LIVE NOW
Published : Jan 14, 2026, 06:47 AM ISTUpdated : Jan 14, 2026, 09:26 AM IST

Karnataka News Live: ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ದಿಗಿಲುಬಿದ್ದ ಕೇಳಿ ಕರ್ಣ-ನಿಧಿ

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಷಯದಲ್ಲಿ ಇನ್ನೆರಡು ದಿನಗಳಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಜನವರಿ 16ರಂದು ಈ ಬಗ್ಗೆ ನಾನು ಮಾತನಾಡುತ್ತೇನೆ. ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಡಿಕೆಶಿ ಆಪ್ತ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಎಲ್ಲರೂ ಸೈಲೆಂಟ್ ಆಗಿಬಿಟ್ರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಸೈಲೆಂಟೂ ಇಲ್ಲ. ಇನ್ನೆರಡು ದಿನಗಳಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದ್ದು, ಸಂಕ್ರಾಂತಿ ಬಳಿಕ, ಜನವರಿ 16ರಂದು ಈ ಬಗ್ಗೆ ಮಾತನಾಡುವೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕಾಗಿ ಶ್ರಮಿಸಿದ್ದು, ಅವರು ಸಿಎಂ ಆಗಬೇಕು ಎಂಬುದು ನಮ್ಮ ಇಚ್ಛೆ ಎಂದರು. ಈ ವಿಷಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವೇ ಅಂತಿಮವಾಗಿದ್ದು, ಹೈಕಮಾಂಡ್‌ ಸೂಕ್ತ ನಿರ್ಧಾರ ಕೈಗೊಂಡು, ಡಿಕೆಶಿಗೆ ಸಿಎಂ ಆಗಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Zee Kannada Serial Karna

09:26 AM (IST) Jan 14

ತಾಳಿ ಕಟ್ಟಲು ಒಪ್ಪದ ತೇಜಸ್; ಇತ್ತ ನಿತ್ಯಾ ಮಾತುಗಳನ್ನು ದಿಗಿಲುಬಿದ್ದ ಕೇಳಿ ಕರ್ಣ-ನಿಧಿ

ಕರ್ಣ ಸೀರಿಯಲ್‌ನಲ್ಲಿ ನಿತ್ಯಾ-ತೇಜಸ್ ಮದುವೆ ನಿಂತುಹೋಗಿದೆ. ನಿತ್ಯಾಳ ಗರ್ಭದ ಬಗ್ಗೆ ಅನುಮಾನಗೊಂಡ ತೇಜಸ್ ಸತ್ಯ ತಿಳಿಯಲು ಮುಂದಾಗಿದ್ದಾನೆ. ಇದರಿಂದಾಗಿ, ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾದಿದ್ದ ಕರ್ಣ ಮತ್ತು ನಿಧಿ ಪ್ಲಾನ್ ವಿಫಲವಾಗಿದ್ದು, ಕಥೆ ರೋಚಕ ತಿರುವು ಪಡೆದಿದೆ.

Read Full Story

08:49 AM (IST) Jan 14

BBK 12 - 'ವಿನ್ನರ್' ಎಂದ ಸ್ಪರ್ಧಿಗೆ ಮಧ್ಯರಾತ್ರಿಯ ಮಿಡ್‌ವೀಕ್ ಎಲಿಮಿನೇಷನ್ ಶಾಕ್!

ಬಿಗ್‌ಬಾಸ್ ಸೀಸನ್ 12ರ ಫಿನಾಲೆ ವಾರದ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಪ್ರಬಲ ಸ್ಪರ್ಧಿ ಧ್ರುವಂತ್ ಮನೆಯಿಂದ ಹೊರಬಂದಿದ್ದಾರೆ. ತಾನೇ ವಿನ್ನರ್ ಎಂದು ಅಬ್ಬರಿಸಿದ್ದ ಧ್ರುವಂತ್, ಮಧ್ಯರಾತ್ರಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ.
Read Full Story

08:36 AM (IST) Jan 14

ಹೋಟೆಲ್‌ ತಿಂಡಿ ದರ ಏರಿಕೆಗೆ ಕಡಿವಾಣ ಹಾಕುವಂತೆ ಗ್ರಾಹಕರ ಒತ್ತಾಯ

ಹೋಟೆಲ್‌, ಆನ್‌ಲೈನ್‌ ಡೆಲಿವರಿ ಊಟೋಪಹಾರಗಳ ಮೇಲಿನ ಅನಿಯಂತ್ರಿತ ದುಬಾರಿ ದರದಿಂದಾಗಿ ಮಧ್ಯಮ ವರ್ಗಕ್ಕೆ ಹೊರೆಯಾಗುತ್ತಿದೆ. ಸರ್ಕಾರ ಮಧ್ಯಪ್ರವೇಶಿಸಿ ಈ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕೆಂಬ ಒತ್ತಾಯ ಹೆಚ್ಚಾಗಿದೆ.

Read Full Story

08:23 AM (IST) Jan 14

ಬೆಂಗಳೂರು ನಗರದಲ್ಲಿ ಪ್ರತಿ ನಿಮಿಷಕ್ಕೆ 14 ಸಂಚಾರಿ ನಿಯಮ ಉಲ್ಲಂಘನೆ ಕೇಸ್‌!

ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಏರುಮುಖವಾಗಿದ್ದು, ಪ್ರತಿ ದಿನ ಸರಾಸರಿ 21 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವ ಕಳಕಳಕಾರಿ ಸಂಗತಿ ಬೆಳಕಿಗೆ ಬಂದಿದೆ. ಕಳೆದ ವರ್ಷ 11 ತಿಂಗಳಲ್ಲಿ 68 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಪೊಲೀಸರು.

Read Full Story

08:07 AM (IST) Jan 14

ಹಾನಗಲ್‌ ಸರ್ಕಾರಿ ಮಾದರಿ ಶಾಲೆಯ 690 ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ!

ಹಾನಗಲ್ಲ ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ 690 ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆಯಿಲ್ಲದೆ, ವಿಶೇಷವಾಗಿ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ. 

Read Full Story

07:56 AM (IST) Jan 14

ಕುಟುಂಬಕ್ಕೆ ಸಿಕ್ಕಿದ್ದು ಸನ್ಮಾನ ಮಾತ್ರ; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಲಕ್ಕುಂಡಿ ಪ್ರಕರಣ

ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾದ ನಿಧಿಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ ಪ್ರಜ್ವಲ್ ರಿತ್ತಿಗೆ ಸನ್ಮಾನ ಮಾಡಲಾಯಿತು. ಆದರೆ, ಈ ಘಟನೆಯನ್ನು ಆಧರಿಸಿ, ಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಮತ್ತು ಸರ್ಕಾರದ ನಿಲುವನ್ನು ವಿಡಂಬನೆ ಮಾಡುವ ರೀಲ್ಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Read Full Story

07:46 AM (IST) Jan 14

Koppal - ಕಾಂಗ್ರೆಸ್‌ಗೆ ಟಕ್ಕರ್‌ ಕೊಟ್ಟು ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ ಬೆಂಬಲಿತರು

ಕೊಪ್ಪಳ ಜಿಲ್ಲಾ ಯೋಜನಾ ಸಮಿತಿಯ 6 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಬಿಜೆಪಿ ಬೆಂಬಲಿತ ನಾಲ್ವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈ ಮೂಲಕ ಬಿಜೆಪಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ.
Read Full Story

07:37 AM (IST) Jan 14

ಶಾಸಕ ಸತೀಶ್ ಸೈಲ್‌ಗೆ ಫೆ. 5ರ ವರೆಗೆ ಮಧ್ಯಂತರ ಜಾಮೀನು ವಿಸ್ತರಣೆ

ಬೇಲೆಕೇರಿ ಬಂದರು ಅಕ್ರಮ ಅದಿರು ಸಾಗಾಟ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್‌ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ವಿಸ್ತರಿಸಿದೆ. ವೈದ್ಯಕೀಯ ಕಾರಣಗಳಿಗಾಗಿ ಈ ವಿಸ್ತರಣೆ ನೀಡಲಾಗಿದೆ.

Read Full Story

07:32 AM (IST) Jan 14

ವಿವಿಧೆಡೆ ಅಕಾಲಿಕ ಧಾರಾಕಾರ ಮಳೆ - ಜನರು ಹೈರಾಣ

ಬೆಳಗಾವಿ ನಗರದಲ್ಲಿ ಸಂಜೆ ವೇಳೆಯಲ್ಲಿ ಅಕಾಲಿಕ ಸುರಿದ ಧಾರಾಕಾರ ಮಳೆಯಿಂದಾಗಿ ಜನರು ಹೈರಾಣದರು. ಒಂದೆಡೆ ವರ್ಷದ ಮೊದಲ ವರ್ಷಧಾರೆಗೆ ಹರ್ಷವಾಗಿದ್ದು, ಮತ್ತೊಂದೆಡೆ ಮಕರ ಸಂಕ್ರಮಣದ ಹಬ್ಬದ ಸಂಭ್ರಮಕ್ಕೆ ಖರೀದಿಯಲ್ಲಿ ತೊಡಗಿದ್ದ ಜನತೆಗೆ ಅಡ್ಡಿಯುಂಟಾಯಿತು.

Read Full Story

07:31 AM (IST) Jan 14

800 ಗ್ರಾಂ ಇದ್ದ ಚಿನ್ನ 466 ಗ್ರಾಂ ಹೇಗಾಯಿತು? ಇನ್ನುಳಿದ ಬಂಗಾರ ಎಲ್ಲಿ ಹೋಯಿತು?

ಲಕ್ಕುಂಡಿ ಗ್ರಾಮದಲ್ಲಿ 800 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಆದರೆ ಕೇವಲ 466 ಗ್ರಾಂ ಮಾತ್ರ ಲಭ್ಯವಿದೆ. ಈ ವ್ಯತ್ಯಾಸವು ರಾಜಕೀಯ ಒತ್ತಡ ಮತ್ತು ಜಿಲ್ಲಾಡಳಿತದ ವೈಫಲ್ಯದ ಬಗ್ಗೆ ಗಂಭೀರ ಆರೋಪಗಳಿಗೆ ಕಾರಣವಾಗಿದೆ. ನಿಧಿ ಎಂದು ಘೋಷಿಸಿ ಹಣ ಪಡೆಯುವ ಕುತಂತ್ರದ ಶಂಕೆ ವ್ಯಕ್ತವಾಗಿದೆ.
Read Full Story

07:23 AM (IST) Jan 14

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ

ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್‌ ಜಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸುವ ಸಂಬಂಧ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಬುಧವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ

Read Full Story

07:18 AM (IST) Jan 14

Hassan - ಕಾಂಪೌಂಡ್ ತೆರವು ಪ್ರಕರಣ - ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು ಹಾಕಿದ ದೇವರಾಜು

ವಿವಾದಿತ ನಿವೇಶನದ ಜಿಪಿಎ ಹೊಂದಿರುವ ದೇವರಾಜು, ನಟ ಯಶ್ ತಾಯಿ ಪುಷ್ಪಾ ಅವರಿಗೆ ಕಾನೂನುಬದ್ಧ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಹೇಳಿದ ಅವರು, ಪುಷ್ಪಾ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

Read Full Story

07:17 AM (IST) Jan 14

ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ

 ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಫೆಬ್ರವರಿ 13ರಂದು 1000 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಸಾಧನಾ ಸಮಾವೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Read Full Story

07:06 AM (IST) Jan 14

ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ - ಸುಪ್ರೀಂ

ಬೀದಿ ನಾಯಿ ನಿಯಂತ್ರಣ ನಿಯಮಾವಳಿ ಅನುಷ್ಠಾನಕ್ಕೆ ತಾರದೆ ಕಳೆದ 5 ವರ್ಷಗಳಿಂದ ಸುಮ್ಮನೆ ಕೂತಿರುವ ಸರ್ಕಾರಗಳ ವಿರುದ್ಧ ಹಾಗೂ ಅವನ್ನು ಪೋಷಿಸುತ್ತಿರುವ ಸಂಘ ಸಂಸ್ಥೆಗಳು ಮತ್ತು ಶ್ವಾನಪ್ರಿಯರ ವಿರುದ್ಧ ಸುಪ್ರೀಂ ಕೋರ್ಟ್‌ ಮಂಗಳವಾರ ಗರಂ ಆಗಿದೆ.

Read Full Story

07:00 AM (IST) Jan 14

ಭಾರತದ ಮೇಲೆ ಟ್ರಂಪ್‌ 25% ಇರಾನ್‌ ತೆರಿಗೆ!

ಇರಾನ್‌ ಮೇಲೆ ದಾಳಿ ಮಾಡುವುದಾಗಿ ಸುಳಿವು ನೀಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಇರಾನ್‌ ಜತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ಆಮದು ಸುಂಕ ಅಸ್ತ್ರ ಪ್ರಯೋಗಿಸಿದ್ದಾರೆ.

Read Full Story

06:54 AM (IST) Jan 14

ಸಹಾಯ ಬರುತ್ತಿದೆ, ಹೋರಾಟ ಬಿಡಬೇಡಿ - ಇರಾನಿಯರಿಗೆ ಟ್ರಂಪ್‌

ಇರಾನಿ ಸರ್ವಾಧಿಕಾರಿ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ದಂಗೆ ಎದ್ದಿರುವ ಜನತೆಯನ್ನು ಬೆಂಬಲಿಸಿ, ಇರಾನ್‌ ಮೇಲೆ ದಾಳಿಯ ಸುಳಿವು ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಂಗಳವಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ

Read Full Story

More Trending News