LIVE NOW
Published : Jul 12, 2026, 06:39 AM ISTUpdated : Jul 12, 2026, 09:32 PM IST

Karnataka News Live: ಶರ್ಮಿಳಾ ಮದುವೆ ಸಂಭ್ರಮಕ್ಕೆ ರಮ್ಯಾ ಸ್ಪೆಷಲ್ ಎಂಟ್ರಿ - ಮೋಹಕ ತಾರೆ ಲುಕ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಸಾರಾಂಶ

ಗದಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಳೆದ 40 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಕಾಣೆ ಆಗಿದ್ದರಿಂದಲೇ ರಾಜ್ಯದ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ರಾಜ್ಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲೇ ಮಗ್ನರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶೇಷ ಮತದಾರರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಕುರಿತು ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಕಷ್ಟದ ಪರಿಸ್ಥಿತಿಯಲ್ಲೂ ಬಿಎಲ್‌ಒಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಮತದಾರರ ನೋಂದಣಿ ನಮೂನೆಗಳು ಮನೆ ಮನೆಗೆ ತಲುಪುವಂತೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು.

09:32 PM (IST) Jul 12

ಶರ್ಮಿಳಾ ಮದುವೆ ಸಂಭ್ರಮಕ್ಕೆ ರಮ್ಯಾ ಸ್ಪೆಷಲ್ ಎಂಟ್ರಿ - ಮೋಹಕ ತಾರೆ ಲುಕ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಬಹುಕಾಲದ ಸ್ನೇಹಿತೆಯಾಗಿರುವ ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ, ಶರ್ಮಿಳಾ ಅವರ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ಕಾರ್ಯಕ್ರಮದ ಪ್ರತಿಯೊಂದು ಕ್ಷಣವನ್ನು ಆನಂದಿಸಿದರು.

Read Full Story

09:09 PM (IST) Jul 12

S Janaki - Trisha - ನಟಿ ತ್ರಿಷಾ ಜೊತೆ ಎಸ್ ಜಾನಕಿಗೆ ಸ್ಪೆಷಲ್ ನಂಟು; ಆ '96'ರಲ್ಲಿದೆ ಅಪರೂಪದ ನೆನಪು!

ಜಾನಕಮ್ಮನ ಧ್ವನಿ ಹೇಗೆ ಭಾಷೆಯ ಗಡಿ ದಾಟಿದೆಯೋ, ಹಾಗೆಯೇ ಅವರ ಆ ಒಂದು ಅಪರೂಪದ ನಟನೆಯ ದೃಶ್ಯವು ಕೂಡ ಅವರ ಅಭಿಮಾನಿಗಳ ಪಾಲಿಗೆ ಎಂದಿಗೂ ಮರೆಯಲಾಗದ ‘ಮಾಸ್ಟರ್ ಪೀಸ್’. ಜಾನಕಮ್ಮ, ನೀವು ಹಾಡಿನ ಮೂಲಕ ಸದಾ ನಮ್ಮ ಜೊತೆ ಇರುತ್ತೀರಿ. ಆ ಚಿತ್ರದ ಆ ದೃಶ್ಯದ ಮೂಲಕವೂ ಕೂಡ

Read Full Story

08:33 PM (IST) Jul 12

Ladies & Gentleman ಯಶ್ WhatsApp DPಯಲ್ಲಿ ಏನಿದೆ? ವೈರಲ್ ಫೋಟೋದಲ್ಲಿ ಸಿಕ್ತು ಟಾಕ್ಸಿಕ್‌ ಸರ್ಪ್ರೈಸ್

Yash WhatsApp DP: ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಇದೇ ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

Read Full Story

08:15 PM (IST) Jul 12

S Janaki - ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

ದೇಹಕ್ಕೆ ಸಾವಿರಬಹುದು, ಆದರೆ ದೈವದತ್ತವಾದ ಆ ಧ್ವನಿಗೆ ಸಾವಿಲ್ಲ. ಕಣಿಯನಹುಂಡಿಯ ಮಣ್ಣಿನಲ್ಲಿ ಜಾನಕಮ್ಮ ಲೀನವಾಗಿದ್ದರೂ, ಅವರು ಹಾಡಿದ ‘ಬಾನಿಗೊಂದು ಎಲ್ಲೆ ಎಲ್ಲಿದೆ’, ‘ಗಗನವು ಎಲ್ಲೋ ಭೂಮಿಯು ಎಲ್ಲೋ’ ಸೇರಿದಂತೆ ಸಾವಿರಾರು ಹಾಡುಗಳು ಗಾಳಿಯಲ್ಲಿ ತೇಲಿಬರುತ್ತಲೇ ಇರುತ್ತವೆ.

Read Full Story

08:13 PM (IST) Jul 12

ಐಸಿಯುನಲ್ಲಿದ್ದ ತಾಯಿಯನ್ನು ನೋಡಲು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4000 ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕ!

ತನ್ನ ತಾಯಿ ಮೆಟ್ಟಿಲುಗಳಿಂದ ಬಿದ್ದು ಐಸಿಯುನಲ್ಲಿದ್ದಾರೆ ಎಂದು ತಿಳಿದ ತಕ್ಷಣ, ಅಂಕಿತ್ ಪಾಂಡೆ ಎಂಬ ಗ್ರಾಹಕರು ಜೊಮ್ಯಾಟೊ ಡೆಲಿವರಿ ಬಾಯ್‌ಗೆ ₹4,000 ವೆಚ್ಚದ ತುರ್ತು ವಿಮಾನ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಾಯಿ ಗುಣಮುಖರಾದ ನಂತರ ಸವಾರ ಹಣವನ್ನು ಮರಳಿ ನೀಡಿದರೂ, ಅಂಕಿತ್ ಅದನ್ನು ನಿರಾಕರಿಸಿದ್ದಾರೆ. ಈ ಇಬ್ಬರ ಪ್ರಾಮಾಣಿಕತೆಯ ಕಥೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Read Full Story

07:33 PM (IST) Jul 12

S Janaki - SPB - ಎಸ್‌ಪಿಬಿ ನಿಧನರಾದಾಗ ಎಸ್ ಜಾನಕಿ ಒಂದು ಪತ್ರ ಬರೆದಿದ್ದರು; ಆ ವೈರಲ್ ಲೆಟರ್‌ನಲ್ಲಿ ಏನಿತ್ತು?

ಎಸ್ ಜಾನಕಿ ಮತ್ತು ಎಸ್‌ಪಿಬಿ ಕಾಂಬಿನೇಷನ್ ಅಂದರೆ ಅದು ಕೇವಲ ಹಾಡಲ್ಲ, ಅದೊಂದು ಎಮೋಷನ್. ಕನ್ನಡದ ‘ಜೋತೆಯಲಿ ಜೊತೆ ಜೊತೆಯಲಿ’ ಇರಲಿ ಅಥವಾ ತೆಲುಗು-ತಮಿಳಿನ ನೂರಾರು ಮೆಲೋಡಿಗಳಿರಲಿ, ಅವರಿಬ್ಬರ ಧ್ವನಿ ಒಂದಾದರೆ ಅಲ್ಲಿ ಸ್ವರ್ಗವೇ ಧರೆಗಿಳಿಯುತ್ತಿತ್ತು.

Read Full Story

07:13 PM (IST) Jul 12

ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಕುಟುಂಬ ಕಲಹ - ಎರಡು ತೊಲೆ ಬಂಗಾರಕ್ಕಾಗಿ ಅತ್ತೆಯ ಜೀವ ತೆಗೆದ ಅಳಿಯ

Bengaluru Family Dispute: ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೇಡಿ ಅಗ್ರಹಾರದಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ.

Read Full Story

06:29 PM (IST) Jul 12

ShivaRajkumar Birthday - ಶಿವಣ್ಣಗೆ ರಿಷಬ್, ಡಾಲಿ, ಜಾನಿ ಮಾಸ್ಟರ್ ಹೇಳಿದ್ದೇನು? ಪೋಸ್ಟ್‌ಗಳು ವೈರಲ್!

ಶಿವರಾಜ್‌ಕುಮಾರ್ ಅವರಿಗೆ ಇಂದು 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ಶಿವಣ್ಣನಿಗೆ ಪ್ರೀತಿಯ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

Read Full Story

06:13 PM (IST) Jul 12

Samantha - 'ನಾವು 100 ಕೋಟಿ ಮಾಡಿದ್ವಿ!' - ಸಮಂತಾ ಕ್ಯೂಟ್ ರಿಯಾಕ್ಷನ್ ವಿಡಿಯೋ ವೈರಲ್

ತಮ್ಮ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ ಎಂದು ನಿರ್ಮಾಪಕ ರಾಜ್ ನಿಡಿಮೋರು ತಿಳಿಸಿದಾಗ, ನಟಿ ಸಮಂತಾ ರುತ್ ಪ್ರಭು ಸಖತ್ ಕ್ಯೂಟ್ ಆಗಿ ರಿಯಾಕ್ಟ್ ಮಾಡಿದ್ದಾರೆ.

Read Full Story

06:02 PM (IST) Jul 12

Shiva Rajkumar Birthday - ಅಭಿಮಾನಿಗಳಿಗೆ ‘ಆರೋಗ್ಯ ಭಾಗ್ಯ’ದ ಜೊತೆ 4 ಹೊಸ ಸಿನಿಮಾಗಳ ಪೋಸ್ಟರ್‌ ರಿಲೀಸ್‌

Dr Shiva Rajkumar Birthday ಅಂಗವಾಗಿ ಸಿನಿಪ್ರೇಕ್ಷಕರಿಗೆ ಕೊಡುಗೆಗಳ ಮಹಾಪೂರವೇ ಹರಿದುಬಂದಿದೆ. ಒಂದು ಕಡೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ಹೆಲ್ತ್ ಕಾರ್ಡ್ ಬಿಡುಗಡೆಯಾಗಿದ್ದರೆ, ಇನ್ನೊಂದೆಡೆ ಬಹುನಿರೀಕ್ಷಿತ ಸಿನಿಮಾಗಳ ಟೀಸರ್, ಪೋಸ್ಟರ್, ಪ್ರೋಮೋಗಳು ರಿಲೀಸ್ ಆಗಿವೆ.

Read Full Story

05:50 PM (IST) Jul 12

ಎಸ್. ಜಾನಕಿ ಕುಟುಂಬದ ಬಗ್ಗೆ ಯಾರಿಗೂ ತಿಳಿಯದ ಸತ್ಯಗಳು.. ಆ ದುರಂತದ ಬಳಿಕ ತೆಗೆದುಕೊಂಡ ನಿರ್ಧಾರವೇನು?

ಖ್ಯಾತ ಗಾಯಕಿ ಎಸ್. ಜಾನಕಿ ಅವರು ತಮ್ಮ ಕುಟುಂಬದ ಬಗ್ಗೆ ಹೆಚ್ಚು ಮಾತನಾಡಿದ್ದೇ ಇಲ್ಲ. ಮೂವತ್ತು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿದ್ದ ಅವರು, ಇತ್ತೀಚೆಗೆ ತಮ್ಮ ಮಗನನ್ನೂ ಕಳೆದುಕೊಂಡರು. ಈ ದುರಂತಗಳ ಬಳಿಕ ಅವರ ಕುಟುಂಬದಲ್ಲಿ ಈಗ ಉಳಿದಿರುವುದು ಇವರೇ.

Read Full Story

05:38 PM (IST) Jul 12

ಗಾನಕೋಗಿಲೆ ಎಸ್‌.ಜಾನಕಿ ಯುಗಾಂತ್ಯ.. ಕೊನೆಯ ಆಸೆಯಂತೆ ನೆರವೇರಿದ ಅಂತ್ಯಕ್ರಿಯೆ..

ಗಾನಕೋಗಿಲೆ ಎಸ್‌.ಜಾನಕಿ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಕೊನೆಯ ಆಸೆಯಂತೆ, ಮೈಸೂರಿನ ಕಣಿಯನಹುಂಡಿಯಲ್ಲಿರುವ ಸಾಕುಮಗ ನವೀನ್‌ ಅವರ ‘ನವೀನ್ ಫಾರ್ಮ್ ಹೌಸ್’ನಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಮೂಲಕ ಆರು ದಶಕಗಳ ಸಂಗೀತ ಪಯಣ ಅಂತ್ಯಗೊಂಡಿದೆ.

Read Full Story

05:35 PM (IST) Jul 12

'ನನಗೆ ಇನ್ನು ಯಾವುದೇ ಆಸೆಗಳಿಲ್ಲ' - ಎಸ್‌. ಜಾನಕಿ ಕೊನೆಯ ಹಂಬಲ ಏನಿತ್ತು ಗೊತ್ತಾ?

ಸಾವಿರಾರು ಹಾಡುಗಳನ್ನು ಹಾಡಿ, ಅಸಂಖ್ಯಾತ ಪ್ರಶಸ್ತಿಗಳು ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದ ಗಾಯಕಿ ಎಸ್. ಜಾನಕಿ ಅವರ ಕೊನೆಯ ಆಸೆ ಏನಿತ್ತು ಗೊತ್ತಾ? ಇದನ್ನು ಕೇಳಿದರೆ ಖಂಡಿತಾ ಅಚ್ಚರಿಯಾಗುತ್ತದೆ.

Read Full Story

05:20 PM (IST) Jul 12

ಫೋಟೋದಲ್ಲೇ ಶುರುವಾದ ಪ್ರೀತಿ.. ಜಾನಕಮ್ಮ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಈ ಕಥೆ ಸಿನಿಮಾಕ್ಕಿಂತ ರೋಚಕ!

S Janaki Love Story: ತಮ್ಮ ಜೀವನದ ಮಧುರ ನೆನಪುಗಳನ್ನು ಹಂಚಿಕೊಂಡಿದ್ದ ಹಳೆಯ ಸಂದರ್ಶನವೊಂದರಲ್ಲಿ, ಎಸ್. ಜಾನಕಿ ಅವರು ತಮ್ಮ ವಿವಾಹದ ಹಿಂದಿನ ಆಸಕ್ತಿದಾಯಕ ಕಥೆಯನ್ನು ಹೇಳಿಕೊಂಡಿದ್ದರು.

Read Full Story

05:12 PM (IST) Jul 12

S Janaki - 48,000 ಹಾಡು ಹಾಡಿರೋ ಎಸ್ ಜಾನಕಿ ಅದೊಂದು ಹಾಡಿಗೆ ಮಾತ್ರ 14 ರೀಟೇಕ್ ತೆಗೆದುಕೊಂಡ್ರಂತೆ!

ಮೈಸೂರಿನಲ್ಲಿ ತಮ್ಮ ಕೊನೆಯುಸಿರೆಳೆದ ಜಾನಕಿ ಅಮ್ಮ ಅವರು, ಎಸ್‌ಪಿಬಿ ನಂತರ ಸಂಗೀತ ಲೋಕದ ಮತ್ತೊಂದು ದೊಡ್ಡ ಕಂಬವನ್ನು ಉರುಳಿಸಿದಂತಾಗಿದೆ. ರಾಜಶೇಖರನ್ ಮತ್ತು ರೋಹಿಣಿ ಅಭಿನಯದ ಸಿನಿಮಾದ ಆ ಹಾಡು ಹೇಗೆ ಇತಿಹಾಸ ಸೃಷ್ಟಿಸಿತೋ, ಹಾಗೆಯೇ ಜಾನಕಮ್ಮನವರ ಜೀವನ ಕೂಡ ಒಂದು ಸುದೀರ್ಘ ಇತಿಹಾಸ.

Read Full Story

05:05 PM (IST) Jul 12

ಎಸ್. ಜಾನಕಿ ಅಗಲಿಕೆಗೆ ಕಂಬನಿ ಮಿಡಿದ ಕಲಾವಿದರು - ವಿಜಯ್ ಪ್ರಕಾಶ್, ಜಯಮಾಲಾ, ತಾರಾ ಭಾವುಕ

S Janaki Passed Away: ಗಾನಕೋಗಿಲೆ ಜಾನಕಿ ಅಮ್ಮನ ಅಂತಿಮ ದರ್ಶನ ಪಡೆದ ಖ್ಯಾತ ಗಾಯಕ ವಿಜಯ್ ಪ್ರಕಾಶ್, ನಟಿ ಜಯಮಾಲಾ ಹಾಗೂ ನಟಿ ತಾರಾ ಭಾವುಕರಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Read Full Story

04:46 PM (IST) Jul 12

ಎಸ್‌. ಜಾನಕಿ ನಿಧನ - 'ನಮ್ಮ ಚಿತ್ರರಂಗದ ತಾಯಿ' ಎಂದು ಕಣ್ಣೀರಿಟ್ಟ ಹಿರಿಯ ನಟ ಶ್ರೀನಾಥ್

ದಕ್ಷಿಣ ಭಾರತದ ಗಾನಕೋಗಿಲೆ, ಪದ್ಮಭೂಷಣ್ ಎಸ್. ಜಾನಕಿ ಅವರ ನಿಧನದಿಂದ ಇಡೀ ಭಾರತೀಯ ಚಿತ್ರರಂಗವೇ ಶೋಕ ಸಾಗರದಲ್ಲಿ ಮುಳುಗಿದೆ. ಈ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್ ಭಾವುಕವಾಗಿ ಜಾನಕಿ ಅಮ್ಮನನ್ನು ಸ್ಮರಿಸಿದ್ದಾರೆ.

Read Full Story

04:30 PM (IST) Jul 12

ಶಿವಣ್ಣ ಬದುಕಿನ ಅತಿದೊಡ್ಡ ಹೋರಾಟದ ಕಥೆ - ಅಭಿಮಾನಿಗಳಿಗೆ ಕಣ್ಣೀರು ತರಿಸಿದ 'ಸರ್ವೈವರ್' ಪ್ರೋಮೋ

ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ಶಿವರಾಜ್‌ಕುಮಾರ್, ಮಧು ಬಂಗಾರಪ್ಪ ಹಾಗೂ ನಿವೇದಿತಾ ಶಿವರಾಜ್‌ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Read Full Story

03:48 PM (IST) Jul 12

ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದಿದ್ದ ದ್ವಾರಕನಾಥ್ ಗುರೂಜಿಯಿಂದ ಮತ್ತೊಂದು ಭವಿಷ್ಯ

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ವರ್ಷಗಳ ಮೊದಲೇ ಹೇಳಿದ್ದ ದ್ವಾರಕನಾಥ ಗುರೂಜಿ ಇದೀಗ ಸಿಎಂ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. ಮಾತುಗಳ ನಡುವೆ ದ್ವಾರಕನಾಥ್ ಗುರೂಜಿ ಭಾವುಕರಾಗಿದ್ದಾರೆ.

Read Full Story

03:10 PM (IST) Jul 12

S Janaki - Modi - ಮೇರು ಗಾಯಕಿ ಎಸ್ ಜಾನಕಿ ಅಗಲಿಕೆಗೆ ದೇಶಾದ್ಯಂತ ಕಂಬನಿ; ಪ್ರಧಾನಿ ಮೋದಿ ನುಡಿ ನಮನ

ಆಂಧ್ರದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮ, 1957ರಲ್ಲಿ ಬೆಳ್ಳಿತೆರೆಯ ಹಿನ್ನೆಲೆ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದರು. ಅಪ್ಪಾಜಿ ಡಾ. ರಾಜ್‌ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರ ಸಿನಿಮಾಗಳಿಗೆ ಇವರದ್ದೇ ಧ್ವನಿ. 2016ರಲ್ಲಿ ಅವರು ಹಾಡಿದ ಮಲಯಾಳಂನ ‘ಅಮ್ಮಪೂವಿನುಮ್’ ಹಾಡು ಅವರ ವೃತ್ತಿಜೀವನದ ಕೊನೆಯ ಗೀತೆಯಾಗಿದೆ.

Read Full Story

03:07 PM (IST) Jul 12

"ಹೆಣ್ಣು ಮಕ್ಕಳು ಅಂದ್ರೆ ಹೊರೆನಾ?" - ತಾಯಿಯ ಸಾಂಪ್ರದಾಯಿಕ ಯೋಚನೆಗೆ ಕನ್ನಡಿ ಹಿಡಿದ ಮಗಳ ವೈರಲ್ ವಿಡಿಯೋ!

ಮದುವೆ ಹಾಗೂ ಹೆಣ್ಣುಮಕ್ಕಳ ಭವಿಷ್ಯದ ಕುರಿತು ಕಂಟೆಂಟ್ ಕ್ರಿಯೇಟರ್ ಖುಷಿ ರೈ ಮತ್ತು ಅವರ ತಾಯಿಯ ನಡುವೆ ನಡೆದ ಬಿಸಿಬಿಸಿ ವಾದದ ವಿಡಿಯೋ ವೈರಲ್ ಆಗಿದೆ. "ಹೆಣ್ಣುಮಕ್ಕಳು ಹೆತ್ತವರಿಗೆ ಹೊರೆ (ಬೋಜ್)" ಎಂಬ ತಾಯಿಯ ಪಿತೃಪ್ರಧಾನ ಆಲೋಚನೆಗೆ ಮಗಳು ಸ್ಥಳದಲ್ಲೇ ಖಡಕ್ ಸವಾಲು ಹಾಕಿದ್ದಾಳೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ನೆಟ್ಟಿಗರು ತಾಯಿಯ ನಡವಳಿಕೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

Read Full Story

02:51 PM (IST) Jul 12

'ನೋಣಗಳಲ್ಲಿ ಎರಡು ರೀತಿ..' ಆರೆಸ್ಸೆಸ್ ಟೀಕಿಸಿದ ಖರ್ಗೆ, ಬಿಕೆ ಹರಿಪ್ರಸಾದ್ ವಿರುದ್ಧ ಕನ್ಹೇರಿ ಶ್ರೀ ಕಿಡಿ

ಆರ್‌ಎಸ್‌ಎಸ್‌ ಕುರಿತ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗಳಿಗೆ ಕನ್ಹೇರಿ ಶ್ರೀಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆರ್‌ಎಸ್‌ಎಸ್‌ ಒಂದು ರಾಷ್ಟ್ರಭಕ್ತಿ ಸಂಘಟನೆ, ಪ್ರಚಾರಕ್ಕಾಗಿ ಕೆಲವರು ಅದರ ವಿರುದ್ಧ ಮಾತನಾಡುತ್ತಾರೆ ಎಂದು ಕಿಡಿ.

Read Full Story

02:27 PM (IST) Jul 12

Rakky Movie Review - ಸಾಂಗ್ ಮೂಲಕ ಸಖತ್ ಸೌಂಡ್ ಮಾಡಿದ್ದ 'ರಕ್ಕಿ' ಸಿನಿಮಾಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ?

ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂಥದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಈಗಾಗಲೇ ಕನ್ನಡದಲ್ಲಿ 'ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು' ಬಂದಿವೆ. ಆದರೆ ಇದರಲ್ಲಿ ಕೌಟುಂಬಿಕ ಕಥೆಯನ್ನು ರೌಡಿಸಂ ಟಚ್ ಕೊಟ್ಟು ಹೇಳಿದ್ದಾರೆ.

Read Full Story

01:59 PM (IST) Jul 12

10 ಸಾವಿರ ಸ್ಟೈಪೆಂಡ್ ಆಸೆ ತೋರಿಸಿ 5 ಸಾವಿರ ಕೊಟ್ಟರು! ರೆಡ್ಡಿಟ್‌ನಲ್ಲಿ ವೈರಲ್ ಆಯ್ತು ಇಂಟರ್ನ್ ಅಳಲು!

ಒಬ್ಬ ಮಾರ್ಕೆಟಿಂಗ್ ಇಂಟರ್ನ್, ತನಗೆ ಮಾತುಕೊಟ್ಟಂತೆ 10,000 ರೂಪಾಯಿ ಸ್ಟೈಪೆಂಡ್ ನೀಡದೆ, ಕೇವಲ 5,000 ರೂಪಾಯಿ ನೀಡಿ, ನಿಗದಿಗಿಂತ ಹೆಚ್ಚು ಗಂಟೆಗಳ ಕಾಲ ದುಡಿಸಿಕೊಂಡು ಶೋಷಣೆ ಮಾಡಲಾಗಿದೆ ಎಂದು ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇಂತಹ ಶೋಷಣೆಯುಳ್ಳ ಕೆಲಸವನ್ನು ತಕ್ಷಣವೇ ಬಿಟ್ಟುಬಿಡುವಂತೆ ಬಳಕೆದಾರರು ವಿದ್ಯಾರ್ಥಿಗೆ ಸಲಹೆ ನೀಡಿದ್ದಾರೆ.

Read Full Story

01:19 PM (IST) Jul 12

Hamsalekha - 'ಜಾನಕಿ ಅಂದ್ರೆ ಸೀತೆ.. ಸೀತೆ ಅಂದ್ರೆ ಗೀತೆ'- ಎಸ್ ಜಾನಕಿ ಸ್ಮಾರಕ ನಿರ್ಮಾಣ ಆಗಬೇಕು - ಹಂಸಲೇಖ ಭಾವುಕ ಮನವಿ

ನಮ್ಮನ್ನಗಲಿರುವ ಎಸ್ ಜಾನಕಿಯವರು, ಸಂಗೀತ ನಿರ್ದೇಶಕ ಇಳಯರಾಜ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರು ಹಾಗೂ ಸಾಹಿತಿಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಡಾ. ರಾಜಕುಮಾರ್ ಜೊತೆ ಅತಿ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ.

Read Full Story

12:43 PM (IST) Jul 12

ವಾರಿಜಾಶ್ರೀ ಜೊತೆ ಮದುವೆ; 16 ವರ್ಷದ Age Gap ಬಗ್ಗೆ ಫಸ್ಟ್‌ ಟೈಮ್‌ ಮಾತನಾಡಿದ Singer Raghu Dixit

ಗ್ರ್ಯಾಮಿ ನಾಮಿಮೇಟೆಡ್‌ ಸಿಂಗರ್‌ ವಾರಿಜಾಶ್ರೀ ಅವರು 2025 ರಲ್ಲಿ ಗಾಯಕ ರಘು ದೀಕ್ಷಿತ್‌ ಜೊತೆ ಮದುವೆಯಾದರು. ಆಗ ರಘುಗೆ 50 ವರ್ಷ ವಯಸ್ಸಾದರೆ, ವಾರಿಜಾಶ್ರೀಗೆ 34 ಆಗಿತ್ತು. 16 ವರ್ಷಗಳ ನಡುವಿನ ವಯಸ್ಸಿನ ಅಂತರದ ಬಗ್ಗೆ ರಘು ದೀಕ್ಷಿತ್‌ ಅವರು ‘ಹಿಂದುಸ್ತಾನ್‌ ಟೈಮ್ಸ್‌’ಗೆ ಸಂದರ್ಶನ ನೀಡಿದ್ದಾರೆ.

 

Read Full Story

12:35 PM (IST) Jul 12

ಇವರು ಯಾರು ಅಂತ ಗೊತ್ತಾಯ್ತಾ? ಮದುವೆ, ಹೆಂಡ್ತಿ ಬಗ್ಗೆ ಅಜ್ಜನ ಹೃದಯ ಸ್ಪರ್ಶಿ ಮಾತು

ಬೆಂಗಳೂರಿನ 68 ವರ್ಷದ ಮೆಕ್ಯಾನಿಕಲ್ ಇಂಜಿನಿಯರ್, ಭಾರತೀಯ ರೈಲ್ವೆಯ ಮಾಜಿ ಉದ್ಯೋಗಿಯಾಗಿದ್ದು, ಸದ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡುತ್ತಾ ಸರಳ ಜೀವನ ನಡೆಸುತ್ತಿದ್ದಾರೆ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರ ಹೃದಯಸ್ಪರ್ಶಿ ಕಥೆ ವೈರಲ್ ಆಗಿದೆ.

Read Full Story

11:27 AM (IST) Jul 12

ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ

ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.

Read Full Story

11:06 AM (IST) Jul 12

Shiva Rajkumar Birthday - 'ಕರುನಾಡ ಚಕ್ರವರ್ತಿ' ಬರ್ತ್‌ಡೇ.. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಉಡುಗೊರೆ!

ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್ ಅವರ ಈ ಬಾರಿಯ ಹುಟ್ಟುಹಬ್ಬ ಕೇವಲ ಸಿನಿಮೀಯ ಮೆರುಗಿನಿಂದಷ್ಟೇ ಅಲ್ಲದೆ, ಮಾನವೀಯತೆಯ ಮಹೋತ್ಸವವಾಗಿಯೂ ಚಿರಕಾಲ ಉಳಿಯಲಿದೆ. ಹ್ಯಾಪಿ ಬರ್ತ್‌ಡೇ ಶಿವಣ್ಣ! ನೀವು ಹೀಗೆ ನಗುನಗುತ ನೂರ ಕಾಲ ಬಾಳಲಿ ಎಂಬುದು ಸಮಸ್ತ ಕನ್ನಡಿಗರ ಹಾರೈಕೆ.

Read Full Story

10:15 AM (IST) Jul 12

Vaibhav Sooryavanshi ಗೆ ಮುಚ್ಚಿತಾ ಟೀಂ ಇಂಡಿಯಾ ಬಾಗಿಲು? ಸೋಲಿನ ಹೊರತಾಗಿಯೂ ಈ ಆಟಗಾರನನ್ನು ಕೊಂಡಾಡಿದ ಶ್ರೇಯಸ್ ಅಯ್ಯರ್!

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 4-0 ಅಂತರದಲ್ಲಿ ಹೀನಾಯವಾಗಿ ಸೋತಿದೆ. ಈ ಸೋಲಿನ ಬಳಿಕ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟ ನಿರ್ಧಾರವನ್ನು ನಾಯಕ ಶ್ರೇಯಸ್ ಅಯ್ಯರ್ ಸಮರ್ಥಿಸಿಕೊಂಡಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ಬಲಗೈ ಬ್ಯಾಟ್ಸ್‌ಮನ್ ಓಪನಿಂಗ್ ಮಾಡಬೇಕೆಂಬ ಕಾರಣಕ್ಕೆ ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

09:46 AM (IST) Jul 12

ಮೈಸೂರು ದಸರಾದಲ್ಲಿ ಕಂಬಳ ಯಾಕೆ ಬೇಡ? ಸ್ಪಷ್ಟಪಡಿಸಿದ ಸಂಸದ ಯದುವೀರ್ ಒಡೆಯರ್! ಹೇಳಿದ್ದೇನು?

ದಸರಾ(Mysuru dasara 2026)ದಲ್ಲಿ ಕಂಬಳ‌ ಬೇಡ ಎಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ತಿಳಿಸಿದರು.

Read Full Story

09:00 AM (IST) Jul 12

ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ

ಕೇಂದ್ರ ಸಚಿವ ವಿ.ಸೋಮಣ್ಣ ಅವರು ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ದಾಬಸ್ ಪೇಟೆ-ಮಧುಗಿರಿ-ಬಳ್ಳಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲು ಮನವಿ ಮಾಡಿದ್ದಾರೆ. ಇದರೊಂದಿಗೆ ಶಿರಾ-ಮಧುಗಿರಿ ಚತುಷ್ಪಥ ರಸ್ತೆ ಕಾಮಗಾರಿ ಮತ್ತು ಮಧುಗಿರಿಯಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪಿಸುವ ಯೋಜನೆಗಳನ್ನು ಘೋಷಿಸಿದ್ದು, ಈ ಭಾಗದ ಆರ್ಥಿಕತೆಗೆ ಉತ್ತೇಜನ ನೀಡುವುದಾಗಿ ತಿಳಿಸಿದ್ದಾರೆ.
Read Full Story

08:51 AM (IST) Jul 12

0-4 ಅಂತರದ ಹೀನಾಯ ಸೋಲು -ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಗೂಬೆ ಕೂರಿಸಿದ್ದು ಯಾರ ಮೇಲೆ?

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸಿರೀಸ್‌ನಲ್ಲಿ ಟೀಂ ಇಂಡಿಯಾ ಒಂದೇ ಒಂದು ಮ್ಯಾಚ್ ಗೆಲ್ಲಲಿಲ್ಲ. ಸೋಲಿನ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ಭಾರೀ ನಿರಾಸೆಗೊಂಡಿದ್ದಾರೆ. ಇನ್ನು ಸೋಲಿಗೆ ನಾಯಕ ಅಯ್ಯರ್, ಮೈದಾನದ ಮೇಲೆ ಗೂಬೆ ಕೂರಿಸಿದ್ದಾರೆ.

Read Full Story

07:53 AM (IST) Jul 12

ಎಸ್. ಜಾನಕಿ ಕೊನೆಯಾಸೆ & ಕೊನೆ ಕ್ಷಣ ಹೇಗಿತ್ತು? ಕೇರ್‌ಟೇಕರ್ ನವೀನ್ ಬಿಚ್ಚಿಟ್ಟ ರಹಸ್ಯ

ಗಾಯಕಿ ಎಸ್. ಜಾನಕಿ ಅವರ ಕೇರ್‌ಟೇಕರ್ ನವೀನ್, ಅವರ ಅಂತಿಮ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜಾನಕಿಯವರಿಗೆ ಮೈಸೂರಿನಲ್ಲೇ ಪ್ರಾಣ ಬಿಡುವ ಆಸೆಯಿತ್ತು ಮತ್ತು ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದರು ಎಂದು ನವೀನ್ ಬಹಿರಂಗಪಡಿಸಿದ್ದಾರೆ. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ.
Read Full Story

07:43 AM (IST) Jul 12

ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ.. ಅವರ ಹಾಡು ಕೇಳುವ ಕಾಲದಲ್ಲಿ ನಾವಿದ್ದೇವು ಅನ್ನುವುದೇ ಅದೃಷ್ಟ - - ಅನಂತನಾಗ್

ಹಿರಿಯ ನಟ ಅನಂತನಾಗ್ ಅವರು ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. 'ಬಯಲುದಾರಿ' ಚಿತ್ರದಿಂದ ಆರಂಭವಾದ ತಮ್ಮ ಪಯಣ, ತಮ್ಮ ನೂರಕ್ಕೂ ಹೆಚ್ಚು ಚಿತ್ರಗಳಿಗೆ ಜಾನಕಿ ಹಾಡಿರುವುದನ್ನು ನೆನೆದಿದ್ದಾರೆ. ಅವರ ದೈವಿಕ ವ್ಯಕ್ತಿತ್ವ, ಮಂತ್ರಮುಗ್ಧಗೊಳಿಸುವ ಗಾಯನ ಕೊಂಡಾಡಿದ್ದಾರೆ.

Read Full Story

07:42 AM (IST) Jul 12

1400 ರೈತರಿಗೆ ಹಸು ಖರೀದಿಸಲು 2 ಲಕ್ಷ ರು. ಸಾಲ; ಹಾಲು ಒಕ್ಕೂಟದಿಂದ ಬ್ಯಾಂಕ್‌ಗೆ ಮನವಿ

ಸುಮಾರು 1400 ಹೈನುಗಾರರಿಗೆ ಹಸುಗಳನ್ನು ಖರೀದಿಸಲು ತಲಾ 2 ಲಕ್ಷ ರು. ಸಾಲ ನೀಡುವಂತೆ ತುಮಕೂರು ಹಾಲು ಒಕ್ಕೂಟವು ಕೆನರಾ ಬ್ಯಾಂಕ್‌ಗೆ ಮನವಿ ಮಾಡಿದೆ. ಈ ಸಾಲವನ್ನು ಸದ್ಬಳಕೆ ಮಾಡಿಕೊಂಡು ಪ್ರಾಮಾಣಿಕವಾಗಿ ಮರುಪಾವತಿ ಮಾಡುವುದರ ಮಹತ್ವವನ್ನು ತಿಳಿಸಲಾಗಿದ್ದು, ಇದರಿಂದ ರೈತರ ಅಭಿವೃದ್ಧಿ ಸಾಧ್ಯ ಎಂದು ಒತ್ತಿಹೇಳಲಾಗಿದೆ.

Read Full Story

07:30 AM (IST) Jul 12

ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ

ಅಮೃತ ಭಾರತ ಯೋಜನೆಯಡಿ ನವೀಕರಣಗೊಂಡ ಕೊಪ್ಪಳ, ಬಾದಾಮಿ, ಅಳ್ನಾವರ ಮತ್ತು ಬಂಟ್ವಾಳ ರೈಲು ನಿಲ್ದಾಣಗಳು ಜುಲೈ 17 ರಂದು ಲೋಕಾರ್ಪಣೆಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಳ್ಳಲಿರುವ ಈ ನಿಲ್ದಾಣಗಳು, ಎಸ್ಕಲೇಟರ್, ಲಿಫ್ಟ್, ಮತ್ತು ವಿಸ್ತರಿತ ಪ್ಲಾಟ್‌ಫಾರ್ಮ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.
Read Full Story

07:11 AM (IST) Jul 12

ಚಿಲ್ಲರೆ ನೀಡದ್ದಕ್ಕೆ ಸಾರಿಗೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ ಕಂಡಕ್ಟರ್! ಮುಂದೇನಾಯ್ತು ನೋಡಿ

ಸಾರಿಗೆ ಸಚಿವ ಬೈರತಿ ಸುರೇಶ್‌, ಗುರುತು ಸಿಗದಂತೆ ಮಾಸ್ಕ್‌ ಧರಿಸಿ ಬಿಎಂಟಿಸಿ ಬಸ್‌ನಲ್ಲಿ  ರಿಯಾಲಿಟಿ ಚೆಕ್‌ ನಡೆಸಿದರು. ಈ ವೇಳೆ, ಚಿಲ್ಲರೆ ಇಲ್ಲದ ಕಾರಣಕ್ಕೆ ನಿರ್ವಾಹಕನೊಬ್ಬ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಲು ಯತ್ನ, ಪ್ರಯಾಣಿಕರ ಇತರ ಸಮಸ್ಯೆ ಗಮನಿಸಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಿದರು.

Read Full Story

More Trending News