ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರ 5 ಅತ್ಯುತ್ತಮ ಕ್ಷಣಗಳು

ಸುದೀರ್ಘವಾದ ಈ ಪ್ರಯಾಣದಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ವಿಲಿಯಮ್ಸ್ ಭಾಗಿಯಾದ ಐತಿಹಾಸಿಕ ಕ್ಷಣಗಳು ಮತ್ತು ಸಾಧನೆಗಳ ಒಂದು ಅವಲೋಕನ.


ಕ್ಯಾಲಿಫೋರ್ನಿಯಾ: ನಾಸಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರಲು ಕ್ರೂ-10 ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್‌ಎಸ್) ತಲುಪಿದೆ. ಬಾಹ್ಯಾಕಾಶ ನೌಕೆಯ ಡಾಕಿಂಗ್ ಪ್ರಕ್ರಿಯೆಯು ಪೂರ್ಣಗೊಂಡಿದೆ. ಸುನಿತಾ ಮತ್ತು ಬುಚ್ ಜೂನ್ 5, 2024 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಒಂದು ವಾರದ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯ ಸಮಸ್ಯೆಯಿಂದಾಗಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಸಿಲುಕಿಕೊಂಡರು. ಈ ಬಾರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭಾಗಿಯಾದ ಐತಿಹಾಸಿಕ ಕ್ಷಣಗಳು ಮತ್ತು ಸಾಧನೆಗಳನ್ನು ನೋಡೋಣ. 

1. ಬಾಹ್ಯಾಕಾಶ ನಡಿಗೆ
ವಿಸ್ತಾರವಾದ ತರಬೇತಿ ಮತ್ತು ನಿಖರತೆಯ ಅಗತ್ಯವಿರುವ ಸಾಹಸಮಯ ಬಾಹ್ಯಾಕಾಶ ನಡಿಗೆ ಅಥವಾ ಸ್ಪೇಸ್ ವಾಕ್. ಇದು ಹೆಚ್ಚಾಗಿ ಐಎಸ್‌ಎಸ್‌ನ ದುರಸ್ತಿ ಕಾರ್ಯಗಳಿಗೆ ಅಗತ್ಯವಾಗಿರುತ್ತದೆ. ಈ ಬಾರಿ ಸುನಿತಾ ಮತ್ತು ಬುಚ್ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾದರು. ಅತಿ ಹೆಚ್ಚು ಸಮಯ ಬಾಹ್ಯಾಕಾಶ ನಡಿಗೆ ಪೂರ್ಣಗೊಳಿಸಿದ ಮಹಿಳೆ ಎಂಬ ದಾಖಲೆಯನ್ನು ಸುನಿತಾ ಈ ಬಾರಿ ತಮ್ಮದಾಗಿಸಿಕೊಂಡರು. ವಿವಿಧ ಪರಿಶೋಧನೆಗಳಲ್ಲಿ 9 ಬಾಹ್ಯಾಕಾಶ ನಡಿಗೆಗಳಲ್ಲಿ ಸುನಿತಾ ಒಟ್ಟು 62 ಗಂಟೆ 6 ನಿಮಿಷಗಳ ಕಾಲ ಸ್ಪೇಸ್ ವಾಕ್ ಮಾಡಿದ್ದಾರೆ. 10 ಬಾಹ್ಯಾಕಾಶ ನಡಿಗೆಗಳಲ್ಲಿ 60 ಗಂಟೆ 21 ನಿಮಿಷಗಳ ಕಾಲ ಸ್ಪೇಸ್ ವಾಕ್ ಮಾಡಿದ ಪೆಗ್ಗಿ ವಿನ್ಸ್ಟನ್ (ನಾಸಾ) ಅವರ ದಾಖಲೆಯನ್ನು ಸುನಿತಾ ಮುರಿದರು. 

Latest Videos

2. ಸಂಶೋಧನೆಗಳು ಮತ್ತು ಪ್ರಯೋಗಗಳು
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳ ಅನಿರೀಕ್ಷಿತ ವಾಸ್ತವ್ಯದ ಅವಧಿಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಐಎಸ್‌ಎಸ್‌ನ ಪ್ರಮುಖ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗೆ ಸಹಾಯಕವಾಗುವ ಬಾಹ್ಯಾಕಾಶ ಔಷಧ, ರೋಬೋಟಿಕ್ಸ್, ಮೆಟೀರಿಯಲ್ ಸೈನ್ಸ್ ಮುಂತಾದ ಸಂಶೋಧನೆಗಳು ಮತ್ತು ವೈಜ್ಞಾನಿಕ ಪ್ರಯೋಗಗಳಲ್ಲಿ ಇವರು ಭಾಗವಹಿಸಿದರು. ಇದರ ಜೊತೆಗೆ ದೀರ್ಘಕಾಲದ ವಾಸ್ತವ್ಯದ ಅವಧಿಯಲ್ಲಿ ನಿಲ್ದಾಣದ ವ್ಯವಸ್ಥೆಗಳು ಯಾವುದೇ ತೊಂದರೆಗಳಿಲ್ಲದೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಲ್ಲಿ ಸುನಿತಾ ಮತ್ತು ಬುಚ್ ನಿರ್ಣಾಯಕ ಪಾತ್ರ ವಹಿಸಿದರು. ಐ‌ಎಸ್‌ಎಸ್‌ನ ಕಮಾಂಡರ್ ಆಗಿ ಸೇವೆ ಸಲ್ಲಿಸಿದ ಸುನಿತಾ ವಿಲಿಯಮ್ಸ್ ನಿಲ್ದಾಣದ ಜವಾಬ್ದಾರಿಗಳು ಮತ್ತು ನಾಯಕತ್ವವನ್ನು ವಹಿಸಿಕೊಂಡರು. 

ಸುನಿತಾ ವಿಲಿಯಮ್ಸ್ ಡಿಸೆಂಬರ್ 2024 ರಲ್ಲಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಕಪೋಲಾದಲ್ಲಿ ಯೀಸ್ಟ್, ಬ್ಯಾಕ್ಟೀರಿಯಾ ಮಾದರಿಗಳನ್ನು ಒಳಗೊಂಡ ಸೈನ್ಸ್ ಹಾರ್ಡ್‌ವೇರ್ ಅನ್ನು ಪ್ರದರ್ಶಿಸಿದರು. ರೋಡಿಯಮ್ ಬಯೋಮ್ಯಾನುಫ್ಯಾಕ್ಚರಿಂಗ್ 03 ಅಧ್ಯಯನದ ಭಾಗವಾಗಿ ಈ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ, ರಚನೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಸೂಕ್ಷ್ಮ ಗುರುತ್ವಾಕರ್ಷಣೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. 

3. ಬಾಹ್ಯಾಕಾಶದಲ್ಲಿ 3000 ದಿನಗಳು
ಮಾರ್ಚ್ 5, 2025 ರಂದು ನಾಸಾದ ಬಾಹ್ಯಾಕಾಶ ಯಾತ್ರಿಕ ಮತ್ತು ಫ್ಲೈಟ್ ಇಂಜಿನಿಯರ್ ನಿಕ್ ಹೇಗ್ ಐಎಸ್‌ಎಸ್‌ನಲ್ಲಿ ಬುಚ್ ಮತ್ತು ಸುನಿ ಸೇರಿದಂತೆ ಇತರ ಗಗನಯಾತ್ರಿಗಳೊಂದಿಗೆ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ ಒಂದು ಪ್ರಮುಖ ಸಾಧನೆಯನ್ನು ಉಲ್ಲೇಖಿಸಿ ಹೇಗ್ ಹೀಗೆ ಬರೆದಿದ್ದಾರೆ... 'ಮಾರ್ಚ್ 1 ರಂದು ಎಕ್ಸ್‌ಪೆಡಿಶನ್ 72 ಸಿಬ್ಬಂದಿ ಒಟ್ಟಾಗಿ ಒಂದು ಪ್ರಮುಖ ಮೈಲಿಗಲ್ಲನ್ನು ಆಚರಿಸಿದ್ದೇವೆ: ನಮ್ಮ ಏಳು ಜನರ ವೈಯಕ್ತಿಕ ದಿನಗಳನ್ನು ಸೇರಿಸಿದರೆ ನಾವು ಬಾಹ್ಯಾಕಾಶದಲ್ಲಿ 3000 ದಿನಗಳನ್ನು ತಲುಪಿದ್ದೇವೆ!'- ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕ್ರೂ-10 ತಂಡದ ಸದಸ್ಯರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತಿಸಿಕೊಂಡ ಸುನಿತಾ ವಿಲಿಯಮ್ಸ

4. ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಣೆ
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಂಶೋಧಕರು ಮನೆಯಿಂದ ದೂರವಿದ್ದರೂ ರಜಾದಿನವನ್ನು ಆಚರಿಸಿದರು. ಸ್ಪೇಸ್ ಎಕ್ಸ್‌ನ ಕಾರ್ಗೋ ಕಾರ್ಯಾಚರಣೆಯ ನಂತರ ಈ ಹಬ್ಬದ ಕ್ಷಣಗಳು ನಡೆದವು. ರಜಾ ದಿನದ ಉಡುಗೊರೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನಾಸಾ ಇವರಿಗಾಗಿ ಐ‌ಎಸ್‌ಎಸ್‌ಗೆ ತಲುಪಿಸಿತ್ತು. ಇದು ಸಿಬ್ಬಂದಿಗೆ ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಲು ಅವಕಾಶ ಮಾಡಿಕೊಟ್ಟಿತು. ತಂಡವು ಕೆಲವು ಆಟಗಳನ್ನು ಸಹ ಆಡಿತು. 

5. ಥ್ಯಾಂಕ್ಸ್ ಗಿವಿಂಗ್ ಡೇ 
2024 ನವೆಂಬರ್ ಅಂತ್ಯದಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಮತ್ತು ಅವರ ಸಹೋದ್ಯೋಗಿಗಳು ಸಾಂಪ್ರದಾಯಿಕ ಭಕ್ಷ್ಯಗಳಾದ ಸ್ಮೋಕ್ಡ್ ಟರ್ಕಿ, ಕ್ರಾನ್ಬೆರಿ ಸಾಸ್, ಗ್ರೀನ್ ಬೀನ್ಸ್ ಮತ್ತು ಆಪಲ್ ಕೋಬ್ಲರ್ ಸೇರಿದಂತೆ ವಿವಿಧ ಭಕ್ಷ್ಯಗಳೊಂದಿಗೆ ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಿದರು. ಜೀವನದಲ್ಲಿ ನಡೆದ ಒಳ್ಳೆಯ ವಿಷಯಗಳಿಗೆ ಕೃತಜ್ಞತೆ ಸಲ್ಲಿಸಲು ಥ್ಯಾಂಕ್ಸ್ ಗಿವಿಂಗ್ ಡೇ ಆಚರಿಸಲಾಗುತ್ತದೆ. ಥ್ಯಾಂಕ್ಸ್ ಗಿವಿಂಗ್ ಡೇ ಆಚರಣೆಯು ಬಾಹ್ಯಾಕಾಶ ಯಾತ್ರಿಕರಿಗೆ ಅವರ ಅನುಭವಗಳು ಮತ್ತು ಕುಟುಂಬಗಳಿಂದ ಸಿಗುವ ಬೆಂಬಲವನ್ನು ವ್ಯಕ್ತಪಡಿಸುವ ಪ್ರಮುಖ ಕ್ಷಣವಾಗಿತ್ತು. 

ಇದನ್ನೂ ಓದಿ: 

click me!