ಭೂಮಿಗೆ ಬರಲು ರೆಡಿಯಾದ ಸುನೀತಾ, ನಭಕ್ಕೆ ಹಾರಿದ ನಾಸಾ, ಸ್ಪೇಸ್‌ಎಕ್ಸ್‌ ನೌಕೆ!

ಭಾರತೀಯ ಮೂಲದ ಸುನೀತಾ ವಿಲಿಯಮ್ಸ್‌ರನ್ನು ಕರೆತರಲು ಕ್ರೂ-10 ಮಿಷನ್ ಉಡಾವಣೆಯಾಗಿದೆ. ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತ ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದೆ.


ಫ್ಲಾರಿಡಾ (ಮಾ.15): ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ಬಚ್‌ ವಿಲ್ಮೋರ್‌ ಭೂಮಿಗೆ ಬರಲು ಸಜ್ಜಾಗಿದ್ದಾರೆ. ಅವರನ್ನು ಭೂಮಿಗೆ ಕರೆತರುವ ನಿಟ್ಟಿನಲ್ಲಿ ನಾಸಾ, ಸ್ಪೇಸ್‌ಎಕ್ಸ್‌ನ ರಕ್ಷಣಾ ಮಿಷನ್‌ನ ಭಾಗವಾಗಿ ಕಳಿಸಿರುವ ಕ್ರೂ-10 ಮಿಷನ್‌ ಬಾಹ್ಯಾಕಾಶ ನೌಕೆ ಶುಕ್ರವಾರ ಮಧ್ಯರಾತ್ರಿ ನಭಕ್ಕೆ ಹಾರಿದೆ. ನಾಸಾದ ಕೆನಡಿ ಸ್ಪೇಸ್‌ ಸೆಂಟರ್‌ನಿಂದ ಕ್ರೂ-10 ಮಿಷನ್‌ ಅತ್ಯಂತ ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ತಿಳಿಸಿದೆ. ಕ್ರೂ ಡ್ರ್ಯಾಗನ್‌ ಬಾಹ್ಯಾಕಾಶ ನೌಕೆಯನ್ನು ಹೊತ್ತಿದ್ದ ಫಾಲ್ಕನ್‌ 9 ರಾಕೆಟ್‌ ಮಾರ್ಚ್‌ 14 ರಂದು ನಭಕ್ಕೆ ಹಾರಿದೆ. ಇದರಲ್ಲಿ ಒಟ್ಟು ನಾಲ್ಕು ಮಂದಿ ಗಗನಯಾತ್ರಿಗಳಾದ ಅನ್‌, ನಿಕೋಲ್‌, ಜಾಕ್ಸಾದಿಂದ ತಕುಯಾ ಒನಿಶಿ ಹಾಗೂ ರೋಸ್‌ಕಾಸ್ಮೋಸ್‌ನಿಂದ ಕಿರಿನ್‌ ಪೆಸ್ಕೋವ್‌ ಸೇರಿದ್ದಾರೆ.
ಭಾರತೀಯ ಕಾಲಮಾನ ಮಾ.15ರ ಮಧ್ಯಾರಾತ್ರಿ 1.30ಕ್ಕೆ ನೌಕೆ ಉಡಾವಣೆಯಾಗಿದೆ. ನೌಕೆಯನ್ನು ಕಕ್ಷೆಗೆ ಸರಿಸಿದ ಫಾಲ್ಕನ್‌-9 ರಕೆಟ್‌ನ ಮೊದಲ ಸ್ಟೇಜ್‌ ಬೂಸ್ಟ್‌ ಲ್ಯಾಂಡಿಂಗ್‌ ಬಳಿಕ ಲ್ಯಾಂಡಿಂಗ್‌ ಜೋನ್‌-1ರಲ್ಲಿ ಇಳಿಯಿತು. ಅದೊಂದಿಗೆ ಮರುಬಳಕೆ ಮಾಡುವ ರಾಕೆಟ್‌ ತಂತ್ರಜ್ಞಾನದ ಉದಾಹರಣೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದರು. 

ಕಳೆದ 9 ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಕ್ಕಿಹಾಕಿಕೊಂಡಿರುವ ಸುನೀತಾ ವಿಲಿಯಮ್ಸ್‌ ಹಾಗೂ ಬ್ಯಾರಿ ಬಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ನಿಟ್ಟಿನಲ್ಲಿ ಅವರ ಸ್ಥಾನಕ್ಕೆ ಬದಲಿಯಾಗಿ ಕ್ರೂ-10 ಗಗನಯಾತ್ರಿಗಳು ತೆರಳಿದ್ದಾರೆ. ಈ ಬಾಹ್ಯಾಕಾಶ ಯಾನಕ್ಕೆ ವ್ಯಾಪಕ ಆಸಕ್ತಿ ಮತ್ತು ಬೆಂಬಲ ವ್ಯಕ್ತವಾಗಿದ್ದು, ವಿವಿಧ ಸಂಸ್ಥೆಗಳು ಈ ಕಾರ್ಯಾಚರಣೆಯ ಯಶಸ್ಸಿಗೆ ತಮ್ಮ ಉತ್ಸಾಹ ಮತ್ತು ಶುಭಾಶಯಗಳನ್ನು ವ್ಯಕ್ತಪಡಿಸಿವೆ.

Latest Videos

ಉಡಾವಣೆಗೆ 45 ನಿಮಿಷ ಇದ್ದಾಗ ರದ್ದಾದ ನಾಸಾ ಸ್ಪೇಸ್‌ಎಕ್ಸ್‌ Crew-10 

ಭಾನುವಾರ (ಮಾ.16) ಬೆಳಗ್ಗೆ 9.30ಕ್ಕೆ (ಭಾರತೀಯ ಕಾಲಮಾನ) ಕ್ರೂ-10 ಸಿಬ್ಬಂದಿಗಳು ಬಾಹ್ಯಾಕಾಶ ನಿಲ್ದಾಣ ತಲುಪಲಿದೆ ಎಂದು ನಾಸಾ ಮಾಹಿಸಿ ನೀಡಿದೆ. ಹ್ಯಾಚ್‌ ಓಪನಿಂಗ್‌ ಅಂದರೆ ಐಎಸ್‌ಎಸ್‌ ನಿಲ್ದಾಣದ ಬಾಗಿಲು 10.35ಕ್ಕೆ ಓಪನ್‌ ಆಗಲಿದೆ. ಕ್ರೂ-10 ಸಿಬ್ಬಂದಿಗಳ  ಆಗಮನ ಮಾತುಕತೆ ಹಾಗೂ ಕ್ರೂ-9 ಸಿಬ್ಬಂದಿಗಳ ಫೇರ್‌ವೆಲ್‌ ಬೆಳಗ್ಗೆ 11.30ಕ್ಕೆ ನಿಗದಿಯಾಗಿದೆ ಎಂದು ನಾಸಾ ತಿಳಿಸಿದೆ. ನಾಳೆಯೇ ಕ್ರೂ-10 ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣ ತಲುಪಲಿದ್ದರೂ, ಮಾರ್ಚ್‌ 19ರ ಮುಂಚಿತವಾಗಿ ಅವರು ಭೂಮಿಗೆ ವಾಪಾಸಾಗೋದು ಸಾಧ್ಯವಿಲ್ಲ ಎಂದು ನಾಸಾ ತಿಳಿಸಿದೆ.

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್‌ಗೆ ಆಗಲಿದೆ Baby Feet ಅನುಭವ!

click me!