ಮೈಸೂರು: ಲಲಿತಾಭಿನಂದನ- ಕೆ.ಲಲಿತಾ ಜಿ.ಟಿ. ದೇವೇಗೌಡ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಕೆಲಕಾಲ ಭಾವುಕರಾದರು. ಪುತ್ರ ಶಾಸಕ ಹರೀಶ್ ಗೌಡ ಹೊರತುಪಡಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಭಾಗಿಯಾಗಿದ್ದರು.
ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಮಾತು ಆರಂಭಿಸುವ ಮುನ್ನವೇ ಗದ್ಗಿತರಾಗಿ ಕಣ್ಣೀರಿಟ್ಟರು. ಏನನ್ನೂ ನೆನೆದುಕೊಂಡು ಜಿ.ಟಿ. ದೇವೇಗೌಡರು ಬಿಕ್ಕಿ ಬಿಕ್ಕಿ ಅತ್ತರು, ಸಭಾಂಗಣದಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಯಿತು.
ಬೆಂಬಲಿಗರು ‘ಸದಾ ಕಾಲ ನಿಮ್ಮ ಜೊತೆಗಿರುತ್ತೇವೆ ವಿ ಅಣ್ಣಾ, ಅಳಬೇಡಿ’ ಎಂದು ಕೂಗಿದರು. ಸುಧಾರಿಸಿಕೊಂಡು ಮಾತನಾಡಿದ ಜಿ.ಟಿ. ದೇವೇಗೌಡರು, ನಾನು ಬಂಗಾರದ ಮನುಷ್ಯ ಸಿನೆಮಾ ನೋಡಿ ಅಳುತ್ತಿದ್ದೆ, ಅದರಿಂದ ಪ್ರೇರಣೆ ಪಡೆದು ಪ್ರಗತಿಪರ ಕೃಷಿಕನಾದೆ. ನನಗೆ 32 ವರ್ಷ ಇದ್ದಾಗ, ಲಲಿತಾಳಿಗೆ 16 ವರ್ಷ ಹೈಸ್ಕೂಲ್ ಓದುತ್ತಿದ್ದಳು. ದಲಿತ ಚೆಲುವಯ್ಯ ಹಾಗೂ ಲಿಂಗೇಗೌಡ ನನ್ನ ತಾಯಿಯ ಸೂಚನೆಯಂತೆ ಹುಡುಗಿ ನೋಡಿಕೊಂಡು ಬಂದಿದ್ದರು. ನಂತರ ಮದುವೆಯ ಬಳಿಕ ಅವಳು ಒಂದು ದಿನಾನು ಸುಖ ಪಟ್ಟಿಲ್ಲ ಎಂದು ಭಾವುಕರಾದರು.
07:53 PM (IST) Jun 13
Bigg Boss Ranjith: ಬಿಗ್ ಬಾಸ್ ರಂಜಿತ್ ಅವರ ಪತ್ನಿ ಮಾನಸಾ ಗೌಡಗೆ ಈ ಹಿಂದೆ ಮದುವೆಯಾಗಿ ಮಗು ಕೂಡ ಇದೆಯಂತೆ. ಈ ಹಿಂದೆ ಅಕ್ಕ ರಶ್ಮಿ ಜೊತೆಗಿನ ಜಗಳದಲ್ಲಿ ಈ ವಿಷಯ ಜಗಳ ಆಗಿತ್ತು. ಈಗ ರಂಜಿತ್ ಹಾಗೂ ಮಾನಸಾ ಅವರು ಸಂದರ್ಶನವೊಂದರಲ್ಲಿ ಹೆಂಡ್ತಿಗೆ ಎರಡನೇ ಮದುವೆ ಆಗಿರೋ ವಿಷಯವನ್ನು ಹೇಳಿದ್ದಾರೆ.
06:51 PM (IST) Jun 13
ಕಚೇರಿಗೆ ಸಮಸ್ಯೆ ಹೇಳಿ ಬರುವ ಸಾರ್ವಜನಿಕರಿಗೆ ಪಾಸಿಟೀವ್ ಆಗಿ ಸ್ವಂದಿಸಿ ಸಮಸ್ಯೆ ಪರಿಹರಿಸಬೇಕು. ಎಲ್ಲಾ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರರಿಬೇಕು ಎಂದು ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
06:49 PM (IST) Jun 13
India Jobs: ವರ್ಷಕ್ಕೆ 15 ಲಕ್ಷ ರೂಪಾಯಿ ಪ್ಯಾಕೇಜ್‌ನ MNC ಉದ್ಯೋಗ ಸಿಕ್ಕರೂ ಮಗನನ್ನು ಕೆಲಸಕ್ಕೆ ಕಳುಹಿಸದ ತಂದೆ, ಸರ್ಕಾರಿ ನೌಕರಿಗೆ ತಯಾರಿ ಮಾಡು ಎಂದು ಒತ್ತಾಯಿಸಿದ್ದಾರೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
06:22 PM (IST) Jun 13
ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಆಯೋಜಿಸಿರುವ ಪ್ರತಿಭಟನಾ ಹೋರಾಟಕ್ಕೆ ತಮಿಳಿಗರಿಗೆ ಆಹ್ವಾನ ನೀಡಿರುವ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ವಾರ್ನಿಂಗ್ ನೀಡಿದೆ, ಸಿಜೆಪಿಗೆ ಎಚ್ಚರಿಕೆ ನೀಡಿದ್ದೇಕೆ?
06:18 PM (IST) Jun 13
Chanakya Niti For Women: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯರು ಮನೆಯ ಮುಖ್ಯ ಬಾಗಿಲು ಅಥವಾ ಕಿಟಕಿಯ ಬಳಿ ಹೆಚ್ಚು ಹೊತ್ತು ನಿಲ್ಲಬಾರದು. ಯಾಕೆ ಹೀಗೆ ಹೇಳಿದ್ದಾರೆ? ಇದರಿಂದ ಕುಟುಂಬಕ್ಕೆ ಯಾವ ರೀತಿ ಸಮಸ್ಯೆ ಆಗಬಹುದು? ಇಲ್ಲಿದೆ ಮಾಹಿತಿ.
06:02 PM (IST) Jun 13
05:59 PM (IST) Jun 13
Chikkamagaluru: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿದ ಗಾಯಗೊಂಡ ಹುಲಿ ಕಳೆದ ನಾಲ್ಕು ದಿನಗಳಿಂದ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.
05:51 PM (IST) Jun 13
ಬೆಂಗಳೂರಿನ ಹಲೆವೆಡೆ ಮಳೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ ಮೂರು ಗಂಟೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿ ಸೂಚಿಸಿದೆ.
05:50 PM (IST) Jun 13
Geetha Kannada Serial Actress Sharmitha Gowda: ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಶರ್ಮಿತಾ ಗೌಡ ಅವರು ಪತಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಪತಿ ಯಾರು? ಏನು ಕೆಲಸ ಮಾಡುತ್ತಿದ್ದಾರೆ?
05:47 PM (IST) Jun 13
Energy Drink: ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ 18 ವರ್ಷದ ಯುವಕನ ಸಾವಿನ ಬಳಿಕ ಎನರ್ಜಿ ಡ್ರಿಂಕ್ ಸೇವನೆ ಕುರಿತು ಚರ್ಚೆ ಜೋರಾಗಿದೆ. ಅತಿಯಾದ ಸೇವನೆಯಿಂದ ಆರೋಗ್ಯ ಸಮಸ್ಯೆ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
05:38 PM (IST) Jun 13
05:32 PM (IST) Jun 13
Vajramuni Salary: ಕನ್ನಡದ ದಿಗ್ಗಜ ಖಳನಾಯಕ ವಜ್ರಮುನಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದರು? ಪುತ್ರ ವಿಶ್ವನಾಥ್ ವಜ್ರಮುನಿ ಸಂದರ್ಶನದಲ್ಲಿ ಹಂಚಿಕೊಂಡ ಅಪರೂಪದ ಮಾಹಿತಿ, ಅವರ ಜೀವನಶೈಲಿ ಮತ್ತು ಸಿನಿಮಾ ಪಯಣದ ವಿವರ ಇಲ್ಲಿದೆ.
05:31 PM (IST) Jun 13
ಇದು ಮೊದಲೇನಲ್ಲ. ಕಳೆದ 2021ರ ಮೇ ತಿಂಗಳಲ್ಲೂ ಸಹ ಇದೇ ರೀತಿ ಕಿಡಿಗೇಡಿಗಳು ಅವರ ಸಾವಿನ ವದಂತಿ ಹಬ್ಬಿಸಿ ವಿಕೃತ ಸುಖ ಅನುಭವಿಸಿದ್ದರು. ಪದೇ ಪದೇ ಹಿರಿಯ ನಟರ ಜೀವನದ ಜೊತೆ ಆಟವಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ಬೇಸರ ವ್ಯಕ್ತವಾಗುತ್ತಿದೆ. ಏಕೆ ಹೀಗೆ? ಈ ಸ್ಟೋರಿ ನೋಡಿ..
05:17 PM (IST) Jun 13
ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಕಲ್ಯಾಣಿ ಪಾತ್ರದಲ್ಲಿ ನಟಿಸುತ್ತಿರುವ ದಿವ್ಯಶ್ರೀ ಸುಳ್ಯ ಅವರು ಈಗ ಮಗಳನ್ನು ಏಕಾಂಗಿಯಾಗಿ ಸಾಕುತ್ತಿದ್ದಾರೆ. ಗಂಡನ ಅಕ್ರಮ ಸಂಬಂಧಕ್ಕೆ ಬೇಸರಗೊಂಡು ಡಿವೋರ್ಸ್ ತಗೊಂಡೆ ಎಂದು ಅವರು ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
04:48 PM (IST) Jun 13
04:15 PM (IST) Jun 13
Mruthyudevathe Review: ಅನಿರೀಕ್ಷಿತ ತಿರುವುಗಳು, ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹಾಗೂ ಮಹಿಳಾ ಶಕ್ತಿಯ ಸಂದೇಶ ಹೊಂದಿರುವ ಮೃತ್ಯುದೇವತೆ ಸಿನಿಮಾದ ಸಂಪೂರ್ಣ ವಿಮರ್ಶೆ. ಕಥೆ, ನಟನ, ನಿರ್ದೇಶನ ಮತ್ತು ಹೈಲೈಟ್ಸ್ ಓದಿ.
03:52 PM (IST) Jun 13
03:15 PM (IST) Jun 13
01:37 PM (IST) Jun 13
India vs Afghanistan 1st ODI: ಭಾರತ ಕ್ರಿಕೆಟ್ ತಂಡವು ಇಂದಿನಿಂದ ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸುತ್ತಿದೆ. ಇಂದಿನಿಂದ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಹೀಗಿರುವಾಗಲೇ ಮೊದಲ ಪಂದ್ಯ ನಡೆಯೋದೇ ಅನುಮಾನ ಎನಿಸಿದೆ.
01:29 PM (IST) Jun 13
Karna Serial Actress Bhavya Gowda: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ, ಬಣ್ಣದ ಲೋಕದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮದೇ ಆದ ಯುಟ್ಯೂಬ್ ಚಾನೆಲ್‌ನಲ್ಲಿ ಕರ್ಣ ಧಾರಾವಾಹಿ BTS ವಿಡಿಯೋ ಶೇರ್ ಮಾಡಿಕೊಂಡು, ಪೀರಿಯಡ್ಸ್ ದಿನ ಮಹಿಳಾ ಕಲಾವಿದರಿಗೆ ಆಗುವ ಕಷ್ಟದ ಬಗ್ಗೆ ಮಾತನಾಡಿದ್ದಾರೆ.
01:27 PM (IST) Jun 13
01:06 PM (IST) Jun 13
12:14 PM (IST) Jun 13
12:03 PM (IST) Jun 13
ರಾಜ್ಯಾದ್ಯಂತ ಜೂನ್ 13 ರಂದು ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆಯು ಕರಾವಳಿ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲೂ ಮಧ್ಯಾಹ್ನದ ನಂತರ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
11:39 AM (IST) Jun 13
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಅಪ್ರಾಪ್ತೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಶಿವಯೋಗಿ ಲೋಹಾರ್ ಅವರನ್ನು ಅಮಾನತುಗೊಳಿಸಲಾಗಿದೆ.
11:36 AM (IST) Jun 13
ಕಳೆದ ಒಂದು ತಿಂಗಳಿಂದಲೂ ಜೈಲಿನಲ್ಲಿ ಬಿಳಿ ಹಾಳೆ ಮತ್ತು ಪೆನ್ನು ಹಿಡಿದು ಕೂತಿರೋ ಪವಿತ್ರಾ ತಮ್ಮ ಆತ್ಮಚರಿತ್ರೆ ಬರೆಯುತ್ತಾ ಟೈಂ ಪಾಸ್ ಮಾಡುತ್ತಿದ್ದಾರಂತೆ. ‘ತಾನು ಯಾರು, ತನ್ನ ಬದುಕು ಹೇಗಿತ್ತು.? ತಾನು ಏನು ಮಾಡಿದ್ದೇನೆ ಎಂಬುದನ್ನೆಲ್ಲಾ ಅವರು ಬರೆಯುತ್ತಿದ್ದಾರೆ ಎನ್ನಲಾಗಿದೆ.
11:18 AM (IST) Jun 13
Karnataka Weather Alert: ಕೆ: ಜೂನ್ 13 ರಂದು ಬೆಂಗಳೂರಿನಲ್ಲಿ ಮುಂಗಾರು ಚುರುಕುಗೊಂಡಿದೆ.. ನಗರದಾದ್ಯಂತ ಸತತವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
11:09 AM (IST) Jun 13
2025ರಲ್ಲಿ ದರ್ಶನ್ ಪಾಲಿಗೆ ಹೇಗಿತ್ತು? ಸಿಹಿ ಹಾಗೂ ಕಹಿ ಎರಡೂ ಸಿಕ್ಕಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್, ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲುವಾಸದಲ್ಲಿ ಶತಕದಿನವನ್ನು ಪೂರೈಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ರು. ಆದ್ರೆ ಮುಂದೇನಾಯ್ತು?
11:05 AM (IST) Jun 13
10:42 AM (IST) Jun 13
ಹೂವಿನಹಡಗಲಿ: ಇಲ್ಲಿನ ಶ್ರೀಮತಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು(Soppina Kalamma Girls Government Pre-Graduate College) ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ದುಂಬಾಲು ಬಿದ್ದಿದ್ದಾರೆ. 565 ಬಾಲಕಿಯರು ದಾಖಲಾಗಿದ್ದಾರೆ.
10:23 AM (IST) Jun 13
10:21 AM (IST) Jun 13
10:10 AM (IST) Jun 13
ಸಂಸದ ಬಿ.ವೈ.ರಾಘವೇಂದ್ರ ಅವರು ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣ ಖಚಿತ ಎಂದು ಭರವಸೆ ನೀಡಿದ್ದಾರೆ. ₹3.93 ಕೋಟಿ ವೆಚ್ಚದ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಪಿಆರ್ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು.
09:37 AM (IST) Jun 13
09:28 AM (IST) Jun 13
09:22 AM (IST) Jun 13
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹಲವು ನಿರ್ದೇಶನಗಳನ್ನು ನೀಡುವ ಸಾಧ್ಯತೆ.
09:14 AM (IST) Jun 13
Urdu School: ವಿಜಯಪುರ ಜಿಲ್ಲೆಯ ನಾಗೂರ ಉರ್ದು ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ್ದಾರೆ. ಇದು ಶಾಲೆಯನ್ನು ಮುಚ್ಚುವ ಹುನ್ನಾರ ಎಂದು ಆರೋಪಿಸಿದ್ದಾರೆ.
09:06 AM (IST) Jun 13
ಸಾಗರ ತಾಲೂಕಿನ ಪಡವಗೋಡು ಗ್ರಾಮದಲ್ಲಿ, ಆಡಳಿತದ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು ರೈತ ಸಂಘದ ಸಹಯೋಗದೊಂದಿಗೆ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿದ್ದಾರೆ. ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಜೆಸಿಬಿ, ಟಿಪ್ಪರ್ ಬಳಸಿ ಶ್ರಮದಾನದ ಮೂಲಕ ರಸ್ತೆ ಅಭಿವೃದ್ಧಿಪಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
08:52 AM (IST) Jun 13
ಮಳೆಗಾಲದಲ್ಲಿ ಜಲಾವೃತವಾಗುವ 10 ಪ್ರಮುಖ ಪ್ರದೇಶಗಳಲ್ಲಿ ತಕ್ಷಣದಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ತಡೆ ಬನ್ನೇರುಘಟ್ಟ ರಸ್ತೆಯ ಸಂಚಾರ ದಟ್ಟಣೆ ನಿಯಂತ್ರಣದ ಬಗ್ಗೆಯೂ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
08:37 AM (IST) Jun 13
40 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಮಾರಾಟ ಮಾಡಿರುವ ಭೂ ಹಗರಣ ಬೆಳಕಿಗೆ ಬಂದಿದೆ. ತಾಲೂಕಾಡಳಿತವು ಈ ವಂಚನೆಯನ್ನು ಪತ್ತೆಹಚ್ಚಿದ್ದು, ನೋಂದಣಿ ಪ್ರಕ್ರಿಯೆಯನ್ನು ತಡೆಹಿಡಿದು ತನಿಖೆ ಆರಂಭಿಸಿದೆ.