vuukle one pixel image

26/11 ದಾಳಿಯ ಮಾಸ್ಟರ್ ಮೈಂಡ್ ಸತ್ಯ ಕಕ್ಕುತ್ತಾನಾ?

Gowthami K  | Updated: Apr 12, 2025, 9:11 PM IST

ಅದು ಭಾರತದ ಪಾಲಿಗೆ ಆರದ ಗಾಯ. ಕೋಟಿ ಕೋಟಿ ಭಾರತೀಯರ ಎದೆಯಲ್ಲಿ ಕ್ರೋಧಾಗ್ನಿ ಹೊತ್ತಿಸಿದ ಗಾಯ. ಅವತ್ತು ಆ ದಾರುಣ ದಾಳಿ ನಡೆಸಿದ ರಾಕ್ಷಸರನ್ನ ಭಾರಯ ಯಾವತ್ತೋ ಯಮಸದನಕ್ಕೆ ಕಳಿಸಿದೆ. ಆದ್ರೆ, ಈ ರಣರಕ್ಕಸ ದಾಳಿಯ ಹಿಂದಿದ್ದ ಮಾಸ್ಟರ್ ಮೈಂಡ್ ಒಬ್ಬ ಮಾತ್ರ, ಬಚಾವ್ ಆಗಿಬಿಟ್ಟಿದ್ದ. ಈಗ ಅವನ ತಲೆಗೇ ಗಂಡಾಂತರ ಎದುರಾಗಿದೆ. ಅಷ್ಟಕ್ಕೂ ದೂರದೇಶದಲ್ಲೆಲ್ಲೋ ಬೆಚ್ಚಗಿದ್ದ ಉಗ್ರಸರ್ಪನಾ, ಅದ್ಯಾವ ಗರುಡಮಂತ್ರ ಪಠಿಸಿ ಭಾರತ ಬರಮಾಡಿಕೊಳ್ತು. ಬಂದಿರೋ ಉಗ್ರನನ್ನ ಏನು ಮಾಡಲಿದೆ ಭಾರತ?  

ನಾವು ನಿಮಗೆ ಹೇಳ್ಬೇಕು ಅಂತಿರೋದು ಇದೇ ಕತೆ. ಈ ಎರಡು ಶಕ್ತಿಗಳು ಒಟ್ಟಾಗಿ ಹೇಗೆ ಹೊಸ ಚರಿತ್ರೆ ಸೃಷ್ಟಿಸಿವೆ ಅನ್ನೋದನ್ನ ಕೇಳೋದೇ ರೋಮಾಂಚಕವಾಗಿದೆ. ಭಾರತ ಈಗ ಬದಲಾಗಿದೆ. ಎದುರಾಳಿ ಒಂದು ಹೆಜ್ಜೆ ಇಡೋ ಮೊದಲೇ, ಭಾರತದ ಅವನ ಕಾಲನ್ನೇ ಕಟ್ಟಿಹಾಕೋ ಮಟ್ಟಕ್ಕೆ ಬಲಿಷ್ಠವಾಗಿದೆ. ಈ ಬದಲಾವಣೆಗೆ ಕಾರಣವಾಗಿದ್ದು, ಆ ಇಬ್ಬರು. ಭಾರತ ನಡೆಸಿದ ಆ ಸರ್ಜಿಕಲ್ ಸ್ಟ್ರೈಕ್, ಭಾರತದ ಶಕ್ತಿ ಎಂಥದ್ದು ಅನ್ನೋದನ್ನ ಇಡೀ ಜಗತ್ತಿಗೆ ಹೊಸದಾಗಿ ಪರಿಚಯಿಸಿತ್ತು. ಆ ಶಕ್ತಿ ಪ್ರದರ್ಶನದ ಹಿಂದೆ ಇದ್ದದ್ದು, ಇದೇ ಅಜಿತ್ ದೋವಲ್. ಭಾರತದ ವಿದೇಶಾಂಗ ನೀತಿ, ಈಗ ಬದಲಾಗಿದೆ. ಅದೇ ಥರ ದೇಶದ ಗಡಿಯಲ್ಲೂ, ಗಡಿಯೊಳಗೂ ಭಾರತ ಬಲಿಷ್ಠವಾಗಿದೆ. ಅದಕ್ಕೆ ಸಣ್ಣ ಉದಾಹರಣೆ 26/11 ದಾಳಿಯ ಉಗ್ರ ತಹಾವುರ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ಕರೆತರಲಾಗಿದ್ದು, ವಿಚಾರಣೆ ಆರಂಭವಾಗಿದೆ.