Published : Feb 01, 2026, 06:48 AM ISTUpdated : Feb 01, 2026, 11:13 PM IST

Karnataka News Live: ಏನೂ ಇಲ್ಲದವನಿಗೆ 50 ಲಕ್ಷ ಕೊಟ್ಟವರು ಈ ನಿರ್ಧಾರ ಮಾಡಿದ್ದೇಕೆ? ಬಿಗ್ ಬಾಸ್ ವಿನ್ನರ್‌ಗೆ ಕಾಡಿದ ರಾಯ್ ಸಾವು

ಸಾರಾಂಶ

ಬೆಳಗಾವಿ: ಮಾಜಿ ಸಚಿವ ಲಕ್ಷ್ಮಣ ಸವದಿಗೂ ನಮಗೂ ಮುಸುಕಿನ ಗುದ್ದಾಟವಿಲ್ಲ, ಓಪನ್ ಗುದ್ದಾಟ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿದರು. ಬೆಳಗಾವಿಯ ಅಥಣಿ ತಾಲೂಕಿನ ಕೆಂಪವಾಡದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿದರೆ ಹೊರಗಿನವರು ಎಂದು ಹೇಳುತ್ತಾರೆ. ಆದ್ದರಿಂದ, ನನ್ನ ಹಿತೈಷಿಗಳು ನನಗೆ ಅಥಣಿಯಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ. ಇದರ ಬಗ್ಗೆ ಈಗ ಮಾತನಾಡದೇ ಚುನಾವಣೆ ಸಂದರ್ಭದಲ್ಲಿ ಎಳೆಎಳೆಯಾಗಿ ಮಾತನಾಡುತ್ತೇನೆ ಎಂದರು. 

ಸವದಿ ಬಿಜೆಪಿಗೆ ಬರುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮಲ್ಲೇ ಘಟಾನುಘಟಿ ನಾಯಕರು ಇರುವಾಗ ಅಂಥವರ ಅವಶ್ಯಕತೆ ನಮಗಿಲ್ಲ. ನನಗಂತೂ ಮೊದಲೇ ಅವಶ್ಯಕತೆ ಇಲ್ಲ, ಹೈಕಮಾಂಡ್‌ಗೆ ಬೇಕಾದರೆ ನಾವೇನೂ ಹೇಳಕ್ಕಾಗಲ್ಲ ಎಂದರು.

11:13 PM (IST) Feb 01

ಏನೂ ಇಲ್ಲದವನಿಗೆ 50 ಲಕ್ಷ ಕೊಟ್ಟವರು ಈ ನಿರ್ಧಾರ ಮಾಡಿದ್ದೇಕೆ? ಬಿಗ್ ಬಾಸ್ ವಿನ್ನರ್‌ಗೆ ಕಾಡಿದ ರಾಯ್ ಸಾವು

ಬಿಗ್ ಬಾಸ್ ವಿನ್ನರ್‌ಗೆ ಸಿಜೆ ರಾಯ್ ದುರಂತ ಸಾವು ಕಾಡುತ್ತಿದೆ. ಏನೂ ಇಲ್ಲದವನಿಗೆ 50 ಲಕ್ಷ ಕೊಟ್ಟವರು ಈ ನಿರ್ಧಾರ ಮಾಡಿದ್ದೇಕೆ?, ಬದುಕಿನ ಸವಾಲುಗಳು ಗೆದ್ದ ಸಿಜೆ ರಾಯ್ ಈ ನಿರ್ಧಾರ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

 

Read Full Story

11:11 PM (IST) Feb 01

CJ Roy Death Case ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಬೆಂಗಳೂರು ಬಿಟ್ಟು ತೆರಳದಂತೆ ಐಟಿ ಅಧಿಕಾರಿಗಳಿಗೆ ಎಸ್‌ಐಟಿ ಸೂಚನೆ

ಕಾನ್ಫಿಡೆಂಟ್ ಗ್ರೂಪ್‌ನ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಚುರುಕುಗೊಂಡಿದೆ. ಐಟಿ ಅಧಿಕಾರಿಗಳ ಕಿರುಕುಳದ ಆರೋಪದ ಮೇಲೆ, ದಾಳಿ ನಡೆಸಿದ್ದ ತಂಡವನ್ನು ವಿಚಾರಣೆಗೊಳಪಡಿಸಲಾಗಿದ್ದು, ತನಿಖೆ ಮುಗಿಯುವವರೆಗೂ ಬೆಂಗಳೂರು ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. 

Read Full Story

10:53 PM (IST) Feb 01

Ram Charan Teja, Upasana ಅವಳಿ ಮಕ್ಕಳ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ವೇಣುಸ್ವಾಮಿ!

Actor Ram Charan Teja News: ನಟ ಚಿರಂಜೀವಿ ಮನೆಗೆ ಒಟ್ಟಿಗೆ ಡಬಲ್‌ ಖುಷಿ ಸಿಕ್ಕಿದೆ. ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ಅವರು ಅವಳಿ ಮಕ್ಕಳಿಗೆ ಪಾಲಕರಾಗಿ ಬಡ್ತಿ ಪಡೆದಿದ್ದಾರೆ. ಆದರೆ ವೇಣು ಸ್ವಾಮಿ ಹೇಳಿದ್ದ ಭವಿಷ್ಯ ಸುಳ್ಳಾಯ್ತು.

Read Full Story

10:45 PM (IST) Feb 01

Naa Ninna Bidalaare ಕ್ಯೂಟ್​ ದೆವ್ವಕ್ಕೆ ಹುಟ್ಟುಹಬ್ಬವಿಂದು - 'ಅಂಬಿಕಾ' ಕುರಿತ ಇಂಟರೆಸ್ಟಿಂಗ್​ ಸ್ಟೋರಿ

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಕ್ಯೂಟ್ ದೆವ್ವ ಅಂಬಿಕಾ ಪಾತ್ರದಿಂದ ಖ್ಯಾತರಾದ ನಟಿ ನೀತಾ ಅಶೋಕ್ ಅವರ ಹುಟ್ಟುಹಬ್ಬದ ಸಂಭ್ರಮದ ಕುರಿತು ಈ ಲೇಖನ ತಿಳಿಸುತ್ತದೆ. ‘ವಿಕ್ರಾಂತ್ ರೋಣ’ ಚಿತ್ರದಲ್ಲೂ ನಟಿಸಿರುವ ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನ, ಮದುವೆಯ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Read Full Story

10:27 PM (IST) Feb 01

ಕ್ಯಾಮೆರಾ ಎದುರೇ ಮಾಡರ್ನ್​ ಗರ್ಲ್​ನಿಂದ ಕೂರ್ಗಿ ಲೇಡಿಯಾದ Namruta Gowda! ಸೋ ಕ್ಯೂಟ್ ಎಂದ ಫ್ಯಾನ್ಸ್​

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ 'ಕರ್ಣ' ಧಾರಾವಾಹಿಯಲ್ಲಿ ನಿತ್ಯಾ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಕೂರ್ಗ್ ಶೈಲಿಯ ಸೀರೆಯುಟ್ಟು ಮಿಂಚಿರುವ ಅವರು, ತಮ್ಮ ಬದುಕಿನ ಹೊಸ ಅಧ್ಯಾಯದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಮದುವೆಯ ಕುತೂಹಲ ಮೂಡಿಸಿದ್ದಾರೆ.
Read Full Story

10:11 PM (IST) Feb 01

ರಾಯ್ ಉತ್ತರಾಧಿಕಾರಿ ಯಾರು? ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ

ರಾಯ್ ಉತ್ತರಾಧಿಕಾರಿ ಯಾರು? ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ, ಸಾವಿರಾರು ಕೋಟಿ ವ್ಯವಹಾರದ ಉದ್ಯಮ ಮುನ್ನಡೆಸವವರು ಯಾರು, ಸಿಜೆ ರಾಯ್ ಸಾವಿನಿಂದ ಹುಟ್ಟಿಕೊಂಡ ಪ್ರಶ್ನೆಗೆ ಉತ್ತರ ನೀಡಿದ ಕುಟುಂಬ.

 

Read Full Story

09:59 PM (IST) Feb 01

ಟೈಟ್​ ಆಗಿದ್ದಕ್ಕೆ ಹಾಗೆ ಹೇಳಿದೆ, ಗಿಲ್ಲಿ ಬಗ್ಗೆ ಕೇಳಿದ್ರೆ ಒಳಗೆ ಹಾಕಿಸ್ತೀನಿ ಅಷ್ಟೇ - Bigg Boss ಡಾಗ್​ ಸತೀಶ್​ ಧಮ್ಕಿ!

ಬಿಗ್​ಬಾಸ್​ ಸೀಸನ್​ 12 ಅನ್ನು ಗಿಲ್ಲಿ ನಟ ಗೆದ್ದಿದ್ದಾರೆ. ಈ ಹಿಂದೆ ಗಿಲ್ಲಿ ಗೆದ್ದರೆ ಅವರ ಕಾಲ ಕೆಳಗೆ ನುಸುಳುತ್ತೇನೆ ಎಂದಿದ್ದ ಡಾಗ್ ಸತೀಶ್, ಇದೀಗ ಮಾತನ್ನು ಬದಲಿಸಿದ್ದು, ಪ್ರಶ್ನಿಸಿದರೆ ಎಫ್​ಐಆರ್​ ದಾಖಲಿಸುವುದಾಗಿ ಬೆದರಿಸಿದ್ದಾರೆ.
Read Full Story

09:30 PM (IST) Feb 01

ತಾತಗುಣಿ ಬಳಿ BWSSB ಪೈಪ್‌ಲೈನ್ ಸಂಪ್‌ನಲ್ಲಿ ಕಾಣೆಯಾಗಿದ್ದ ಬಾಲಕನ ಶವ ಪತ್ತೆ!

ಬೆಂಗಳೂರಿನ ತಾತಗುಣಿ ಬಳಿ ಮೂರು ದಿನಗಳಿಂದ ಕಾಣೆಯಾಗಿದ್ದ 14 ವರ್ಷದ ಬಾಲಕ, ಜಲಮಂಡಳಿ ನಿರ್ಮಿಸಿದ್ದ ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ದುರ್ಘಟನೆಗೆ ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

09:26 PM (IST) Feb 01

ಡಿಸಿಎಂ ಡಿಕೆಶಿ ಫೋಟೋವನ್ನು ಮೆಹಂದಿ ಹಾಕಿಸಿಕೊಂಡ ಮುಸ್ಲಿಂ ಮಹಿಳೆ, ಕನಕೋತ್ಸವ ಸಂಭ್ರಮ

ಡಿಸಿಎಂ ಡಿಕೆಶಿ ಫೋಟೋವನ್ನು ಮೆಹಂದಿ ಹಾಕಿಸಿಕೊಂಡ ಮುಸ್ಲಿಂ ಮಹಿಳೆ, ಇದೀಗ ಈ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ. ಖುದ್ದು ಡಿಕೆ ಶಿವಕುಮಾರ್ ಈ ಫೋಟೋ ಹಂಚಿಕೊಂಡಿದ್ದಾರೆ. ಏನಿದು ಕನಕೋತ್ಸವ ಸಂಭ್ರಮ?

 

Read Full Story

09:03 PM (IST) Feb 01

MNREGA ಹೆಸರು ಬದಲಾವಣೆ - ಕೇಂದ್ರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್, ಸಚಿವ ಮಹದೇವಪ್ಪ ಆಕ್ರೋಶ

ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಾಯಿಸಿದ್ದನ್ನು ವಿರೋಧಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಸಚಿವ ಹೆಚ್.ಸಿ. ಮಹದೇವಪ್ಪ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಕೇಂದ್ರದ ಕ್ರಮವನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Read Full Story

08:33 PM (IST) Feb 01

Bigg Bossಗೆ​ ಅಂತ ಸಾಲ ಮಾಡ್ದೆ, ಇನ್ನೂ ಪೇಮೆಂಟೇ ಕೊಟ್ಟಿಲ್ಲ! ಜಾಹ್ನವಿ ಕೋಪಕ್ಕೆ ಇಲ್ಲಿದೆ ಕಾರಣ

ಬಿಗ್ ಬಾಸ್‌ನಿಂದ ಹೊರಬಂದ ನಂತರವೂ ಆ್ಯಂಕರ್ ಜಾಹ್ನವಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮಗೆ ಇನ್ನೂ ಬಿಗ್ ಬಾಸ್ ಪೇಮೆಂಟ್ ಬಂದಿಲ್ಲ ಮತ್ತು ಸಾಲ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಹೀಗೆ ಹೇಳಿದ್ದು ಯಾಕೆ?

Read Full Story

08:20 PM (IST) Feb 01

ಕಲ್ಯಾಣ ಮಂಟಪಕ್ಕೆ ಬರ್ತಿದ್ದ ವರನಿಗೆ ಚಾಕು ಇರಿದ ಪ್ರಕರಣದಲ್ಲಿ ವಧುವಿನ ಕೈವಾಡ ಬಹಿರಂಗ

ಕಲ್ಯಾಣ ಮಂಟಪಕ್ಕೆ ಬರ್ತಿದ್ದ ವರನಿಗೆ ಚಾಕು ಇರಿದ ಪ್ರಕರಣದಲ್ಲಿ ವಧುವಿನ ಕೈವಾಡ ಬಹಿರಂಗ, ಮತ್ತೊಬ್ಬನ ಜೊತೆ ಲವ್‌ನಲ್ಲಿದ್ದ ವಧು, ಆಕೆಯ ಬಾಯ್‌ಫ್ರೆಂಡ್ ಜೊತೆ ಸೇರಿ ಮಾಡಿದ ಪ್ಲಾನ್ ಇದೀಗ ಬಟಾ ಬಯಲಾಗಿದೆ.

 

Read Full Story

08:14 PM (IST) Feb 01

7 ವರ್ಷದಿಂದ ಜೊತೆಗಿರುವ Ranbir Kapoor, Alia Bhatt ದಾಂಪತ್ಯದಲ್ಲಿ ಬಿರುಗಾಳಿಯೇ? ಸತ್ಯ ಏನು?

Alia Bhatt On Ranbir Kapoor: ಬಾಲಿವುಡ್‌ ಸೂಪರ್‌ಸ್ಟಾರ್‌ಗಳಾದ ರಣಬೀರ್ ಕಪೂರ್, ಆಲಿಯಾ ಭಟ್ ಅವರ ದಾಂಪತ್ಯ ಜೀವನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಗಾಸಿಪ್‌ಗಳು ಹರಿದಾಡುತ್ತಿರುತ್ತವೆ. ಈ ಬಗ್ಗೆ ಆಲಿಯಾ ಭಟ್‌ ಪ್ರತಿಕ್ರಿಯೆ ನೀಡಿದ್ದಾರೆ.

 

Read Full Story

07:52 PM (IST) Feb 01

Gold Rate - ಏಕಾಏಕಿ ಕುಸಿಯುತ್ತಿರುವ ಬಂಗಾರ; ಈಗ ಖರೀದಿಸಬಹುದೇ? ಇನ್ನೂ ಕಡಿಮೆ ಆಗುತ್ತೆ ಅಂತ ಕಾಯಬೇಕಾ?

Gold And Silver Rate Update: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಲ್ಲಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹1.35 ಲಕ್ಷದಷ್ಟು ಕುಸಿತ ಕಂಡಿದೆ. ಇದು ಶೇಕಡಾ 33 ರಷ್ಟು ಇಳಿಕೆಯಾದರೆ, ಚಿನ್ನದ ಬೆಲೆಯೂ ಶೇಕಡಾ 18 ರಷ್ಟು ಇಳಿಕೆ ಕಂಡಿದೆ.

 

Read Full Story

07:50 PM (IST) Feb 01

Tax Terrorism - ಐಟಿ ರೇಡ್ ವಿರುದ್ಧ ತಿರುಗಿಬಿದ್ದ ಕರ್ನಾಟಕ ಉದ್ಯಮಿಗಳು! ಮೋದಿ-ನಿರ್ಮಲಾಗೆ ಪೈ ನೇರ ಪ್ರಶ್ನೆ!

ಉದ್ಯಮಿ ಸಿಜೆ ರಾಯ್ ಅವರ ದುರಂತ ಅಂತ್ಯದ ನಂತರ, ಖ್ಯಾತ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಅವರು ತೆರಿಗೆ ಅಧಿಕಾರಿಗಳ ಕಿರುಕುಳ ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ದಾಖಲೆಯ ತೆರಿಗೆ ಸಂಗ್ರಹದ ನಡುವೆಯೂ ಈ ರೀತಿಯ ಕ್ರೂರ ದಾಳಿಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

Read Full Story

07:12 PM (IST) Feb 01

Bhagyalakshmi Serial ಭಾಗ್ಯ ಈಗ 2ನೇ ಮದುವೆ ಆಗುತ್ತಾಳಾ? ಸುದರ್ಶನ್‌ ರಂಗಪ್ರಸಾದ್‌ ಏನಂದ್ರು?

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈಗ ತಾಂಡವ್‌ ಮನೆ ಬಿಟ್ಟು ಬಂದಿದ್ದಾನೆ. ಬೀದಿ ಪಾಲಾಗಿರುವ ತಾಂಡವ್‌ ಅವರು ಭಾಗ್ಯ ಬಳಿ ಕ್ಷಮೆ ಕೇಳುತ್ತಾರೆ. ಈ ಧಾರಾವಾಹಿ ಕಥೆಯ ಬಗ್ಗೆ ಸುದರ್ಶನ್‌ ರಂಗಪ್ರಸಾದ್‌ ಅವರು ಮಾತನಾಡಿದ್ದಾರೆ.

Read Full Story

07:10 PM (IST) Feb 01

Union Budget - ಹೈಸ್ಪೀಡ್ ರೈಲು ಯಾರಿಗೆ ಬೇಕು? ಕರ್ನಾಟಕಕ್ಕೆ ಸಿಕ್ಕಿದ್ದು ಚೊಂಬು, ಸಿಎಂ ವಾಗ್ದಾಳಿ!

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತವನ್ನು ಕಡೆಗಣಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ 'ಚೊಂಬು' ನೀಡಲಾಗಿದೆ ಎಂದ ಅವರು, ತೆರಿಗೆ ಪಾಲು ಹಂಚಿಕೆಯಲ್ಲಿನ ತಾರತಮ್ಯ  ನಿರ್ಲಕ್ಷ್ಯದ ಬಗ್ಗೆ ಅಂಕಿ-ಅಂಶ ಸಮೇತ ತರಾಟೆಗೆ ತೆಗೆದುಕೊಂಡರು.

Read Full Story

06:55 PM (IST) Feb 01

Viral Video - 'ನಾನು ಬ್ರಾಹ್ಮಣ ಅನ್ನೋದು ಗೊತ್ತಿಲ್ವಾ?' ಮಟನ್‌ ಬದಲು ಗೋಮಾಂಸ ನೀಡಿದ ರೆಸ್ಟೋರೆಂಟ್‌ ವಿರುದ್ಧ ಪ್ರಖ್ಯಾತ ನಟ ಕಿಡಿ!

Beef Served Instead of Mutton to Actor Sayak Chakraborty; Waiter Arrested ಪ್ರಖ್ಯಾತ ನಟ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆದ ಘಟನೆಯನ್ನು ವಿವರಿಸಿದ್ದಾನೆ. ರೆಸ್ಟೋರೆಂಟ್‌ನವರು ತಮಗೆ ಮಟನ್‌ ಎಂದು ಗೋಮಾಂಸ ಬಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 

Read Full Story

06:25 PM (IST) Feb 01

9 ಪುಟದ ಡೆತ್‌ನೋಟ್‌ ಬರೆದಿರುವ ಸಿಜೆ ರಾಯ್‌, ಸಾವಿಗೂ ಮುನ್ನ ಕುಟುಂಬದವರಿಗೆ ತಿಳಿಸಿದ್ದ ಉದ್ಯಮಿ!

ಐಟಿ ದಾಳಿಯ ನಂತರ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಆತ್ಮ*ತ್ಯೆ ಮಾಡಿಕೊಂಡಿದ್ದು, ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತ್ಮಹತ್ಯೆಗೂ ಮುನ್ನ ಅವರು 9 ಪುಟಗಳ ಡೆತ್‌ನೋಟ್ ಬರೆದಿದ್ದು, ಇದರಲ್ಲಿ ಐಟಿ ದಾಳಿ ಮತ್ತು ಮಾನಸಿಕ ಒತ್ತಡದ ಬಗ್ಗೆ ಉಲ್ಲೇಖಿಸಿರುವ ಶಂಕೆ ಇದೆ.

Read Full Story

06:23 PM (IST) Feb 01

ತಿಂಥಣಿ ಪೀಠದಲ್ಲಿ ಸಿಎಂ - ಹಣೆಗೆ ಬಂಡಾರ ಹಚ್ಚಲು ಹಿಂದೇಟು? ಬಳಿಕ ಹಚ್ಚಿಸಿಕೊಂಡಿದ್ದು ಬೊಟ್ಟು!

ರಾಯಚೂರಿನ ತಿಂಥಣಿ ಕಾಗಿನೆಲೆ ಪೀಠಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ದಿವಂಗತ ಸಿದ್ದರಾಮಾನಂದಪುರಿ ಶ್ರೀಗಳ ಗದ್ದುಗೆಗೆ ನಮನ ಸಲ್ಲಿಸಿದರು. ಬೀರ ದೇವರ ದರ್ಶನ ಪಡೆದ ಅವರು, ಹಣೆಗೆ ಬಂಡಾರ ಹಚ್ಚಿಸಿಕೊಳ್ಳುವ ವೇಳೆ ನಡೆದ ಘಟನೆಯು ಕುತೂಹಲ ಮೂಡಿಸಿತು. 

Read Full Story

05:59 PM (IST) Feb 01

ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಮರ್ಯಾದೆ ಹತ್ಯೆಯಲ್ಲ, ಹಣದಾಸೆಗೆ ಹೆತ್ತವರನ್ನೇ ಬಲಿಪಡೆದ ಹಂತಕ!

ಕೊಟ್ಟೂರಿನಲ್ಲಿ ನಡೆದ ಒಂದೇ ಕುಟುಂಬದ ಮೂವರ ಹತ್ಯೆಯು ಮರ್ಯಾದೆಗೇಡಿನ ಕೃತ್ಯವಲ್ಲ, ಬದಲಿಗೆ 1.20 ಕೋಟಿ ರೂಪಾಯಿ ಹಣದಾಸೆಗಾಗಿ ನಡೆದಿದೆ ಎಂದು ತನಿಖೆಯಿಂದ ಬಯಲಾಗಿದೆ. ಮಗನೇ ತನ್ನ ಮಾವನ ಜೊತೆ ಸೇರಿ ಹೆತ್ತ ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದನು.,

Read Full Story

05:21 PM (IST) Feb 01

ಅತ್ತೆ ಕಿರುಕುಳಕ್ಕೆ 3 ಮುದ್ದಾಗ ಮಕ್ಕಳನ್ನು ನೇಣಿಗೇರಿಸಿ ಕೊಲೆಗೈದ ತಾಯಿ; ಹೊಟ್ಟೆತುಂಬಾ ಡೀಸೆಲ್ ಕುಡಿದ ಮಲಗಿದಳು!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ, ಅತ್ತೆಯ ಕಿರುಕುಳದಿಂದ ಬೇಸತ್ತ ತಾಯಿಯೊಬ್ಬಳು ತನ್ನ ಮೂವರು ಮುಗ್ಧ ಮಕ್ಕಳನ್ನು ನೇಣು ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನೂ ಡೀಸೆಲ್ ಕುಡಿದು ಆತ್ಮ*ಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Read Full Story

05:19 PM (IST) Feb 01

ಪದೇ ಪದೇ ಸಿಗರೇಟ್ ಸೇದಬೇಕು ಅಂತ ಯಾಕೆ ಅನಿಸುತ್ತೆ? ಇದರಲ್ಲಿರೋ ಮ್ಯಾಜಿಕ್ ಏನು?

ತಂಬಾಕು ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್‌ಗೆ ಕಾರಣವಾಗುತ್ತೆ ಅಂತ ಗೊತ್ತಿದ್ರೂ, ಧೂಮಪಾನಿಗಳು ಈ ಅಭ್ಯಾಸವನ್ನು ಬಿಡುವುದಿಲ್ಲ. ಆದ್ರೆ ಮನುಷ್ಯ ಧೂಮಪಾನಕ್ಕೆ ಯಾಕೆ ದಾಸನಾಗುತ್ತಾನೆ ಅಂತ ಎಂದಾದರೂ ಯೋಚಿಸಿದ್ದೀರಾ?

 

Read Full Story

05:12 PM (IST) Feb 01

ತಿಂಥಣಿಯಲ್ಲಿ ನುಡಿನಮನ - ಶ್ರೀಗಳ ಗದ್ದುಗೆಗೆ ಸಿಎಂ ಪುಷ್ಪ ನಮನ, ಜಾತಿ ಗಣತಿ ಬಗ್ಗೆ ಬಿಗ್ ಅಪ್‌ಡೇಟ್!

ರಾಯಚೂರಿನ ತಿಂಥಣಿ ಕಾಗಿನೆಲೆ ಪೀಠದಲ್ಲಿ ನಡೆದ ಸಿದ್ದರಾಮಾನಂದಪುರಿ ಶ್ರೀಗಳ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ, ಒಂದು ಅಥವಾ ಎರಡು ತಿಂಗಳೊಳಗೆ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಾಗಿ ಘೋಷಿಸಿದ ಅವರು, ಪೀಠದ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವುದಾಗಿ ಭರವಸೆ.

Read Full Story

05:00 PM (IST) Feb 01

ಅಮೃತಧಾರೆ - ಮರಿಸಿಂಹನ ಜೊತೆ ಅರಮನೆಗೆ ಮರಳಿದ ಗೌತಮ್ ದಿವಾನ್; ಜೈದೇವ್ ಆಟಕ್ಕೆ ಬ್ರೇಕ್, ಶಕುಂತಲಾಗೆ ಬಿಗ್ ಶಾಕ್!

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ದಿವಾನ್ ತನ್ನ ಪತ್ನಿ ಭೂಮಿಕಾ ಮತ್ತು ಮಗನೊಂದಿಗೆ ದಿವಾನ್ ಮನೆಗೆ ಮರಳಿದ್ದಾರೆ. ಈ ಅನಿರೀಕ್ಷಿತ ಪುನರಾಗಮನದಿಂದ ಜೈದೇವ್ ಮತ್ತು ಶಕುಂತಲಾ ದೇವಿಗೆ ಆಘಾತವಾಗಿದ್ದು, ಮನೆಯಲ್ಲಿ ಮತ್ತೆ ಗೌತಮ್ ದರ್ಬಾರ್ ಶುರುವಾಗಲಿದೆ.
Read Full Story

04:41 PM (IST) Feb 01

ಕೈ ಬಿಡಿ ಎಂದರೂ ಬಿಡದೆ ಎಳೆದಾಡಿ ಪುಂಡರು, ಲೇಡಿ ಸಿಪಿಐ ಮೇಲೆ ಅಸಭ್ಯವಾಗಿ ವರ್ತಿಸಿದ ಹುಸೇನ್ ಗ್ಯಾಂಗ್ ವಿಡಿಯೋ ವೈರಲ್!

ದಾವಣಗೆರೆಯಲ್ಲಿ, ಆರೋಪಿಯನ್ನು ವಶಕ್ಕೆ ಪಡೆಯಲು ತೆರಳಿದ್ದ ಮಹಿಳಾ ಸಿಪಿಐ ಗಾಯತ್ರಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಪುತ್ರರು ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು, ಓರ್ವ ಆರೋಪಿ ಬಂಧನ.

Read Full Story

04:24 PM (IST) Feb 01

ಮಹೇಶ್ ಟೆಂಗಿನಕಾಯಿ ಒಂಥರಾ ಬಲೂನ್ ಇದ್ದಂಗೆ, ಯಾವಾಗ ಒಡಿತಾರೋ ಗೊತ್ತಿಲ್ಲ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷ್ಮಿ ಯೋಜನೆ ಕುರಿತು ಟೀಕಿಸಿದ್ದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರನ್ನು 'ಬಲೂನ್'ಗೆ ಹೋಲಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈವರೆಗೆ 26 ಕಂತುಗಳಲ್ಲಿ ಹಣ ಜಮೆ ಮಾಡಿದ್ದು, ಬಾಕಿ ಹಣವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. 

Read Full Story

04:16 PM (IST) Feb 01

20 ವರ್ಷದಲ್ಲಿ ಫಸ್ಟ್‌ ಟೈಮ್‌ ಎಲ್ಲೂ ಹೇಳದ ಆ ಕಹಿಸತ್ಯ ತೆರೆದಿಟ್ಟ Anchor Anushree ! ಆ ಮಾತೆಲ್ಲ ಆಡಬೇಕಾ?

Anchor Anushree: ನಿರೂಪಕಿ ಅನುಶ್ರೀ ಅವರು ನಿರೂಪಣೆ ಶುರು ಮಾಡಿ 20 ವರ್ಷಗಳಾಗಿವೆ. ಜೀ ಕನ್ನಡ ವಾಹಿನಿಯು ಈ ಖುಷಿಯನ್ನು ಸಂಭ್ರಮಿಸಿದೆ. ಈ ವೇಳೆ ಎಲ್ಲೂ ಹೇಳಿರದ ವಿಷಯವನ್ನು ಅವರು ಮಾತನಾಡಿದ್ದಾರೆ.

 

Read Full Story

03:56 PM (IST) Feb 01

ರೋಲ್ಸ್ ರಾಯ್ಸ್ ಸೇರಿ ನೆಚ್ಚಿನ ಕಾರುಗಳೊಂದಿಗೆ ಸಿಜೆ ರಾಯ್ ಅಂತಿಮ ಯಾತ್ರೆ

ರೋಲ್ಸ್ ರಾಯ್ಸ್ ಸೇರಿ ನೆಚ್ಚಿನ ಕಾರುಗಳೊಂದಿಗೆ ಸಿಜೆ ರಾಯ್ ಅಂತಿಮ ಯಾತ್ರೆ ಮಾಡಲಾಗಿದೆ. ಸಿಜೆ ರಾಯ್‌ಗೆ ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣ. ರಾಯ್ ನೆಚ್ಚಿನ ಕಾರುಗಳಲ್ಲಿ ಅಂತಿಮಯಾತ್ರೆ ನಡೆದಿದೆ.

Read Full Story

03:43 PM (IST) Feb 01

ಸಿಜೆ ರಾಯ್ ದುರಂತಕ್ಕೂ ಉದ್ಯಮಿಯ ಕಾರುಗಳ ನಂಬರ್‌ಗೂ ಇದೆ ಲಿಂಕ್, ಏನಿದು 0003?

ಸಿಜೆ ರಾಯ್ ದುರಂತಕ್ಕೂ ಉದ್ಯಮಿಯ ಕಾರುಗಳ ನಂಬರ್‌ಗೂ ಇದೆ ಲಿಂಕ್, ಸಿಜೆ ರಾಯ್ ಕೆಲ ಕಾರುಗಳ ನಂಬರ್ 0003. ಈ ನಂಬರ್‌ಗಾಗಿ ಲಕ್ಷ ಲಕ್ಷ ರೂಪಾಯಿ ನೀಡುತ್ತಿದ್ದರು. ಇದೀಗ ಸಾವಿನಲ್ಲೂ ಪ್ರೀತಿಯ ನಂಬರ್ ಜೊತೆ ಅಂತಿಮ ಪಯಣ ಮಾಡಿದ್ದಾರೆ.

 

Read Full Story

03:34 PM (IST) Feb 01

ಈ ಪುಷ್ಪ ಫ್ಲವರ್‌ ಅಲ್ಲ, ಫಯರು..ಮಾತನ್ನೇ ನಿಜ ಮಾಡಿದ ನಿರ್ಮಾಪಕಿ ಪುಷ್ಪ ಅರುಣ್‌ಕುಮಾರ್‌!

ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವಿನ ವಿದ್ಯಾನಗರದ ಸೈಟ್ ವಿವಾದ ಮತ್ತೆ ಭುಗಿಲೆದ್ದಿದೆ. ವಿವಾದಿತ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ದೇವರಾಜ್ ಮುಂದಾದಾಗ, ಪುಷ್ಪಾ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. 

Read Full Story

02:53 PM (IST) Feb 01

Gadag - ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದವಾಗಿ ನೀಡಿದ್ದು ಬಿಸಿ ಬಿಸಿಯಾದ ಮಿರ್ಚಿ ಬಜ್ಜಿ

ಅನ್ನದಾನೀಶ್ವರ ಯಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು. ಈ ವರ್ಷದ ವಿಶೇಷವಾಗಿ, ಭಕ್ತರಿಗೆ ಲಕ್ಷಾಂತರ ಮಸಾಲಾ ಮಿರ್ಚಿಗಳನ್ನು ಪ್ರಸಾದವಾಗಿ ನೀಡಲಾಯಿತು. ಇದರೊಂದಿಗೆ ವಿವಿಧ ಊರುಗಳಿಂದ ಭಕ್ತರು ತಂದ ಜೋಳದ ರೊಟ್ಟಿ, ಹೋಳಿಗೆ ಸೇರಿದಂತೆ ಬಗೆಬಗೆಯ ಭಕ್ಷ್ಯಗಳು ಮಹಾಪ್ರಸಾದದ ವೈಭವವನ್ನು ಹೆಚ್ಚಿಸಿದವು.

Read Full Story

02:38 PM (IST) Feb 01

ಕ್ಯಾಬ್ ತಗೋಬೇಕೆಂದು ಗೂಡ್ಸ್ ಆಟೋ ಮಾರಿದ ಸ್ನೇಹಿತನ ಹಣಕ್ಕೆ ಸ್ಕೆಚ್; ಅಣ್ಣನ ಪ್ರಾಣ ಹೋಗೋದು ಜಸ್ಟ್ ಮಿಸ್!

ಕ್ಯಾಬ್ ಖರೀದಿಸಲು ವಾಹನ ಮಾರಿದ್ದ ಹಣಕ್ಕಾಗಿ ಸ್ನೇಹಿತರೇ ಯುವಕನನ್ನು ಅಪಹರಿಸಿ, ಹಾಕಿ ಸ್ಟಿಕ್‌ನಿಂದ ಥಳಿಸಿ ಕೊಲೆಗೆ ಯತ್ನಿಸಿದ್ದಾರೆ. ಸಂತ್ರಸ್ತನ ಸಹೋದರ ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಹೆಬ್ಬಗೋಡಿ ಪೊಲೀಸರು, ಯುವಕನನ್ನು ರಕ್ಷಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

02:13 PM (IST) Feb 01

ಹೀಗೂ ಮಾಡಬಹುದು ರುಚಿಯಾದ ಎಗ್‌ರೈಸ್; ವಿಶೇಷ ಮತ್ತು ವಿಭಿನ್ನ ಟೇಸ್ಟಿಯ ಅಮ್ಮನ ರೆಸಿಪಿ

ಸಂಜೆ ಅಥವಾ ರಾತ್ರಿ ಊಟಕ್ಕೆ ವಿಭಿನ್ನವಾದ ಎಗ್‌ರೈಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ, ಅನ್ನ ಮತ್ತು ಮಸಾಲೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ, ನಂತರ ಮೊಟ್ಟೆಯೊಂದಿಗೆ ಬೆರೆಸಿ ರುಚಿಕರವಾದ ಎಗ್‌ರೈಸ್ ತಯಾರಿಸಬಹುದು.
Read Full Story

02:03 PM (IST) Feb 01

ಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ - ಜಿ.ಸಿ. ಚಂದ್ರಶೇಖರ್ ಆಕ್ರೋಶ

ಕೇಂದ್ರ ಬಜೆಟ್ ಕುರಿತು ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದ್ದು, ಬಜೆಟ್‌ನಿಂದಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ 30 ಸಾವಿರ ಕೋಟಿ ರೂ.  ನಷ್ಟವಾಗಿದೆ ಎಂದಿದ್ದಾರೆ. ಕರ್ನಾಟಕದ ಪ್ರಮುಖ ಬೇಡಿಕೆಗಳಾದ ಮಹದಾಯಿ, ಏಮ್ಸ್ ಯೋಜನೆಗಳ ಕಡೆಗಣಿಸಲಾಗಿದೆ ಎಂದರು.

Read Full Story

01:34 PM (IST) Feb 01

ಹುಬ್ಬಳ್ಳಿ - ಗಾಂಜಾ ತಂದುಕೊಡದ ಯುವಕನಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ಪನೆದುರೇ ಚುಚ್ಚಿಹೋದ ವ್ಯಸನಿಗಳು!

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ, ಗಾಂಜಾ ನೀಡಲು ನಿರಾಕರಿಸಿದ್ದಕ್ಕೆ ಸ್ನೇಹಿತರೇ ಯುವಕನ ಮೇಲೆ ಕಿಮ್ಸ್ ಆಸ್ಪತ್ರೆಯ ಆವರಣದಲ್ಲೇ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ. ಈ ಹಿಂದೆ ಗಾಂಜಾ ದಂಧೆ ಬಿಟ್ಟು ಸರಿ ದಾರಿಗೆ ಬಂದಿದ್ದ ಯುವಕನ ಮೇಲೆ ನಡೆದ ಈ ದಾಳಿಯು, ನಗರದಲ್ಲಿನ ಗಾಂಜಾ ಹಾವಳಿ ಬಯಲು ಮಾಡಿದೆ.

Read Full Story

01:26 PM (IST) Feb 01

ವಿಕೆಟ್ ಕೀಪಿಂಗ್‌ಗೆ ರೆಡಿಯಾಗುತ್ತಿದ್ದ ಸಂಜು ಸ್ಯಾಮ್ಸನ್‌ಗೆ ಶಾಕ್ ಕೊಟ್ಟ ಗೌತಮ್ ಗಂಭೀರ್! ವಿಡಿಯೋ ವೈರಲ್

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇಶಾನ್ ಕಿಶನ್ ಶತಕ ಸಿಡಿಸಿ ಮಿಂಚಿದರೆ, ಸಂಜು ಸ್ಯಾಮ್ಸನ್ ವಿಫಲರಾದರು. ಅಂತಿಮ ಪಂದ್ಯದಲ್ಲಿ ಕೀಪಿಂಗ್ ಮಾಡಲು ಸಜ್ಜಾಗಿದ್ದ ಸಂಜುಗೆ ಕೋಚ್ ಗಂಭೀರ್ ಶಾಕ್ ನೀಡಿ, ಇಶಾನ್‌ಗೆ ಜವಾಬ್ದಾರಿ ವಹಿಸಿದ್ದು ತೀವ್ರ ಚರ್ಚೆ ಹುಟ್ಟುಹಾಕಿದೆ.

Read Full Story

01:19 PM (IST) Feb 01

ತಲುಪದ ಆಸ್ತಿ ತೆರಿಗೆ ಸಂಗ್ರಹದ ಗುರಿ; ಆಯುಕ್ತರ ಖಡಕ್ ಎಚ್ಚರಿಕೆ; ಎಷ್ಟಿದೆ ಬಾಕಿ ಮೊತ್ತ?

ಬಿಬಿಎಂಪಿ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದ ಗುರಿ ತಲುಪದ ಹಿನ್ನೆಲೆಯಲ್ಲಿ, ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳ ಸಭೆ ನಡೆಸಿದರು. ರಸ್ತೆ ಅಗಲೀಕರಣಕ್ಕೆ ಜಾಗ ವಶ ಅನಾಥ ವಾಹನಗಳ ತೆರವಿಗೆ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

Read Full Story

01:04 PM (IST) Feb 01

ಹಾಸನ - ಮನೆ ಕಾಂಪೌಂಡ್ ಒಡೆಸಿದ ಸ್ಥಳದಲ್ಲಿ ಮತ್ತೆ ಗೋಡೆ ಕಟ್ಟಿಸಲು ಮುಂದಾದ ಪುಷ್ಪಾ ಅರುಣ್‌ ಕುಮಾರ್!

ಹಾಸನದ ವಿದ್ಯಾನಗರದಲ್ಲಿ ನಿರ್ಮಾಪಕಿ ಪುಷ್ಪ ಮತ್ತು ಜಿಪಿಎ ಹೋಲ್ಡರ್ ದೇವರಾಜ್ ನಡುವಿನ ನಿವೇಶನ ವಿವಾದ ಮತ್ತೆ ಭುಗಿಲೆದ್ದಿದೆ. ಪುಷ್ಪ ಅವರು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದಾಗ ದೇವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದು, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ.

Read Full Story

12:53 PM (IST) Feb 01

ಪ್ರತಿ ಎಕರೆಗೆ 160 ರಿಂದ 170 ಟನ್‌ವರೆಗೆ ಕಬ್ಬು ಬೆಳೆಯುವ ವಿಧಾನ ಹೇಳಿದ ಕೃಷಿ ಸಾಧಕ

ಸಾಂಗ್ಲಿ ಮೂಲದ ಕೃಷಿ ಸಾಧಕ ಡಾ.ಸಂಜೀವ ಮಾನೆ ಅವರು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಎ-1 ಕೃಷಿ ಪದ್ಧತಿಯನ್ನು ಪರಿಚಯಿಸಿದರು. ಪ್ರತಿ ಎಕರೆಗೆ 160 ರಿಂದ 170 ಟನ್‌ವರೆಗೆ ಕಬ್ಬು ಬೆಳೆದು, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸುವ ವಿಧಾನವನ್ನು ಅವರು ವಿವರಿಸಿದರು.

Read Full Story

More Trending News