ಟೆಂಟ್‌ನಲ್ಲಿ ಅಪ್ಪು ಸಿನಿಮಾ ನೋಡಿದ ಅನುಶ್ರೀ ಮತ್ತು ಕಿಶೋರ್. ಫ್ಯಾನ್ಸ್ ರೀತಿ ಸಿನಿಮಾ ಎಂಜಾಯ್ ಮಾಡಿದ ಕ್ಷಣ ಹಂಚಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬವನ್ನು ಜೀ ಕನ್ನಡ ಸರಿಗಮಪ ವೇದಿಯಲ್ಲಿ ಆಚರಿಸಿದ್ದಾರೆ. ಅಪ್ಪು ಜೊತೆ ನಟಿಸಿರುವ ಅಷ್ಟೋ ಕಲಾವಿದರನ್ನು ಕರೆಸಿದ್ದಾರೆ ಹಾಗೂ ಅಪ್ಪು ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಈ ವೇಳೆ ಆಕಾಶ್ ಸಿನಿಮಾದಲ್ಲಿ ಅಪ್ಪು ಜೊತೆ ಅಭಿನಯಿಸಿದ ನಟ ಕಿಶೋರ್ ಕೂಡ ಆಗಮಿಸಿದ್ದರು. ಆಕಾಶ್ ಚಿತ್ರಕ್ಕಿಂತ ಹೆಚ್ಚಾಗಿ ಜಾಕಿ ಸಿನಿಮಾ ನೋಡಿದ ಕ್ಷಣವನ್ನು ಎಂಜಾಯ್ ಮಾಡಿದ್ದಾರೆಂತೆ. ಅನುಶ್ರೀ ಮತ್ತು ಕಿಶೋರ್ ಹಂಚಿಕೊಂಡ ಸ್ಟೋರಿ ಇದು.
ಪುನೀತ್ ಅವರ ಬಗ್ಗೆ ಹೇಳುಷ್ಟು ಮೆಚ್ಯೂರಿಟಿ ನನಗೆ ಇದ್ಯಾ ಗೊತ್ತಿಲ್ಲ. ಚಿಕ್ಕ ವಯಸ್ಸಿನಲ್ಲಿ ಎತ್ತರ ಏರಿ ವ್ಯಕ್ತಿತ್ವ ಅವರದ್ದು. ನನ್ನ ಅನುಭವದಲ್ಲಿ ಒಂದು ಸಿನಿಮಾ ಮಾತ್ರ ಅವರೊಟ್ಟಿಗೆ ಕೆಲಸ ಮಾಡಲು ಆಗಿದ್ದು. ಆಕಾಶ್ ಸಿನಿಮಾದಲ್ಲಿ. ಅಲ್ಲಿ ನನಗೆ ಕಂಡಿದ್ದು ಕೆಲಸದ ಬಗ್ಗೆ ಅವರಿಗೆ ಇರುವ ನಿಷ್ಟೆ, ಪ್ರಾಮಾಣಿಕಥೆ ಹಾಗೂ ಶ್ರಮ. ರಾಜ್‌ಕುಮಾರ್ ಅವರ ಮಗ ಅಪ್ಪು ಎಂದು ನಾವು ಇಷ್ಟು ಜನರ ಯಾರೂ ಪ್ರೀತಿಸುತ್ತಿರುವುದು ಅಲ್ಲ, ಅದು ಅವರ ಸ್ವಂತ ಶ್ರಮದಿಂದ. ಯಾಕೆ ಅಷ್ಟೋಂದು ಶ್ರದ್ಧೆಯಿಂದ ಸಿನಿಮಾ ಮಾಡುತ್ತಿದ್ದರು ಅಂದ್ರೆ ಜನರಿಗೋಸ್ಕರ ಸಿನಿಮಾ ಮಾಡುತ್ತಿದ್ದರು. ಅಪ್ಪು ಇಂಡಸ್ಟ್ರಿಗೆ ತುಂಬಾ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಮ್ಮೊಟ್ಟಿಗೆ ಪುನೀತ್ ಇಲ್ಲ ಅನ್ನೋ ನಂಬಿಕೆ ಇವತ್ತಿಗೂ ನನಗೆ ಬರುತ್ತಿಲ್ಲ ಏಕೆಂದರೆ ಅವರು ಅಷ್ಟು ಕಷ್ಟ ಪಟ್ಟಿದ್ದಾರೆ. ಅಪ್ಪು ಅಂದ್ರೆ ಮೊದಲು ನೆನಪಾಗುವುದು ಬೆಟ್ಟದ ಹೂ ಸಿನಿಮಾ, ಬೆಟ್ಟ ಹೂವಿನ ಪರಿಮಳ ಇವತ್ತಿಗೂ ನಮ್ಮೊಟ್ಟಿಗೆ ಇದೆ ಯಾವತ್ತಿಗೂ ಇರುತ್ತದೆ' ಎಂದು ನಟ ಕಿಶೋರ್ ಮಾತನಾಡಿದ್ದಾರೆ.
ಅಪ್ಪು ಕೊನೆಯ ದಿನ ಈ ವಿಚಾರದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು; ಸತ್ಯ ಬಿಚ್ಚಿಟ್ಟ ರಾಘವೇಂದ್ರ ರಾಜ್‌ಕುಮಾರ್ ಸೊಸೆ
'ಕಿಶೋರ್ ಸಿನಿಮಾ ಒಂದರಲ್ಲಿ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದೀನಿ. ಆಗ ಜಾಕಿ ಸಿನಿಮಾ ರಿಲೀಸ್ ಆಗಿತ್ತು ಹಾಗೂ ನಾವು ಕೆಆರ್ ನಗರದಲ್ಲಿ ಶೂಟಿಂಗ್ ಮಾಡುತ್ತಿದ್ವಿ. ಆ ದಿನ ಶೂಟ್‌ನಲ್ಲಿ ಅರ್ಧಕ್ಕೆ ನಿಲ್ಲಿಸಿ ಟೆಂಟ್‌ನಲ್ಲಿ ಫಸ್ಟ್ ಡೇ ಫಸ್ಟ್ ಶೋ ನೋಡಿಕೊಂಡು ಬಂದಿದ್ದೀವಿ. ಕಿಶೋರ್ ಸರ್ ತಮ್ಮ ಜೇಬಿನಲ್ಲಿ ಇರುವ ಚಿಲ್ಲರೆಯನ್ನು ಹಾಕು ಮಗಳೆ ಎಂದು ಕೊಟ್ಟರು. ಆಮೇಲೆ ಪೇಪರ್ ಪೀಸ್‌ಗಳನ್ನು ಮಾಡಿ ಅಭಿಮಾನಿ ರೀತಿ ಆಚರಣೆ ಮಾಡಿದ್ದೆ. ಅವತ್ತು ಜಾಕಿ ಸಿನಿಮಾವನ್ನು ಒಟ್ಟಿಗೆ ಆಚರಣೆ ಮಾಡಿದ್ವಿ..ಈಗ ಅವರ 50ನೇ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸುತ್ತಿದ್ದೀವಿ. ಇದು ಬ್ಯೂಟಿಫುಲ್ ಸರ್ಕಲ್ ಆಫ್ ಲೈಫ್ ಅನ್ಸುತ್ತೆ' ಎಂದು ಆಂಕರ್ ಅನುಶ್ರೀ ಹೇಳಿದ್ದಾರೆ.
ಕಡಿಮೆ ವರ್ಷಗಳ ಕಾಲ ಇಂಡಸ್ಟ್ರಿಯಿಂದ ಹಣ ಬರುವುದು, 50% ಸಂಭಾವನೆ ನನ್ನ ಮೇಲೆ ಖರ್ಚು ಮಾಡಿಕೊಳ್ಳುತ್ತೀನಿ: ದೀಪಿಕಾ ದಾಸ್