ಇಂದು ಪುನೀತ್ ರಾಜ್‌ಕುಮಾರ್ ಅವರ 50ನೇ ಹುಟ್ಟುಹಬ್ಬ: ರಾಜರತ್ನನಿಗೆ ಅಭಿಮಾನಿಗಳ ನಮನ
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬದವರಿಂದ ಇಂದು ಬೆಳಗ್ಗೆ ಪೂಜೆ. ಅಭಿಮಾನಿಗಳ ಸಂಘದಿಂದ ಸಿಹಿ ವಿತರಣೆ, ಅನ್ನಸಂತರ್ಪಣೆ ಸೇರಿದಂತೆ ರಾಜ್ಯಾದ್ಯಂತ ಹಲವು ಬಗೆಯ ಕಾರ್ಯಕ್ರಮ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬದವರಿಂದ ಇಂದು ಬೆಳಗ್ಗೆ ಪೂಜೆ. ಅಭಿಮಾನಿಗಳ ಸಂಘದಿಂದ ಸಿಹಿ ವಿತರಣೆ, ಅನ್ನಸಂತರ್ಪಣೆ ಸೇರಿದಂತೆ ರಾಜ್ಯಾದ್ಯಂತ ಹಲವು ಬಗೆಯ ಕಾರ್ಯಕ್ರಮ.
ಇಂದು (ಮಾ.17) ಕರ್ನಾಟಕ ರತ್ನ ಡಾ ಪುನೀತ್‌ರಾಜ್‌ಕುಮಾರ್ 50ನೇ ಹುಟ್ಟುಹಬ್ಬ. ಅಪ್ಪು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಕನ್ನಡ ಸಂಘ ಸಂಸ್ಥೆಗಳು ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಸಮಾಧಿಗೆ ರಾಜ್ ಕುಟುಂಬದವರಿಂದ ಬೆಳಗ್ಗೆ ಎಂದಿನಂತೆ ಪೂಜೆ ನಡೆಯಲಿದೆ. ಇನ್ನೂ ಕಂಠೀರವ ಸ್ಟುಡಿಯೋಗೆ ಪವರ್ ಸ್ಟಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.
ಹೀಗಾಗಿ ಅಭಿಮಾನಿಗಳ ಸಂಘದಿಂದ ಸಿಹಿ ವಿತರಣೆ ಹಾಗೂ ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಪುನೀತ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ನಟನೆಯ ಮೊದಲ ಚಿತ್ರ ‘ಅಪ್ಪು’ ಮರು ಬಿಡುಗಡೆ ಆಗಿದೆ.
ಕಳೆದ ಶುಕ್ರವಾರವೇ ರಾಜ್ಯಾದ್ಯಾಂತ ಅದ್ದೂರಿಯಾಗಿ ಬಿಡುಗಡೆ ಆಗಿರುವ ‘ಅಪ್ಪು’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಂದ ಬೆಂಬಲ ಸಿಗುತ್ತಿದೆ. ಈ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಬೇರೆ ಯಾವ ಚಿತ್ರವೂ ಬಿಡುಗಡೆ ಆಗಿಲ್ಲ. ಅಭಿಮಾನಿಗಳು ‘ಅಪ್ಪು’ ಚಿತ್ರದ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ.
ಅಪ್ಪುಗೆ ಭರ್ಜರಿ ಸ್ವಾಗತ: ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ಹಿನ್ನೆಲೆಯಲ್ಲಿ ‘ಅಪ್ಪು’ ಸಿನಿಮಾ ಮರುಬಿಡುಗಡೆಯಾಗಿದೆ. ಅಭಿಮಾನಿಗಳು ಭರ್ಜರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಕೆಲವೆಡೆ ಬೆಳಗಿನ ಜಾವ ಶೋ ಆಯೋಜಿಸಲಾಗಿತ್ತು. ಇವುಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡವು.
ಸಾವಿರಾರು ಅಪ್ಪು ಅಭಿಮಾನಿಗಳು ಮುಂಜಾನೆಯೇ ಥೇಟರ್ ಮುಂದೆ ನೆರೆದು ಪುನೀತ್‌ಗೆ ಜೈ ಕಾರ ಕೂಗಿದರು. ಹಲವೆಡೆ ಪುನೀತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿದರು. ಸಿನಿಮಾ ಪ್ರದರ್ಶನದ ಆರಂಭದಲ್ಲಿ ಪುನೀತ್ ಅವರ ಹೆಸರು ಪರದೆ ಮೇಲೆ ಬರುವಾಗ ಜನ ಹುಚ್ಚೆದ್ದು ಕುಣಿದು ಸಂಭ್ರಮಿಸಿದ್ದು ಅಪ್ಪು ಮೇಲಿನ ಅವರ ಅಭಿಮಾನಕ್ಕೆ ಸಾಕ್ಷಿಯಂತಿತ್ತು.