ಶೀಘ್ರದಲ್ಲಿ ಟೋಲ್‌ಗೇಟ್ ಮುಕ್ತ ಸಂಚಾರ, ಅಪ್ಪು ಫ್ಯಾನ್ಸ್‌ಗೆ ಪವರ್ ಸಡಗರ; ಮಾ.18ರ ಟಾಪ್ 10 ಸುದ್ದಿ!

By Suvarna NewsFirst Published Mar 18, 2021, 4:56 PM IST
Highlights

ಇನ್ನು ಒಂದೇ ವರ್ಷದಲ್ಲಿ ದೇಶದಲ್ಲಿನ ಎಲ್ಲಾ ರಸ್ತೆಗಳು ಟೋಲ್‌ಗೇಟ್‌ನಿಂದ ಮುಕ್ತವಾಗಲಿದೆ. ಇತ್ತ ರಾಸಲೀಲೆ ಸಿಡಿ ಯುವತೆ ಜತೆ ಸಂಪರ್ಕದಲ್ಲಿದ್ದ ರಾಜಕೀಯ ಮುಖಂಡರ ಹೆಸರು ಬಹಿರಂಗವಾಗಿದೆ. ಮತ ಪಟ್ಟಿ ಜೊತೆ ಆಧಾರ್‌ ಲಿಂಕ್ ಮಾಡಲು ಸರ್ಕಾರ ಮುಂದಾಗಿದೆ. ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಪುನೀತ್, ಕುಸ್ತಿ ಪಟು ರಿತಿಕಾ ಪೋಗತ್ ಆತ್ಮಹತ್ಯೆ ಸೇರಿದಂತೆ ಮಾರ್ಚ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಸಿಡಿ ಯುವತಿ ಜತೆ ಸಂಪರ್ಕದಲ್ಲಿದ್ದ ರಾಜಕೀಯ ಮುಖಂಡರ ಹೆಸರು ಬಹಿರಂಗ?...

ಸಿಡಿ ಸ್ಫೋಟ ಪ್ರಕರಣ/ ಯುವತಿ ಕಿಡ್ನಾಪ್ ಕೇಸ್ ಬೆಳಗಾವಿಯಿಂದ ಬೆಂಗಳೂರಿಗೆ ವರ್ಗಾವಣೆ/ ಪ್ರಾಥಮಿಕ ಮಾಹಿತಿ ಕಲೆಹಾಕಿ ಎಸ್‌ಐಟಿಗೆ ನೀಡಿದ ಪೊಲೀಸರು/ ಯುವತಿ ಕುಟುಂಬದವರು ಬೆಳಗಾವಿಯಲ್ಲಿ ಕಿಡ್ನಾಪ್  ದೂರು ದಾಖಲಿಸಿದ್ದರು.

'ಇನ್ನೊಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್‌ ಪ್ಲಾಜಾಗಳು ಬಂದ್!...

ಲೋಕಸಭೆಯಲ್ಲಿ ನಿತಿನ್ ಗಡ್ಕರಿ ಮಹತ್ವದ ಹೇಳಿಕೆ| ಮುಂದಿನ ಒಂದು ವರ್ಷದೊಳಗೆ ಎಲ್ಲಾ ಟೋಲ್‌ ಪ್ಲಾಜಾಗಳು ಬಂದ್| ಜಿಪಿಎಸ್‌ ಸಿಸ್ಟಂ ಅಳವಡಿಕೆ

ಮೋದಿ ಸಭೆ ಬೆನ್ನಲ್ಲೇ ಏರಿಕೆಯಾದ ಕೊರೋನಾ; ಎದುರಾಗಿದೆ ಲಾಕ್‌ಡೌನ್ ಆತಂಕ!...

ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದು ಮುಂದಿನ ಕ್ರಮಗಳ ಕುರಿತ ಚರ್ಚಿಸಿದ್ದಾರೆ. ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಸಭೆ ಮರುದಿನವೇ ಕೊರೋನಾ ನಿಯಂತ್ರಣಕ್ಕೆ ಸಿಗದೆ ಮೇಲೇರುತ್ತಿದೆ. ಇದೀಗ ಹೊಸ ನಿರ್ಧಾರಗಳು ಜಾರಿಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

ಮಹಾವೀರ್ ಸಿಂಗ್ ಮನೆಯಲ್ಲಿ ರಿತಿಕಾ ಪೋಗತ್‌ ಆತ್ಮಹತ್ಯೆಗ ಶರಣು..!...

ಯುವ ಪ್ರತಿಭಾನ್ವಿತ ಕುಸ್ತಿಪಟು ರಿತಿಕಾ ಪೋಗತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಿತಿಕಾ ಮೃತದೇಹ ದಿಗ್ಗಜ ಕುಸ್ತಿಪಟು ಮಹವೀರ್ ಸಿಂಗ್ ಪೋಗತ್ ಮನೆಯಲ್ಲಿ ಪತ್ತೆಯಾಗಿದೆ.

ಮತ ಪಟ್ಟಿ ಜೊತೆ ಆಧಾರ್‌ ಲಿಂಕ್ ಮಾಡಲು ಸರ್ಕಾರ ಚಿಂತನೆ!...

ಒಬ್ಬನೇ ವ್ಯಕ್ತಿ ಬೇರೆ ಬೇರೆ ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿರುವುದನ್ನು ತಪ್ಪಿಸುವ ಉದ್ದೇಶದಿಂದ ಮತದಾರರ ಪಟ್ಟಿಯನ್ನು ಆಧಾರ್‌ ವ್ಯವಸ್ಥೆಯ ಜೊತೆ ಜೋಡಿಸುವ ಚುನಾವಣಾ ಆಯೋಗ ಪ್ರಸ್ತಾವನೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

ರೋಡ್ ಸೇಫ್ಟಿ ಸೀರೀಸ್‌: ಸಚಿನ್‌, ಯುವಿ ಅಬ್ಬರ, ಫೈನಲ್‌ಗೆ ಲಗ್ಗೆಯಿಟ್ಟ ಭಾರತ...

ಸಚಿನ್‌ ತೆಂಡುಲ್ಕರ್ ನೇತೃತ್ವದ ಇಂಡಿಯಾ ಲೆಜೆಂಡ್ಸ್‌ ತಂಡವು ರೋಡ್ ಸೇಫ್ಟಿ ಸೀರೀಸ್‌ನಲ್ಲಿ ಫೈನಲ್‌ ಪ್ರವೇಶಿಸಿದೆ. ಈ ಕುರಿಯಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಪ್ಪು ಹುಟ್ಟುಹಬ್ಬದ ಫ್ಯಾನ್ಸ್‌ಗೆ ಸಿಗ್ತು ಸೂಪರ್ ಗಿಫ್ಟ್‌; ಫೀಲ್ ದಿ ಪವರ್ ಪ್ರೋಮೋ!...

ಸ್ಯಾಂಡಲ್‌ವುಡ್‌ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 46ನೇ ವಸಂತಕ್ಕೆ ಕಾಲಿಟ್ಟ ಪ್ರಯುಕ್ತ ಯುವರತ್ನ ಚಿತ್ರತಂಡ ಫೀಲ್ ದಿ ಪವರ್ ಹಾಡಿನ ಪ್ರೋಮೋ ರಿಲೀಸ್‌ ಮಾಡಿತ್ತು. ಮಾಸ್‌ ಲುಕ್‌ ಹಾಗೂ ರಗಡ್ ಸ್ಟೆಪ್‌ನಲ್ಲಿ ಪುನೀತ್ ವಿಡಿಯೋ ನೋಡಿ ಅಭಿಮಾನಿಗಳು ಶಾಕ್ ಅಗಿದ್ದಾರೆ.

ಬೆಂಗಳೂರಿನ ಕೂ ಈಗ ಪೂರ್ಣ ದೇಶಿ!...

ವಿದೇಶಿ ಮೂಲದ ಚುಟುಕು ಜಾಲತಾಣ ಟ್ವೀಟರ್‌ಗೆ ಸಡ್ಡುಹೊಡೆಯುತ್ತಿರುವ ಬೆಂಗಳೂರು ಮೂಲದ ‘ಕೂ’ ಇದೀಗ ಸಂಪೂರ್ಣ ಸ್ವದೇಶಿಯಾಗಿ ಹೊರಹೊಮ್ಮಿದೆ. ಸಂಸ್ಥೆಯಲ್ಲಿ ಚೀನಾ ಮೂಲದ ಹೂಡಿಕೆದಾರರು ಹೊಂದಿದ್ದ ಪೂರ್ಣ ಪ್ರಮಾಣದ ಷೇರಿನ ಪಾಲನ್ನು ಭಾರತೀಯ ಮೂಲದ ಉದ್ಯಮಿಗಳು ಮತ್ತು ಹೂಡಿಕೆದಾರರು ಖರೀದಿಸಿದ್ದಾರೆ.

ಚಹಾ ಮಾರಿ ಲಕ್ಷಾಧಿಪತಿಯಾದ MBA ಚಾಯ್‌ವಾಲಾ..!...

ಈತ ಎಂಬಿಎ ಡ್ರಾಪ್‌ಔಟ್, ಆದ್ರೆ ಈಗ ಮಾತ್ರ ಎಂಬಿಎ ಮೂಲಕವೇ ಫೇಮಸ್ | ಸ್ಟ್ರೀಟ್‌ನಲ್ಲಿ ಚಹಾ ಮಾರಿ ಲಕ್ಷಾಧಿಪತಿಯಾದ ಯುವಕನೀತ | ಎಂಬಿಎ ಚಾಯ್‌ವಾಲನ ಬಗ್ಗೆ ಇಲ್ನೋಡಿ..

ರಿಜಿಸ್ಟ್ರೇಶನ್ ಉಚಿತ, 25% ರೋಡ್ ಟ್ಯಾಕ್ಸ್ ಕಡಿತ; ವಾಹನ ಸ್ಕ್ರಾಪ್ ನೀತಿ ಪ್ರಕಟಿಸಿದ ಗಡ್ಕರಿ!...

ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲ ಅಪಘಾತ ವಲಯಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದು ಜೊತೆಗೆ ಭಾರೀ ವಾಹನ ಸಂಚಾರಕ್ಕೆ ಸಮಯ ನಿಗದಿ ಬಗ್ಗೆ ಪೊಲೀಸ್ ಅಧೀಕ್ಷಕರು ಸೂಚನೆ ನೀಡಿದ್ದಾರೆ. 

click me!