
ನವದೆಹಲಿ: ದೇಶಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ಕರುಣ್ ನಾಯರ್‌ಮತ್ತೆ ಟೀಂ ಇಂಡಿಯಾ ಜೆರ್ಸಿ ತೊಡುವ ತವಕದಲ್ಲಿದ್ದಾರೆ. ಅದಕ್ಕೂ ಮುನ್ನ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿ ರುವ ಕರುಣ್, ತಂಡ ದಲ್ಲಿರುವ ಮತ್ತೋರ್ವ ಕನ್ನಡಿಗ ಕೆ.ಎಲ್. ರಾಹುಲ್ ಜೊತೆಗೂಡಿ ಆಡುವ ಕಾತುರದಲ್ಲಿದ್ದೇನೆ ಎಂದಿದ್ದಾರೆ.
ಈ ಕುರಿತಂತೆ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಕರುಣ್, 'ಐಪಿಎಲ್‌ನಲ್ಲಿ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕು ಎನ್ನುವುದರತ್ತ ಗಮನವಿದೆ. ಡೆಲ್ಲಿ ತಂಡಕ್ಕೆ ಮರಳುತ್ತಿರುವುದು ಖುಷಿಯಿದೆ. ರಾಹುಲ್ ಜೊತೆ ಮತ್ತೆ ಆಡುತ್ತಿರುವುದಕ್ಕೆ ಕಾತುರವಿದೆ. ಆರಂಭದ ದಿನದಿಂದಲೂ ನಾವು ಒಟ್ಟಿಗೆ ಆಡುತ್ತಿದ್ದೆವು. ಕಳೆದ ಕೆಲ ಆವೃತ್ತಿಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ' ಎಂದಿದ್ದಾರೆ.
ಆರ್‌ಸಿಬಿ ಜತೆ ಸ್ಮರಣ್ ಅಭ್ಯಾಸ: ತಂಡ ಸೇರ್ಪಡೆಗೊಳ್ಳುವ ನಿರೀಕ್ಷೆ
ಬೆಂಗಳೂರು: ಇತ್ತೀಚೆಗೆ ರಣಜಿ ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಪರ ಮಿಂಚಿದ್ದ ಯುವ ಬ್ಯಾಟರ್ ಸ್ಮರಣ್ ಸದ್ಯ ಐಪಿಎಲ್‌ನ ಆರ್‌ಸಿಬಿ ತಂಡದ ಜೊತೆ ಅಭ್ಯಾಸ ನಡೆಸುತ್ತಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭ್ಯಾಸ ಶಿಬಿರ ಆರಂಭಗೊಂಡಿದೆ. ಇದರಲ್ಲಿ 22 ವರ್ಷದ ಸ್ಮರಣ್ ಕೂಡಾ ಪಾಲ್ಗೊಳ್ಳುತ್ತಿದ್ದು, ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ತಂಡದ ಆಟಗಾರರ ನಡುವಿನ ಅಭ್ಯಾಸ ಪಂದ್ಯದಲ್ಲೂ ಸ್ಮರಣ್ ಮಿಂಚಿದ್ದಾರೆ. ಹೀಗಾಗಿ ಅವರ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿ, ಯಾವುದಾದರೂ ಆಟಗಾರ ಗಾಯಗೊಂಡು ಹೊರಬಿದ್ದರೆ ಅವರ ಬದಲು ಸ್ಮರಣ್‌ರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ಧೂಳೆಬ್ಬಿಸ್ತೇನೆ; ಉಳಿದ ತಂಡಗಳಿಗೆ ಕಾಶ್ಮೀರಿ ವೇಗಿ ಖಡಕ್ ವಾರ್ನಿಂಗ್!
ಇತ್ತೀಚೆಗೆ ಸ್ಮರಣ್ ವಿಜಯ್ ಹಜಾರೆ ಏಕದಿನ ಟೂರ್ನಿಯ ವಿದರ್ಭ ವಿರುದ್ಧ ಫೈನಲ್‌ನಲ್ಲಿ ಶತಕ, ರಣಜಿಯಲ್ಲಿ ಪಂಜಾಬ್ ವಿರುದ್ಧ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು. ಆದರೆ ಐಪಿಎಲ್ ಹರಾಜಿನಲ್ಲಿ ಅವರು ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ.
ಐಪಿಎಲ್‌ನಿಂದ ಭಾರತಕ್ಕೆ ಏಕಕಾಲದಲ್ಲಿ 3 ತಂಡ ಆಡಿಸಬಹುದು: ದಿನೇಶ್
ಬೆಂಗಳೂರು: ಐಪಿಎಲ್ ಭಾರತೀಯ ಕ್ರಿಕೆಟ್‌ನ ಗುಣಮಟ್ಟವನ್ನು ಹೆಚ್ಚಿಸಿದೆ. ಈಗ ಟೀಂ ಇಂಡಿಯಾ ಏಕಕಾಲಕ್ಕೆ 2-3 ಮಾದರಿಯ ತಂಡವನ್ನು ಕಣಕ್ಕಿಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದರು. ‘ಐಪಿಎಲ್ ಎಲ್ಲ ಆಟಗಾರರಿಗೆ ಗೆಲ್ಲುವ ಮನಸ್ಥಿತಿ ಸೃಷ್ಟಿಸಿದೆ. ಐಪಿಎಲ್ ಭಾರತೀಯ ಕ್ರಿಕೆಟ್‌ನ ಭಾಗ ಎಂದು ಹೇಳಬಹುದು. ಭಾರತವು ಈಗ ಎಲ್ಲ ಕೌಶಲ್ಯಗಳನ್ನು ಹೊಂದಿರುವ ಕ್ರಿಕೆಟ್ ಆಟಗಾರರಿರುವ ಸ್ಥಾನದಲ್ಲಿದೆ. ಈಗ ಒಂದೇ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡರಿಂದ ಮೂರು ತಂಡಗಳನ್ನು ಕಣಕ್ಕಿಳಿಸಬಹುದು. ಬಹುತೇಕ ಪ್ರತಿಯೊಂದು ಮಾದರಿಯಲ್ಲಿಯೂ ಸ್ಪರ್ಧಿಸಬಹುದು’ ಎಂದು ಹೇಳಿದರು.
ಇದನ್ನೂ ಒದಿ ಟಿ20 ವಿಶ್ವಕಪ್ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!
ಇನ್ನು ಕೆಲವು ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾದ ಮಾಜಿ ವೇಗು ಬ್ರೆಟ್ ಲೀ ಕೂಡಾ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಬಗ್ಗೆ ಯೂಟ್ಯೂಬ್ ಚಾನೆಲೊಂದರಲ್ಲಿ ಮಾತನಾಡಿರುವ ಅವರು, ‘ಒಂದೇ ದಿನ ಟೆಸ್ಟ್ ತಂಡ, ಏಕದಿನ ತಂಡ ಹಾಗೂ ಟಿ20ಗೆ ಮತ್ತೊಂದು ತಂಡವನ್ನು ಆಡಿಸುವ ಸಾಮರ್ಥ್ಯ ಭಾರತಕ್ಕಿದೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್, ಇಂಗ್ಲೆಂಡ್‌ನಲ್ಲಿ ಏಕದಿನ, ದಕ್ಷಿಣ ಆಫ್ರಿಕಾದಲ್ಲಿ ಟಿ20 ತಂಡವನ್ನು ಭಾರತ ಕಣಕ್ಕಿಳಿಸಬಹುದು. ಅಷ್ಟೊಂದು ಸ್ಪರ್ಧಾತ್ಮಕ ತಂಡ ಭಾರತ. ಈ ಸಾಮರ್ಥ್ಯ ಬೇರೆ ಯಾವುದೇ ದೇಶಕ್ಕೆ ಇಲ್ಲ’ ಎಂದು ಶ್ಲಾಘಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.