Published : Aug 17, 2026, 05:06 AM ISTUpdated : Aug 17, 2026, 11:08 PM IST

Karnataka Latest News Live: ಬೆಂಗಳೂರು ಜನರೇ ಅಲರ್ಟ್‌.. ಈ ರಸ್ತೆಗಳಲ್ಲಿ ಬಂದ್ರೆ ಸ್ಟ್ರಕ್ ಆಗೋದು ಗ್ಯಾರಂಟಿ..!

ಸಾರಾಂಶ

ಕೊಡಗು: ರಾಜ್ಯ ಸರ್ಕಾರವು ಸಾರ್ವಜನಿಕ ಹಾಗೂ ಸರ್ಕಾರಿ ಆವರಣಗಳ ಬಳಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಸೂದೆ ತರುತ್ತಿದೆಯೇ ಹೊರತು ಆರೆಸ್ಸೆಸ್‌ ನಿಯಂತ್ರಿಸಲು ಮಸೂದೆ ತರುತ್ತಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ, ಆರ್‌ಎಸ್‌ಎಸ್ ನೋಂದಣಿಗೆ ಸಂಬಂಧಿಸಿ ಆರ್‌ಎಸ್‌ಎಸ್ ಮುಖಂಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಯಾರ ಮನಸನ್ನು ನೋಯಿಸಲು ಈ ಕಾನೂನು ಮಾಡುತ್ತಿಲ್ಲ. ನ್ಯಾಯಾಲಯದ ಆದೇಶಗಳನ್ನು ಪಾಲಿಸಿಯೇ ಕಾನೂನು ರೂಪಿಸುತ್ತಿದ್ದೇವೆ. ನ್ಯಾಯಾಲಯದ ಕಾನೂನಿಗೆ ಗೌರವ ಕೊಡಬೇಕಲ್ಲವೇ? ಎಂದು ಪ್ರಶ್ನಿಸಿದರು.

ನಾವು ಭಾರತ್ ಜೋಡೋ ಕಾರ್ಯಕ್ರಮ ಮಾಡುವಾಗ ಫ್ರೀಡಂ ಪಾರ್ಕ್‌ನಿಂದ ರ್‍ಯಾಲಿ ಮಾಡಲು ಅವಕಾಶವಿರಲಿಲ್ಲ. ಆಗ ಕೋರ್ಟ್‌ನಿಂದಲೇ ಅನುಮತಿ ಪಡೆದಿದ್ದೆವು. ನಮ್ಮದೇ ಸರ್ಕಾರ ಇದ್ದರೂ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಿಲ್ಲ. ಬಿ.ಎಲ್‌. ಸಂತೋಷ್‌ ಅವರು ಹಿರಿಯರು. ಅವರ ಮಾತಿಗೂ ಗೌರವ ಕೊಡುತ್ತೇವೆ. ಆದರೆ, ಮೊದಲಿಗೆ ಕಾನೂನಿಗೆ ಗೌರವ ಕೊಡಬೇಕು ಎಂದರು.

11:08 PM (IST) Aug 17

ಬೆಂಗಳೂರು ಜನರೇ ಅಲರ್ಟ್‌.. ಈ ರಸ್ತೆಗಳಲ್ಲಿ ಬಂದ್ರೆ ಸ್ಟ್ರಕ್ ಆಗೋದು ಗ್ಯಾರಂಟಿ..!

ಬಿಡದಿ ಟೌನ್‌ಶಿಪ್ ವಿರೋಧಿಸಿ ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

Read Full Story

10:45 PM (IST) Aug 17

ಕಮ್ಮಾರಗಟ್ಟೆಯಲ್ಲಿ ಐತಿಹಾಸಿಕ ಕಾರ್ಣಿಕೋತ್ಸವ.. ರೈತರಿಗೆ ಸಿಕ್ಕೇ ಬಿಡ್ತು ಗುಡ್‌ನ್ಯೂಸ್

ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೆ ಏರಿತಲೆ' ಎಂಬ ಭವಿಷ್ಯವಾಣಿ ಕೇಳಿಬಂದಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸೂಚನೆಯೋ ಅಥವಾ ರೈತರ ಬೆಳೆಗೆ ಸಿಗುವ ಬಂಪರ್ ಬೆಲೆಯ ಮುನ್ಸೂಚನೆಯೋ ಎಂಬ ಚರ್ಚೆ ಭಕ್ತರಲ್ಲಿ ಶುರುವಾಗಿದೆ.

Read Full Story

10:40 PM (IST) Aug 17

ಮೆಲ್ಬೋರ್ನ್ ರೆಡ್ ಕಾರ್ಪೆಟ್‌ನಲ್ಲಿ ಕರ್ನಾಟಕದ ಕಂಪು - ರೇಷ್ಮೆ ಪಂಚೆ, ಗಂಡಭೇರುಂಡ ಕುರ್ತಾದಲ್ಲಿ ರಿಷಬ್ ಶೆಟ್ಟಿ!

Rishab Shetty IFFM: ಮೆಲ್ಬೋರ್ನ್‌ನ ಅಂತರರಾಷ್ಟ್ರೀಯ ರೆಡ್ ಕಾರ್ಪೆಟ್‌ನಲ್ಲಿ ನಟ ರಿಷಬ್ ಶೆಟ್ಟಿ ತಮ್ಮ ತವರು ಕರ್ನಾಟಕದ ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದಾರೆ.

Read Full Story

10:35 PM (IST) Aug 17

ಮಿಸ್ ಮಾಡ್ಕೋಬೇಡಿ ಈ ಬಂಪರ್ ಚಾನ್ಸ್! ₹250 ಕಟ್ಟಿದ್ರೆ ಲೈಫ್ ಕಂಪ್ಲೀಟ್ ಸೆಟಲ್, ಸಿಗುತ್ತೆ ₹40 ಲಕ್ಷ ಜಾಕಪಾಟ್!

ಕೇಂದ್ರ ಸರ್ಕಾರದ 'ಸುಕನ್ಯಾ ಸಮೃದ್ಧಿ ಯೋಜನೆ' ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಇರುವ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ ₹250 ಉಳಿತಾಯ ಮಾಡುವ ಮೂಲಕ, 21 ವರ್ಷಗಳ ನಂತರ ಸುಮಾರು ₹40 ಲಕ್ಷದಷ್ಟು ತೆರಿಗೆ-ಮುಕ್ತ ನಿಧಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

10:15 PM (IST) Aug 17

ಪ್ರಜ್ವಲ್ ಕೇಸ್‌ ಬೆನ್ನಲ್ಲೇ ಮತ್ತೊಂದು ಮೊಬೈಲ್ ಪತ್ತೆ.. ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಫೋನ್ ಸೀಜ್

ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಸಿಕ್ಕ ಬೆನ್ನಲ್ಲೇ ಪರಪ್ಪನ ಅಗ್ರಹಾರದ 'ಸಿ' ಬ್ಯಾರಕ್‌ನಲ್ಲಿ ದೇವರ ಫೋಟೋ ಹಿಂದೆ ಬಚ್ಚಿಟ್ಟಿದ್ದ ಮತ್ತೊಂದು ಮೊಬೈಲ್ ಪತ್ತೆಯಾಗಿದೆ. ಹಾಗಿದ್ದರೆ ಆ ಮೊಬೈಲ್ ಯಾರದ್ದು?

Read Full Story

10:09 PM (IST) Aug 17

ರೀಲ್ಸ್‌ಗಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಜಡೆ ಹಿಡಿದು ಜಗಳವಾಡಿದ ಯುವತಿಯರು, ವಿಡಿಯೋ ವೈರಲ್‌!

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರು ಜಗಳವಾಡಿದ್ದಾರೆ. ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಹೊಡೆದಾಡಿಕೊಂಡ ಈ ದೃಶ್ಯ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿನ ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
Read Full Story

09:58 PM (IST) Aug 17

ಮಕ್ಕಳನ್ನಷ್ಟೇ ಕರೆದು ಸೈಲೆಂಟ್ ಮದುವೆ! ಆದ್ರೆ ರೊನಾಲ್ಡೋ ಪತ್ನಿ ಜಾರ್ಜಿನಾ ಕೊರಳಲ್ಲಿದ್ದ 'ಆ' ಒಂದು ವಸ್ತು ಬೆಲೆ ಕೇಳಿ ಫ್ಯಾನ್ಸ್ ಶೇಕ್!

ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಜಾರ್ಜಿನಾ ರೊಡ್ರಿಗಸ್ ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಿದ್ದಾರೆ. ಆದರೆ, ಈ ಸರಳ ಸಮಾರಂಭದಲ್ಲಿ ಜಾರ್ಜಿನಾ ಧರಿಸಿದ್ದ ₹95.6 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಎಲ್ಲರ ಗಮನ ಸೆಳೆದಿದ್ದು, ಅವರ ಸರಳತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

09:29 PM (IST) Aug 17

12ನೇ ವಯಸ್ಸಿನಲ್ಲೇ ಮದುವೆ... ಗರ್ಭಿಣಿಯಾಗಿದ್ದಾಗ ಪತಿಯಿಂದ ಹಿಂಸೆ - ನಟಿ ಸರಿತಾ ಬದುಕಿನಲ್ಲಿ ಇಷ್ಟೊಂದು ದುರಂತವೇ?

Veteran Actress Saritha: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕೇವಲ ಸೌಂದರ್ಯ ಮತ್ತು ಗ್ಲಾಮರ್‌ನಿಂದಲ್ಲದೆ, ಅಸಾಧಾರಣ ಅಭಿನಯದ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಕೆಲವೇ ಕೆಲವು ನಟಿಯರಲ್ಲಿ ಸರಿತಾ ಪ್ರಮುಖರು.

Read Full Story

09:18 PM (IST) Aug 17

ಈಗ ಸೊಳ್ಳೆ ಕಾಟ.. ನಿದ್ದೆ ಇಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ ದರ್ಶನ್..!

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಬಳಿಕ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಸೊಳ್ಳೆ ಪರದೆ ಇಲ್ಲದೆ ಕಳೆದ ಎರಡು ದಿನಗಳಿಂದ ದರ್ಶನ್ ಸರಿಯಾಗಿ ನಿದ್ರೆ ಮಾಡದೆ ಮಾನಸಿಕವಾಗಿ ಕುಗ್ಗಿದ್ದಾರೆ.

Read Full Story

09:13 PM (IST) Aug 17

Bjp - ಮತದಾರರ ಲೆಕ್ಕಾಚಾರ, ಫಲಾನುಭವಿಗಳ ಡೇಟಾ ಗೇಮ್; ದಶಕದ ಮಾಳವೀಯ ಯುಗಕ್ಕೆ ತೆರೆ! ಬಿಜೆಪಿ 'ಹೊಸ ಐಟಿ ಎಂಜಿನ್' ದೀಪಕ್ ಮಾಸ್ಕೆ!

ಅಮಿತ್ ಮಾಳವೀಯ ಅವರ ಜಾಗಕ್ಕೆ ದೀಪಕ್ ಮಾಸ್ಕೆ ಅವರನ್ನು ನೇಮಿಸುವ ಮೂಲಕ ಬಿಜೆಪಿ ತನ್ನ ಐಟಿ ಸೆಲ್‌ನಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಯು ಆಕ್ರಮಣಕಾರಿ ಪ್ರಚಾರದಿಂದ ವೈಜ್ಞಾನಿಕ ದತ್ತಾಂಶ ವಿಶ್ಲೇಷಣೆ ಮತ್ತು ಫಲಾನುಭವಿಗಳ ಡೇಟಾ ನಿರ್ವಹಣೆಯತ್ತ ಸಾಗುವ ಬಿಜೆಪಿಯ ಹೊಸ ಡಿಜಿಟಲ್ ತಂತ್ರವನ್ನು ಸೂಚಿಸುತ್ತದೆ.

Read Full Story

08:50 PM (IST) Aug 17

ಸೌತ್‌ನ ಎಲ್ಲಾ ಇಂಡಸ್ಟ್ರಿಗಳಲ್ಲೂ ಈ ಮೂವರು ಚೆಲುವೆಯರ ಹವಾ - ರುಕ್ಮಿಣಿ, ಮಮಿತಾ, ಕಯಾದುಗೆ ಎಲ್ಲೆಡೆ ಡಿಮ್ಯಾಂಡ್!

South Indian Actresses: ಕೆಲವು ನಾಯಕಿಯರಿಗೆ ಚಿತ್ರರಂಗದಲ್ಲಿ ‘ಆಲ್ ಆಕ್ಸೆಸ್ ಪಾಸ್’ ಸಿಕ್ಕಂತಿದೆ. ಒಂದೇ ಒಂದು ಇಂಡಸ್ಟ್ರಿಗೆ ಸೀಮಿತವಾಗದೆ, ಬಹುತೇಕ ಎಲ್ಲಾ ಭಾಷೆಗಳಲ್ಲೂ ತಮ್ಮ ಪ್ರತಿಭೆಯ ಮೂಲಕ ಛಾಪು ಮೂಡಿಸುತ್ತಿದ್ದಾರೆ.

Read Full Story

08:43 PM (IST) Aug 17

ಬೆಂಗಳೂರಿಗೆ ಕಾಲಿಡದಂತೆ ಸ್ಪೈಡರ್​ಮ್ಯಾನ್​ಗೆ ಎಚ್ಚರಿಸಿದ ಬಯೋಕಾನ್​ ಮುಖ್ಯಸ್ಥೆ ​ಕಿರಣ್ ಮುಜುಂದಾರ್- ಏನಿದು ವಿಷ್ಯ

ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ಅವ್ಯವಸ್ಥೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸ್ಪೈಡರ್​ಮ್ಯಾನ್​ ಕೇಬಲ್​ಗಳ ಜಾಲದಲ್ಲಿ ಸಿಲುಕಿರುವ ಫೋಟೋ ಬಳಸಿ, ಬೆಂಗಳೂರಿಗೆ ಬರದಂತೆ ಎಚ್ಚರಿಕೆ ನೀಡಿದ್ದು, ಈ ಪೋಸ್ಟ್ ವೈರಲ್ ಆಗಿದೆ. ಈ ಮೂಲಕ ಅವರು ನಗರದ ಕೇಬಲ್ ವೈಯರ್​ಗಳ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆದಿದ್ದಾರೆ.
Read Full Story

08:07 PM (IST) Aug 17

20 ವರ್ಷಗಳ ಬಳಿಕ ಮತ್ತೆ ಕಚೇರಿಗೆ ಬಂದ ಅಧಿಕಾರಿ..! ಚಿಂತೆಗೆ ಬಿದ್ದ ಅಂಕೋಲಾ, ಯಲ್ಲಾಪುರ ಜನ

ಕಳೆದ 20 ವರ್ಷಗಳಿಂದ ಖಾಲಿ ಇದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ ಅವರ ನೇಮಕವಾಗಿದ್ದು, ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.

Read Full Story

07:41 PM (IST) Aug 17

Success Story - ಓದು 5ನೇ ತರಗತಿಗೆ ನಿಂತಿತು, ಕನಸು ಮಾತ್ರ ನಿಲ್ಲಲಿಲ್ಲ! 4 ಚಿನ್ನದ ಬಳೆಗಳಿಂದ ₹11,000 ಕೋಟಿ ಬಿಸಿನೆಸ್ ಕಟ್ಟಿದ ಕಿರಣ್ ಕುಮಾರ್!

5ನೇ ತರಗತಿಗೆ ಶಿಕ್ಷಣ ನಿಲ್ಲಿಸಿದ ಕಿರಣ್ ಕುಮಾರ್, ತಾಯಿಯ ನಾಲ್ಕು ಚಿನ್ನದ ಬಳೆಗಳನ್ನು ಬಂಡವಾಳವಾಗಿಟ್ಟುಕೊಂಡು ಆಭರಣ ಉದ್ಯಮಕ್ಕೆ ಕಾಲಿಟ್ಟರು. ಇಂದು ಅವರು ಲಲಿತಾ ಜ್ಯುವೆಲ್ಲರಿ ಮಾರ್ಟ್ ಅನ್ನು ₹11,000 ಕೋಟಿ ಮೌಲ್ಯದ ಬೃಹತ್ ಸಾಮ್ರಾಜ್ಯವಾಗಿ ಬೆಳೆಸಿದ್ದು, ಕಂಪನಿಯು IPOಗೆ ಸಜ್ಜಾಗಿದೆ.
Read Full Story

07:38 PM (IST) Aug 17

ಬೆಂಗಳೂರಲ್ಲಿ ಮನಮಿಡಿದ ಒಂದು ಬೆಕ್ಕಿನ ಅಪರೂಪದ ಕತೆ.. ಪೊಲೀಸರಿಗಾಗಿ 112ಕ್ಕೆ ಕರೆ ಮಾಡಿದಾಗ ಏನಾಯಿತು?

ಬೆಂಗಳೂರಿನ ಕಾಮರಾಜ ರಸ್ತೆಯಲ್ಲಿ ಮೂರು ದಿನಗಳಿಂದ ಬೀಗ ಹಾಕಿದ್ದ ಮನೆಯೊಳಗೆ ಸಿಲುಕಿದ್ದ ಬೆಕ್ಕನ್ನು ಭಾರತೀನಗರ ಪೊಲೀಸರು 112 ಗೆ ಕರೆ ಬಂದ 7 ನಿಮಿಷದಲ್ಲಿ ಸ್ಥಳಕ್ಕೆ ಬಂದು ರಕ್ಷಿಸಿದ್ದಾರೆ. ಪೊಲೀಸರ ಈ ಮಾನವೀಯ ಕಾರ್ಯವನ್ನು ಕಂಡು ಅಲ್ಲಿದ್ದ ಪುಟ್ಟ ಬಾಲಕನೊಬ್ಬ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.

Read Full Story

06:45 PM (IST) Aug 17

ವೆಬ್‌ಸೀರಿಸ್ ಜಗತ್ತಿಗೆ ಪ್ರಿಯಾಂಕಾ ಉಪೇಂದ್ರ, ನಿಶ್ವಿಕಾ ನಾಯ್ಡು ಎಂಟ್ರಿ - ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕನ್ನಡ ಚಿತ್ರರಂಗದಲ್ಲಿ ವೆಬ್‌ಸೀರಿಸ್‌ಗಳತ್ತ ಮುಖ ಮಾಡುತ್ತಿರುವ ಕಲಾವಿದರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ವಿಭಿನ್ನ ಫಾರ್ಮ್ಯಾಟ್‌ಗಳು ಹಾಗೂ ಕಥೆಗಳಿಗೆ ಅವಕಾಶ..

Read Full Story

06:25 PM (IST) Aug 17

9 ಗಂಟೆ ಕೋರ್ಟ್ ಕೆಲಸ ಕೇಳಿದ್ದಕ್ಕೆ ನೇರ ‘ನೋ’! Gen Z ಇಂಟರ್ನ್‌ನ ಮುಂದಿನ ಮಾತು ಕೇಳಿ ಕಂಗಾಲಾದ ಬಿದ್ದ ಬಾಸ್!

ದೆಹಲಿ ವಕೀಲರೊಬ್ಬರು ತಮ್ಮ Gen Z ಇಂಟರ್ನ್‌ಗೆ 9 ಗಂಟೆಗೆ ಕೋರ್ಟ್‌ಗೆ ಬರಲು ಹೇಳಿದಾಗ, ಜಿಮ್ ಸಮಯಕ್ಕೆ ಅಡ್ಡಿಯಾಗುತ್ತದೆ ಎಂದು ಆತ ನಿರಾಕರಿಸಿದ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೃತ್ತಿಪರ ಜವಾಬ್ದಾರಿ ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ ಕುರಿತು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

Read Full Story

06:21 PM (IST) Aug 17

‘ಮುಧೋಳ್’ ಹೆಸರಿನ ಹಿಂದೆ ರವಿಚಂದ್ರನ್ - ವಿಕ್ರಮ್ ಬಿಚ್ಚಿಟ್ಟ ಆ ಕುತೂಹಲಕಾರಿ ಸೀಕ್ರೆಟ್ ಏನು?

Mudhol Movie: ಬಹುಕಾಲದಿಂದ ನಿರೀಕ್ಷೆ ಮೂಡಿಸಿರುವ ನಟ-ನಿರ್ಮಾಪಕ ವಿಕ್ರಮ್ ರವಿಚಂದ್ರನ್ ಅಭಿನಯದ ‘ಮುಧೋಳ್’ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದೆ.

Read Full Story

06:17 PM (IST) Aug 17

‘ನನ್ನ ಮೂಡ್ ಹಾಳು ಮಾಡಿದೆ’ - ಹನಿಮೂನ್‌ ವೇಳೆ ಪೀರಿಯಡ್ಸ್ ಆಗಿದ್ಕೆ ಪತ್ನಿಗೆ ಥಳಿತ.. 3 ವರ್ಷದ ಬಳಿಕ ಕೇಸ್‌ಗೆ ಟ್ವಿಸ್ಟ್!

ಹನಿಮೂನ್ ವೇಳೆ ಪತ್ನಿಗೆ ಮುಟ್ಟಾಗಿದ್ದಕ್ಕೆ "ಮೂಡ್ ಹಾಳು ಮಾಡಿದೆ" ಎಂದು ಆಕೆಯ ಮೇಲೆ ಪತಿ ಭೀಕರ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಅಂಡಮಾನ್‌ನಲ್ಲಿ ನಡೆದಿದೆ. ಇನ್ನೊಂದು ವಿಚಾರ ಏನೆಂದರೆ ಪ್ರಕರಣ ನಡೆದ ಬರೋಬ್ಬರಿ ಮೂರು ವರ್ಷಗಳ ನಂತರ ಕೇಸ್ ದಾಖಲಾಗಿದೆ..

Read Full Story

06:02 PM (IST) Aug 17

ಫ್ಯಾನ್ಸಿ ನಂಬರ್‌ ಕ್ರೇಜ್‌ನಿಂದ ಸಾರಿಗೆ ಇಲಾಖೆಗೆ ಹರಿದುಬಂತು ಕೋಟಿ ಕೋಟಿ ಹಣ, ಯಾವ ನಂಬರ್‌ಗೆ ಎಷ್ಟು ದುಡ್ಡು? ಇಲ್ಲಿದೆ ಡೀಟೇಲ್ಸ್‌..

ವಾಹನಗಳ ಫ್ಯಾನ್ಸಿ ನೋಂದಣಿ ಸಂಖ್ಯೆಗಳ ಮೇಲಿನ ವ್ಯಾಮೋಹದಿಂದಾಗಿ ಸಾರಿಗೆ ಇಲಾಖೆಯು 2025-26ನೇ ಸಾಲಿನಲ್ಲಿ ಇ-ಹರಾಜಿನ ಮೂಲಕ ದಾಖಲೆಯ 118.14 ಕೋಟಿ ರೂ. ಆದಾಯ ಗಳಿಸಿದೆ.

Read Full Story

05:49 PM (IST) Aug 17

Cricekt - ಕನ್ನಡಿಗ ನೀಡಿದ ಒಂದೇ ಒಂದು ಶಾಕ್‌ಗೆ ಬೆಚ್ಚಿದ್ದ ದಾದಾ; ಆ ಘಟನೆಗಾಗಿ ನಾಯಕತ್ವ ಬಿಡಲು ನಿಂತಿದ್ದ ಗಂಗೂಲಿ!

ಆ ಒಬ್ಬ ಕನ್ನಡಿಗ, ಸೌರವ್ ಗಂಗೂಲಿಯರಿಗೆ ಆ ಒಬ್ಬ ಕನ್ನಡಿಗ ನೀಡಿದ ಶಾಕ್‌ಗೆ. ಗಂಗೂಲಿ ತಮ್ಮ ನಾಯಕತ್ವವನ್ನೇ ತ್ಯಜಿಸಲು ಮುಂದಾಗಿದ್ದರು. ಈ ಘಟನೆಯನ್ನು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಆ ಘಟನೆ ಯಾವುದು ಗೊತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story

05:41 PM (IST) Aug 17

ಯಶ್‌ ‘ಟಾಕ್ಸಿಕ್‌’ನಲ್ಲಿ ಭಾರತೀಯ ಸಂಗೀತಕ್ಕೆ ರಷ್ಯಾದ ಖ್ಯಾತ ಗಾಯಕಿ ಧ್ವನಿ - ಯಾರು ಈ ಡಯಾನಾ?

Russian Singer Diana Ankudinova: ಯಶ್‌ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಈಗಾಗಲೇ ಟೀಸರ್‌, ಹಾಡುಗಳು ಮತ್ತು ಟ್ರೇಲರ್‌ ಮೂಲಕ ಭಾರೀ ಕುತೂಹಲ ಮೂಡಿಸಿದೆ.

Read Full Story

05:31 PM (IST) Aug 17

DK ಶಿವಕುಮಾರ್ ಮತ್ತು ಪ್ರಕಾಶ್ ರಾಜ್ ದಿಢೀರ್ ಭೇಟಿ.. ಭಾರೀ ಕುತೂಹಲ

ನಟ ಪ್ರಕಾಶ್ ರಾಜ್ ನೇತೃತ್ವದ ನಾಗರಿಕ ಸಂಘಟನೆಗಳ ನಿಯೋಗ ಡಿಕೆಶಿ ಅವರನ್ನು ಭೇಟಿಯಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿತು. ಮತದಾನದ ಹಕ್ಕನ್ನು ರಕ್ಷಿಸಲು ಈ ಪ್ರಕ್ರಿಯೆಯ ಕಾಲಾವಕಾಶವನ್ನು ವಿಸ್ತರಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Read Full Story

05:03 PM (IST) Aug 17

KL Rahul - 2019ರ ಆ ಒಂದು ಭೇಟಿ, ಟೀಮ್ ಇಂಡಿಯಾ ಕ್ರಿಕೆಟರ್ ಕನ್ನಡಿಗ ಕೆ.ಎಲ್. ರಾಹುಲ್ ಮನಸ್ಸು ಕದ್ದ ಸುನೀಲ್ ಶೆಟ್ಟಿ ಮಗಳು!

ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಅವರ ಪ್ರೇಮಕಥೆಯು 2019ರಲ್ಲಿ ಬೆಂಗಳೂರಿನಲ್ಲಿ ಶುರುವಾಯಿತು. ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ, 2021ರಲ್ಲಿ ಸಾರ್ವಜನಿಕವಾಗಿ ಒಪ್ಪಿಕೊಂಡು, 2023ರಲ್ಲಿ ಖಂಡಾಲಾದಲ್ಲಿ ವಿವಾಹವಾದರು. ಈ ಲೇಖನವು ಅವರ ಭೇಟಿ, ಮದುವೆ, ಶಿಕ್ಷಣ ಮತ್ತು ಆಸ್ತಿಯ ವಿವರಗಳನ್ನು ಒಳಗೊಂಡಿದೆ.
Read Full Story

04:54 PM (IST) Aug 17

ದರ್ಶನ್‌ಗೆ ಮತ್ತೆ ಹಿನ್ನಡೆ.. ಕೋರ್ಟ್‌ನಿಂದ ಮೂರು ಪ್ರಮುಖ ಆದೇಶ..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಖುದ್ದು ಕೋರ್ಟ್‌ಗೆ ಹಾಜರಾಗಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ದೊಡ್ಡ ಹಿನ್ನಡೆ ನೀಡಿದೆ. ಬದಲಾಗಿ, ವಿಚಾರಣೆಗೆ ಸ್ಪಷ್ಟ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಹಾಗೂ ವಕೀಲರೊಂದಿಗೆ ಗೌಪ್ಯ ಮಾತುಕತೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

Read Full Story

04:49 PM (IST) Aug 17

ಬೆಂಗಳೂರಿನಲ್ಲಿ 'ಪಾರ್ಕಿಂಗ್' ಗಲಾಟೆ - ಕಾರಿನ ಬಾನೆಟ್ ಮೇಲೆ ಕಲ್ಲಿನಿಂದ 'ನೋ ಪಾರ್ಕಿಂಗ್' ಎಂದು ಕೆತ್ತಿ ವಿಕೃತ ಮೆರೆದ ದಂಪತಿ!

ಬೆಂಗಳೂರಿನ BTM ಲೇಔಟ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಕಲ್ಲು ಹಾಗೂ ಚೂಪಾದ ವಸ್ತುವಿನಿಂದ ಗೀಚಿ, ಬಾನೆಟ್ ಮೇಲೆ 'ನೋ ಪಾರ್ಕಿಂಗ್' ಎಂದು ಕೆತ್ತಿ ವಿಕೃತಿ ಮೆರೆದ ಆಘಾತಕಾರಿ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯದ ವಿರುದ್ಧ ವಾಹನ ಮಾಲೀಕರು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

04:34 PM (IST) Aug 17

ಕಿಚ್ಚ ಸುದೀಪ್‌ ಅವರ ಐಷಾರಾಮಿ ಜೀವನ ಹೇಗಿದೆ? ಆಸ್ತಿ, ಕಾರು, ಫ್ಯಾಷನ್‌ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

Kichcha Sudeep Net Worth: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಅಂದಾಜು ನಿವ್ವಳ ಮೌಲ್ಯ ಎಷ್ಟು? ಅವರ ಆದಾಯದ ಮೂಲಗಳೇನು? ಯಾವ ರೀತಿಯ ಐಷಾರಾಮಿ ಜೀವನವನ್ನು ಅವರು ನಡೆಸುತ್ತಿದ್ದಾರೆ? ನೋಡೋಣ.

Read Full Story

04:05 PM (IST) Aug 17

ಸ್ಟಾರ್‌ಡಮ್‌, ಟಾಕ್ಸಿಕ್‌, ರಾವಣನ ಪಾತ್ರ... ರಾಕಿಂಗ್ ಸ್ಟಾರ್ ಯಶ್‌ ಬಿಚ್ಚಿಟ್ಟ ಸೀಕ್ರೆಟ್‌ಗಳು!

Rocking Star Yash: ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್‌ ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.

Read Full Story

10:58 AM (IST) Aug 17

Shivamogga - ಕೊಡಚಾದ್ರಿ ಬೆಟ್ಟದಲ್ಲಿ 60 ಅಡಿ ಕಂದಕಕ್ಕೆ ಬಿದ್ದ ಪ್ರವಾಸಿಗನ ರಕ್ಷಣೆ

ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟದಲ್ಲಿ, ಚಾರಣಕ್ಕೆ ಬಂದಿದ್ದ ಕುಮಟಾ ಮೂಲದ ಪ್ರದೀಪ್ ಎಂಬ ಪ್ರವಾಸಿಗರು ತಲೆಸುತ್ತು ಬಂದು ಸುಮಾರು 60 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಸ್ಥಳೀಯ ಜೀಪ್ ಚಾಲಕರು ಸಮಯಪ್ರಜ್ಞೆಯಿಂದ ಹಗ್ಗ ಬಳಸಿ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

Read Full Story

09:53 AM (IST) Aug 17

ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಸಿ ಅನ್ನೋದು ತಪ್ಪಾ? ನಟಿಯ ಮೇಲೆ ಅಪಾರ್ಟ್‌ಮೆಂಟ್‌ನಲ್ಲಿ ದೌರ್ಜನ್ಯ

ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಅನ್ಯಭಾಷಿಕ ನಿವಾಸಿಗಳು ನಿಂದಿಸಿ, ವಾಟ್ಸಾಪ್ ಗ್ರೂಪ್‌ನಿಂದ ತೆಗೆದುಹಾಕಿದ್ದಾರೆ. ನಮ್ಮ ನೆಲದಲ್ಲಿ ನಮ್ಮ ಭಾಷೆ ಮಾತನಾಡಿ ಎನ್ನುವುದು ತಪ್ಪೇ ಎಂದು ನಟಿ ಪ್ರಶ್ನಿಸಿದ್ದು, ಘಟನೆ ಚರ್ಚೆಗೆ ಗ್ರಾಸವಾಗಿದೆ.

Read Full Story

08:50 AM (IST) Aug 17

ಇದು ನನ್ನ ಕರ್ಮ ಭೂಮಿ - ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಭಾವುಕ..!

ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಿಸಲಾದ 'ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯ'ವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಭಾವುಕರಾದ ಅವರು, ಶಿವಮೊಗ್ಗವೇ ನನ್ನ ಕರ್ಮಭೂಮಿ ಎಂದರಲ್ಲದೆ, ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸಮಾಜದ ಕರ್ತವ್ಯ ಎಂದು ಹೇಳಿದರು. ಈ ನೂತನ ಕಟ್ಟಡವು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ.
Read Full Story

08:24 AM (IST) Aug 17

ಸ್ನೇಹಿತ ಕಾರ್ತಿಕ್‌ ಮಹೇಶ್‌ಗೆ ಬಿಗ್ ಸರ್ಪೈಸ್ ನೀಡಿದ ನಮ್ರತಾ ಗೌಡ - ವಿಡಿಯೋ ವೈರಲ್

'ಕರ್ಣ' ಸೀರಿಯಲ್‌ನಿಂದ ನಟಿ ನಮ್ರತಾ ಗೌಡ ದೂರವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದೀಗ ಅವರು ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರಿಗೆ ಸರ್ಪ್ರೈಸ್ ಭೇಟಿ ನೀಡಿದ್ದಾರೆ.

Read Full Story

06:38 AM (IST) Aug 17

ಕನ್ನಡಿಗ ದಂಪತಿಯಿಂದ ವಂದೇ ಮಾತರಂ, ಜನಗಣಮನ ಗೀತೆಯೊಂದಿಗೆ ಅಮೆರಿಕದಲ್ಲಿ ಗೃಹಪ್ರವೇಶ

ನ್ಯೂಯಾರ್ಕ್‌ನ ಆಲ್ಬನಿಯಲ್ಲಿ ನೆಲೆಸಿರುವ ಕನ್ನಡಿಗ ದಂಪತಿ ಸುಚಿತ ಮತ್ತು ಅಮೋಲ್ ಜಾಜು ಅವರ ನೂತನ ಗೃಹಪ್ರವೇಶ ಸಮಾರಂಭದಲ್ಲಿ ದೇಶಭಕ್ತಿ ಮೊಳಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಪೂಜೆಯ ನಂತರ ನೆರೆದಿದ್ದವರೆಲ್ಲರೂ 'ವಂದೇ ಮಾತರಂ' ಮತ್ತು 'ಜನಗಣಮನ' ಗೀತೆಗಳನ್ನು ಹಾಡಿ ತಾಯ್ನಾಡಿನ ಮೇಲಿನ ಪ್ರೀತಿಯನ್ನು ಮೆರೆದರು.
Read Full Story

06:28 AM (IST) Aug 17

30 ವರ್ಷದಿಂದ ಮದ್ಯ, ಗುಟ್ಕಾ ನಿಷೇಧಿಸಿ ರಾಜ್ಯದ ಮಾದರಿಯಾದ ಕೊಪ್ಪಳ ಜಿಲ್ಲೆಯ ಗ್ರಾಮ

ಕಳೆದ 30 ವರ್ಷಗಳಿಂದ ಮದ್ಯ ಮತ್ತು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯಕ್ಕೆ ಈ ಗ್ರಾಮ ಮಾದರಿಯಾಗಿದೆ. ಈ ಸಾಮೂಹಿಕ ನಿರ್ಧಾರದಿಂದಾಗಿ ಗ್ರಾಮದಲ್ಲಿ ಯುವಕರು ಸರಿದಾರಿಯಲ್ಲಿದ್ದು, ಆರೋಗ್ಯವಂತರಾಗಿದ್ದಾರೆ ಮತ್ತು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

Read Full Story

06:19 AM (IST) Aug 17

ಕರ್ನಾಟಕದ ಕರಾವಳಿಯಲ್ಲಿ ಗಣನೀಯವಾಗಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ! ಯಾವುದರ ಸಂಕೇತ?

ಕರಾವಳಿ ಪ್ರದೇಶದಲ್ಲಿ ಮಳೆಯ ಅಭಾವ, ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಮಾಂಸಕ್ಕಾಗಿ ಬೇಟೆಯಾಡುವುದರಿಂದ ಕಪ್ಪೆಗಳ ಸಂತತಿ ಗಣನೀಯವಾಗಿ ಕ್ಷೀಣಿಸುತ್ತಿದೆ. ಇದು ಪರಿಸರ ವ್ಯವಸ್ಥೆಯ ಆಹಾರ ಸರಪಳಿಯ ಮೇಲೆ ಪರಿಣಾಮ ಬೀರಿದ್ದು, ಕೀಟಗಳು ಮತ್ತು ಸೊಳ್ಳೆಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಇದರಿಂದಾಗಿ ಹಾವುಗಳು ಆಹಾರ ಅರಸಿ ಮಾನವ ವಸತಿ ಪ್ರದೇಶಗಳಿಗೆ ಬರುತ್ತಿವೆ.
Read Full Story

06:08 AM (IST) Aug 17

ಕೆಎಎಸ್‌ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ ಅವರಿಂದ 283 ಸರ್ಕಾರಿ ಶಾಲೆಗಳಿಗೆ ಬಣ್ಣ

ಧಾರವಾಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ತಮ್ಮ 'ಪರಿಸರ ಪ್ರೇಮ ತಂಡ'ದೊಂದಿಗೆ ಸ್ವಂತ ಖರ್ಚಿನಲ್ಲಿ ಬಣ್ಣ ಮಾಸಿದ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳಿಗೆ ಬಣ್ಣ ಬಳಿಯುತ್ತಿದ್ದಾರೆ. ಇಲ್ಲಿಯವರೆಗೆ 283 ಕಟ್ಟಡಗಳನ್ನು ಸುಂದರಗೊಳಿಸಿರುವ ಇವರು, ತಮ್ಮ ಬಾಲ್ಯದ ಅನುಭವದಿಂದ ಪ್ರೇರಿತರಾಗಿ ಈ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
Read Full Story

05:58 AM (IST) Aug 17

ಇನ್ಮುಂದೆ ಅನುಮತಿ ಪಡೆಯದೆ ರ್‍ಯಾಲಿ ಮಾಡಿದರೆ 3 ವರ್ಷ ಜೈಲು ಶಿಕ್ಷೆ? ವಿಧೇಯಕದಲ್ಲಿ ಏನಿದೆ?

ಕರ್ನಾಟಕ ಸರ್ಕಾರವು 'ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026' ಅನ್ನು ಜಾರಿಗೆ ತರಲು ಮುಂದಾಗಿದೆ. ಈ ವಿಧೇಯಕದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ಸರ್ಕಾರದ ಅನುಮತಿ ಕಡ್ಡಾಯವಾಗಲಿದ್ದು, ನಿಯಮ ಉಲ್ಲಂಘಿಸಿದರೆ ಜಾಮೀನು ರಹಿತ ಅಪರಾಧವಾಗಿ ಪರಿಗಣಿಸಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

Read Full Story

05:41 AM (IST) Aug 17

ಹನೂರು ಎನ್ಕೌಂಟರ್‌ಗೆ ಅರಣ್ಯ ಸಿಬ್ಬಂದಿ ‘ಜಿಂಕೆ ಮಾಂಸ’ ಸಾಕ್ಷ್ಯ; ತ.ನಾಡು ವಿಪಕ್ಷಗಳ ಆಕ್ರೋಶ

ಕಾವೇರಿ ವನ್ಯಜೀವಿ ವಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ತನಿಖೆ ಆರಂಭವಾಗಿದೆ. ಇದು ನಕಲಿ ಎನ್‌ಕೌಂಟರ್‌ ಅಲ್ಲವೆಂದು ಸಾಬೀತುಪಡಿಸಲು, ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಪಡಿಸಿಕೊಂಡ ಸುಮಾರು 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ತನಿಖಾಧಿಕಾರಿಗಳ ಮುಂದೆ ಸಾಕ್ಷಿಯಾಗಿ ಇರಿಸಿದೆ. ಈ ಘಟನೆಯಿಂದ ಉದ್ರಿಕ್ತರಾದ ಜನರು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.
Read Full Story

05:30 AM (IST) Aug 17

SIR ನಮೂನೆ ವಾಪಸ್ ಕೊಡಲು ಇಂದೇ ಕೊನೆ ದಿನ; ಹೆಸರು ತೆಗೆದುಹಾಕಿದ್ದಾರಾ? ನೋಡಿಕೊಳ್ಳಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಗಣತಿ ನಮೂನೆ ವಾಪಸ್ ನೀಡಲು ಮತ್ತು ರೋಲ್‌ಬ್ಯಾಕ್‌ಗೆ ಸೋಮವಾರ ಕೊನೆಯ ದಿನವಾಗಿದೆ. ಎಎಸ್‌ಡಿಡಿಒ ವರ್ಗಕ್ಕೆ ಸೇರಿದ ಅಂದಾಜು 1.08 ಕೋಟಿ ಮತದಾರರ ಹೆಸರುಗಳು ಪಟ್ಟಿಯಿಂದ ರದ್ದಾಗುವ ಸಾಧ್ಯತೆಯಿದ್ದು, ಅರ್ಹರು ತಮ್ಮ ಹೆಸರು ಉಳಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಪರಿಷ್ಕೃತ ಕರಡು ಮತದಾರರ ಪಟ್ಟಿಯು ಆಗಸ್ಟ್ 24 ರಂದು ಪ್ರಕಟವಾಗಲಿದೆ.
Read Full Story

More Trending News