ಸಹನಾ ಸತ್ತೇ ಹೋದ್ಲಾ? ಮನೆಗೆ ಬಂದಾಕೆಗೆ ಹೆಚ್ಚು ಭಾಷಣ ಬಿಗಿದ್ರೆ ಹೀಗೆ ಆಗೋದು... ಪುಟ್ಟಕ್ಕನ ವಿರುದ್ಧ ಆಕ್ರೋಶ

Published : May 06, 2024, 04:08 PM IST
ಸಹನಾ ಸತ್ತೇ ಹೋದ್ಲಾ?  ಮನೆಗೆ ಬಂದಾಕೆಗೆ ಹೆಚ್ಚು ಭಾಷಣ ಬಿಗಿದ್ರೆ ಹೀಗೆ ಆಗೋದು... ಪುಟ್ಟಕ್ಕನ ವಿರುದ್ಧ ಆಕ್ರೋಶ

ಸಾರಾಂಶ

ಸಹನಾ ಸತ್ತಿರುವ ವಿಷಯ ಪುಟ್ಟಕ್ಕನ ಮನೆಗೆ ತಲುಪಿದೆ. ಇದರ ಪ್ರೊಮೋ ರಿಲೀಸ್​ ಆಗುತ್ತಿದ್ದಂತೆಯೇ ಅಭಿಮಾನಿಗಳು ಹೇಳುತ್ತಿರುವುದೇನು?  

ಸಹನಾಳ ಸಾವಿನ ಸುದ್ದಿ ಪುಟ್ಟಕ್ಕನ ಮನೆಗೆ ಬರಸಿಡಿಲಿನಂತೆ ಬಡಿದಿದೆ. ಅಪರಿಚಿತ ಹೆಣ್ಣುಮಗಳ ಶವ ಸಿಕ್ಕಿದ್ದು, ಅವಳ ಬಳಿ ಸಹನಾಗೆ ಸೇರಿದ ವಸ್ತುಗಳು ಸಿಕ್ಕಿವೆ ಎಂದು ಪೊಲೀಸರು ಹೇಳಿದಾಗ ಎಲ್ಲರಿಗೂ ಆಕಾಶವೇ ಕುಸಿದ ಅನುಭವ. ಪೊಲೀಸರು ಆತಂಕ ಪಡಬೇಡಿ, ಇದು ಸಹನಾ ಹೌದೋ, ಇಲ್ಲವೋ ಎನ್ನುವುದನ್ನು ಗುರುತಿಸಿ ಎಂದು ಹೇಳುತ್ತಿದ್ದಾರೆ. ಆದರೆ ಅಲ್ಲಿ ಸದ್ಯ ಸಿಕ್ಕಿರುವ ಸಾಕ್ಷ್ಯಾಧಾರಗಳನ್ನು ನೋಡಿದರೆ ಅದು ಸಹನಾಳ ಶವ ಎಂದೇ ಹೇಳಲಾಗುತ್ತಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಪುಟ್ಟಕ್ಕನ ವಿರುದ್ಧ ಸೀರಿಯಲ್​ ಪ್ರೇಮಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. 

ಮನೆಗೆ ಬಂದ ಮಗಳಿಗೆ ಸಮಾಧಾನ ಮಾಡಿ ನಿಧಾನವಾಗಿ ತಿಳಿಹೇಳುವ ಬದಲು ಉದ್ದುದ್ದ ಭಾಷಣ ಬಿಗಿದರೆ ಹೀಗೆ ಆಗುವುದು ಎಂದು ಪುಟ್ಟಕ್ಕನ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ನಿಜ ಜೀವನದಲ್ಲಿಯೂ ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನೋಡಬಹುದು. ಅವರಿಗೆಲ್ಲಾ ಆದರ್ಶ ಆಗಿರಬೇಕಿದ್ದ ಪುಟ್ಟಕ್ಕ, ಮನೆಗೆ ಬಂದ ಮಗಳಿಗೆ ಭಾಷಣ ಬಿಗಿದು ಈಗ ಸತ್ತು ಹೋದಳೆಂದು ರೋಧಿಸಿದರೆ ಏನು ಬಂತು ಎಂದು ಕೇಳುತ್ತಿದ್ದಾರೆ. 

ಸ್ವಾಭಿಮಾನದ ಹೆಸ್ರಲ್ಲಿ ನಾಯಕಿಯದ್ದು ಇದ್ರಲ್ಲೂ ಓವರ್​ ಆ್ಯಕ್ಟಿಂಗಾ? ಇದೇನು ಡೈರೆಕ್ಟರೇ... ಫ್ಯಾನ್ಸ್​ ಅಸಮಾಧಾನ


ಅಷ್ಟಕ್ಕೂ  ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ ಎನ್ನುವ ಗಾದೆ ಮಾತು ತಲೆತಲಾಂತರಗಳಿಂದಲೇ ಬಂದುಬಿಟ್ಟಿದೆ.ಮದುವೆ ಮಾಡಿಕೊಟ್ಟ ಮೇಲೆ ಆಕೆ ಗಂಡನ ಮನೆಗೆ ಸೇರಿದವಳು.  ಏನೇ ಆದರೂ ಆಕೆ ಅಲ್ಲಿಯೇ ಇರಬೇಕು. ಎಷ್ಟೇ ಕಷ್ಟವಾದರೂ, ಏನೇ ದೌರ್ಜನ್ಯ ಎಸಗಿದರೂ ಹೆಣ್ಣಾದವಳಿಗೆ ಗಂಡನೇ ಸರ್ವಸ್ವ, ಪತಿಯೇ ಪರದೈವ, ಅತ್ತೆ ಮನೆಯೇ ಎಲ್ಲವೂ ಎನ್ನುವ ಮಾತು ಹಿಂದಷ್ಟೇ ಅಲ್ಲ, ಈಗಲೂ ಹಲವೆಡೆ ಕೇಳಿ ಬರುವುದು ಇದೆ. ಪತಿಯ ಮನೆಯಲ್ಲಿ ದೌರ್ಜನ್ಯ ಸಹಿಸಲಾಗದೇ ಮನೆಬಿಟ್ಟು ತವರು ಮನೆ ಸೇರಿದ ಎಷ್ಟೋ ಹೆಣ್ಣುಮಕ್ಕಳಿಗೆ ಬುದ್ಧಿಮಾತು ಹೇಳಿ ಗಂಡನ ಮನೆಗೆ ವಾಪಸ್​ ಕಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ಪೈಕಿ ಆ ಹೆಣ್ಣುಮಕ್ಕಳು ಮತ್ತೆ ಹೆತ್ತವರಿಗೆ ಸಿಗುವುದು ಶವವಾಗಿ ಎನ್ನುವುದೂ ಅಷ್ಟೇ ಸತ್ಯ.  ಇದೀಗ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದೆ.

 

ಅದರೆ ಇಲ್ಲಿ ಸಹನಾ ಸತ್ತಿಲ್ಲ ಎಂದೇ ಹಲವರು ಹೇಳುತ್ತಿದ್ದಾರೆ. ಸಹನಾ ಬದುಕಿದ್ದರೆ ಅವಳ ಮದುವೆಯನ್ನು ಕಾಳಿ ಜೊತೆ ಮಾಡಿಸಿ, ಈ ಮೇಷ್ಟ್ರು ಸರಿಯಿಲ್ಲ ಎಂದೆಲ್ಲಾ ಹೇಳುತ್ತಿದ್ದಾರೆ. ಇದೇ ವೇಳೆ ಪುಟ್ಟಕ್ಕನನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಹನಾ ಕೂಡ ತನ್ನನ್ನು ಸಾಯಿಸಲು ಹೊರಟ ಅತ್ತೆ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದಿರುವ ಗಂಡನ ಸಂಬಂಧಿ ವಿರುದ್ಧದ ಸಿಡಿದೆದ್ದು ತವರು ಸೇರಿದ್ದಾಳೆ. ತನ್ನ ಪರವಾಗಿ ಇರಬೇಕಾದ ಪತಿ ತನ್ನನ್ನೇ ಹುಚ್ಚಿ ಎಂದು ಹೇಳಿರುವುದು ಆಕೆಗೆ ನುಂಗಲಾಗದ ತುತ್ತಾಗಿದೆ. ಆದರೆ ಪುಟ್ಟಕ್ಕನಿಗೋ ಮಗಳ ಜೀವನವನ್ನು ಹೇಗಾದರೂ ಸರಿ ಮಾಡುವ ಚಿಂತೆ. ತಾಯಿಯ ಸ್ಥಾನದಲ್ಲಿ ನಿಂತು ಪುಟ್ಟಕ್ಕನನ್ನು ನೋಡುವುದಾದರೆ, ಅವಳಿಗೆ ಮಗಳ ಸಂಸಾರ ಸರಿಯಾಗಬೇಕಷ್ಟೇ. ಏಕೆಂದರೆ ಇಲ್ಲಿ ಸಹನಾಳ ಗಂಡ ತನ್ನ ತಾಯಿಯ ಪರ ಇದ್ದಾನೆ ಎನ್ನುವುದು ಬಿಟ್ಟರೆ ಆತ ತುಂಬಾ ಒಳ್ಳೆಯವ. ಸಹನಾಳನ್ನು ತುಂಬಾ ಪ್ರೀತಿಸುತ್ತಾನೆ. ಇದಕ್ಕಾಗಿ ಪುಟ್ಟಕ್ಕನಿಗೆ ಇಬ್ಬರನ್ನೂ ಒಂದು ಮಾಡುವ ಚಿಂತೆ. ಇದಕ್ಕಾಗಿ ಸಹನಾಳಿಗೆ ಬುದ್ಧಿ ಮಾತು ಹೇಳಿದ್ದಾಳೆ. ಆದರೆ ಸಹನಾ ಮನೆ ಬಿಟ್ಟಿದ್ದಾಳೆ. ಇವಳನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ ಅಂತಿದ್ದಾರೆ ಅಭಿಮಾನಿಗಳು. 

ಬೆಡ್​ರೂಮ್​ ಕಮಿಟ್​ಮೆಂಟ್​ ಇಲ್ಲದಿದ್ರೆ ಟಾಪ್​ ನಾಯಕಿಯಾಗೋದು ಕಷ್ಟ! ರಮ್ಯಾ ಕೃಷ್ಣನ್​ ಹೇಳಿಕೆ ವೈರಲ್​...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ
Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?