ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗೆ ಬಳಿಯ ಕಾಗೆಹಳ್ಳ ಸೇತುವೆ ಕೆಳಭಾಗದಲ್ಲಿ ಗೋವುಗಳ ದೇಹದ ತ್ಯಾಜ್ಯ ತುಂಬಿದ ಚೀಲಗಳು ಪತ್ತೆಯಾಗಿವೆ. ಹಳ್ಳದ ನೀರಿನಲ್ಲಿ ಮಾಂಸ ತ್ಯಾಜ್ಯ ಎಸೆಯುವುದರಿಂದ ಮಾಲೀನ್ಯವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ (ಜೂ.22): ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆಕೋಡಮಗ್ಗೆ ಬಳಿಯ ಕಾಗೆಹಳ್ಳ ಸೇತುವೆ ಕೆಳಭಾಗದಲ್ಲಿ ಗೋವುಗಳ ದೇಹದ ತ್ಯಾಜ್ಯ ತುಂಬಿದ ಚೀಲಗಳು ಪತ್ತೆಯಾಗಿವೆ. ಹಳ್ಳದ ನೀರಿನಲ್ಲಿ ಮಾಂಸ ತ್ಯಾಜ್ಯ ಎಸೆಯುವುದರಿಂದ ಮಾಲೀನ್ಯವಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಕ್ರೀದ್ ಹಬ್ಬದ ವೇಳೆ ಗೋ ಹತ್ಯೆ ಮಾಡಿ ಬಳಿಕ ಮೂಳೆ, ಕೊಂಬು ತ್ಯಾಜ್ಯಗಳನ್ನು ಚೀಲದಲ್ಲಿ ತುಂಬಿ ನೀರಿನಲ್ಲಿ ಎಸೆದಿರುವ ಸಾಧ್ಯತೆಯಿದೆ. ಸೇತುವೆ ಬಳಿ ವಿಪರೀತ ಕೆಟ್ಟ ವಾಸನೆ ಬಂದಿದ್ದರಿಂದ ಜನರು ಅನುಮಾನಿಸಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನಷ್ಟು ಚೀಲಗಳು ಎಸೆದಿರುವ ಸಾಧ್ಯತೆ ಹಿನ್ನೆಲೆ ಹುಡುಕಾಟ ನಡೆಸಲಾಗಿದೆ. ಪತ್ತೆಯಾಗಿರುವ ಚೀಲಗಳಲ್ಲಿ ಗೋವಿನ ತಲೆ ಬುರುಡೆ ಮೂಳೆಗಳು ಪತ್ತೆಯಾಗಿವೆ.
undefined
ಕುರಾನ್‌ಗೆ ಬೆಂಕಿ ಹಚ್ಚಿದ್ದಕ್ಕೆ ಜೈಲಿನಿಂದ ಹೊರಗೆಳೆದು ಜೀವಂತ ಸುಟ್ಟ ಜನ!
ಪ್ರಾಣಿಗಳ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡುತ್ತಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ದೇವರಾಜ್ ಅರಳಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದು, ಹಳ್ಳದಲ್ಲಿ ತ್ಯಾಜ್ಯ ಎಸೆದವರ ಪತ್ತೆ ಹಚ್ಚಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಇದೇ ವಿಚಾರವಾಗಿ ಈ ಹಿಂದೆಯೂ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ. ಆದರೂ ಹಳ್ಳ, ನದಿಗಳಿಗೆ ಪ್ರಾಣಿಗಳ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಇದೀಗ ಮತ್ತೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಗೋಹತ್ಯೆ ಮಾಡಿದವರನ್ನ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.