ಮಕ್ಕಳು ಪ್ರಶ್ನೆ ಕೇಳಿದಾಗ ದೊಡ್ಡವರು ಏನ್ ಮಾಡ್ಬೇಕು ಗೊತ್ತಾ?

By Suvarna NewsFirst Published Apr 4, 2021, 1:20 PM IST
Highlights

ಕುತೂಹಲ ಮಾನವನ ಸಹಜ ಗುಣ. ಕುತೂಹಲವೇ ಕಲಿಕೆಯ ಮೆಟ್ಟಿಲು. ಇದೇ ಕಾರಣಕ್ಕೆ ಮಕ್ಕಳು ಕುತೂಹಲವನ್ನುಪ್ರಶ್ನೆ ರೂಪಕ್ಕಿಳಿಸಿ ದೊಡ್ಡವರ ಮುಂದಿಟ್ಟಾಗ ಸರಿಯಾದ ಉತ್ತರ ನೀಡೋ ಜೊತೆ ಇನ್ನಷ್ಟು ಅನುಮಾನ, ಪ್ರಶ್ನೆಗಳನ್ನು ಅವರ ತಲೆಯಲ್ಲಿ ಮೂಡಿಸಿ ಆ ವಿಷಯ ಅವರಿಗೆ ಮನದಟ್ಟಾಗುವಂತೆ ಮಾಡೋದು ದೊಡ್ಡವರ ಜವಾಬ್ದಾರಿ.

ಪುಟ್ಟ ಮಗು ಪ್ರತಿ ವಸ್ತು,ವಿಷಯವನ್ನುತುಂಬಾ ಆಸಕ್ತಿಯಿಂದ ಗಮನಿಸುತ್ತೆ.ಇನ್ನೂ ಮಾತನಾಡಲು ಬಾರದಿದ್ರೂ ಆ ವಸ್ತುವನ್ನು ಮುಟ್ಟಿ ನೋಡಿ ತನ್ನ ಕುತೂಹಲ ತಣಿಸಿಕೊಳ್ಳುತ್ತೆ.ಅದ್ರಲ್ಲೂ ಆ ಮಗುವಿಗೆ ಅಕ್ಕನೋ,ಅಣ್ಣನೋ ಇದ್ರಂತೂ ಅವರು ಆ ವಸ್ತುವನ್ನು ಹೇಗೆ ಬಳಸುತ್ತಾರೆ ಎಂಬುದನ್ನು ನೋಡಿ ತಾನು ಕೂಡ ಕಲಿತುಕೊಳ್ಳುತ್ತೆ.ಹೀಗೆ ದೊಡ್ಡವರ ಕೆಲಸ,ಮಾತುಗಳನ್ನು ಅನುಕರಿಸಿ ತನ್ನ ಸುತ್ತಮುತ್ತಲಿನ ವಸ್ತುಗಳ ಬಗ್ಗೆ ತಿಳಿದುಕೊಳ್ಳೋ ಮಗು,ಮಾತು ಬರಲು ಪ್ರಾರಂಭಿಸಿದ ಮೇಲೆ ತನ್ನೆಲ್ಲ ಕುತೂಹಲಗಳಿಗೂ ಪ್ರಶ್ನೆ ರೂಪ ನೀಡುತ್ತೆ.ಹೊಸ ವಸ್ತು ಅಥವಾ ಜನರನ್ನು ನೋಡಿದ ತಕ್ಷಣ ಆ ಬಗ್ಗೆ ಅಪ್ಪ,ಅಮ್ಮ ಅಥವಾ ಮನೆಯ ಇತರ ಸದಸ್ಯರ ಬಳಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯೋ ಪ್ರಯತ್ನ ಮಾಡುತ್ತೆ.ಸುತ್ತಮುತ್ತಇರೋ ಪ್ರತಿ ವಸ್ತುವಿನ ಬಗ್ಗೆ ಹತ್ತಾರೂ ಪ್ರಶ್ನೆಗಳನ್ನು ಕೇಳುತ್ತೆ.ಕೆಲವೊಮ್ಮೆ ಮಗುವಿನ ಪ್ರಶ್ನೆ ದೊಡ್ಡವರನ್ನೇ ಪೇಚಿಗೆ ಸಿಲುಕಿಸೋದು ಇರುತ್ತೆ.ʼಅಬ್ಬಾ ಈ ಮಗು ಎಷ್ಟು ತಲೆ ತಿನ್ನುತ್ತೆ?ʼ ಎಂಬ ಇರಿಸುಮುರಿಸಿನ ಜೊತೆ ಅದರ ಬಾಯಿ ಮುಚ್ಚಿಸಲು ಗದರಿಸೋದನ್ನೂ ದೊಡ್ಡವರು ರೂಢಿ ಮಾಡ್ಕೊಂಡು ಬಿಡ್ತಾರೆ. ಆದ್ರೆ ಮಕ್ಕಳು ತಮ್ಮ ಕುತೂಹಲ ತಣಿಸಿಕೊಳ್ಳಲು ಕೇಳೋ ಪ್ರಶ್ನೆಗಳು ಅವರ ಜ್ಞಾನ, ಬುದ್ಧಿಮತ್ತೆ ಹೆಚ್ಚಳಕ್ಕೆ ಕೀಲಿ ಕೈಯೂ ಹೌದು. ಹೀಗಾಗಿ ಮಕ್ಕಳಲ್ಲಿನ ಪ್ರಶ್ನಿಸೋ ಮನೋಭಾವವನ್ನು ಹೊಸಕಿ ಹಾಕೋ ಬದಲು ಅವರ ಪ್ರಶ್ನೆಗೆ ಉತ್ತರಿಸಿ ಮತ್ತಷ್ಟು ಪ್ರಶ್ನೆ ಕೇಳುವಂತೆ ಪ್ರೋತ್ಸಾಹಿಸೋ ಕೆಲ್ಸ ಪೋಷಕರಿಂದಲೇ ಆಗ್ಬೇಕು. ಹಾಗಾದ್ರೆ ಮಕ್ಕಳು ಪ್ರಶ್ನೆ ಕೇಳಿದಾಗ ದೊಡ್ಡವರು ಏನ್ ಮಾಡ್ಬೇಕು?

ಸಂಗಾತಿ ನಿಮ್ಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೋ ಇಲ್ಲವೋ? ತಿಳಿಯೋದು ಹೇಗೆ?

ತಾಳ್ಮೆಯಿಂದ ಕೇಳಿಸಿಕೊಳ್ಳಿ
ಮಗು ಪ್ರಶ್ನೆ ಕೇಳೋ ಸಮಯದಲ್ಲಿ ಅವರು ಏನು ಹೇಳುತ್ತಿದ್ದಾರೆ ಎಂಬುದನ್ನುತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವರು ಪೂರ್ತಿ ಮಾತನಾಡಿ ಮುಗಿಸೋ ತನಕ ಕಾಯಿರಿ. ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಬಾಯಿ ಹಾಕ್ಬೇಡಿ. ಅವರ ಪ್ರಶ್ನೆಯಲ್ಲಿ ನಿಮಗೆ ಆಸಕ್ತಿಯಿದೆ ಎಂಬುದನ್ನು ಮನದಟ್ಟು ಮಾಡಿಸೋದು ಅಗತ್ಯ. ನೀವು ಆಸಕ್ತಿ ತೋರಿದಾಗ ಮಾತ್ರ ಅವರು ಮತ್ತಷ್ಟು ಮಾತನಾಡಬಲ್ಲರು.

ಗದರಬೇಡಿ
ನೀವು ಯಾವುದೋ ಟೆನ್ಷನ್ನಲ್ಲಿರಬಹುದು, ಮುಖ್ಯವಾದ ಕೆಲ್ಸ ಮಾಡುತ್ತಿರಬಹುದು ಇಲ್ಲವೆ ಬೇಸರದಲ್ಲಿರಬಹುದು. ಆದ್ರೆ ಮಕ್ಕಳಿಗೆ ನಿಮ್ಮ ಮೂಡ್ ಹೇಗಿದೆ ಎಂಬುದು ತಿಳಿದಿರೋಲ್ಲ. ಹೀಗಾಗಿ ಅವರು ಇಂಥ ಸಂದರ್ಭಗಳಲ್ಲಿ ಪ್ರಶ್ನೆ ಕೇಳಿದಾಗ ಕಿರಿಕಿರಿಯಾದ್ರೂ ಗದರಬೇಡಿ. ಸಾಧ್ಯವಾದ್ರೆ ಉತ್ತರಿಸಿ, ಇಲ್ಲವಾದ್ರೆ ಆಮೇಲೆ ಉತ್ತರಿಸುತ್ತೇನೆ ಎಂಬ ಭರವಸೆ ನೀಡಿ. ನೀವು ಗದರಿದ್ರೆ ಪ್ರಶ್ನೆ ಕೇಳೋದೇ ತಪ್ಪು ಎಂಬ ಭಾವನೆ ಮಗುವಿನ ಮನಸ್ಸಿನಲ್ಲಿ ಮೂಡ್ಬಹುದು.

ಉತ್ತರಿಸಲು ಹಿಂಜರಿಯಬೇಡಿ
ಮಕ್ಕಳು ಕೆಲವೊಮ್ಮೆ ಚಿತ್ರ-ವಿಚಿತ್ರ, ಮುಜುಗರದ ಪ್ರಶ್ನೆಗಳನ್ನೂ ಕೇಳುತ್ತಾರೆ. ಇಂಥ ಸಮಯದಲ್ಲಿ ದೊಡ್ಡವರು ಉತ್ತರಿಸಲು ಹಿಂಜರಿಯೋ ಬದಲು ಅದಕ್ಕೆ ಜಾಣತನದ ಉತ್ತರ ನೀಡೋದು ಹೆಚ್ಚು ಸೂಕ್ತ. ʼಇಂಥ ಪ್ರಶ್ನೆ ಕೇಳ್ಬಾರ್ದು, ನೀನು ಚಿಕ್ಕವನುʼ ಎಂದು ಬೈದು, ಸುಮ್ಮನಿರಿಸೋದು ಕೂಡ ಸರಿಯಲ್ಲ. 

ಸೋಷಿಯಲ್‌ ಮೀಡಿಯಾದಲ್ಲಿ ರೊಮ್ಯಾಂಟಿಕ್‌ ಫೋಟೋ ಪೋಸ್ಟ್‌ ಮಾಡದ ಜೋಡಿಗಳೇ ಆದರ್ಶ ದಂಪತಿ!

ಪ್ರಶ್ನೆ ಕೇಳಲು ಪ್ರೋತ್ಸಾಹಿಸಿ
ಮಕ್ಕಳಲ್ಲಿ ಪ್ರಶ್ನೆ ಕೇಳೋ ಮನೋಭಾವ ಹೆಚ್ಚಿಸೋ ಕೆಲಸವನ್ನು ಸುತ್ತಲಿರೋ ದೊಡ್ಡವರು ಮಾಡ್ಬೇಕು. ಉದಾಹರಣೆಗೆ ಮಗು ಏನೋ ಒಂದು ಪ್ರಶ್ನೆ ಕೇಳುತ್ತೆ, ಅದಕ್ಕೆ ನೀವು ಉತ್ತರ ನೀಡುತ್ತೀರಿ. ಅದಾದ ಬಳಿಕ ಮಗುವಿನ ಮುಖದಲ್ಲಿ ಏನೋ ಗೊಂದಲ ಕಾಣಿಸಿಕೊಳ್ಳುತ್ತೆ. ಆದ್ರೆ ಅದನ್ನು ಪರಿಹರಿಸಿಕೊಳ್ಳಲು ಮಗು ಪ್ರಶ್ನೆ ಕೇಳಲು ಹಿಂಜರಿಯುತ್ತಿದೆ ಎನ್ನೋದು ನಿಮ್ಗೆ ಗೊತ್ತಾದ್ರೆ, ಮಗುವಿನ ಹಿಂಜರಿಕೆ ದೂರ ಮಾಡಿ, ಪ್ರಶ್ನೆ ಕೇಳುವಂತೆ ಮಾಡಿ. 

ಅವರಿಗರ್ಥವಾಗೋ ಭಾಷೆಯಲ್ಲಿ ವಿವರಿಸಿ
ಮಕ್ಕಳು ಪ್ರಶ್ನೆ ಕೇಳಿದಾಗ ಅವರಿಗರ್ಥವಾಗೋ ಭಾಷೆಯಲ್ಲಿ ವಿವರಿಸೋದು ಅಗತ್ಯ. ದೊಡ್ಡ ದೊಡ್ಡ ಪದ, ವಿವರಣೆಗಳು ಅವರಿಗೆ ಅರ್ಥವಾಗೊಲ್ಲ. ಇಂಥ ವಿವರಣೆಗಳಿಂದ ಅವರು ನಿಮ್ಮ ಬಳಿ ಪ್ರಶ್ನೆ ಕೇಳೋದನ್ನೇ ನಿಲ್ಲಿಸಿ ಬಿಡ್ಬಹುದು.

ನಾನ್ಯಾಕೆ ಹಿಂಗೆ, ನನ್‌ ಮಗ ಯಾಕೆ ಹಂಗೆ!

ಸುಳ್ಳು ಉತ್ತರಗಳನ್ನು ನೀಡ್ಬೇಡಿ
ಕೆಲವು ಪೋಷಕರು ಮಕ್ಕಳು ಪ್ರಶ್ನೆ ಕೇಳಿದಾಗ ಸುಳ್ಳು ಉತ್ತರಗಳನ್ನು ನೀಡಿ ಅವರನ್ನು ಸಾಗ ಹಾಕುತ್ತಾರೆ. ಈ ರೀತಿ ಸುಳ್ಳು ಉತ್ತರಗಳನ್ನು ನೀಡೋದ್ರಿಂದ ಮಕ್ಕಳಿಗೆ ನಿಜ ವಿಷಯ ತಿಳಿಯದಿರಬಹುದು. ಅವರು ಸುಳ್ಳನ್ನೇ ನಿಜವೆಂದು ನಂಬಿಕೊಂಡು ಮುಂದುವರಿದ್ರೆ ಕಷ್ಟ. ಹೀಗಾಗಿ ಎಂಥದ್ದೇ ಕ್ಲಿಷ್ಟ ಪ್ರಶ್ನೆಯಾದ್ರೂ ನಿಜಾಂಶವನ್ನೇ ಹೇಳಲು ಪ್ರಯತ್ನಿಸಿ.ಇದ್ರಿಂದ ಮಕ್ಕಳಿಗೆ ಆ ವಿಷಯದ ಬಗ್ಗೆ ಇನ್ನಷ್ಟು ತಿಳಿದ್ಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತೆ. 

click me!