ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಪುನರಾರಂಭ!

ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಾರಕ್ಕೊಮ್ಮೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಏಪ್ರಿಲ್ 12 ರಿಂದ ಪುನಃ ಪ್ರಾರಂಭಿಸಲಾಗಿದೆ. ಈ ರೈಲು ಸೇವೆಯನ್ನು ಏಪ್ರಿಲ್ 26 ರವರೆಗೆ ರದ್ದುಗೊಳಿಸಲಾಗಿತ್ತು.


ಬೆಂಗಳೂರು (ಏ.07): ಕರ್ನಾಟಕದ ಹುಬ್ಬಳ್ಳಿಯಿಂದ ತಮಿಳುನಾಡಿನ ರಾಮೇಶ್ವರಂವರೆಗೆ ವಾರಕ್ಕೊಮ್ಮೆ ಸಂಚಾರ ಮಾಡುತ್ತಿದ್ದ ವಿಶೇಷ ಎಕ್ಸ್‌ಪ್ರೆಸ್ ರೈಲು (ಹುಬ್ಬಳ್ಳಿ-ರಾಮೇಶ್ವರಂ) ಸೇವೆಯನ್ನು ಪುನಃ ಪ್ರಾರಂಭಿಸಲಾಗಿದೆ. ಇನ್ನು ಏಪ್ರಿಲ್ 26ರವರೆಗೆ ರದ್ದುಗೊಳಿಸಲಾಗಿದ್ದ ರೈಲನ್ನು ಇದೀಗ ಮುಂಚಿತವಾಗಿಯೇ ಏ.12ರಿಂದ ಮರು ಆರಂಭಿಸಲಾಗುತ್ತಿದೆ.

ನೈರುತ್ಯ ರೈಲ್ವೆ ವಲಯದಿಂದ ಹಲವು ವರ್ಷಗಳಿಂದ ಹುಬ್ಬಳ್ಳಿಯಿಂದ ಪ್ರತಿ ಶನಿವಾರ ರಾಮೇಶ್ವರಂಗೆ ರೈಲು ಹೊರಡುತ್ತಿತ್ತು. ಪುನಃ ಭಾನುವಾರ ರಾಮೇಶ್ವರಂ ಕಡೆಯಿಂದ ಹುಬ್ಬಳ್ಳಿಗೆ ವಾಪಸ್ ಬರುತ್ತಿತ್ತು. ಆದರೆ, ಕಾರ್ಯಾಚರಣೆಯ ಕಾರಣಗಳಿಂದಾಗಿ ಮಾ.22, ಮಾ.29, ಏ.5, ಏ.12, ಏ.19 ಮತ್ತು ಏ.26ರಂದು ರೈಲು ಸೇವೆ ರದ್ದುಗೊಳಿಸಲಾಗೊತ್ತು. ಇದೀಗ ದೀರ್ಘಾವಧಿ ಕಾರ್ಯಾಚರಣೆ ಸ್ಥಗಿತ ಮಾಡದೇ, ಏ.12ರಿಂದಲೇ ರೈಲು ಸೇವೆ ಪುನಾರಂಭ ಮಾಡಲಾಗುತ್ತಿದೆ. 

Latest Videos

1. ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ - ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮೊದಲು ಏಪ್ರಿಲ್ 26, 2025 ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 12, 2025 ರಿಂದ ಜೂನ್ 28, 2025 ರವರೆಗೆ ಪುನರಾರಂಭಿಸಲಾಗುತ್ತದೆ.

2. ರೈಲು ಸಂಖ್ಯೆ 07356 ರಾಮೇಶ್ವರಂ - ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್  ರೈಲನ್ನು ಮೊದಲು ಏಪ್ರಿಲ್ 27, 2025 ರವರೆಗೆ ರದ್ದುಗೊಳಿಸಲಾಗಿತ್ತು. ಈಗ ಏಪ್ರಿಲ್ 13, 2025 ರಿಂದ ಜೂನ್ 29, 2025 ರವರೆಗೆ ಪುನರಾರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!