
ಜಗತ್ತಿನಲ್ಲಿ ಜನರು ಚಿತ್ರ - ವಿಚಿತ್ರ ಖಾಯಿಲೆಗೆ ಒಳಗಾಗ್ತಾರೆ. ಆರೋಗ್ಯಕರ ಮಕ್ಕಳು ಜನಿಸಲಿ ಎಂದು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಈಗಿನ ಕಾಲದಲ್ಲಿ ಆರೋಗ್ಯವಾದ ಮಕ್ಕಳು ಜನಿಸಿದ್ರೆ ಮಾತ್ರ ನೆಮ್ಮದಿ ಸಿಗೋದಿಲ್ಲ ಮಕ್ಕಳು ದೊಡ್ಡವರಾದ್ಮೇಲೂ ಅನೇಕ ರೋಗಗಳಿಗೆ ಅವರು ತುತ್ತಾಗ್ತಾರೆ. ಹುಟ್ಟಿದ ಮಗು ಗಂಡು ಎಂದೇ ಅವರನ್ನು ಪಾಲಕರು ಬೆಳೆಸಿರ್ತಾರೆ. ಆದ್ರೆ ಅವರು ದೊಡ್ಡವರಾದ್ಮೇಲೆ ಹೆಣ್ಣಿನ ಅವತಾರಕ್ಕೆ ಬದಲಾಗೋದಿದೆ. ಈಗ ಇಲ್ಲೊಬ್ಬ ಮಹಿಳೆ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಆಕೆ ಕಳೆದ ಇಪ್ಪತ್ತೇಳು ವರ್ಷಗಳಿಂದ ತಾನು ಹೆಣ್ಣೆಂದೇ ಜೀವನ ನಡೆಸಿದ್ದಳು. ಮದುವೆ ಫಿಕ್ಸ್ ಆದ್ಮೇಲೆ ಆಘಾತ ಕಾದಿತ್ತು. ಮದುವೆ ಆಗುವ ಹುಡುಗಿ ಹುಡುಗಿಯೇ ಅಲ್ಲ ಎಂಬ ವಿಷ್ಯ ಬಹಿರಂಗವಾಯ್ತು. ಈಗ ಅವಳು ಚಿಕಿತ್ಸೆಗೆ ಒಳಗಾಗಿದ್ದಾಳೆ. ಹಾರ್ಮೋನ್ ಬದಲಾವಣೆಯನ್ನು ಸದ್ಯ ಪರೀಕ್ಷಿಸಲಾಗ್ತಿದೆ.
ಘಟನೆ ನಡೆದಿರೋದು ಚೀನಾ (China)ದ ಹುಬೈನಲ್ಲಿ. ಲೀ ಹೆಸರಿನ ಹುಡುಗಿಗೆ ಎಲ್ಲ ಮಹಿಳೆಯರಂತೆ ಪಿರಿಯಡ್ಸ್ (Periods) ಆಗಿರಲಿಲ್ಲ. ಆಕೆಯ ಸ್ತನ (Breast) ದಲ್ಲೂ ಬೆಳವಣಿಗೆ ಕಾಣಿಸಿರಲಿಲ್ಲ. ಇದ್ರಿಂದ ಅನುಮಾನಗೊಂಡ ಲೀ ಹಾಗೂ ಆಕೆ ಕುಟುಂಬಸ್ಥರು ಹದಿನಂಟನೆ ವಯಸ್ಸಿನಲ್ಲಿ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು, ಲೀ ದೇಹದ ಪರೀಕ್ಷೆ ನಡೆಸಿದ್ದರು. ಈ ವೇಳೆ ವೈದ್ಯರು, ಲೀ ಅಂಡಾಶಯದ ವೈಫಲ್ಯದಿಂದ ಬಳಲುತ್ತಿದ್ದಾಳೆ ಎಂದಿದ್ದಲ್ಲದೆ, ಹೆಚ್ಚಿನ ಪರೀಕ್ಷೆ ನಡೆಸುವಂತೆ ವೈದ್ಯರು ಲೀಗೆ ಸಲಹೆ ನೀಡಿದ್ದರು. ಆದ್ರೆ ಹುಡುಗಿ ಮತ್ತು ಆಕೆ ಪಾಲಕರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಯಾವೆಲ್ಲಾ ದೇಶಗಳ ಜನ ದೀರ್ಘಾಯಸ್ಸು ಹೊಂದಿರುತ್ತಾರೆ ಗೊತ್ತಾ?
ಲೀ ಬೆಳೆದು ದೊಡ್ಡವಳಾಗಿದ್ದು ಈಗ ಆಕೆಗೆ ಇಪ್ಪತ್ತೇಳು ವರ್ಷ. ಮದುವೆ ಫಿಕ್ಸ್ ಆಗಿದೆ. ಈಗ್ಲೂ ಆಕೆಗೆ ಪಿರಿಯಡ್ಸ್ ಆಗ್ತಿಲ್ಲ. ಸ್ತನದ ಬೆಳವಣಿಗೆ ಸರಿಯಾಗಿ ಆಗಿಲ್ಲ. ಮುಂದೆ ತೊಂದರೆ ಆಗ್ಬಾರದು ಎನ್ನುವ ಕಾರಣಕ್ಕೆ ಲೀ ಮತ್ತೊಮ್ಮೆ ಪರೀಕ್ಷೆಗೆ ಒಳಗಾದಳು. ಈ ವೇಳೆ ಆಘಾತಕಾರಿ ಸಂಗತಿ ಹೊರಗೆ ಬಂತು.
ಲೀಗೆ ಕಾಡ್ತಿದೆ ಈ ಸಮಸ್ಯೆ : ಲೀ, ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಪರೀಕ್ಷೆಗೆ ಒಳಗಾದ ವೇಳೆ, ಜನ್ಮಜಾತ ಮೂತ್ರಜನಕಾಂಗದ ಹೈಪರ್ಪ್ಲಾಸಿಯಾ (CAH)ದಿಂದ ಬಳಲುತ್ತಿದ್ದಾಳೆ ಎಂಬುದು ಗೊತ್ತಾಗಿದೆ. ಒಂದು ತಿಂಗಳ ಪರೀಕ್ಷೆ ನಂತ್ರ ಲೀ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾಳೆ, ಅದಕ್ಕೆ ಏನು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಲೀ ಪುರುಷ ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದಾಳೆ. ಆಕೆ ನೋಡಲು ಮಾತ್ರ ಹುಡುಗಿಯರಂತೆ ಕಾಣಿಸ್ತಾಳೆ. ಸಾಮಾಜಿಕವಾಗಿ ಲೀ ಒಬ್ಬ ಮಹಿಳೆ. ಆದರೆ ವರ್ಣತಂತು ಪುರುಷರದ್ದಾಗಿದೆ. ಇದು ಪುರುಷ ಹಾರ್ಮೋನುಗಳು ಮತ್ತು ವೀರ್ಯವನ್ನು ಉತ್ಪಾದಿಸುತ್ತದೆ.
ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ ಹಣ್ಣು ಸೇವಿಸಿ
ಶಸ್ತ್ರಚಿಕಿತ್ಸೆಗೆ ಒಳಗಾದ ಲೀ : ಪ್ರತಿ 50,000 ನವಜಾತ ಶಿಶುಗಳಲ್ಲಿ ಒಬ್ಬರು CAH ನಿಂದ ಬಳಲುತ್ತಾರೆ. ಲೀಗೆ ಆರಂಭದಲ್ಲೇ ಚಿಕಿತ್ಸೆ ಅಗತ್ಯವಿತ್ತು. ಆದ್ರೆ ಆರಂಭದಲ್ಲಿ ಸರಿಯಾದ ಚಿಕಿತ್ಸೆ ಸಿಗದ ಕಾರಣ ಆಕೆ ಆಸ್ಟಿಯೊಪೊರೋಸಿಸ್ ಮತ್ತು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಹಿಂದಿನ ತಿಂಗಳು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಲೀ ದೇಹದಲ್ಲಿದ್ದ ವೃಷಣವನ್ನು ತೆಗೆದುಹಾಕಿದ್ದಾರೆ. ಇನ್ನೊಂದಿಷ್ಟು ದಿನ ಲೀಗೆ ಹಾರ್ಮೋನ್ ಚಿಕಿತ್ಸೆಯ ಅಗತ್ಯವಿದೆ. ಹುಟ್ಟಿದಾಗಿನಿಂದಲೂ ತಾನು ಹುಡುಗಿ ಎಂದೇ ನಂಬಿ ಬೆಳೆದಿದ್ದ ಲೀಗೆ ಈ ವಿಷ್ಯ ಆಘಾತವನ್ನುಂಟು ಮಾಡಿದೆ. ಆದ್ರೆ ವಾಸ್ತವವನ್ನು ಅರಿತಿರೋದಾಗಿ ಲೀ ಹೇಳಿದ್ದಾಳೆ. ಲೀಗೆ ಕಾಣಿಸಿಕೊಂಡ ಲಕ್ಷಣ ಯಾವುದೇ ಹುಡುಗಿಯರಿಗೆ ಕಾಣಿಸಿದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲೀ ಕಥೆ ಕೇಳಿದ ಜನರು ಭಾವುಕರಾಗಿದ್ದಾರೆ. ಲೀ ಧೈರ್ಯವನ್ನು ಮೆಚ್ಚಿದ್ದಲ್ಲದೆ ಎಲ್ಲವೂ ಸರಿಯಾಗುತ್ತೆ ಎಂದು ಬೆನ್ನುಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.