LIVE NOW
Published : Nov 15, 2026, 06:41 AM ISTUpdated : Nov 15, 2026, 06:56 AM IST

Karnataka News Live: ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳು - ಡಿಕೆ ಶಿವಕುಮಾರ್!

ಸಾರಾಂಶ

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ಗೌರವಧನ, ನಿವೃತ್ತ ಕಾರ್ಯಕರ್ತೆಯರಿಗೆ ₹5 ಲಕ್ಷ ಇಡುಗಂಟು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ. 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷೆ ಡಾ. ಪ್ರಮೋದ ತಿಳಿಸಿದರು.

2025ರಲ್ಲಿ ನಡೆದ ಅನಿರ್ದಿಷ್ಟಾವಧಿ ಧರಣಿ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ ₹10 ಸಾವಿರ ಗೌರವಧನ ಹಾಗೂ ಪ್ರೋತ್ಸಾಹಧನ ನೀಡುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಭರವಸೆ ಜಾರಿಯಾಗಿಲ್ಲ. ಕೊರೊನಾ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಆಶಾಗಳ ಸೇವೆಯನ್ನು ಸನ್ಮಾನಿಸಿದ ಸರ್ಕಾರ ಅವರ ಜೀವನ ಭದ್ರತೆಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿದರು.

06:56 AM (IST) Nov 15

ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳು - ಡಿಕೆ ಶಿವಕುಮಾರ್!

ಬೆಂಗಳೂರು ಮೆಟ್ರೋ ನಿರ್ಮಾಣದಲ್ಲಿ ರಾಜ್ಯದ ಗ್ರಾನೈಟ್ ಕಲ್ಲುಗಳನ್ನು ಬಳಸುವಂತೆ ಸಿಎಂ ಡಿ.ಕೆ.ಶಿವಕುಮಾರ್ ನೀಡಿದ ಸಲಹೆಯಂತೆ ಸ್ಥಳೀಯ ಕಲ್ಲುಗಳನ್ನು ಉಪಯೋಗಿಸಲಾಗಿದೆ. ನೂತನ ಪಿಂಕ್ ಮಾರ್ಗದಲ್ಲಿ ಪ್ರಯಾಣಿಸಿದ ಸಿಎಂ, ಪ್ರಧಾನಿ ಮೋದಿಯವರೊಂದಿಗಿನ ಒಡನಾಟ ಮತ್ತು ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದರು.
Read Full Story

More Trending News