LIVE NOW
Published : Mar 17, 2026, 06:36 AM ISTUpdated : Mar 17, 2026, 11:11 PM IST

Karnataka News Live: ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ

ಸಾರಾಂಶ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ವರ್ಷದಲ್ಲಿ 3 ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಶಿಗ್ಗಾಂವಿ ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ. ಬಜೆಟ್‌ನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ.‌ ನಾವಿದ್ದಾಗ ₹54 ಸಾವಿರ ಕೋಟಿ ಸಾಲ ಮಾಡಿದ್ದೇವು. ನಾವು ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಮಾಡಿದ್ದ ಸಾಲವನ್ನು ತೀರಿಸಿದೆವು ಎಂದು ಹೇಳಿದರು.

ಕ್ಷೇತ್ರದ ಜನರ ಮನದಲ್ಲಿ ನಾನು ನೆಲೆ ಊರಿದ್ದೇನೆ. ಜನರ ಪ್ರೀತಿ ವಿಶ್ವಾಸವೇ ನನ್ನ ಕೆಲಸಗಳಿಗೆ ಸಾಕ್ಷಿ. ಶಿಗ್ಗಾಂವಿ-ಸವಣೂರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು ಎಂದು ಹೇಳಿದರು.

11:11 PM (IST) Mar 17

ನೈಸ್ ರಸ್ತೆ ವಿವಿಧ ವಿವಾದ - ದಶಕಗಳ ಗೊಂದಲಕ್ಕೆ ಶೀಘ್ರವೇ ತೆರೆ, ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಭರವಸೆ

ಬೆಂಗಳೂರು-ಮೈಸೂರು ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಆರೋಪಗಳ ಕುರಿತು ಸಚಿವ ಸಂಪುಟ ಉಪಸಮಿತಿ ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಶಾಸಕ ಎಸ್.ಟಿ. ಸೋಮಶೇಖರ್ ಅವರು ರೈತರಿಗೆ ಪರಿಹಾರ ವಿಳಂಬ, ಅಧಿಕ ಟೋಲ್ ಸಂಗ್ರಹ ಮತ್ತು ಕಿರಿದಾದ ಸೇತುವೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read Full Story

10:55 PM (IST) Mar 17

ಕಲಬುರಗಿಗೆ ಆರ್ಥಿಕ ಹಿನ್ನಡೆ, ತಲಾ ಆದಾಯ ಇದೇ ಮೊದಲ ಬಾರಿಗೆ ಋಣಾತ್ಮಕ! ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿತ!

ವರದಿ: ಶೇಷಮೂರ್ತಿ ಅವಧಾನಿ

2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಲಬುರಗಿ ಜಿಲ್ಲೆಯ ತಲಾ ಆದಾಯವು ಮೊದಲ ಬಾರಿಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿ, ರಾಜ್ಯದಲ್ಲೇ ಕೊನೆಯ ಸ್ಥಾನ ಪಡೆದಿದೆ. ಕೃಷಿ ವೈಫಲ್ಯ, ಉದ್ದಿಮೆಗಳ ತೀವ್ರ ಕೊರತೆ ಜಿಲ್ಲೆಯು ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದೆ.

Read Full Story

10:35 PM (IST) Mar 17

ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರ ಕಾರಣ - ಸಚಿವ ಕೆ.ಜೆ.ಜಾರ್ಜ್ ಆಕ್ರೋಶ

ಸಿಲಿಂಡರ್ ಅಭಾವದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಸರಿಯಲ್ಲ. ಮುನ್ನೆಚ್ಚರಿಕೆ ವಹಿಸಿ ಸಿದ್ಧತೆ ಮಾಡಿಕೊಳ್ಳದ ಕಾರಣವೇ ಇಂದು ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಆಕ್ರೋಶ ವ್ಯಕ್ತಪಡಿಸಿದರು.

Read Full Story

10:34 PM (IST) Mar 17

ಬೆಳಗಾವಿ - ಮಳೆ ನಿಲ್ಲಲು ಕಾಯುತ್ತಿದ್ದವರಿಗೆ ಕಾದಿತ್ತು ಮೃತ್ಯು - ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್

Woman dies in wall collapse: ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಅಕಾಲಿಕ ಮಳೆಗೆ ಪಾಳು ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Read Full Story

10:19 PM (IST) Mar 17

ಚಿಕ್ಕಮಗಳೂರು - ರೈಲಿನಲ್ಲಿ ಪ್ರಯಾಣಿಕರು ಮರೆತ ಚಿನ್ನದ ಬ್ಯಾಗ್, ತೆರೆದಾಗ ಪೊಲೀಸರಿಗೆ ಕಾದಿತ್ತು ಅಚ್ಚರಿ!

ತರೀಕೆರೆ ನಿವಾಸಿ ರೂಪಾ ಅವರು ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ತಮ್ಮ ಚಿನ್ನಾಭರಣ ಹಾಗೂ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಮರೆತಿದ್ದರು. ಬೀರೂರು ರೈಲ್ವೆ ಪೊಲೀಸರು ಹಾಗೂ ಸಿಬ್ಬಂದಿಯ ತ್ವರಿತ ಕಾರ್ಯಚರಣೆಯಿಂದಾಗಿ, ಬ್ಯಾಗನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
Read Full Story

10:08 PM (IST) Mar 17

ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ!

ಬಿಗ್‌ಬಾಸ್-12ರ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಿಗೂಢ ಸ್ಟೋರಿಗಳು ಈ ವದಂತಿಗೆ ಕಾರಣವಾಗಿದ್ದು, ಇವರ ಪ್ರೀತಿಯಲ್ಲಿ ಬಿರುಕು ಮೂಡಿದೆಯೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Read Full Story

09:34 PM (IST) Mar 17

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ - ರಾಜ್ಯ ಸರ್ಕಾರದ ವಿರುದ್ಧ ಧನಂಜಯ ಸರ್ಜಿ ವಾಗ್ದಾಳಿ

ಕೆಮ್ಮು, ಜ್ವರದಂತಹ ಸಾಮಾನ್ಯ ಕಾಯಿಲೆಗಳಿಗೂ ಔಷಧಿ ಲಭ್ಯವಿಲ್ಲದಿರುವುದು ದುರದೃಷ್ಟಕರ," ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story

09:11 PM (IST) Mar 17

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿ ತರಬೇತಿಯಾದ ಮಂಗಳೂರಿನ 15200 ಅಭ್ಯರ್ಥಿಗಳಲ್ಲಿ ಕೇವಲ 8.45%ಗೆ ಮಾತ್ರ ಜಾಬ್!

ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ (PMKVY) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಅಧಿಕೃತ ಅಂಕಿಅಂಶಗಳ ಪ್ರಕಾರ, ತರಬೇತಿ ಪಡೆದ ಸಾವಿರಾರು ಯುವಕರಲ್ಲಿ ಕೇವಲ 8% ಕ್ಕಿಂತ ಕಡಿಮೆ ಮಂದಿ ಉದ್ಯೋಗ ಪಡೆದಿದ್ದು, ಇದು ಯೋಜನೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

Read Full Story

09:08 PM (IST) Mar 17

ಚಿಕ್ಕಮಗಳೂರು - 50 ಅಡಿ ಆಳದ ಕಂದಕಕ್ಕೆ ಬಿದ್ದ ‌ಕಾರು - ಅನುಮಾನ ಹುಟ್ಟಿಸಿದ ಆಕ್ಸಿಡೆಂಟ್

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವಲಯದಲ್ಲಿ ಕಾರೊಂದು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಸ್ಥಳದಲ್ಲಿ ಯಾರೂ ಇಲ್ಲದಿರುವುದು ಮತ್ತು ಪೊಲೀಸರಿಗೆ ಮಾಹಿತಿ ನೀಡದಿರುವುದು ಘಟನೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

Read Full Story

08:54 PM (IST) Mar 17

'ಹುಲಿ ಹುಲಿ..' ಅಂದ್ಕೊಂಡು ಇಬ್ಬರು ಮಹಿಳೆಯರ ಜೊತೆ ಟ್ರಿಪಲ್‌ ರೈಡ್‌ ಮಾಡಿದ್ದ ರೀಲ್ಸ್‌ ಮಂಜಣ್ಣ, ಭರ್ಜರಿ ಫೈನ್‌ ಹಾಕಿದ ಪೊಲೀಸ್‌!

ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧರಾಗಲು, ಇಬ್ಬರು ಯುವತಿಯರೊಂದಿಗೆ ತ್ರಿಪಲ್ ರೈಡಿಂಗ್ ಮಾಡಿ ರೀಲ್ಸ್ ಚಿತ್ರೀಕರಿಸಿದ ದೊಡ್ಡಬಳ್ಳಾಪುರದ ವ್ಯಕ್ತಿಗೆ ಸಂಚಾರಿ ಪೊಲೀಸರು ರೂ. ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

08:45 PM (IST) Mar 17

ಶಾಸಕ ಬಸವರಾಜ ರಾಯರೆಡ್ಡಿ ಹಿಡಿದ ಕೆಲಸ ಬಿಡದ ಛಲಗಾರ - ಸಿಎಂ ಸಿದ್ದರಾಮಯ್ಯ

ನನ್ನ ಕ್ಷೇತ್ರದಲ್ಲೂ ನಿಮ್ಮ ರಾಯರೆಡ್ಡಿಯಷ್ಟು ನಾನ್ ಕೆಲಸ ಮಾಡಿಲ್ಲ, ಅಷ್ಟು ಅಭಿವೃದ್ಧಿ ಕೆಲಸಗಾರ ನಿಮ್ಮ ಶಾಸಕ ಬಸವರಾಜ ರಾಯರೆಡ್ಡಿ. ಹಿಡಿದ ಕೆಲಸ ಬಿಡದ ಛಲಗಾರ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

Read Full Story

08:36 PM (IST) Mar 17

ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತ ಆರೋಗ್ಯ ಕೇಂದ್ರ ಸ್ಥಾಪನೆ - ಚಲುವರಾಯಸ್ವಾಮಿ

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Read Full Story

08:26 PM (IST) Mar 17

ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದ ಸ್ಥಿತಿ - ಸಚಿವ ಕೃಷ್ಣ ಬೈರೇಗೌಡ ಬೇಸರ

ಇದ್ದ ಜಮೀನೆಲ್ಲ ಕೊಟ್ಟು ಈಗ ಸ್ಮಶಾನಕ್ಕೆ ಜಾಗ ಸಿಗದೆ ಸರ್ಕಾರವೇ ಜಾಗಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಓಡಾಡುವ ಸ್ಥಿತಿ ಬಂದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

Read Full Story

08:18 PM (IST) Mar 17

ದೇಶದ ಪ್ರಮುಖ ವಿಮಾನ ನಿಲ್ದಾಣಗಳ ಸುರಕ್ಷತಾ ವರದಿ - ಕೆಐಎಯಲ್ಲಿ ಲೇಸರ್ ಕಡಿಮೆ, ಸುರಕ್ಷತೆಯಲ್ಲಿಯೂ ಮುಂಚೂಣಿ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಇತರ ಪ್ರಮುಖ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಅತಿ ಕಡಿಮೆ ಲೇಸರ್ ಹಸ್ತಕ್ಷೇಪ ಪ್ರಕರಣಗಳನ್ನು ದಾಖಲಿಸಿ ಸುರಕ್ಷತೆಯಲ್ಲಿ ಮುಂಚೂಣಿಯಲ್ಲಿದೆ. ದೆಹಲಿ, ಚೆನ್ನೈನಂತಹ ನಿಲ್ದಾಣಗಳಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದರೆ, ಕೆಐಎಯಲ್ಲಿನ ಕಡಿಮೆ ಸಂಖ್ಯೆಯು ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.
Read Full Story

08:13 PM (IST) Mar 17

'ಬಿಯರ್ ಬೆಲೆ ಏರಿಸಿದ್ದಕ್ಕೆ ಮಕ್ಕಳು ಗಾಂಜಾ ಮೊರೆ ಹೋಗ್ತಿದ್ದಾರೆ' - ಅಬಕಾರಿ ಬೆಲೆ ಏರಿಕೆಗೆ ಹೆಚ್. ವಿಶ್ವನಾಥ್ ಆಕ್ರೋಶ!

ವಿಧಾನಪರಿಷತ್ತಿನಲ್ಲಿ ರಾಜ್ಯ ಸರ್ಕಾರದ ಬಜೆಟ್ ಚರ್ಚೆಯಲ್ಲಿ, ಹೆಚ್. ವಿಶ್ವನಾಥ್ ಅವರು ಸರ್ಕಾರದ ದುಂದುವೆಚ್ಚ, ಅಬಕಾರಿ ನೀತಿ, ಮತ್ತು ಆಡಳಿತಾತ್ಮಕ ವೈಫಲ್ಯಗಳನ್ನು ತೀವ್ರವಾಗಿ ಟೀಕಿಸಿದರು. ಜಾಹೀರಾತು ವೆಚ್ಚ, ಬಿಯರ್ ಬೆಲೆ ಏರಿಕೆ, ಮತ್ತು ಕುರಿಗಾಹಿಗಳ ಅನುದಾನದ ದುರ್ಬಳಕೆಯನ್ನು ಅವರು ಪ್ರಶ್ನಿಸಿದ್ದಾರೆ. 

Read Full Story

07:32 PM (IST) Mar 17

Heart Health - ಮಹಿಳೆಯರಲ್ಲಿ ಹೃದಯಾಘಾತ ಲಕ್ಷಣಗಳು ವಿಭಿನ್ನ - ಇಲ್ಲಿದೆ ತಪ್ಪದೇ ತಿಳಿಯಬೇಕಾದ ಮಾಹಿತಿ

ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಮತ್ತು ಕಾರಣಗಳು ಬೇರೆಯಾಗಿರುತ್ತವೆ. ಇದೇ ಕಾರಣಕ್ಕೆ ರೋಗ ಪತ್ತೆ ಮಾಡುವುದು ಕೂಡ ತಡವಾಗಬಹುದು. ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲವು ಮುಖ್ಯ ವಿಚಾರಗಳು ಇಲ್ಲಿವೆ.

Read Full Story

07:30 PM (IST) Mar 17

ಕಾರವಾರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ಗೋವಾ ಆಕರ್ಷಣೆ, ಮೋಜು ಮಸ್ತಿಗೆ ರಸ್ತೆ ಮಧ್ಯೆಯೇ ಜೀವ ಬಿಡ್ತಿರೋ ಮಕ್ಕಳು!

ಗೋವಾ ರಾಜ್ಯದ ಸಾಮೀಪ್ಯದಿಂದಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೋಜು-ಮಸ್ತಿಯ ಜೀವನಶೈಲಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಕಾರಣದಿಂದಾಗಿ ಕಳೆದ ಒಂದು ವರ್ಷದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿದ್ದು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗಳಿಂದ ಕಾಲೇಜು ಆಡಳಿತದ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
Read Full Story

07:21 PM (IST) Mar 17

Summer Hair Fall - ಬೇಸಿಗೆಯಲ್ಲಿ ಕೂದಲು ಉದುರುತ್ತಿದೆಯಾ? ಟೆನ್ಶನ್ ಬೇಡ! ಇಲ್ಲಿವೆ 6 ಸಿಂಪಲ್ ಟಿಪ್ಸ್

ಬೇಸಿಗೆ ಬಂತೆಂದರೆ ಬರೀ ಬಿಸಿಲಲ್ಲ, ನಮ್ಮ ಕೂದಲು ಕೂಡಾ ಸುಸ್ತಾಗುತ್ತದೆ. ಬೆವರು, ಧೂಳು ಮತ್ತು ಸೂರ್ಯನ ಕಿರಣಗಳಿಂದ ಕೂದಲು ಉದುರುವುದು ಡಬಲ್ ಆಗುತ್ತದೆ. ಇದಕ್ಕೆ ಹಳೆಯ ಕಾಲದ ಅಜ್ಜಿ ಮದ್ದು ಮಾತ್ರ ಸಾಲದು, Gen Z ಲೈಫ್‌ಸ್ಟೈಲ್‌ಗೆ ಹೊಂದುವ ಸ್ಮಾರ್ಟ್ ಟಿಪ್ಸ್ ಬೇಕು.

Read Full Story

07:18 PM (IST) Mar 17

ರೌಡಿಗಳ ಮೇಲೆ ಕಲ್ಲು ಹಾಕುವಾಗ ನಡುಗಿ ಹೋದೆ - Karna Serial ಫೈಟಿಂಗ್​ ಅನುಭವ ಹಂಚಿಕೊಂಡ Annayya ರಾಣಿ

'ಕರ್ಣ' ಸೀರಿಯಲ್‌ನ ಮಹಿಳಾ ದಿನದ ವಿಶೇಷ ಸಂಚಿಕೆಯಲ್ಲಿನ ಫೈಟಿಂಗ್ ದೃಶ್ಯದ ಬಗ್ಗೆ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ರಾಘವಿ ಅರಳಗುಂಡಗಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಭಯಪಟ್ಟಿದ್ದು, ನಟ ಕಿರಣ್ ರಾಜ್ ಅವರನ್ನು ಶ್ಲಾಘಿಸಿದ್ದು, ಸಹ-ನಟಿಯರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

Read Full Story

07:05 PM (IST) Mar 17

ನಕಲಿ ಹಕ್ಕು ಪತ್ರ ನೀಡಿದವರ ವಿರುದ್ಧ ಕಠಿಣ ಕ್ರಮ - ಸಚಿವ ಜಮೀರ್‌ ಅಹ್ಮಮದ್‌ ಖಾನ್‌

ಸಚಿವ ಜಮೀರ್‌ ಅಹ್ಮಮದ್‌ ಖಾನ್‌, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಹೆಚ್ಚು ಅನುದಾನ ಏಕೆ ತೆಗೆದುಕೊಳ್ಳಲಿಲ್ಲ? ಸರ್ಕಾರ ಸ್ಲಂ ಬೋರ್ಡ್‌ಗೆ 50 ಕೋಟಿ ರು. ನೀಡಿದೆ. ರಾಜ್ಯದಲ್ಲಿ 2,800 ಕೊಳಗೇರಿಗಳಿವೆ. ಬೆಂಗಳೂರಿನಲ್ಲಿ 480 ಕೊಳಗೇರಿಗಳಿವೆ.

Read Full Story

06:49 PM (IST) Mar 17

ಪರ್ಷಿಯನ್ ಭಾಷೆ ಹೇರಿ ಕನ್ನಡ ಕೊಲೆ ಮಾಡಿದ ಟಿಪ್ಪು - ಕಾಂಗ್ರೆಸ್ಸಿಗರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಪರ್ಷಿಯನ್ ಭಾಷೆ ಹೇರಿ ಕನ್ನಡ ಕೊಲೆ ಮಾಡಿದ ಕನ್ನಡದ್ರೋಹಿ ಟಿಪ್ಪುವನ್ನು ಕೇವಲ ಒಂದು ಸಮುದಾಯದ ಓಲೈಸುವುದಕ್ಕಾಗಿ ನಮ್ಮವ ಎನ್ನುವುದು ಯಾವ ನ್ಯಾಯ ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು.

Read Full Story

06:39 PM (IST) Mar 17

ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸುವುದು ಪುಣ್ಯದ ಕಾರ್ಯ - ಸಚಿವ ಮಧು ಬಂಗಾರಪ್ಪ

ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿ ಪ್ರೀತಿ ಹಾಗೂ ತಾಯ್ತನದಿಂದ ಶಾಲಾ ಮಕ್ಕಳಿಗೆ ಊಟ ಬಡಿಸುವ ಕಾರ್ಯ ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ ಮಧು ಬಂಗಾರಪ್ಪ ಹೇಳಿದರು.

Read Full Story

06:17 PM (IST) Mar 17

ಯಲಹಂಕ ರೈಲ್ವೆ ಹಳಿ ಮೇಲೆ ಮಲಗಿ ಅತ್ಮ*ಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಸಿದ ಹೆಡ್ ಕಾನ್ಸ್ಟೇಬಲ್ ಶ್ರೀಧರ್

ಯಲಹಂಕದಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮ*ಹ*ತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಹೆಡ್ ಕಾನ್ಸ್ಟೇಬಲ್ ಶ್ರೀಧರ್ ಮೂರ್ತಿ ನೇತೃತ್ವದ ತಂಡವು ಸಮಯೋಚಿತವಾಗಿ ಕಾರ್ಯನಿರ್ವಹಿಸಿ ವ್ಯಕ್ತಿಯ ಪ್ರಾಣ ಉಳಿಸಿದೆ.
Read Full Story

06:05 PM (IST) Mar 17

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಹಬ್ಬ - ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ

ಜ್ಞಾನಭಾರತಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸೈನ್ಸ್ ಫೋರಮ್ (ಬಿಯುಎಸ್‌ಎಫ್) ಹಾಗೂ ಪಿಎಂ ಉಷಾ ಸಹಯೋಗದೊಂದಿಗೆ ಆಯೋಜಿಸಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ಉತ್ಸವ - 2026 ಉದ್ಘಾಟಿಸಲಾಯಿತು.

Read Full Story

06:04 PM (IST) Mar 17

ನಟ ದರ್ಶನ್​ ಭೇಟಿಗೆ ಕೋರ್ಟ್​ ಅಸ್ತು; ಇನ್ನೋರ್ವ ಆರೋಪಿಗೆ ಭಾರಿ ದಂಡ- ಆದೇಶದ ಡಿಟೇಲ್ಸ್ ಇಲ್ಲಿದೆ

ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ, ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಆದರೆ, ಜೈಲಿನ ಸೂಪರಿಂಟೆಂಡೆಂಟ್ ಅವರ ಒಪ್ಪಿಗೆ ಕಡ್ಡಾಯವಾಗಿದೆ. ಇದೇ ವೇಳೆ, ತನಿಖಾಧಿಕಾರಿ ವಿರುದ್ಧ ಸುಳ್ಳು ಅರ್ಜಿ ಸಲ್ಲಿಸಿದ್ದ   ಪವನ್‌ಗೆ ದಂಡ ವಿಧಿಸಿದೆ.

Read Full Story

05:38 PM (IST) Mar 17

Appu Birthday - ಪುನೀತ್​ ರಾಜ್ ಎದುರು ಅಂದು ರಶ್ಮಿಕಾ ಕನ್ನಡದಲ್ಲಿ ಹೀಗೆಲ್ಲಾ ಮಾತಾಡಿದ್ರಾ? ಆ ವಿಡಿಯೋ ವೈರಲ್​

ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು, 'ಅಂಜನಿ ಪುತ್ರ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ, ರಶ್ಮಿಕಾ ಮಂದಣ್ಣ ಅವರು ಪುನೀತ್ ಅವರೊಂದಿಗೆ ನಟಿಸುತ್ತಿರುವ ಬಗ್ಗೆ  ಸಂತಸ ವ್ಯಕ್ತಪಡಿಸಿದರೆ, ಪುನೀತ್  ಚಿತ್ರತಂಡದ ಕನಸಿನ ಬಗ್ಗೆ ಮಾತನಾಡಿದ್ದಾರೆ.

Read Full Story

05:16 PM (IST) Mar 17

ಬೆಂಗಳೂರು - ಆ ಒಂದು ಜಗಳವೇ ಕೊನೆಯಾಯ್ತು - ಸ್ನೇಹಿತನಿಂದಲೇ ಗೆಳೆಯನ ಘೋರ ಅಂತ್ಯ! ಸುತ್ತಿಗೆಯಿಂದ ಹೊಡೆದು ಕೊಂದ!

ಬೆಂಗಳೂರಿನ ಆವಲಹಳ್ಳಿಯಲ್ಲಿ ಏಸಿ ಸರ್ವಿಸ್ ಕೆಲಸ ಮಾಡುತ್ತಿದ್ದ ಸ್ನೇಹಿತರ ನಡುವೆ ಜಗಳ ವಿಕೋಪಕ್ಕೆ ತಿರುಗಿ, ಮೊಹಮ್ಮದ್ ನಸ್ರುಲ್ಲಾ ಎಂಬಾತ ತನ್ನ ರೂಮ್‌ಮೇಟ್ ಕುನಾಲ್ ಕುಮಾರ್‌ನನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಗಲಾಟೆಗಳು ಈ ಭೀಕರ ಕೃತ್ಯಕ್ಕೆ ಕಾರಣವಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

05:13 PM (IST) Mar 17

ಬೆಂಗಳೂರಿನ ಈ ಕೆಫೆಯಲ್ಲಿ ಲಿಂಬು ಜ್ಯೂಸ್​ ಗ್ಯಾಸ್​ನಲ್ಲಿ ಮಾಡ್ತಾರಾ? ಈ ಬಿಲ್​ ನೋಡಿ ಗ್ರಾಹಕರು ಶಾಕ್​

ಗ್ಯಾಸ್ ಸಿಲಿಂಡರ್ ಕೊರತೆಯ ನೆಪದಲ್ಲಿ ಹೋಟೆಲ್‌ಗಳು ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಬೆಂಗಳೂರಿನ ಕೊತ್ತನೂರು ಬಳಿಯ ಕೆಫೆಯೊಂದು, ಅಡುಗೆಗೆ ಬಳಸದ ನಿಂಬೆ ಜ್ಯೂಸ್‌ಗೂ 'ಗ್ಯಾಸ್ ಚಾರ್ಜ್' ವಿಧಿಸಿದ್ದು, ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಗ್ಯಾಸ್ ಕೊರತೆಯ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಸಾಕ್ಷಿಯಾಗಿದೆ.
Read Full Story

05:07 PM (IST) Mar 17

ಬೆಂಗಳೂರು ಮಹಿಳೆಯರಲ್ಲಿ ಉದ್ಯೋಗ, ಹಣಕಾಸು ಒತ್ತಡ ಹೆಚ್ಚಳ - ಎಂಪವರ್ ಮಾಹಿತಿ

ಸಮಾಲೋಚನೆಯಲ್ಲಿ ತಜ್ಞರು ಶಾಲೆ ಮತ್ತು ಸಮುದಾಯಗಳಲ್ಲಿ ಆರಂಭಿಕವಾಗಿ ಮಾನಸಿಕ ಆರೋಗ್ಯದ ಕುರಿತು ಹೆಚ್ಚುತ್ತಿರುವ ಜಾಗೃತಿ ವ್ಯಕ್ತಪಡಿಸಿದ್ದಾರೆ. 18 ವರ್ಷದೊಳಗಿನ 17,102 ಹೆಣ್ಣು ಮಕ್ಕಳು ಭಾಗವಹಿಸಿದ್ದಾರೆ.

Read Full Story

04:51 PM (IST) Mar 17

700ಕ್ಕೂ ಹೆಚ್ಚು ಡ್ರೋನ್ ಮೂಲಕ ರೋಗನಿರ್ಣಯ ಮಾದರಿ ಸಾಗಣೆ - ಬೆಂಗಳೂರಿನಲ್ಲಿ ಯಶಸ್ವಿ ಪ್ರಯೋಗ

ಏರ್‌ ಬೌಂಡ್ ಸಂಸ್ಥೆಗಳು ಡ್ರೋನ್ ಮೂಲಕ ರೋಗನಿರ್ಣಯ ಮಾದರಿಗಳನ್ನು ಯಶಸ್ವಿಯಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯುವ ತಮ್ಮ ಮಹತ್ವದ ಮೆಡಿಕಲ್ ಲಾಜಿಸ್ಟಿಕ್ಸ್ ಪೈಲಟ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

Read Full Story

04:27 PM (IST) Mar 17

ರೈತರ ಕೈಗೆ ಸಿಕ್ಕ ಪಂಪ್‌ಸೆಟ್ ಕೇಬಲ್ ಕಳ್ಳರು - ಕದ್ದ ಕೇಬಲ್‌ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ರೈತರ ಪಂಪ್‌ಸೆಟ್‌ಗಳ ಕೇಬಲ್ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕದ್ದ ಕೇಬಲ್‌ನಿಂದಲೇ ಅವರನ್ನು ಮರಕ್ಕೆ ಕಟ್ಟಿ ಥಳಿಸಿ, ನಂತರ ಹುಲಿಯೂರು ದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ.
Read Full Story

04:18 PM (IST) Mar 17

ನನ್ನ ಕ್ಷೇತ್ರದ ಬಗ್ಗೆ ಸದನದಲ್ಲಿ ಮಾತನಾಡಲ್ಲ ಜೈಲಿಗೆ ಹೋಗುವ ಸಾಧ್ಯತೆಯಿದೆಯೆಂದು ಜ್ಯೋತಿಷಿ ಹೇಳಿದ್ದಾರೆ - ಮುನಿರತ್ನ

ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಮುನಿರತ್ನ, ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರಿಡುವುದನ್ನು ವಿರೋಧಿಸಿದರು. ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಜ್ಯೋತಿಷಿಯೊಬ್ಬರ ಸಲಹೆಯಿಂದಾಗಿ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ನಿರಾಕರಿಸಿದ್ದು ಚರ್ಚೆಗೆ ಗ್ರಾಸವಾಯಿತು.
Read Full Story

03:21 PM (IST) Mar 17

ಮಂಗಳೂರು ಹೆರಿಗೆ ದುರಂತ - ಆಸ್ಪತ್ರೆ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ, ಶಿಶುವಿನ ತಲೆಯಲ್ಲಿ ಗಾಯ ಪತ್ತೆ!

ಮಂಗಳೂರಿನ ಎಸ್‌.ಸಿ‌.ಎಸ್‌ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶು ಸಾವನ್ನಪ್ಪಿದ್ದು, ವೈದ್ಯಕೀಯ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೆರಿಗೆಗೆ ವ್ಯಾಕ್ಯೂಮ್ ಬಳಸಿದ್ದರಿಂದ ಮಗುವಿನ ತಲೆಗೆ ಗಾಯವಾಗಿ ಸಾವಾಗಿದೆ ಎಂದು ದೂರಿ, ತನಿಖೆಗೆ ಒತ್ತಾಯಿಸಿದ್ದಾರೆ.
Read Full Story

01:59 PM (IST) Mar 17

ಇರೋ ಒಂದು ಹೃದಯನ್ನ ಎಷ್ಟೂ ಅಂತ ಗೆಲ್ತಿಯಾ - Rakshita Shetty ಹುಟ್ಟುಹಬ್ಬದ ವಿಡಿಯೋಗೆ ಫ್ಯಾನ್ಸ್​ ಭಾವುಕ

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಐಷಾರಾಮಿ ಪಾರ್ಟಿಗಳ ಬದಲು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಉಡುಪಿಯ ಸಾಲಿಗ್ರಾಮದಲ್ಲಿರುವ 'ಹೊಸಬದುಕು' ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳೊಂದಿಗೆ ದಿನ ಕಳೆದು, ಊಟ ಬಡಿಸಿ, ಅವರ ನೋವು-ನಲಿವಿನಲ್ಲಿ ಭಾಗಿಯಾಗಿದ್ದಾರೆ.

Read Full Story

01:55 PM (IST) Mar 17

ಗೋವಾ ರಸ್ತೆ ಅಪಘಾತದಲ್ಲಿ ಕಾರವಾರ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಸಾವು; ಮತ್ತೋರ್ವ ಗಂಭೀರ

ಗೋವಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರವಾರದ ವೈದ್ಯಕೀಯ ವಿದ್ಯಾರ್ಥಿ ಪ್ರೀತಂ ಮೃತಪಟ್ಟಿದ್ದಾರೆ. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಲಾರಿ ಮತ್ತು ಹಾಲಿನ ಕ್ಯಾಂಟರ್ ನಡುವಿನ ಡಿಕ್ಕಿಯಲ್ಲಿ ಬೈಕ್ ಸವಾರ ಅಬ್ದುಲ್ ರೆಹಮಾನ್ ಸಾವನ್ನಪ್ಪಿದ್ದಾರೆ.
Read Full Story

01:12 PM (IST) Mar 17

Naa Ninna Bidalaare - ಹೆಣ್ಣಿನ ಬಗ್ಗೆ ಈ ಡೈಲಾಗ್​ ಬರೆದವರಿಗೆ ಕೈ ಎತ್ತಿ ನಮಸ್ಕರಿಸ್ತಿರೋ ಸೀರಿಯಲ್​ ಫ್ಯಾನ್ಸ್​

'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಶರತ್, ಹೆಣ್ಣುಮಕ್ಕಳು ಸಮಾಜದಲ್ಲಿ ಎದುರಿಸುವ ದ್ವಂದ್ವ ನಿಲುವುಗಳು ಮತ್ತು ನೋವುಗಳ ಬಗ್ಗೆ ಮಾತನಾಡಿದ್ದಾರೆ. ಎತ್ತರ, ದಪ್ಪ, ಮದುವೆ, ಕೆಲಸ ಹೀಗೆ ಪ್ರತಿಯೊಂದು ವಿಷಯದಲ್ಲೂ ಮಹಿಳೆಯರನ್ನು ಹೇಗೆ ಟೀಕಿಸಲಾಗುತ್ತದೆ ಎಂಬುದನ್ನು ಅವರ ಮಾತುಗಳು ವಿವರಿಸುತ್ತವೆ. ಈ ಮಾತುಗಳು ಅನೇಕ ಮಹಿಳೆಯರ ಬದುಕಿನ ಕರಾಳ ಸತ್ಯವನ್ನು ತೆರೆದಿಟ್ಟಿವೆ.
Read Full Story

12:43 PM (IST) Mar 17

ಕೊಪ್ಪಳ ಗವಿಮಠದ ಅಕ್ಷರ ದಾಸೋಹಕ್ಕೂ ತಟ್ಟಿದ ಸಿಲಿಂಡರ್ ಸಮಸ್ಯೆ, ಏಜೆನ್ಸಿ ಬಳಿ ದೌಡಾಯಿಸಿದ ಅಧಿಕಾರಿಗಳು, ಬರಿಗೈಲಿ ವಾಪಸ್!

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಕೊಪ್ಪಳದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಉಂಟಾಗಿದ್ದು, ಐತಿಹಾಸಿಕ ಗವಿಮಠದ ಅಕ್ಷರ ದಾಸೋಹ ಕೇಂದ್ರಕ್ಕೆ ಗ್ಯಾಸ್ ಸಮಸ್ಯೆ ತಟ್ಟಿದೆ. ಸಾವಿರಾರು ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಧಿಕಾರಿಗಳು ಗ್ಯಾಸ್ ಏಜೆನ್ಸಿ ಮುಂದೆ ಬೇಡಿದ್ರೂ, ಸ್ಟಾಕ್ ಇಲ್ಲದ ಕಾರಣ ಸಿಲಿಂಡರ್ ಸಿಕ್ಕಿಲ್ಲ.

Read Full Story

12:36 PM (IST) Mar 17

Appu Birthday - ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ

ಪುನೀತ್ ರಾಜ್‌ಕುಮಾರ್ ಅವರು ಆರು ತಿಂಗಳ ಶಿಶುವಾಗಿದ್ದಾಗ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಬಾಲನಟರಾಗಿ ಪಾದಾರ್ಪಣೆ ಮಾಡಿದರು. ಡಾ. ರಾಜ್‌ಕುಮಾರ್ ಅವರೇ ತಮ್ಮ ಮಗನನ್ನು ಚಿತ್ರೀಕರಣಕ್ಕೆ ಕರೆತಂದಿದ್ದರು.  ಸಮಾಜಮುಖಿ ಕಾರ್ಯಗಳ ಮೂಲಕ ಕರುನಾಡಿನ ಮನೆಮಾತಾದ ಅಪ್ಪು, ಇಂದಿಗೂ ಜನಮಾನಸದಲ್ಲಿ ಅಜರಾಮರ.

Read Full Story

12:05 PM (IST) Mar 17

ಅಗಸ ನೀರಲ್ಲಿದ್ರೂ ಬಾಯಾರಿಕೆ ಆದಂತೆ ಕೊಟ್ಟೂರು ಜನ್ರ ಸ್ಥಿತಿ, ನೀರಿದ್ರೂ ಬಳಕೆ ಬರ! ವಾರಕ್ಕೊಮ್ಮೆ ನೀರು!

Kottur drinking water crisis ಬನ್ನಿಗೋಳ ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ, ನಿರಂತರ ವಿದ್ಯುತ್ ಪೂರೈಕೆಯಾಗದ ಕಾರಣ ಕೊಟ್ಟೂರು ಪಟ್ಟಣಕ್ಕೆ ವಾರಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ಈ ವಿದ್ಯುತ್ ಸಮಸ್ಯೆಯಿಂದಾಗಿ 40 ಸಾವಿರಕ್ಕೂ ಹೆಚ್ಚು ನಿವಾಸಿಗಳು ತೀವ್ರ ನೀರಿನ ಅಭಾವ ಎದುರಿಸುತ್ತಿದ್ದಾರೆ..

Read Full Story

11:41 AM (IST) Mar 17

ಕನ್ನಡಪ್ರಭ ಬಿಗ್ ಇಂಪ್ಯಾಕ್ಟ್ - ರೈಲ್ವೆ ಬಡ್ತಿ ಪರೀಕ್ಷೆ ರದ್ದು; ಕನ್ನಡಿಗರ ಹೋರಾಟಕ್ಕೆ ಮಣಿದ ಅಧಿಕಾರಿಗಳು!

ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದನ್ನು ವಿರೋಧಿಸಿ ನಡೆದ ತೀವ್ರ ಹೋರಾಟಕ್ಕೆ ಜಯ ಸಿಕ್ಕಿದೆ. 'ಕನ್ನಡಪ್ರಭ' ವರದಿಯ ಫಲವಾಗಿ ಮತ್ತು ಕರವೇ ಪ್ರತಿಭಟನೆಯಿಂದಾಗಿ, ರೈಲ್ವೆ ಇಲಾಖೆಯು ನಡೆಯುತ್ತಿದ್ದ ಪರೀಕ್ಷೆಯನ್ನು ದಿಢೀರ್ ರದ್ದುಗೊಳಿಸಿ ಮುಂದೂಡಿದೆ.

Read Full Story

More Trending News