ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಚಿವ ಡಿ.ಸುಧಾಕರ್ ಇಂದು ಬೆಳಗಿನ ಜಾವ 3.15ರ ವೇಳೆಗೆ ನಿಧನರಾಗಿದ್ದಾರೆ. ಡಿ.ಸುಧಾಕರ್ ಅವರು ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಪರೇಷನ್ ಬಳಿಕ ಇನ್ನೇನು ಡಿಸ್ಚಾರ್ಜ್ ಆಗಬೇಕು ಎನ್ನುವಷ್ಟರಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿತ್ತು ಹೆಚ್ಚು ಧೂಮಪಾನ ಮಾಡ್ತಿದ್ದ ಕಾರಣಕ್ಕೆ ಶ್ವಾಸಕೋಶದ ಸೋಂಕು ತೀವ್ರವಾಗಿತ್ತು. ಕೊನೆಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೂ ಯಾವುದೇ ಚೇತರಿಕೆ ಕಾಣಲಿಲ್ಲ
ಕೊನೆಗೆ ವೈದ್ಯರು ECMO ಅಳವಡಿಕೆ ಮಾಡಿದ್ದರು. ಶ್ವಾಸಕೋಶ ಹಾಗೂ ಹೃದಯ ಸರಿಯಾಗಿ ಕೆಲಸ ಮಾಡದ ಕಾರಣ, ECMO ಮಷಿನ್ ಈ ಕಾರ್ಯ ನಿರ್ವಹಿಸುತ್ತದೆ ನಾಲ್ಕು ವಾರಗಳ ನಿಗಾದಲ್ಲಿ ಇರಿಸಲಾಗಿತ್ತು. ಚೇತರಿಕೆ ಕಂಡುಬಂದರೆ ಶ್ವಾಸಕೋಶದ ಟ್ರಾನ್ಸ್‌ಪ್ಲಾಂಟ್ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಯಾವುದೇ ಚೇತರಿಕೆ ಕಾಣದೆ ಬೆಳಗಿನ ಜಾವ ಸುಧಾಕರ್ ಕೊನೆಯುಸಿರೆಳಿದಿದ್ದಾರೆ
10:48 PM (IST) May 10
ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.
09:41 PM (IST) May 10
17ರ ಹರೆಯದ ಯುವಕ ಬೋದೂರು ಗ್ರಾಮದಲ್ಲಿ ಈಜಾಡಲು ತೆರಳಿದ್ದಾನೆ. 6 ಮಂದಿ ಯುವಕರ ಗುಂಪು ಈಜಾಡುತ್ತಿದ್ದ ವೇಳೆ ಅಪ್ಪಾಜಿಗೌಡ ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದೆ.
09:23 PM (IST) May 10
ಅಂಜನಾದ್ರಿಯ ಶ್ರೀ ಆಂಜನೇಯಸ್ವಾಮಿಗೆ ಹೈದ್ರಾಬಾದ್ ಮೂಲಕ ಉದ್ಯಮಿ ಮಹೇಶರೆಡ್ಡಿ ಕುಟುಂಬದವರು ಸಮರ್ಪಣೆ ಮಾಡಿರುವ ಪ್ರಭಾವಳಿ,ಕಿರೀಟ, ಗಧೆ ಸೇರಿದಂತೆ 12 ಸಾಮಾನುಗಳು ಚಿನ್ನ ಲೇಪಿತ ತಾಮ್ರದಿಂದ ಕೂಡಿದೆ.
08:32 PM (IST) May 10
ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
07:53 PM (IST) May 10
ಭ್ರಷ್ಟಾಚಾರ, ಲಂಚಾವತಾರ ವಿರೋಧಿಸಿ ವಾಟಾಳ್ ಕನ್ನಡ ಪಕ್ಷದ ವತಿಯಿಂದ ಯುವಜನರು, ರೈತರು, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು.
07:42 PM (IST) May 10
ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಡಲ ತೀರದ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ರಾಧಿಕಾ ತಮ್ಮ ತಾಯಿ ಮತ್ತು ಮುದ್ದಾದ ಮಕ್ಕಳ ಜೊತೆ ಕಾಲ ಕಳೆಯುತ್ತಿರುವುದು ಕಂಡುಬಂದಿದೆ. ಆದರೆ ಈ ಪೋಸ್ಟ್ ಯಾಕೆ ಅಷ್ಟೊಂದು ವೈರಲ್ ಆಗಿದೆ ಗೊತ್ತಾ? ಈ ಸ್ಟೋರಿ ನೋಡಿ..
07:16 PM (IST) May 10
ಒಳ ಮೀಸಲಾತಿಗೆ ಸಂಬಂಧಿಸಿ ವಿಶ್ರಾಂತ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಭೆ ಅವಿರೋಧವಾಗಿ ಒಪ್ಪಿಕೊಂಡಿದೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
06:06 PM (IST) May 10
05:38 PM (IST) May 10
04:36 PM (IST) May 10
03:55 PM (IST) May 10
03:43 PM (IST) May 10
ಬೆಂಗಳೂರಿನ ಯವಕ ಪ್ರತಿ ದಿನ ಮನೆಯಿಂದ ಕಚೇರಿಗೆ ಎಲೆಕ್ಟ್ರಿಕ್ ಯೂನಿಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಾನೆ. ಟ್ರಾಫಿಕ್ ನಡುವೆ ಸರಾಗವಾಗಿ ಸಾಗಬಹುದು, ಪಾರ್ಕಿಂಗ್ ಸಮಸ್ಯೆ ಇಲ್ಲ, ದಿಢೀರ್ ಟ್ರಾಫಿಕ್ ಪೊಲೀಸರು ತಡೆದು ಮಾಡಿದ್ದೇನು?
02:22 PM (IST) May 10
01:59 PM (IST) May 10
ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ನಟಿಸಿದ ಕಟ್ಟ ಕಡೆಯ ಸಿನಿಮಾ ಜೇಮ್ಸ್. 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು.
12:48 PM (IST) May 10
12:40 PM (IST) May 10
ಗಣೇಶ್ ಅವರ ಸಿನಿಮಾಗಳಲ್ಲಿ ಸಂಗೀತಕ್ಕೆ ಯಾವಾಗಲೂ ಒಂದು ವಿಶೇಷ ತೂಕವಿರುತ್ತದೆ. ಈಗ ತಮ್ಮದೇ ಮನೆಯ ನಿರ್ಮಾಣದ ಚಿತ್ರಕ್ಕೆ ಪತ್ನಿಯೇ ಹಾಡಿರುವುದು ಈ ಸಿನಿಮಾದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. 'ಪಿಕ್ಚರ್' ಚಿತ್ರದ ಈ ಹಾಡು ಈಗ ವೈರಲ್ ಆಗಿದೆ.
12:11 PM (IST) May 10
11:55 AM (IST) May 10
ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಖಂಡರು ವೈಮನಸ್ಸು ಬಿಟ್ಟು ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ರಾಜ್ಯ ಸರ್ಕಾರದ ವೈಫಲ್ಯ ಜನರ ಮುಂದಿಟ್ಟು, ಮುಂಬರುವ ಚುನಾವಣೆಗಳಲ್ಲಿ ಯುವಶಕ್ತಿಯ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ.
11:19 AM (IST) May 10
11:09 AM (IST) May 10
ಪಂಚರಾಜ್ಯ ಚುನಾವಣೆಯಲ್ಲಿನ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡು, ದಕ್ಷಿಣ ಭಾರತದಲ್ಲಿ ಪಕ್ಷದ ಬೆಳವಣಿಗೆಯನ್ನು ಶ್ಲಾಘಿಸಿದರು
10:28 AM (IST) May 10
10:10 AM (IST) May 10
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತ ಕುಟುಂಬದ ಬಸವರಾಜ ಕೆಂಪವಾಡ ಅವರು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೆ, ಬಡತನದ ನಡುವೆಯೂ ಸತತ ಪರಿಶ್ರಮದಿಂದ ಈ ಐತಿಹಾಸಿಕ ಸಾಧನೆ ಮಾಡಿ ಯುವಕರಿಗೆ ಸ್ಫೂರ್ತಿ.
09:46 AM (IST) May 10
ಬೀದರ್‌ನ ದುಬಲಗುಂಡಿ ಗ್ರಾಮದಲ್ಲಿ, ಮನೆಯೊಳಗೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಮಾಡಿ, ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಘಟನೆಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಚಿವರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ.
09:29 AM (IST) May 10
09:20 AM (IST) May 10
ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು, ಬಫರ್ ಜೋನ್‌ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ. ಈ ಯೋಜನೆಯಲ್ಲಿ ಸೌಂದರ್ಯೀಕರಣದ ಜೊತೆಗೆ, 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು.
09:14 AM (IST) May 10
09:00 AM (IST) May 10
ಮಾವು-ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಮಾಗಿದ ಮಾವು ಮತ್ತು ಹಲಸನ್ನು ರೈತರಿಂದ ನೇರವಾಗಿ ಕಡಿಮೆ ದರದಲ್ಲಿ ಒದಗಿಸುತ್ತಿದ್ದು, ಮೊದಲ ಎರಡು ದಿನಗಳಲ್ಲಿ ಏಳು ಟನ್‌ಗೂ ಹೆಚ್ಚು ಮಾವು ಮಾರಾಟವಾಗಿದೆ.
08:44 AM (IST) May 10
ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಬೇರೊಬ್ಬರ ವರದಿಯನ್ನು ಮಹಿಳೆಯೊಬ್ಬರಿಗೆ ನೀಡಿದ ಪರಿಣಾಮ, ತಪ್ಪಾದ ಚಿಕಿತ್ಸೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಕೇಂದ್ರದ ಸಿಬ್ಬಂದಿ ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದು, ಈ ಘಟನೆಯು ಸರ್ಕಾರಿ ಆಸ್ಪತ್ರೆಯ ಸ್ಕ್ಯಾನಿಂಗ್ ಯಂತ್ರದ ದುಸ್ಥಿತಿಯನ್ನು ಸಹ ಬೆಳಕಿಗೆ ತಂದಿದೆ.
08:33 AM (IST) May 10
ಪಂಚರಾಜ್ಯಗಳ ಚುನಾವಣಾ ಗೆಲುವಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಬಿಜೆಪಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ, ಅವರು ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಧ್ಯಾನ ಮಂದಿರವನ್ನು ಉದ್ಘಾಟಿಸಲಿದ್ದು
08:31 AM (IST) May 10
ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್ ಟೆಸ್ಟಿಂಗ್ ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.
08:12 AM (IST) May 10
ಯಶ್ವಂತಪುರ ವಿಜಯಪುರ ಯಶ್ವಂತಪುರ (16 547/48) ಹಾಗೂ ಯಶ್ವಂತಪುರ ಸಿಂಧನೂರು ಯಶ್ವಂತಪುರ (16 545/46) ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಆಧುನಿಕ ಮೂಲ ಸೌಲಭ್ಯ ನೀಡುತ್ತಿರುವ ಕುರಿತು ಅಧಿಕಾರಿಗಳು ನೀಡಿದ ಮಾಹಿತಿ ಇಲ್ಲಿದೆ.
08:07 AM (IST) May 10
07:43 AM (IST) May 10
07:36 AM (IST) May 10
07:08 AM (IST) May 10
ಸಾಂಖ್ಯಿಕ ಮತ್ತು ಅಂಕಿ ಸಂಖ್ಯೆ ಸಚಿವರಾಗಿದ್ದ ಡಿ. ಸುಧಾಕರ್ ಅವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ತಮ್ಮ ಚಿಕ್ಕಪ್ಪನ ರಾಜಕೀಯ ಮಾರ್ಗದರ್ಶನದಲ್ಲಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು.