ಫೆಬ್ರವರಿ ಹಣದುಬ್ಬರ, ಇಡೀ ದೇಶದಲ್ಲಿ ಕರ್ನಾಟಕ ನಂ.3!

ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ.3.6ಕ್ಕೆ ಇಳಿದಿದೆ. ರಾಜ್ಯವಾರು ಅಂಕಿ ಅಂಶದಲ್ಲಿ ಕರ್ನಾಟಕವು 3ನೇ ಸ್ಥಾನದಲ್ಲಿದೆ, ಕೇರಳ ಮೊದಲ ಸ್ಥಾನದಲ್ಲಿದೆ. 2028ರ ವೇಳೆಗೆ ಭಾರತವು 3ನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ.

india-inflation-ranking-economic-growth-forecast Karnataka san

ನವದೆಹಲಿ (ಮಾ.15): ಕಳೆದ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರವು 7 ತಿಂಗಳಲ್ಲಿಯೇ ಅತಿ ಕನಿಷ್ಠ ಶೇ.3.6ರಷ್ಟು ದಾಖಲಾಗಿದ್ದು, ಆದರೆ, ಇದರ ರಾಜ್ಯವಾರು ಅಂಕಿ ಅಂಶ ಬಿಡುಗಡೆಯಾಗಿದ್ದು ಕರ್ನಾಟಕ 3ನೇ ಸ್ಥಾನದಲ್ಲಿದೆ. ಕೇರಳವು ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣವು ಕೊನೆಯ ಸ್ಥಾನದಲ್ಲಿದೆ.ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ ಅಂಕಿ ಅಂಶ ಬಿಡುಗಡೆ ಮಾಡಿದ್ದು, ರಾಜ್ಯವಾರು ಚಿಲ್ಲರೆ ಹಣದುಬ್ಬರದ ಮಾಹಿತಿ ನೀಡಿದೆ. ಅದರ ಪ್ರಕಾರ ಕೇರಳದಲ್ಲಿ ಚಿಲ್ಲರೆ ಹಣದುಬ್ಬರವು ಅತಿ ಹೆಚ್ಚು ಶೇ.7.3 ದಾಖಲಾಗಿದ್ದರೆ, ಛತ್ತೀಸಗಢ ಶೇ. 4.9, ಕರ್ನಾಟಕ ಶೇ. 4.5, ಬಿಹಾರ ಶೇ.4.5 ಹಣದುಬ್ಬರ ದಾಖಲಾಗಿದೆ. ಇನ್ನು ತೆಲಂಗಾಣ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿ ಹಣದುಬ್ಬರ ಶೇ.1.3ರಷ್ಟು ದಾಖಲಾಗಿದೆ. 22 ರಾಜ್ಯಗಳ ಪೈಕಿ 13 ರಾಜ್ಯಗಳಲ್ಲಿ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇ.4ರಷ್ಟಕ್ಕಿಂತ ಕಡಿಮೆಯಾಗಿದೆ ಎಂದು ಅಂಕಿ ಅಂಶ ಹೇಳಿದೆ.

ದೇಶದಲ್ಲಿಯೇ ಗರಿಷ್ಠ ಸಾಲ ಹೊಂದಿರುವ 10 ರಾಜ್ಯಗಳ ಪಟ್ಟಿ ನೀಡಿದ ಆರ್‌ಬಿಐ,

Latest Videos

2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ
2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳಿದೆ. ‘2023ರಲ್ಲಿ 297 ಲಕ್ಷ ಕೋಟಿ ರು. ಆರ್ಥಿಕತೆ ಹೊಂದಿದ್ದ ದೇಶದ ಆರ್ಥಿಕತೆಯು 2026ರಲ್ಲಿ 400 ಲಕ್ಷ ಕೋಟಿ ರು.ಗೆ ತಲುಪಲಿದ್ದು, 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿಲಿದೆ.   ಈಗ ಅಮೆರಿಕ, ಚೀನಾ, ಜರ್ಮನಿಯ ನಂತರ ಭಾರತ ಸ್ಥಾನದಲ್ಲಿದೆ. 2028ರ ವೇಳೆಗೆ 484 ಲಕ್ಷ ಕೋಟಿ ರು. ಆರ್ಥಿಕತೆಯನ್ನು ಹೊಂದಲಿದ್ದು, ಈ ಮೂಲಕ ಜರ್ಮನಿಯನ್ನು ಹಿಂದಿಕ್ಕಲಿದೆ’ ಎಂದಿದೆ. ಅಲ್ಲದೇ 2029ರ ವೇಳೆಗೆ ಜಾಗತಿಕ ಜಿಡಿಪಿಗೆ ಭಾರತ ನೀಡುವ ಪಾಲು ಶೇ.3.5ರಿಂದ ಶೇ.4.5ಕ್ಕೆ ಏರಿಕೆಯಾಗಬಹುದು ಎಂದಿದೆ. ಜನಸಂಖ್ಯಾ ಬೆಳವಣಿಗೆ, ಉತ್ತಮ ಮೂಲಸೌಕರ್ಯ, ಹೆಚ್ಚುತ್ತಿರುವ ಉದ್ಯಮ ವರ್ಗ ಸೇರಿದಂತೆ ಹಲವು ನೀತಿಗಳು ಮುಂಬರುವ ದಶಕಗಳಲ್ಲಿ ಭಾರತವು ಜಾಗತಿಕ ಉತ್ಪಾದನೆಯಲ್ಲಿ ತನ್ನ ಪಾಲು ಪಡೆಯಲು ಕಾರಣ. ಗ್ರಾಹಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಜಾಗತಿಕ ಉತ್ಪಾದನೆಯಲ್ಲಿ ಭಾರತವು ದೊಡ್ಡ ಪಾಲು ಪಡೆಯಲಿದೆ ಎಂದು ವರದಿ ಹೇಳಿದೆ.

ಭಾರತದ ಆರ್ಥಿಕತೆ ನೋಡಿ ಭಯಗೊಂಡ್ರಾ ಟ್ರಂಪ್, ಅಮೆರಿಕ ಹಿಂದಿಕ್ಕುತ್ತಾ ಇಂಡಿಯಾ?

click me!