LIVE NOW
Published : Feb 02, 2026, 06:45 AM ISTUpdated : Feb 02, 2026, 10:39 PM IST

Karnataka News Live: ಫಾಕ್ಸ್‌ಕಾನ್‌ V/s ಗ್ರಾಮ ಪಂಚಾಯ್ತಿ - ಟ್ಯಾಕ್ಸ್‌ ಕಟ್ಟಿ ಎಂದು ಐಫೋನ್‌ ತಯಾರಿಕಾ ಕಂಪನಿಗೆ ಹೇಳಿದ ಸರ್ಕಾರ!

ಸಾರಾಂಶ

‘14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿದ್ದ ಪಾಲು ಶೇ.4.71. ಆದರೆ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇನ್ನೂ ಕಮ್ಮಿ, ಅಂದರೆ, ಶೇ.3.64ರಷ್ಟು ಮಾತ್ರ ಬಂದಿದೆ. ಕನಿಷ್ಠ ಶೇ 4.71ರಷ್ಟಾದರೂ ಕೊಡಿ ಎಂದು ಒತ್ತಾಯ ಮಾಡಿದ್ದೆವು. 14ನೇ ಹಣಕಾಸು ಆಯೋಗಕ್ಕಿಂತ ಜಾಸ್ತಿ ಮಾಡಲು ಕೇಳಿದ್ದೆವು. ಆದರೆ, ಶೇ.4.131ರಷ್ಟು ಮಾತ್ರ ಕೊಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದೊಡ್ಡ ಅನ್ಯಾಯ’ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

 

10:39 PM (IST) Feb 02

ಫಾಕ್ಸ್‌ಕಾನ್‌ V/s ಗ್ರಾಮ ಪಂಚಾಯ್ತಿ - ಟ್ಯಾಕ್ಸ್‌ ಕಟ್ಟಿ ಎಂದು ಐಫೋನ್‌ ತಯಾರಿಕಾ ಕಂಪನಿಗೆ ಹೇಳಿದ ಸರ್ಕಾರ!

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಫಾಕ್ಸ್‌ಕಾನ್ ಮತ್ತು ದೇವನಹಳ್ಳಿ ವಿಶೇಷ ಹೂಡಿಕೆ ಪ್ರದೇಶದ ಇತರ ಘಟಕಗಳಿಗೆ ಆಸ್ತಿ ತೆರಿಗೆ ಪಾವತಿಸಲು ನಿರ್ದೇಶನ ನೀಡಿದೆ, ಅಧಿಸೂಚಿತ ಕೈಗಾರಿಕಾ ಪ್ರದೇಶಗಳಲ್ಲಿ ತೆರಿಗೆ ಮೌಲ್ಯಮಾಪನ ಮತ್ತು ಸಂಗ್ರಹಣೆಯ ಮೇಲಿನ ಅಧಿಕಾರವನ್ನು ಕೂಡ ಉಲ್ಲೇಖಿಸಿದೆ.

 

Read Full Story

10:23 PM (IST) Feb 02

ರಾಜ್ಯ ಮಟ್ಟದ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಪರಿಮಳ, ಹೆಂಡ್ತಿ ಸಾಧನೆ ಕೊಂಡಾಡಿದ ಜಗ್ಗೇಶ್‌!

57ನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ನಟ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಧನೆ ಮಾಡಿದ್ದಾರೆ. ಸಂಸಾರದ ಜವಾಬ್ದಾರಿಯ ನಡುವೆಯೂ ಶಿಕ್ಷಣ ಹಾಗೂ ಹೊಸ ಕೌಶಲ್ಯಗಳನ್ನು ಕಲಿಯುವ ಅವರ ಛಲಕ್ಕೆ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

08:42 PM (IST) Feb 02

'ಭಾರತದ ಸತ್ಯ ಬರೀ ಜಾತಿಯಷ್ಟೇ, ಇಲ್ಲಿ ಹಿಂದೂ ಎನ್ನುವುದೇ ಇಲ್ಲ' - ಕೇಂದ್ರ ಸರ್ಕಾರದ ವಿರುದ್ಧ ನಟ ಕಿಶೋರ್ ಕಿಡಿ!

ನಟ ಕಿಶೋರ್ ಅವರು ಬಿಜೆಪಿ, ಆರೆಸ್ಸೆಸ್ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. 'ಹಿಂದೂ ಹಿಂದಕ್ಕೆ, ಜಾತಿ ಮುಂದಕ್ಕೆ' ಎಂದು ಹೇಳುವ ಮೂಲಕ, ಯುಜಿಸಿ ನಿರ್ಧಾರ ಹಾಗೂ ದೇಶದ ಜಾಗತಿಕ ಸೂಚ್ಯಂಕಗಳ ಕುಸಿತದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. 

Read Full Story

07:47 PM (IST) Feb 02

Extra Marital Affairs - ಮನಃಶಾಸ್ತ್ರದ ಪ್ರಕಾರ ವ್ಯಕ್ತಿ ಅಕ್ರಮ ಸಂಬಂಧದಲ್ಲಿದ್ದಾರೆ ಎಂದು ತಿಳಿಸುವ ಸೂಚನೆಗಳಿವು!

Extra Marital Affairs Signs: ಅಕ್ರಮ ಸಂಬಂಧ ಅನ್ನೋದು ತಪ್ಪು ಅಂತ ಎಲ್ಲರಿಗೂ ಗೊತ್ತು. ಆದರೂ ಕೆಲವರು ಯಾಕೆ ಆ ತಪ್ಪಿನ ಕಡೆಗೇ ಆಕರ್ಷಿತರಾಗುತ್ತಾರೆ? ಅಕ್ರಮ ಸಂಬಂಧದಲ್ಲಿರುವವರಲ್ಲಿ ಯಾವೆಲ್ಲಾ ಲಕ್ಷಣಗಳು ಕಾಣಿಸುತ್ತವೆ? ಈ ಬಗ್ಗೆ ಮನಃಶಾಸ್ತ್ರ ಏನು ಹೇಳುತ್ತೆ?

 

Read Full Story

07:27 PM (IST) Feb 02

ಇಷ್ಟೆಲ್ಲ ಬದಲಾವಣೆ ಆಗತ್ತೆ ಅಂತ ಗೊತ್ತಾದ್ರೆ Junk Food ಬಿಡ್ತೀರಾ! ಇದು 30 ದಿನದ ಚಾಲೆಂಜ್!

Effects of quitting junk food: ಜಂಕ್ ಫುಡ್ ಆರೋಗ್ಯಕ್ಕೆ ಒಳ್ಳೇದಲ್ಲ ಅಂತ ಎಲ್ಲರಿಗೂ ಗೊತ್ತು. ಆದ್ರೂ, ಬಹುತೇಕರು ಅದನ್ನೇ ಇಷ್ಟಪಟ್ಟು ತಿಂತಾರೆ. ಆದ್ರೆ, 30 ದಿನಗಳ ಕಾಲ ಜಂಕ್ ಫುಡ್ ತಿನ್ನೋದನ್ನು ನಿಲ್ಲಿಸಿದರೆ ನಿಮ್ಮ ದೇಹದಲ್ಲಿ, ಮುಖ್ಯವಾಗಿ ಮುಖದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

 

Read Full Story

07:19 PM (IST) Feb 02

ಅಜ್ಜಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹೊರಟ ಮೊಮ್ಮಗನನ್ನೂ ಮಸಣದ ಹೆಣ ಮಾಡಿದ ಜವರಾಯ!

ಧಾರವಾಡದಲ್ಲಿ, ಅಜ್ಜಿಯ ಅಂತಿಮ ಸಂಸ್ಕಾರ ಮುಗಿಸಿ ಮನೆಗೆ ಮರಳುತ್ತಿದ್ದ ಮೊಮ್ಮಗ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವೇಗವಾಗಿದ್ದ ಬೈಕ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಒಂದೇ ಕುಟುಂಬದಲ್ಲಿನ ಸತತ ಎರಡು ಸಾವುಗಳು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

Read Full Story

07:19 PM (IST) Feb 02

ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ದಿಢೀರ್ ದಿಕ್ಕು ಬದಲಿಸಿದ್ದ ಉದ್ಯಮಿ

ಸಿಜೆ ರಾಯ್ ಸಾವಿಗೂ ಮುನ್ನ ನಡೆದಿತ್ತು ಮಹತ್ವದ ಘಟನೆ, ಸಿಜೆ ರಾಯ್ ಸಾವಿಗೆ ಐಟಿ ದಾಳಿ, ಕಿರುಕುಳವೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಸಿಜೆ ರಾಯ್ ಮಹತ್ವದ ಯೂ ಟರ್ನ್ ಇದೀಗ ಅನುಮಾನ ಹೆಚ್ಚಿಸಿದೆ.

 

Read Full Story

07:14 PM (IST) Feb 02

ಕೃಷಿ ಭೂಮಿಗೆ ಕಂಟಕ - ಯಲಹಂಕ–ರಾಜಾನುಕುಂಟೆ ರೈಲು ಮಾರ್ಗ ಯೋಜನೆಯ ಭೂಸ್ವಾಧೀನಕ್ಕೆ ವ್ಯಾಪಕ ವಿರೋಧ

ಯಲಹಂಕದ ಬೆಟ್ಟಹಲಸೂರಿನಿಂದ ರಾಜಾನುಕುಂಟೆವರೆಗಿನ ಹೊಸ ರೈಲು ಮಾರ್ಗ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಕೃಷಿ ಭೂಮಿ ನಾಶವಾಗುತ್ತದೆ ಎಂದು ಆರೋಪಿಸಿ, ತರಕಾರಿ ಮಾಲೆ ಧರಿಸಿ ವಿಭಿನ್ನವಾಗಿ ಪ್ರತಿಭಟಿಸಿ, ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ.
Read Full Story

07:11 PM (IST) Feb 02

ಲೈಫ್ ಕೊಟ್ಟ ಸೆಕೆಂಡ್ ಚಾನ್ಸ್ - 2ನೇ ಬಾರಿಗೆ ಲವ್‌ ಮಾಡಿ ಮದುವೆಯಾದ ದಕ್ಷಿಣ ಭಾರತದ ಸೆಲೆಬ್ರಿಟಿಗಳು

South Indian Celebrity Second Marriage: ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಲ ನಟ, ನಟಿಯರು ತಮ್ಮ ಮೊದಲನೇ ವೈವಾಹಿಕ ಜೀವನದಲ್ಲಿ ಸೋತಿದ್ದರು, ಆಮೇಲೆ ಅವರು ಎರಡನೇ ಮದುವೆ ಆಗಿ ಖುಷಿಯಿಂದ ಬದುಕುತ್ತಿದ್ದಾರೆ.

 

Read Full Story

06:58 PM (IST) Feb 02

ಶಾಸಕ ಶರತ್ ಬಚ್ಚೇಗೌಡರ ಹೊಸಕೋಟೆ ಮೆಟ್ರೋ ಕನಸು ನನಸು, ಮೆಟ್ರೋ ವಿಸ್ತರಣೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಹೊಸಕೋಟೆ ಜನರ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಶಾಸಕ ಶರತ್ ಬಚ್ಚೇಗೌಡರ ಪ್ರಯತ್ನದ ಫಲವಾಗಿ, ಕೆ.ಆರ್.ಪುರಂನಿಂದ ಹೊಸಕೋಟೆಯವರೆಗಿನ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಯು ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ.

Read Full Story

06:21 PM (IST) Feb 02

ಅಪ್ಪನ ಪ್ರೀತಿ ಕೊಟ್ಟ ಅಜ್ಜ ಸುಂದರ್‌ರಾಜ್‌ಗೆ 75ನೇ ವಸಂತದ 'ರಾಯಲ್ ಮೆಮೋರಿ' ಕೊಟ್ಟ ರಾಯನ್ ರಾಜ್ ಸರ್ಜಾ!

ಹಿರಿಯ ನಟ ಸುಂದರ್ ರಾಜ್ ಅವರು ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಮೊಮ್ಮಗ ರಾಯನ್ ರಾಜ್ ಸರ್ಜಾ ಹಾಡಿನ ಮೂಲಕ ಶುಭ ಕೋರಿದ್ದು, ಮಗಳು ಮೇಘನಾ ರಾಜ್ ಅವರು ತಮ್ಮ ತಂದೆಯ ಹೊಸ ಜವಾಬ್ದಾರಿಯನ್ನು ನೆನೆದು ಹೆಮ್ಮೆಯಿಂದ ಶುಭಾಶಯ ತಿಳಿಸಿದ್ದಾರೆ.
Read Full Story

06:20 PM (IST) Feb 02

ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆಗೆ ನಾಚುತ್ತಲೇ ಹೆಜ್ಜೆ ಹಾಕಿದ ಪತ್ನಿ ಉಷಾ, ಡಿಕೆಶಿ ಫುಲ್ ಎಂಜಾಯ್

ಕನಕೋತ್ಸವದಲ್ಲಿ ಗಾಯಕ ನವೀನ್ ಸಜ್ಜು ಜೊತೆ ಡಿಸಿಎಂ ಡಿಕೆಶಿ  ಪತ್ನಿ ಉಷಾ ಹೆಜ್ಜೆ ಹಾಕಿದ್ದು, ಈ ವೇಳೆ ಅವರು ನಾಚಿದ ಪ್ರಸಂಗ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ , 2027ರಲ್ಲಿ ಅದ್ಧೂರಿ ಉತ್ಸವ ನಡೆಸುವ ಬಗ್ಗೆ ಘೋಷಣೆಗಳನ್ನು ಮಾಡಿದರು.

Read Full Story

05:56 PM (IST) Feb 02

ಇಷ್ಟೊಂದು ಸುಂದರಿಯಾಗಿ ಕಂಡ್ರೆ ಅಜ್ಜ ಉಜ್ಜದೇ ಇರ್ತಾನಾ? ಮೋಡಿ ಮಾಡಿದ ನಟ ರಾಘವೇಂದ್ರ

'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ, ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ನಟಿ ಕಲ್ಪನಾ ಅವರಂತೆ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ ಇವರು, ಹೆಣ್ಣಿನ ವೇಷದಲ್ಲಿದ್ದಾಗ ತಮಗಾದ ಕಿರುಕುಳದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Read Full Story

05:54 PM (IST) Feb 02

'ನನಗೆ ಹಣ್ಣುಗಳೆಂದರೆ ಇಷ್ಟ..' ಎಂದಿದ್ದೇ ತಡ; ಬೆಂಗಳೂರಿನ ಪುಟ್ಟ ಮಕ್ಕಳು ಮಾಡುತ್ತಿರುವ ಕೆಲಸಕ್ಕೆ ನೆಟ್ಟಿಗರು ಫಿದಾ!

ಬೆಂಗಳೂರಿನ 'ಟೀಚ್ ಫಾರ್ ಇಂಡಿಯಾ' ಶಿಕ್ಷಕಿ ತಮಗೆ ಹಣ್ಣುಗಳಿಷ್ಟ ಎಂದು ಹೇಳಿದ್ದಕ್ಕೆ, ಅವರ ವಿದ್ಯಾರ್ಥಿಗಳು ಪ್ರತಿದಿನ ಪ್ರೀತಿಯಿಂದ ಹಣ್ಣುಗಳನ್ನು ತಂದುಕೊಡುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಕ್ಕಳು ತೋರುತ್ತಿರುವ ಈ ನಿಸ್ವಾರ್ಥ ಪ್ರೀತಿಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

Read Full Story

05:31 PM (IST) Feb 02

ದಾವಣಗೆರೆ ಪೊಲೀಸರ ಮೇಲೆ ಕೈ ಹಾಕಿದ ಪೈಲ್ವಾನ್ ಪುತ್ರರು! ಮಹಿಳಾ ಆಯೋಗ ಮೌನಕ್ಕೆ ವ್ಯಾಪಕ ಆಕ್ರೋಶ

ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡ ಆಯೂಬ್ ಪೈಲ್ವಾನ್ ಪುತ್ರರು ಮಹಿಳಾ ಸಿಪಿಐ ಸೇರಿದಂತೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಘಟನೆ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಈ ಪ್ರಕರಣವು ರಾಜಕೀಯ ತಿರುವು ಪಡೆದುಕೊಂಡಿದೆ.

Read Full Story

05:07 PM (IST) Feb 02

ಅತಿ ಕಡಿಮೆ ದುಡ್ಡಿನಲ್ಲಿ ಮನೆಯಲ್ಲಿ ಕೂತು ಸೀರೆ ಇತ್ಯಾದಿಗಳನ್ನು Online ಮಾರಾಟ ಮಾಡೋದು ಹೇಗೆ?

Online Business: ಅನೇಕರು ಇಂದು ಮನೆಯಲ್ಲಿ ಕೂತು ಆನ್‌ಲೈನ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಇದು ಅತ್ಯಂತ ಲಾಭ ತಂದುಕೊಡುವ ಹಾಗೂ ಸ್ಮಾರ್ಟ್ ನಿರ್ಧಾರವಾಗಿದೆ. ಕಡಿಮೆ ಬಂಡವಾಳದಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು.

 

Read Full Story

04:53 PM (IST) Feb 02

ಬೆಂಗಳೂರು ಟ್ರೇಡ್ ಲೈಸೆನ್ಸ್ ನವೀಕರಣಕ್ಕೆ ಹೊಸ ಸುತ್ತೋಲೆ ಹೊರಡಿಸಿದ ಜಿಬಿಎ - ಶೇ.100 ದಂಡದ ಎಚ್ಚರಿಕೆ!

ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2026-27ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಆರಂಭಿಸಿದೆ. ದಂಡ ರಹಿತವಾಗಿ ನವೀಕರಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಏಪ್ರಿಲ್ 1ರ ನಂತರ ಶೇ. 100ರಷ್ಟು ದಂಡ ವಿಧಿಸಲಾಗುವುದು. ಈ ನಿಯಮ ಪಾಲಿಸದಿದ್ದರೆ ಪರವಾನಿಗೆಯನ್ನು ತಿರಸ್ಕರಿಸಲಾಗುವುದು.

Read Full Story

04:14 PM (IST) Feb 02

Ajit Pawar Funeral - ಅಜಿತ್ ಪವಾರ್ ಅಂತ್ಯಕ್ರಿಯೆಯಲ್ಲೂ ಕಳ್ಳರ ಕೈಚಳಕ, 15 ಜನರ ಚಿನ್ನದ ಸರ ಕದ್ದ ಕಿಡಿಗೇಡಿಗಳು!

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ವೇಳೆ ನಡೆದ ಜನಜಂಗುಳಿಯಲ್ಲಿ ಕಳ್ಳರು ಸುಮಾರು 15 ಜನರ ಚಿನ್ನದ ಸರಗಳನ್ನು ದೋಚಿದ್ದಾರೆ. ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ನಡೆದ ಈ ಘಟನೆಯಲ್ಲಿ 25-30 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು, ಪೊಲೀಸರು ಐವರನ್ನು ಬಂಧಿಸಿದ್ದಾರೆ.
Read Full Story

04:14 PM (IST) Feb 02

ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಜೇತ ಗಿಲ್ಲಿ ನಟ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳು, ರಾಜಕಾರಣಿಗಳ ಭೇಟಿ ಮಧ್ಯೆ ಇನ್ನೆರಡು ಖುಷಿಯ ವಿಷಯವೂ ಇದೆ.

 

Read Full Story

04:12 PM (IST) Feb 02

ಫ್ಯಾನ್ಸ್‌ಗೆ ಭಾವುಕ ಪತ್ರ ಬರೆದ ಕಿಚ್ಚ ಸುದೀಪ! ಆ ಪತ್ರದಲ್ಲೇನಿದೆ? ಎಲ್ಲರ ಚಿತ್ತ ಬಿಲ್ಲ ರಂಗ ಭಾಷ ಚಿತ್ರದತ್ತ!

ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ತಮ್ಮ 30 ವರ್ಷಗಳ ಸಿನಿ ಪಯಣವನ್ನು ಪೂರ್ಣಗೊಳಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ತಮ್ಮ ಅಭಿಮಾನಿಗಳಿಗೆ, ನಿರ್ದೇಶಕರಿಗೆ ಮತ್ತು ಚಿತ್ರರಂಗದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಭಾವುಕ ಪತ್ರ ಬರೆದಿದ್ದಾರೆ. ಸದ್ಯ 'ಬಿಲ್ಲ ರಂಗಾ ಬಾಷಾ' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ.

Read Full Story

04:11 PM (IST) Feb 02

ಶನಿದೇವರ ಮುಂದೆ ಆಣೆ ಪ್ರಮಾಣಕ್ಕೆ ಹೋಗಿ ಗಲಾಟೆ, ಲಾಂಗ್ ನಲ್ಲಿ ಹೊಡೆದಾಟ - ಪ್ರೀತಿ ತಂದಿಟ್ಟ ಮಾರಣಾಂತಿಕ ಸಂಚು

ಕುಣಿಗಲ್‌ನಲ್ಲಿ ನಡೆದ ಲಾಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿ ಮಂಜು ತನ್ನ ಸಹೋದರಿಯ ಪ್ರೀತಿಯ ವಿಚಾರವಾಗಿ ಗಾಯಾಳು ಜಗದೀಶ್ ಮೇಲೆ ಪೂರ್ವನಿಯೋಜಿತವಾಗಿ ದಾಳಿ ನಡೆಸಿದ್ದನು ಎಂಬುದು ತನಿಖೆಯಿಂದ ಬಹಿರಂಗವಾಗಿದೆ. 

Read Full Story

03:42 PM (IST) Feb 02

ಬೆಂಗಳೂರು ಸಂಬಂಧಿಕರ ಮನೆಗೆ ಬಂದಿದ್ದ 26 ವರ್ಷದ ಯುವಕ 4ನೇ ಮಹಡಿಯಿಂದ ಬಿದ್ದು ನಿಗೂಢ ಸಾವು!

ಬೆಂಗಳೂರಿನ ಭಾರತಿನಗರದಲ್ಲಿ, ಇರ್ಫಾನ್ ಮುಲ್ಲಾನಿ ಎಂಬ 26 ವರ್ಷದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ಆಕಸ್ಮಿಕವೋ ಅಥವಾ ಬೇರೆ ಕಾರಣವಿದೆಯೋ ಎಂಬ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

03:34 PM (IST) Feb 02

ಸಿ-ಡಾಕ್‌ನ ದೇಶಾದ್ಯಂತ ಒಟ್ಟು 805 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪ್ರಾಜೆಕ್ಟ್ ಎಂಜಿನಿಯರ್ ಸೇರಿ ಹಲವು ಹುದ್ದೆಗಳು

C-DAC  2026ನೇ ಸಾಲಿನ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,  ಗಳನ್ನು ಭರ್ತಿ ಮಾಡಲಿದೆ. ಪ್ರಾಜೆಕ್ಟ್ ಎಂಜಿನಿಯರ್, ಪ್ರಾಜೆಕ್ಟ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ತಾಂತ್ರಿಕ ಹುದ್ದೆಗಳಿಗೆ ಆಸಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

Read Full Story

03:33 PM (IST) Feb 02

ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಹಿತಿ ಬಿಚ್ಚಿಟ್ಟ ಚಂದ್ರಚೂಡ್, ಕೆರಳಿದ ಸಿನಿಮಾ ನಿರ್ಮಾಪಕರ ಸಂಘ

ಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಹಿತಿ ಬಿಚ್ಚಿಟ್ಟ ಚಂದ್ರಚೂಡ್,, ಚಕ್ರವರ್ತಿ ಚಂದ್ರಚೂಡ್ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಚಂದ್ರಚೂಡ ವಿರುದ್ದ ಪ್ರಕರಣ ದಾಖಲಿಸಲು ಸಿನಿಮಾ ನಿರ್ಮಾಪಕರ ಸಂಘ ಮುಂದಾಗಿದೆ.

 

Read Full Story

03:11 PM (IST) Feb 02

ಬೆಂಗಳೂರು ಜಲಮಂಡಳಿ ಅಲರ್ಟ್ - ಫೆಬ್ರವರಿ 5, 6ರಂದು ಈ ಭಾಗಗಳಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತ!

ಬೆಂಗಳೂರು ಜಲಮಂಡಳಿಯು (BWSSB) ಫೆಬ್ರವರಿ 5 ಮತ್ತು 6 ರಂದು ಸಾರಕ್ಕಿಯಲ್ಲಿ ತುರ್ತು ಪೈಪ್‌ಲೈನ್ ನಿರ್ವಹಣಾ ಕಾಮಗಾರಿ ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಮತ್ತು ಕೇಂದ್ರ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Read Full Story

02:43 PM (IST) Feb 02

ಹುಬ್ಬಳ್ಳಿಯಲ್ಲಿ ಸಾಲ ತೀರಿಸುವ ವಿಚಾರಕ್ಕೆ ಕಲಹ - ಪತ್ನಿಯ ಕುತ್ತಿಗೆಗೆ ಚಾಕು ಇರಿದು ಕೊಂದ ಪಾಪಿ ಪತಿ!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಸಾಲ ಮರುಪಾವತಿ ಮಾಡುವ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೇ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಮಲಿಂಗೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಪತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ.

Read Full Story

02:35 PM (IST) Feb 02

ಬಾಲಕನ ಮೊಮೊಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಬಂಗಾರ ಮಾಯ

ಬಾಲ್ಯದಲ್ಲಿ ಪುಟ್ಟ ಮಕ್ಕಳಿಗೆ ತಿನ್ನುವುದರ ಮೇಲೆ ಭಾರಿ ಆಸೆ ಇರುತ್ತದೆ. ತಮ್ಮಿಷ್ಟದ ತಿನಿಸನ್ನು ಎಷ್ಟು ತಿಂದರೂ ಸಾಕಾಗದು ಎಂಬಷ್ಟು ವ್ಯಾಮೋಹ ಬಾಲ್ಯದಲ್ಲಿ ಇರುತ್ತದೆ.ಹಾಗೆಯೇ ಇಲ್ಲೊಬ್ಬ ಬಾಲಕನಿಗೆ ಮೊಮೊ ತಿನ್ನುವ ಆಸೆ. ಇದಕ್ಕಾಗಿ ಆತ ಏನ್ ಮಾಡಿದ್ದಾನೆ ನೋಡಿ..

Read Full Story

02:17 PM (IST) Feb 02

BMTC ಬಸ್​ನಲ್ಲಿ ಬುರ್ಖಾಧಾರಿ ಮಹಿಳೆ ಲಕ್ಷ್ಮಮ್ಮ! ಹಿಜಾಬ್​ ಮೇಲೆ ಅರೆಬಿಕ್​ ಭಾಷೆ- ಏನಿದು ಲಿಂಕ್​?

ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕಾಗಿ ಬುರ್ಖಾಧಾರಿ ಮಹಿಳೆಯೊಬ್ಬಳು 'ಲಕ್ಷ್ಮಮ್ಮ' ಹೆಸರಿನ ಆಧಾರ್ ಕಾರ್ಡ್ ಬಳಸಿ ಸಿಕ್ಕಿಬಿದ್ದಿದ್ದಾಳೆ. ಈ ವೈರಲ್ ವಿಡಿಯೋ ಆಕೆಯ ಗುರುತು ಮತ್ತು ಹಿಜಾಬ್ ಮೇಲಿನ ಅರೇಬಿಕ್ ಬರಹದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದ್ದು,  ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

02:09 PM (IST) Feb 02

ಪತ್ರಕರ್ತ ನೀಲೂರೆ ಆತ್ಮ*ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಡೆತ್ ನೋಟ್‌ನಲ್ಲಿ ಪತ್ರಕರ್ತರು ಸೇರಿ ಹಲವರ ಹೆಸರು!

ಕಲಬುರಗಿಯ ಹಿರಿಯ ಪತ್ರಕರ್ತ ಪ್ರಭುಲಿಂಗ ನೀಲೂರೆ ಅವರ ಆತ್ಮಹತ್ಯೆ ಪ್ರಕರಣವು ಡೆತ್ ನೋಟ್ ಪತ್ತೆಯಾಗುವುದರೊಂದಿಗೆ ಹೊಸ ತಿರುವು ಪಡೆದಿದೆ. ತಮ್ಮ ಸಾವಿಗೆ 11 ಜನರ ಕಿರುಕುಳವೇ ಕಾರಣ ಎಂದು ಅವರು ಆರೋಪಿಸಿದ್ದು, ಆರ್ಥಿಕ ವ್ಯವಹಾರದಲ್ಲಿ ಮೋಸ ಹೋಗಿರುವುದಾಗಿಯೂ ಉಲ್ಲೇಖಿಸಿದ್ದಾರೆ. 

Read Full Story

01:26 PM (IST) Feb 02

ಚಾಮರಾಜನಗರ ಸ್ಪರ್ಧೆ ಚರ್ಚೆಗೆ ತೆರೆ ಎಳೆದ-ನಿಖಿಲ್ ಕುಮಾರಸ್ವಾಮಿ! ಅಪ್ಪ, ಅಜ್ಜನ ಕರ್ಮಭೂಮಿ ಬಿಟ್ಟು ಬೇರೆಡೆ ಹೋಗಲ್ಲ!

ಚಾಮರಾಜನಗರದಿಂದ ಸ್ಪರ್ಧಿಸುವ ಊಹಾಪೋಹಗಳಿಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ರಾಮನಗರವು ತಮ್ಮ ತಂದೆಯ ಕರ್ಮಭೂಮಿ ಮತ್ತು ತಾತನಿಗೆ ರಾಜಕೀಯ ಮರುಜನ್ಮ ನೀಡಿದ ಪುಣ್ಯಭೂಮಿ, ಹಾಗಾಗಿ ಆ ಮಣ್ಣನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

01:16 PM (IST) Feb 02

ಉದ್ಯಮಿ ಸಿಜೆ ರಾಯ್‌‌ ಆತ್ಮ*ಹತ್ಯೆ‌ ಕೇಸ್ ಹಿಂದೆ ರಾಜಕಾರಣಿಗಳ‌ ಕೈವಾಡದ ಶಂಕೆ! ಶಾಸಕ ಎ ಮಂಜು ಹೇಳಿದ್ದೇನು?

ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಶಾಸಕ ಎ. ಮಂಜು  ಅವರು, ಇಡಿ ಅಧಿಕಾರಿಗಳ ಒತ್ತಡ ಮತ್ತು ಪ್ರಭಾವಿ ರಾಜಕಾರಣಿಗಳ ಕೈವಾಡದ ಶಂಕೆ ವ್ಯಕ್ತಪಡಿಸಿದ್ದು, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಕೇಂದ್ರ ಸರ್ಕಾರದ ತನಿಖೆಗೆ ಒತ್ತಾಯಿಸಿದ್ದಾರೆ.

Read Full Story

12:57 PM (IST) Feb 02

ರೇಷ್ಮಾ ಆಂಟಿ ಸಂತೋಷದ ಕಣ್ಣೀರು - ವರ್ಷಗಳ ನಂತರ ಬಂದ ಕಾಲ್; ಹೊರಟೇ ಬಿಟ್ರು ಹಾಸನಕ್ಕೆ

ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ರೇಷ್ಮಾ ಆಂಟಿ, ಪ್ರೀತಿಸಿ ಮದುವೆಯಾದ ಕಾರಣಕ್ಕೆ ತವರಿನಿಂದ ದೂರವಾಗಿದ್ದರು.  ಈ ಸಂತಸದ ವಿಷಯವನ್ನು ವಿಡಿಯೋ ಮೂಲಕ ಹಂಚಿಕೊಂಡು ಭಾವುಕರಾಗಿದ್ದಾರೆ. ತಾಯಿಯನ್ನು ಭೇಟಿಯಾಗಲು ಹಾಸನಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.

Read Full Story

12:42 PM (IST) Feb 02

ನಟಿ ತಾರಾ ಪುತ್ರನಿಗೆ 13ರ ಸಂಭ್ರಮ - ಬಾಲನಟನಾಗಿ ಸಿನಿಮಾಕ್ಕೆ ಎಂಟ್ರಿ- ಹುಟ್ಟುಹಬ್ಬದ ವಿಡಿಯೋ ವೈರಲ್

ಹಿರಿಯ ನಟಿ ತಾರಾ ಅನುರಾಧಾ ಅವರು ಮೂರು ಬಾರಿ ಗರ್ಭಪಾತದ ನೋವು ಅನುಭವಿಸಿದ ನಂತರ ಕೃತಕ ಗರ್ಭಧಾರಣೆ (IVF) ಮೂಲಕ ಮಗ ಕೃಷ್ಣನಿಗೆ ಜನ್ಮ ನೀಡಿದರು. ಇತ್ತೀಚೆಗೆ 13ನೇ ವಸಂತಕ್ಕೆ ಕಾಲಿಟ್ಟಿರುವ ಕೃಷ್ಣ, 'ಶಿವಾರ್ಜುನ' ಚಿತ್ರದ ಮೂಲಕ   ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾನೆ.

Read Full Story

12:38 PM (IST) Feb 02

ಬೆಂಗಳೂರು ಉದ್ಯಮಿ ಸಿ.ಜೆ. ರಾಯ್ ಆತ್ಮ*ಹತ್ಯೆ ಪ್ರಕರಣ - ಡೆತ್ ನೋಟ್ ಬಗ್ಗೆ ಎಸ್‌ಐಟಿ ಮಹತ್ವದ ಮಾಹಿತಿ

ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮ*ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಅವರ ದಿನಚರಿ ಡೈರಿ ಲಭ್ಯವಾಗಿದ್ದರೂ, ಅದನ್ನು ಡೆತ್ ನೋಟ್ ಎಂದು ಪರಿಗಣಿಸಲಾಗದು ಎಂದು ಎಸ್‌ಐಟಿ ಸ್ಪಷ್ಟಪಡಿಸಿದ್ದು, ಇದು ಸಾವಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read Full Story

12:29 PM (IST) Feb 02

ದೈವ ನರ್ತಕನಿಗೆ 2.10 ಲಕ್ಷ ರು. ಮೌಲ್ಯದ ಕೃತಕ ಕಾಲು

ರೋಟರಿ ಮಂಗಳೂರು ಸೆಂಟ್ರಲ್ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ, ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರಿಗೆ 2.10 ಲಕ್ಷ ರು. ಮೌಲ್ಯದ ಕೃತಕ ಕಾಲಿನ ದೇಣಿಗೆ ನೀಡಿ ಆ ವ್ಯಕ್ತಿಯು ನಡೆದಾಡುವ ಅಪೂರ್ವ ಅವಕಾಶ

Read Full Story

12:19 PM (IST) Feb 02

ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ - ಮೈಲಾರದ ಗೊರವಯ್ಯ ಕಾರ್ಣಿಕ

ಭರತ ಹುಣ್ಣಿಮೆಯಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಮೈಲಾರ ಜಾತ್ರೆಯಲ್ಲಿ ಗೊರವಯ್ಯನವರು ಕಾರ್ಣಿಕ ನುಡಿದಿದ್ದಾರೆ. 'ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್' ಇದುವೇ ಈ ವರ್ಷದ ಕಾರ್ಣಿಕವಾಗಿದೆ.

Read Full Story

12:13 PM (IST) Feb 02

'ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರೋದು ಬೆಟರ್' - ಮಾತೃ ಇಲಾಖೆ ವಿರುದ್ಧವೇ ಸ್ಟೇಟಸ್ ಹಾಕಿದ ಕೊಪ್ಪಳದ ಪೇದೆ!

ಕೊಪ್ಪಳ ಜಿಲ್ಲೆಯ ಪೊಲೀಸ್ ಕಾನ್ಸ್‌ಟೇಬಲ್ ಬ್ರಹ್ಮಾನಂದ ಅವರು, ವರ್ಷವಿಡೀ ರಜೆ ಇಲ್ಲದ ಕೆಲಸದ ಒತ್ತಡದಿಂದ ಬೇಸತ್ತು, ಪೊಲೀಸ್ ಕೆಲಸಕ್ಕಿಂತ ಎಗ್ ರೈಸ್ ಮಾರುವುದು ಉತ್ತಮ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದಾರೆ. ಈ ಸ್ಟೇಟಸ್ ವೈರಲ್ ಆಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ತನಿಖೆಗೆ ಆದೇಶಿಸಿದ್ದಾರೆ.

Read Full Story

12:12 PM (IST) Feb 02

ಬೆಂಗಳೂರು ಪಾರ್ಕಿಂಗ್ ಗೆ ಹೊಸ ನಿಯಮ, ತಪ್ಪಿದರೆ ಬೀಳಲಿದೆ ದಂಡ, ಜೊತೆಗೆ ಟೋಯಿಂಗ್! ಯಾವ ಗಾಡಿಗೆ ಎಷ್ಟು ಪೇ ಮಾಡ್ಬೇಕು?

ಬೆಂಗಳೂರಿನ ತೀವ್ರ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು, ಜಿಬಿಎ ಮತ್ತು ಸಂಚಾರಿ ಪೊಲೀಸರು ಮತ್ತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ. ಇದರೊಂದಿಗೆ, ನಗರದ ಪ್ರಮುಖ ರಸ್ತೆಗಳಲ್ಲಿ 'ಪೇ ಆ್ಯಂಡ್ ಪಾರ್ಕ್' ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ.

Read Full Story

11:58 AM (IST) Feb 02

ಚಿಮುಲ್ ಚುನಾವಣೆ - ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ ?

ಚುನಾವಣಾ ಫಲಿತಾಂಶ ಸಹ ಪ್ರಕಟವಾಗಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್ ಬೆಂಬಲಿತರು 6 ಸ್ಥಾನಗಳು ಎನ್‌ಡಿಎ ಬೆಂಬಲಿತ ಅಭ್ಯರ್ಥಿಗಳು 5 ಹಾಗೂ ಕೆಎಚ್‌ಪಿ ಬಣದಿಂದ ಇಬ್ಬರು ಗೆಲವು ಸಾಧಿಸಿದ್ದಾರೆ.

Read Full Story

11:45 AM (IST) Feb 02

ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಿಂದ ಹೊರಬರ್ತಾರಾ ಈ ನಟಿ? ಅನಿವಾರ್ಯತೆ ಇದೆ!

Kannada Serial Actress: ಓರ್ವ ನಟಿಯೋರ್ವರು ಏಕಕಾಲಕ್ಕೆ ಎರಡು ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈಗ ಎರಡೂ ಧಾರಾವಾಹಿಯಿಂದ ಹೊರಬರುವ ಅಥವಾ ಬ್ರೇಕ್‌ ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

 

Read Full Story

More Trending News