ಬಂಗಾಳದ ಜಂಗಲ್ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ತಾಂಡವವಾಡುತ್ತಿದೆ. ಆದ್ದರಿಂದ 2026ರ ಚುನಾವಣೆಯಲ್ಲಿ ಡಬಲ್ ಎಂಜಿನ್ ಸರ್ಕಾರ ರಚಿಸಲು ಬಿಜೆಪಿಗೆ ಅವಕಾಶ ಕೊಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
08:19 AM (IST) Dec 21
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ, ಧ್ರುವಂತ್ ಅವರು ಸೀಕ್ರೆಟ್ ರೂಮ್‌ನಲ್ಲಿದ್ದರು. ಅಲ್ಲಿಂದ ಅವರು ದೊಡ್ಮನೆಯಲ್ಲಿ ಏನು ನಡೆಯುತ್ತಿದೆ ಎಂದು ನೋಡುತ್ತಿದ್ದರು, ಆಮೇಲೆ ಟೀಂ ರಚನೆ ಮಾಡಿದ್ದರು. ತನ್ನಿಂದಲೇ ಎಲ್ಲ, ತಾನೇ ಎಲ್ಲ ಎಂದುಕೊಂಡ ರಕ್ಷಿತಾಗೆ ಉಳಿದವರು ಠಕ್ಕರ್ ಕೊಟ್ಟಿದ್ದಾರೆ.
08:18 AM (IST) Dec 21
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿ ಅಧಿವೇಶನದ ಕೊನೆಯ ದಿನ ಸತತ 11.10 ಗಂಟೆಗಳ ಕಾಲ ಸದನ ನಡೆಸಿ ಹೊಸ ದಾಖಲೆ ಬರೆದಿದ್ದಾರೆ. 45 ವರ್ಷಗಳ ಕಾಲ ಪರಿಷತ್ ಸದಸ್ಯರಾಗಿ ವಿಶ್ವದಾಖಲೆ ಹೊಂದಿರುವ ಹೊರಟ್ಟಿ, ಈ ಮೂಲಕ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
08:13 AM (IST) Dec 21
ಚಳಿಗಾಲದಲ್ಲಿ ರಾತ್ರಿ ಹೊತ್ತು ಮನೆ ಬೆಚ್ಚಗಿಡಲು ಕಿಟಕಿಗಳನ್ನು ಸರಿಯಾಗಿ ಮುಚ್ಚುವುದು, ದಪ್ಪ ಪರದೆಗಳನ್ನು ಬಳಸುವುದು ಮತ್ತು ನೆಲದ ಮೇಲೆ ರಗ್‌ಗಳನ್ನು ಹಾಕುವುದು ಮುಖ್ಯ. ಹೆಚ್ಚು ಚಳಿ ಇದ್ದರೆ, ಸುರಕ್ಷಿತವಾಗಿ ರೂಮ್ ಹೀಟರ್ ಬಳಸಬಹುದು.
08:04 AM (IST) Dec 21
ಜಗತ್ತಿನಲ್ಲಿರುವ ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮಗೆ ಬೆಲೆ ನೀಡಬೇಕು. ಮನಸ್ಸು ಬಲವಾಗಿದ್ದರೆ, ದುರ್ಬಲ ದೇಹವನ್ನೂ ಸಹ ಅದು ನೋಡಿಕೊಳ್ಳುತ್ತದೆ. ಜೀವನದ ಬಗ್ಗೆ ನಿಮಗಿರುವ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳಿ, ನಿಮ್ಮ ಆತ್ಮಶಕ್ತಿಯಲ್ಲಿ ವಿಶ್ವಾಸವನ್ನು ಇಡಿ. ಧ್ಯಾನವನ್ನು ಅಭ್ಯಾಸ ಮಾಡಿ.
07:50 AM (IST) Dec 21
ಸೀಕ್ರೆಟ್ ರೂಮ್‌ನಲ್ಲಿದ್ದ ಧ್ರುವಂತ್, ರಕ್ಷಿತಾ ಅವರ ಆಟದ ತಂತ್ರಗಾರಿಕೆಯನ್ನು ವೀಕೆಂಡ್ ಸಂಚಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ಫಿನಾಲೆಯಲ್ಲಿ ಗಿಲ್ಲಿ ಜೊತೆಗಿರಲು ರಕ್ಷಿತಾ, ಕಾವ್ಯಾ ಮತ್ತು ಸ್ಪಂದನಾ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಧ್ರುವಂತ್ ವಿವರಿಸಿದರು.
07:40 AM (IST) Dec 21
Bigg Boss Kannada Season 12 Episode Update: ಬಿಗ್ ಬಾಸ್ ಮನೆಯಲ್ಲಿ ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್ ಸಖತ್ ಕಾಮಿಡಿಯಿಂದಲೇ ಶುರುವಾಗಿದೆ. ಹೌದು, ಇಂದು ಸ್ಪರ್ಧಿಗಳೆಲ್ಲ ಸಿಕ್ಕಾಪಟ್ಟೆ ನಕ್ಕಿದ್ದಾರೆ. ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.
07:32 AM (IST) Dec 21
ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಗೃಹಲಕ್ಷ್ಮೀ ಮಾತ್ರವಲ್ಲದೆ ಶಕ್ತಿ ಯೋಜನೆಯಲ್ಲೂ ಸರ್ಕಾರ ಜನರಿಗೆ ಮೋಸ ಮಾಡಿದೆ ಹಣ ಬಿಡುಗಡೆಯಾಗುವವರೆಗೂ ಪ್ರತಿಭಟನೆಗೆ ಕರೆ..