ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಎದ್ದಿರುವ ಸುದೀರ್ಘ ಅವಧಿಯ ಕುತೂಹಲಕ್ಕೆ ಸೋಮವಾರ ದೆಹಲಿಯಲ್ಲಿ ಕ್ಲೈಮಾಕ್ಸ್ ಬೀಳುವ ಸಾಧ್ಯತೆ ಇದೆ. ಸಂಪುಟ ಪುನಾರಚನೆಗೆ ಸಂಬಂಧಿಸಿ ಹೈಕಮಾಂಡ್‌ನಿಂದ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಚರ್ಚಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಮವಾರ ದೆಹಲಿಯಲ್ಲಿ ಭೇಟಿ ಮಾಡುವ ಸಾಧ್ಯತೆಯಿದೆ. ಈ ವೇಳೆ ಸಂಪುಟ ಪುನರಾಚನೆ ಕುರಿತು ಖರ್ಗೆ ಅವರ ನಿಲುವು ಸ್ಪಷ್ಟಗೊಳ್ಳುವ ಸಾಧ್ಯತೆಯಿದೆ.

10:29 PM (IST) Nov 17
ಸಿಎಂ ಸಿದ್ದರಾಮಯ್ಯ ಪತ್ನಿಗೆ ಐಸಿಯುವಿನಲ್ಲಿ ಚಿಕಿತ್ಸೆ, ಪುತ್ರ ಯತೀಂದ್ರ ಮಾಹಿತಿ ನೀಡಿದ್ದಾರೆ. ಆರೋಗ್ಯ ಏರುಪೇರಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಾಯಿ ಆರೋಗ್ಯದ ಕುರಿತು ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
09:55 PM (IST) Nov 17
ನಗರ ಸೌಂದರ್ಯೀಕರಣಕ್ಕೆಂದು ಕೈಗೆತ್ತಿಕೊಂಡ, ಬೀದಿದೀಪಗಳ ಅಳವಡಿಕೆ ಹೆಸರಲ್ಲಿ ಕೋಟ್ಯಂತರ ರುಪಾಯಿಗಳ ಹಣ ಲೂಟಿ ಹೊಡೆಯಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. 1 ಕೋಟಿ ರು.ಗಳ ವೆಚ್ಚದ ಈ ಕಾಮಗಾರಿಯನ್ನು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ ವಹಿಸಲಾಗಿತ್ತು.
09:37 PM (IST) Nov 17
ಸಿಎಂ ಸಿದ್ದರಾಮಯ್ಯ ಪತ್ನಿ ಆರೋಗ್ಯದಲ್ಲಿ ಏರುಪೇರು, ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆ ದಾಖಲು, ಇಂದು ಮಧ್ಯಾಹ್ನ ಅಸ್ವಸ್ಥಗೊಂಡ ಪಾರ್ವತಿ ಅವರನ್ನು ಅಪೋಲೋ ಆಸ್ಪತ್ರೆ ದಾಖಲಿಸಲಾಗಿದೆ.
08:57 PM (IST) Nov 17
07:50 PM (IST) Nov 17
ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಸಹ ಸ್ಪರ್ಧಿಯೊಬ್ಬರ ಉಡುಪನ್ನು ಬಾತ್‌ರೂಮ್‌ನಿಂದ ಹೊರಹಾಕಿದ ಆರೋಪದ ಮೇಲೆ ಕಲಾವಿದೆ ಕುಶಲ ದೂರು ನೀಡಿದ್ದು, ಆಯೋಗವು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತನಿಖೆಗೆ ಸೂಚಿಸಿದೆ.
07:26 PM (IST) Nov 17
ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಉಮ್ರಾ ಯಾತ್ರೆಗೆ ತೆರಳಿದ್ದ ಹುಬ್ಬಳ್ಳಿಯ ಅಬ್ದುಲ್ ಗಣಿ ಶಿರಹಟ್ಟಿ ಎಂಬುವವರು ಮೃತಪಟ್ಟಿದ್ದಾರೆ. ಮೆಕ್ಕಾ-ಮದೀನಾ ಮಾರ್ಗದಲ್ಲಿ ನಡೆದ ಈ ದುರಂತದಲ್ಲಿ 45ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ.
06:57 PM (IST) Nov 17
ಸ್ಯಾಂಡಲ್‌ವುಡ್ ನಟಿಯ ಕಿರುಕುಳ ಆರೋಪವನ್ನು ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ನಿರಾಕರಿಸಿದ್ದಾರೆ. ಇದು ಲೈಂಗಿಕ ಕಿರುಕುಳವಲ್ಲ ಎಂದ ಅವರು, ನಟಿ ತನಗೆ 3 ಕೋಟಿ ಹಾಗೂ ಇತರೆ ಮೂವರಿಗೆ ಮದುವೆ ಹೆಸರಲ್ಲಿ ವಂಚಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
06:22 PM (IST) Nov 17
ಬೆಂಗಳೂರಿನ ಅಂದ್ರಹಳ್ಳಿಯಲ್ಲಿ ಆಸ್ತಿಗಾಗಿ ಪತ್ನಿಯೇ ತನ್ನ ಸೋದರ ಮಾವನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಮನೆಯನ್ನು ತನ್ನ ಹೆಸರಿಗೆ ಬರೆಯಲು ಒಪ್ಪದ ಕಾರಣ, ಪತಿ ವೆಂಕಟೇಶ್ ಅವರನ್ನು ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿದೆ.
06:12 PM (IST) Nov 17
ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಾವು ಪಕ್ಷದ 'ಶಿಸ್ತಿನ ಸಿಪಾಯಿ' ಎಂದು ಹೇಳಿಕೊಂಡಿರುವ ಅವರು, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನರ್ರಚನೆಯ ಊಹಾಪೋಹಗಳ ನಡುವೆ ತಮ್ಮ ದೆಹಲಿ ಭೇಟಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
05:58 PM (IST) Nov 17
ಬೆಂಗಳೂರು: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಮುಕ್ತಾಯವಾಗಿದ್ದು, ಇದೀಗ ಎರಡನೇ ಪಂದ್ಯ ಯಾವಾಗ ಆರಂಭವಾಗಲಿದೆ? ಟೈಮಿಂಗ್ಸ್‌ನಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ? ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು ತಿಳಿಯೋಣ ಬನ್ನಿ.
05:36 PM (IST) Nov 17
05:36 PM (IST) Nov 17
ಬೆಂಗಳೂರಿನ 57 ವರ್ಷದ ಮಹಿಳಾ ಟೆಕ್ಕಿಯೊಬ್ಬರು 'ಡಿಜಿಟಲ್ ಅರೆಸ್ಟ್' ಹಗರಣದಲ್ಲಿ ಸಿಲುಕಿ, ಆರು ತಿಂಗಳ ಅವಧಿಯಲ್ಲಿ ₹31.83 ಕೋಟಿ ಕಳೆದುಕೊಂಡಿದ್ದಾರೆ. ವಂಚಕರು, ಸ್ಕೈಪ್ ಮೂಲಕ ಅವರನ್ನು ಗೃಹಬಂಧನದಲ್ಲಿರಿಸಿ, ಬೆದರಿಸಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
05:02 PM (IST) Nov 17
04:27 PM (IST) Nov 17
03:33 PM (IST) Nov 17
ಐಟಿ ನೌಕರರ ಸಂಘಟನೆ NITES ನೀಡಿದ ದೂರಿನ ಅನ್ವಯ, ಪುಣೆಯ ಕಾರ್ಮಿಕ ಆಯುಕ್ತರ ಕಚೇರಿಯು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ಗೆ (TCS) ಸಮನ್ಸ್ ಜಾರಿ ಮಾಡಿದೆ. ಕಾನೂನುಬಾಹಿರ ಉದ್ಯೋಗಿ ವಜಾ ಮತ್ತು ಅನ್ಯಾಯದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
02:50 PM (IST) Nov 17
ನೀ ಹಿಂದೂನಾ? ಧರ್ಮ ಕೇಳಿ ಶಿವಮೊಗ್ಗ ನಿವಾಸಿ ಹರೀಶ್ ಮೇಲೆ ಮಾರಣಾಂತಿಕ ಹಲ್ಲೆ, ಅನ್ಯ ಕೋಮಿನ ಯುವಕರಿಂದ ಹಲ್ಲೆ ನಡೆದಿದೆ.ಹರೀಶ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
02:34 PM (IST) Nov 17
ಬಿಗ್‌ಬಾಸ್ ಮನೆಯಿಂದ ಅಚ್ಚರಿಯಾಗಿ ಹೊರಬಂದಿರುವ ಸ್ಪರ್ಧಿ ಕಾಕ್ರೋಚ್ ಸುಧಿ, ಹಿಂದೆ ಜೈಲಿನಲ್ಲಿದ್ದಾಗ ತಮ್ಮ ಪತ್ನಿಗೆ ರಕ್ತದಲ್ಲಿ ಪತ್ರ ಬರೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ತುಟಿಗೆ ಹೊಡೆಸಿಕೊಂಡು ಬಂದ ರಕ್ತದಲ್ಲಿ ಪತ್ರ ಬರೆದಿದ್ದಾಗಿ ಹೇಳಿಕೊಂಡಿದ್ದರು.
02:27 PM (IST) Nov 17
ಸಂಸದ ತೇಜಸ್ವಿ ಸೂರ್ಯ ಅವರು ನಮ್ಮ ಮೆಟ್ರೋವನ್ನು ತುಮಕೂರಿನವರೆಗೆ ವಿಸ್ತರಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ರಿಯಲ್ ಎಸ್ಟೇಟ್‌ಗೆ ಸಹಾಯ ಮಾಡುವ ಹುನ್ನಾರ ಎಂದಿರುವ ಅವರು, ಮೆಟ್ರೋ ಬದಲು ಕಡಿಮೆ ಖರ್ಚಿನ RRTS ಅಥವಾ ಸಬರ್ಬನ್ ರೈಲು ಯೋಜನೆ ಜಾರಿಗೊಳಿಸಲು ಸಲಹೆ ನೀಡಿದ್ದಾರೆ.
02:14 PM (IST) Nov 17
toddler locked in kitchen: ಕೆಲ ಮಕ್ಕಳು ಮಾಡುವ ತುಂಟಾಟ ಪೋಷಕರನ್ನು ಧರ್ಮ ಸಂಕಟಕ್ಕೆ ಸಿಲುಕಿಸುತ್ತವೆ. ಕುಳಿತಲ್ಲಿ ಕೂರದ ಈ ಮಕ್ಕಳು ಏನಾದರೊಂದು ಎಡವಟ್ಟು ಮಾಡುತ್ತಲೇ ಇರುತ್ತವೆ. ಅದೇ ರೀತಿ ಪುಟ್ಟ ಮಗುವೊಂದು ಆಟವಾಡುತ್ತಾ ಅಡುಗೆ ಕೋಣೆಯೊಳಗೆ ಹೋಗಿ ಚಿಲಕ ಹಾಕಿಕೊಂಡಿದೆ. ಆಮೇಲೆ ತಾಯಿ ಮಾಡಿದ್ದೇನು?
01:57 PM (IST) Nov 17
ಐಬೊಮ್ಮ ನಿರ್ವಾಹಕ ಇಮ್ಮಡಿ ರವಿಯನ್ನು ಬಂಧಿಸಿದ ನಂತರ ವಿಸಿ ಸಜ್ಜನರ್ ಅವರು ಚಿತ್ರರಂಗದ ಗಣ್ಯರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಚಿರಂಜೀವಿ, ರಾಜಮೌಳಿ, ನಾಗಾರ್ಜುನ, ದಿಲ್ ರಾಜು ಅವರೊಂದಿಗೆ ಮಾಧ್ಯಮಗೋಷ್ಠಿ ನಡೆಸಿದರು.
01:51 PM (IST) Nov 17
ಬಿಗ್‌ಬಾಸ್ 12ನೇ ಸೀಸನ್ 50 ದಿನಗಳನ್ನು ಪೂರೈಸಿದ್ದು, ಕಾಕ್ರೋಚ್ ಸುಧಿ ಸೇರಿದಂತೆ ಒಟ್ಟು 8 ಸ್ಪರ್ಧಿಗಳು ಮನೆಯಿಂದ ಹೊರಬಿದ್ದಿದ್ದಾರೆ. ಸದ್ಯ ಮನೆಯಲ್ಲಿ ಗಿಲ್ಲಿ ನಟ, ಕಾವ್ಯಾ ಶೈವ ಅವರ ಲವ್ ಸ್ಟೋರಿ, ಅಶ್ವಿನಿ ಮತ್ತು ಜಾಹ್ನವಿ ಅವರ ವಿವಾದಗಳು ವೀಕ್ಷಕರ ಗಮನ ಸೆಳೆಯುತ್ತಿದೆ.
01:36 PM (IST) Nov 17
ಬೆಂಗಳೂರು: ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಸೋಲುತ್ತಿದ್ದಂತೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿಯನ್ನು ಮತ್ತಷ್ಟು ದುರ್ಗಮ ಮಾಡಿಕೊಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಭಾರತ ಏನು ಮಾಡಬೇಕು ನೋಡೋಣ ಬನ್ನಿ
01:30 PM (IST) Nov 17
ಬಿಹಾರದಲ್ಲಿ ನ್ಯಾಯ ಸಮ್ಮತವಾಗಿ ವಿಧಾನಸಭಾ ಚುನಾವಣೆ ನಡೆದಿಲ್ಲ. ಕಾಂಗ್ರೆಸ್ ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಪಾದಿಸಿದ್ದಾರೆ.
01:26 PM (IST) Nov 17
ಬೆಸ್ಕಾಂ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ, ನವೆಂಬರ್ 18 ರಂದು ಬೆಂಗಳೂರಿನ ಆಡುಗೋಡಿ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
01:03 PM (IST) Nov 17
ಗೌತಮ್ ಗಂಭೀರ್ ಟೀಂ ಇಂಡಿಯಾದ ಹೆಡ್‌ಕೋಚ್ ಆದ ನಂತರ, ಭಾರತ ಕ್ರಿಕೆಟ್ ತಂಡವು ಹಲವು ಐತಿಹಾಸಿಕ ಸೋಲುಗಳನ್ನು ಕಂಡಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್, 27 ವರ್ಷಗಳ ಬಳಿಕ ಲಂಕಾ ವಿರುದ್ಧ ಸರಣಿ ಸೋಲು ಪ್ರಮುಖ ಹಿನ್ನಡೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
12:58 PM (IST) Nov 17
ಮೆಗಾಸ್ಟಾರ್ ಚಿರಂಜೀವಿ ಮತ್ತು ಅತಿಲೋಕ ಸುಂದರಿ ಶ್ರೀದೇವಿ ಜೋಡಿಗೆ ಎಷ್ಟೊಂದು ಕ್ರೇಜ್ ಇತ್ತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ತೆರೆಯ ಮೇಲೆ ಹಿಟ್ ಜೋಡಿಯಾಗಿದ್ದ ಈ ಸ್ಟಾರ್‌ಗಳ ನಡುವೆ ಜಗಳವಾಗಿ ಒಂದು ಸಿನಿಮಾ ನಿಂತುಹೋಗಿತ್ತು ಎಂಬುದು ನಿಮಗೆ ಗೊತ್ತಾ?
12:25 PM (IST) Nov 17
ರಿಷಬ್ ಶೆಟ್ಟಿ ಲುಕ್ ಬದಲಾಗಿದೆ. ಸಿನಿಮಾದಲ್ಲಿನ ಬೆರ್ಮೆ ಪಾತ್ರಕ್ಕಾಗಿ ಅವರು ಬಿಟ್ಟಿದ್ದ ಉದ್ದ ಕೂದಲಿಗೆ ಕತ್ತರಿ ಬಿದ್ದಿದೆ. ಶಾರ್ಟ್ ಹೇರ್‌ಸ್ಟೈಲ್‌ನಲ್ಲಿ ನಟ, ಗಾಯಕ ಮೈಮ್ ರಾಮ್‌ದಾಸ್ ಜೊತೆಗಿರುವ ಫೋಟೋವನ್ನು ರಿಷಬ್ ಪೋಸ್ಟ್ ಮಾಡಿದ್ದಾರೆ.
12:16 PM (IST) Nov 17
₹613 Cr Road Sweeper Scam BJP Alleges Mega Corruption in Karnataka Govt ಬೆಂಗಳೂರಿನ 46 ಮೆಕ್ಯಾನಿಕಲ್ ಸ್ವೀಪಿಂಗ್ ಮೆಷಿನ್‌ಗಳನ್ನು 613.25 ಕೋಟಿ ರೂ.ಗೆ ಬಾಡಿಗೆಗೆ ಪಡೆಯುವ ಪ್ರಸ್ತಾವನೆಯಲ್ಲಿ ಹಗರಣ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
12:11 PM (IST) Nov 17
ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಯವರ ಹಳೆಯ ವ್ಲಾಗ್ ವಿಡಿಯೋವೊಂದು ವೈರಲ್ ಆಗಿದೆ. ಆಟೋ ಚಾಲಕನೊಂದಿಗೆ 'ನಮಗ್ಯಾಕೆ ಕನ್ನಡ' ಎಂದು ಪ್ರಶ್ನಿಸಿರುವ ಅವರ ಮಾತುಗಳು, ಅವರು ಕನ್ನಡ ವಿರೋಧಿಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
12:08 PM (IST) Nov 17
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯ ತಿಳಿದ ಜಯಂತ್ ಆಕೆಯನ್ನು ಹುಡುಕಲು ಮಾಸ್ಕ್ ಧರಿಸಿ ಚಿತ್ರಮಂದಿರಕ್ಕೆ ಬರುತ್ತಾನೆ. ಅಲ್ಲಿ ಜಾಹ್ನವಿಯನ್ನು ನೋಡಿದಾಗ, ಈ ವಿಷಯ ವಿಶ್ವನಿಗೆ ತಿಳಿದು ಆತಂಕಗೊಳ್ಳುತ್ತಾನೆ. ವಿಶ್ವನು ಜಾಹ್ನವಿಯನ್ನು ರಕ್ಷಿಸುತ್ತಾನಾ ಎಂಬುದು ಕಥೆಯ ರೋಚಕ ತಿರುವು.
11:54 AM (IST) Nov 17
2017ರಲ್ಲಿ ಬಂದ ‘ಭರ್ಜರಿ’ ಚಿತ್ರದ ನಂತರ ಮತ್ತೆ ಧ್ರುವ ಸರ್ಜಾ ಹಾಗೂ ರಚಿತಾ ರಾಮ್ ತೆರೆ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಈಗಿನ ಮಾಹಿತಿ ಪ್ರಕಾರ ಈ ಚಿತ್ರದ್ದು ಗ್ರಾಮೀಣ ಕಥೆಯಾಗಿದೆ.
11:22 AM (IST) Nov 17
ರೈತರ ಹೋರಾಟದ ಸಮಯದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.
10:49 AM (IST) Nov 17
ಬೆಂಗಳೂರಿನ ಅವಿಭಾಜ್ಯ ಸಾರಿಗೆ ಸಂಸ್ಥೆಯಾಗಿರುವ ನಮ್ಮ ಮೆಟ್ರೋ ಮೊಟ್ಟ ಮೊದಲ ಸಲ ಅಂತರ ಜಿಲ್ಲೆ ಸಂಚಾರ ಆರಂಭಿಸುವ ಸುದ್ದಿ ಹೊರಬಿದ್ದಿದೆ. ಬೆಂಗಳೂರು ಟು ತುಮಕೂರಿಗೆ ಮೆಟ್ರೋ ವಿಸ್ತರಣೆಗೆ ಇದೀಗ ಗ್ರೀನ್ ಸಿಗ್ನಲ್ ಸಿಕ್ಕಿದೆ.
10:28 AM (IST) Nov 17
ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಕಾಂಬಿನೇಶನ್‌ನ ‘ಮಾರುತ’ ಸಿನಿಮಾ ಇದೇ ನವೆಂಬರ್ 21ಕ್ಕೆ ತೆರೆಗೆ ಬರುತ್ತಿದೆ. ಎಸ್ ನಾರಾಯಣ್ ನಿರ್ದೇಶಿಸಿ, ಕೆ ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಿಸಿರುವ ಚಿತ್ರವಿದು.
10:10 AM (IST) Nov 17
ರೇಖಾ ಅವರಂತಹ ದಂತಕಥೆ ಮತ್ತೆ ಆನ್‌ಸ್ಕ್ರೀನ್ ಕಮ್‌ಬ್ಯಾಕ್ ಮಾಡಲು ಇಚ್ಛಿಸಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ. ಮನೀಶ್ ಮಲ್ಹೋತ್ರಾ ಮತ್ತು ವಿಜಯ್ ವರ್ಮಾ ಅವರ ಈ ಹೇಳಿಕೆಗಳು ರೇಖಾ ಅವರ ಕಮ್‌ಬ್ಯಾಕ್‌ಗೆ ವೇದಿಕೆ ಸಿದ್ಧಪಡಿಸುತ್ತವೆಯೇ? ಕಾದು ನೋಡಬೇಕು.
10:06 AM (IST) Nov 17
10:03 AM (IST) Nov 17
ರಾಜಮೌಳಿ ಈ ಬಾರಿ ಶೀರ್ಷಿಕೆ ಮತ್ತು ಹೀರೋ ಫಸ್ಟ್ ಲುಕ್ ಟೀಸರನ್ನೇ ಜಗತ್ತು ತಿರುಗಿ ನೋಡುವಂತೆ ಬಿಡುಗಡೆ ಮಾಡಿ ಹೊಸ ದಾರಿಯನ್ನು ಹಾಕಿಕೊಟ್ಟಿದ್ದಾರೆ. ಅದರಲ್ಲೂ ತೆಲುಗು ಮಂದಿಯ ಸಿನಿಮಾ ಪ್ರೀತಿ ದೊಡ್ಡದು.
09:52 AM (IST) Nov 17
ಐಪಿಎಲ್ ಫ್ರಾಂಚೈಸಿಗಳು ತಮ್ಮ ರಿಟೇನ್ ಮತ್ತು ರಿಲೀಸ್ ಲಿಸ್ಟ್‌ಗಳನ್ನು ಪ್ರಕಟಿಸಿವೆ. ಮಿನಿ ಹರಾಜಿಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ಹರಾಜಿಗೆ ಬಂದಿರುವ ಟಾಪ್ ಐದು ಆಟಗಾರರ ಬಗ್ಗೆ ಈಗ ನೋಡೋಣ ಬನ್ನಿ.
09:51 AM (IST) Nov 17
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಬಮೂಲ್ ನಿರ್ದೇಶಕ ಹರೀಶ್ ಕುಮಾರ್ ಹಾಗೂ ಕುಟುಂಬದವರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಊರಟ್ಟಿನ ಸೇವೆ ಸಲ್ಲಿಸಿದರು.
09:38 AM (IST) Nov 17