ಕ್ರೂ-10 ತಂಡದ ಸದಸ್ಯರನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಸ್ವಾಗತಿಸಿಕೊಂಡ ಸುನಿತಾ ವಿಲಿಯಮ್ಸ್

ಸುನಿತಾ ವಿಲಿಯಮ್ಸ್, ನಿಲ್ದಾಣಕ್ಕೆ ಬಂದ ಹೊಸ ತಂಡವನ್ನು ಸ್ವಾಗತಿಸಿದ್ದಾರೆ. ಕ್ರೂ-10 ಸದಸ್ಯರನ್ನು ಸುನಿತಾ ವಿಲಿಯಮ್ಸ್ ಸ್ವಾಗತಿಸಿದ ದೃಶ್ಯಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಎಕ್ಸ್‌ನಲ್ಲಿ ಹಂಚಿಕೊಂಡಿದೆ. 


ಕ್ಯಾಲಿಫೋರ್ನಿಯಾ: ಭೂಮಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಈಗ ಸಂಶೋಧನೆಯ ಹೊಸ ಅಧ್ಯಾಯ ಶುರುವಾಗಿದೆ . ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ನಾಸಾ ಕಳುಹಿಸಿದ ಕ್ರೂ-10 ತಂಡವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದೆ. ಐಎಸ್‌ಎಸ್‌ನ ಪ್ರಮುಖ ಸದಸ್ಯೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್, ನಿಲ್ದಾಣಕ್ಕೆ ಬಂದ ಹೊಸ ತಂಡವನ್ನು ಸ್ವಾಗತಿಸಿದ್ದಾರೆ. ಕ್ರೂ-10 ಸದಸ್ಯರನ್ನು ಸುನಿತಾ ವಿಲಿಯಮ್ಸ್ ಸ್ವಾಗತಿಸಿದ ದೃಶ್ಯಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಎಕ್ಸ್‌ನಲ್ಲಿ ಹಂಚಿಕೊಂಡಿದೆ. 

ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ಆಗಮಿಸಿದ ನಾಲ್ವರು ಸದಸ್ಯರ ಕ್ರೂ-10 ತಂಡವು ಇಂದು ಪೂರ್ವದ ಸಮಯದ ಪ್ರಕಾರ ಬೆಳಗ್ಗೆ 12.35ಕ್ಕೆ ಹ್ಯಾಚ್ ತೆರೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿತು. ನಾಸಾದ ಗಗನಯಾತ್ರಿಗಳಾದ ಆ್ಯನಿ ಮೆಕ್ಲೈನ್, ನಿಕೋಲ್ ಅಯ್ಯರ್ಸ್ ಮತ್ತು ಜಪಾನಿನ ಬಾಹ್ಯಾಕಾಶ ಸಂಸ್ಥೆಯ ತಕುಯಾ ಒನಿಷಿ, ರಷ್ಯಾದ ರೋಸ್‌ಕಾಸ್ಮೊಸ್‌ನ ಕಿರಿಲ್ ಪೆಸ್ಕೋವ್ ಕ್ರೂ-10 ದೌಡದಲ್ಲಿದ್ದಾರೆ. ನಿಲ್ದಾಣದಲ್ಲಿರುವ ಎಕ್ಸ್‌ಪೆಡಿಷನ್ 72 ತಂಡದ ನಾಸಾದ ನಿಕ್ ಹೇಗ್, ಡಾನ್ ಪೆಟಿಟ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರೋಸ್‌ಕಾಸ್ಮೊಸ್‌ನ ಅಲೆಕ್ಸಾಂಡರ್ ಗೊರ್ಬುನೋವ್, ಅಲೆಕ್ಸಿ ಒವ್‌ಚಿನಿನ್, ಇವಾನ್ ವಾಗ್ನರ್ ಇವರನ್ನು ಸ್ವಾಗತಿಸಿದರು. ನಿಲ್ದಾಣದ ಕಮಾಂಡರ್ ಆಗಿದ್ದ ಹಿರಿಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈ ಸ್ವಾಗತಕ್ಕೆ ನೇತೃತ್ವ ವಹಿಸಿದ್ದರು. 

Latest Videos

ಮಾರ್ಚ್ 19 ರಂದು ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೊರ್ಬನೊವ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಲಿದ್ದಾರೆ. ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಐಎಸ್‌ಎಸ್‌ನಲ್ಲಿ ಕಳೆದ ನಂತರ ಸುನಿತಾ ಮತ್ತು ಬುಚ್ ಭೂಮಿಗೆ ಮರಳಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:  ಸುನಿತಾ ವಿಲಿಯಮ್ಸ್ ಅಸಾಧಾರಣ ಸಾಹಸ: ಮುಕ್ತಾಯಗೊಳ್ಳಲಿದೆ ಸುದೀರ್ಘ ಬಾಹ್ಯಾಕಾಶ ವಾಸ

ಕೇವಲ ಎಂಟು ದಿನಗಳ ದೌಡಕ್ಕಾಗಿ ಬೋಯಿಂಗ್‌ನ ಪ್ರಾಯೋಗಿಕ ಸ್ಟಾರ್‌ಲೈನರ್ ಗಗನನೌಕೆಯಲ್ಲಿ 2024 ರ ಜೂನ್‌ನಲ್ಲಿ ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇದ್ದಾರೆ. ಸ್ಟಾರ್‌ಲೈನರ್ ಗಗನನೌಕೆಯ ತಾಂತ್ರಿಕ ಸಮಸ್ಯೆಯಿಂದಾಗಿ ಇಬ್ಬರೂ ನಿಗದಿತ ಸಮಯಕ್ಕೆ ಭೂಮಿಗೆ ಮರಳಲು ಸಾಧ್ಯವಾಗದ ಕಾರಣ ವಾಪಸಾತಿ ಪ್ರಯಾಣವನ್ನು ಮುಂದೂಡಲಾಗಿತ್ತು. ನಾಸಾ ಹಲವು ಬಾರಿ ಇಬ್ಬರನ್ನೂ ವಾಪಸ್ ಕರೆತರಲು ಪ್ರಯತ್ನಿಸಿದರೂ ಹೀಲಿಯಂ ಸೋರಿಕೆ ಮತ್ತು ಥ್ರಸ್ಟರ್‌ಗಳಲ್ಲಿನ ದೋಷದಿಂದಾಗಿ ಸ್ಟಾರ್‌ಲೈನರ್‌ನ ಅಪಾಯವನ್ನು ಗಮನದಲ್ಲಿಟ್ಟುಕೊಂಡು ವಾಪಸಾತಿ ಪ್ರಯಾಣವನ್ನು ಮುಂದೂಡಲಾಗಿತ್ತು. ಇದರ ನಂತರ ನಾಸಾ ಸ್ಟಾರ್‌ಲೈನರ್ ಅನ್ನು ಖಾಲಿ ಲ್ಯಾಂಡ್ ಮಾಡಿಸಿತು.

ಇದನ್ನೂ ಓದಿ:  ಗುರುತ್ವಾಕರ್ಷಣೆಗೆ ಕಾಯುತ್ತಾ: ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್ ಆರೋಗ್ಯ ಮತ್ತು ಭೂಮಿಯಲ್ಲಿ ಚೇತರಿಕೆ

| Stranded for 9 months at International Space Station (ISS), astronauts Butch Wilmore and Sunita Williams to return to earth

A SpaceX rocket carrying a new crew has docked at the International Space Station (ISS) as part of a plan to bring astronauts home. The astronauts… pic.twitter.com/rb38BeCEQ6

— ANI (@ANI)
click me!