ರಾಗಿಣಿ ಹೇಳಿದ ಭಯಾನಕ ಸತ್ಯ, ಕೊಹ್ಲಿ ಸೈನ್ಯಕ್ಕೆ ಆಘಾತ; ಆ.25ರ ಟಾಪ್ 10 ಸುದ್ದಿ!

By Suvarna News  |  First Published Aug 25, 2021, 4:50 PM IST

ಮಾದಕ ವಸ್ತು ಖರೀದಿ ಸಲುವಾಗಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ನೈಜೀರಿಯಾ ಪೆಡ್ಲರ್‌ಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ. 3ನೇ ಅಲೆ ಎದುರಿಸಲು ಆ.30ಕ್ಕೆ ತಜ್ಞರ ಜೊತೆ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ತಾಲಿಬಾನ್ ಬೆದರಿಕೆ ಬೆನ್ನಲ್ಲೇ ಅಮೆರಿಕ ಸೈಲೆಂಟ್ ಆಗಿದೆ. ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಡೆಲಿವರಿ ಬಾಯ್, ಬ್ಯಾಟಿಂಗ್ ಇಳಿದ ಭಾರತಕ್ಕೆ ಆಘಾತ ಸೇರಿದಂತೆ ಆಗಸ್ಟ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 


ಆಫ್ಘಾನಿಸ್ತಾನದ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!

Latest Videos

undefined

ತಾಲಿಬಾನ್ ಉಗ್ರರ ಕ್ರೌರ್ಯಕ್ಕೆ ಬೆಚ್ಚಿ ಅಮಾಯಕರು ಸಿಕ್ಕ ಸಿಕ್ಕ ವಿಮಾನ ಹತ್ತಿ ನಿರಾಶ್ರಿತ ಕೇಂದ್ರ ಸೇರುತ್ತಿದ್ದಾರೆ. ಇದರ ನಡುವೆ ಮತ್ತೆ ನೋವಿನ ಘಟನೆ ಬೆಳಕಿಗೆ ಬಂದಿದೆ. ಆಶ್ರಫ್ ಘನಿ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವನಾಗಿದ್ದ ಸೈಯದ್ ಅಹಮ್ಮದತ್ ಶಾ ಸಾದತ್, ಇದೀಗ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ಡ್ರಗ್ಸ್ ಸುಳಿಯಲ್ಲಿ ರಾಗಿಣಿ, ಪೊಲೀಸರೆದುರು ಬಾಯ್ಬಿಟ್ಟ ಭಯಾನಕ ಸತ್ಯ!

ಮಾದಕ ವಸ್ತು ಖರೀದಿ ಸಲುವಾಗಿ ತನ್ನ ಸ್ನೇಹಿತನೂ ಆಗಿರುವ ಸಾರಿಗೆ ನೌಕರ ರವಿಶಂಕರ್‌ ಹಾಗೂ ನೈಜೀರಿಯಾ ಮೂಲದ ಪೆಡ್ಲರ್‌ಗಳಿಗೆ ನಟಿ ರಾಗಿಣಿ ದ್ವಿವೇದಿ 49ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ.

3ನೇ ಅಲೆ ಎದುರಿಸಲು ಆ.30ಕ್ಕೆ ತಜ್ಞರು, ಕಾರ್ಯಪಡೆ ಮಹತ್ವದ ಸಭೆ

ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ಮೂರನೇ ಅಲೆ ಬರಬಹುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

Ind vs Eng ಲೀಡ್ಸ್‌ ಟೆಸ್ಟ್‌: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಬರೋಬ್ಬರಿ 8 ಟೆಸ್ಟ್‌ ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ ಟಾಸ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತಿದಿನ ಮಗಳ ಬಗ್ಗೆ ಸೋಷಿಯಲ್ ಮೀಡಿಯಾ ಚೆಕ್ ಮಾಡ್ತಾರೆ ಕೈರಾ ಪೋಷಕರು

ಇತ್ತೀಚೆಗೆ ಬಿಡುಗಡೆಯಾದ 'ಶೇರ್ಶಾ' ಸಿನಿಮಾದಲ್ಲಿ ತಮ್ಮ ಅಭಿನಯಕ್ಕಾಗಿ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿರುವ ನಟಿ ಕೈರಾ ಅಡ್ವಾನಿ ತಮ್ಮ ಕುರಿತು ಸೀಕ್ರೆಟ್ ಒಂದನ್ನು ಹೇಳಿದ್ದಾರೆ.

ಹಬ್ಬಕ್ಕೆ ‘ಪಂಚ್’ ನೀಡಲು ಟಾಟಾ ರೆಡಿ, ಹೊಸ ಮೈಕ್ರೋ ಎಸ್‌ಯುವಿ ಅನಾವರಣ

ಎಚ್‌ಬಿಎಕ್ಸ್ ಕೋಡ್‌ನೇಮ್‌ನೊಂದಿಗೆ ಕೆಲವು ದಿನಗಳಿಂದ ಭಾರಿ ಕುತೂಹಲ ಮೂಡಿಸಿದ್ದ ಟಾಟಾ ಕಂಪನಿಯ ಮೈಕ್ರೋ ಎಸ್‌ಯುವಿ ಕೊನೆಗೂ ಅನಾವರಣಗೊಂಡಿದೆ. ಕಂಪನಿಯು ಗಾಡಿಗೆ ಪಂಚ್‌ ಎಂದು ಹೆಸರಿಟ್ಟಿದೆ. ಎಂಟ್ರಿ ಲೆವಲ್ ಪಂಚ್ ಎಸ್‌ಯುವಿ ಶಕ್ತಿಶಾಲಿ ಮತ್ತು ಆಕರ್ಷಕವಾಗಿದೆ.

ಭದ್ರತಾ ದೃಷ್ಟಿಯಿಂದ ಸೇನೆ ಹಿಂದಕ್ಕೆ: ತಾಲಿಬಾನ್ ಬೆದರಿಕೆ ಬೆನ್ನಲ್ಲೇ ಸೈಲೆಂಟ್ ಆದ ಅಮೆರಿಕ!

 ಅಷ್ಘಾನಿಸ್ತಾನದಲ್ಲಿ ಬಿಕ್ಕಟ್ಟು ಬಗೆಹರಿಯದ ಹೊರತಾಗಿಯೂ ಸೇನೆಯನ್ನು ಆ.31ರ ಒಳಗಾಗಿ ವಾಪಸ್‌ ಕರೆಸಿಕೊಳ್ಳುವ ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮಂಗಳವಾರ ಪುನರುಚ್ಚರಿಸಿದ್ದಾರೆ.

ಗಣೇಶಹಬ್ಬ ಅಷ್ಟೇ ಅಲ್ಲ, ಯಾವುದೇ ಹಬ್ಬ ಮಾಡಿದ್ರೂ ಸಮಸ್ಯೆ: ಸರ್ಕಾರಕ್ಕೆ ಎಚ್ಚರಿಕೆ

ಕೊರೋನಾ ಮೂರನೇ ಅಲೆ ಬಗ್ಗೆ ನಿರ್ಲಕ್ಷ್ಯ ಬೇಡ..ಕೊರೋನಾ 3ನೇ ಅಲೆ ಬಂದೇ ಬರುತ್ತೆ. ಹೀಗಂತ ಸರ್ಕಾರಕ್ಕೆ ಟಾಸ್ಕ್ ಫೋರ್ಸ್ ಸದಸ್ಯ ಡಾ. ದೇವಿಶೇಟ್ಟಿ ಎಚ್ಚರಿಕೆ ನೀಡಿದ್ದಾರೆ.

ಸ್ವೆಟರ್ ಹಗರಣ: ನೀವು ಆನೆ ಆಗಿದ್ದರೆ ಪಲಾಯನ ಮಾಡ್ಬೇಡಿ, ಜಗ್ಗೇಶ್‌ಗೆ ಚರ್ಚೆಗೆ ಆಹ್ವಾನ

 ಚಂದನವನದ ಮೋಸ್ಟ್​ ಫೇಮಸ್​ ಹಾಸ್ಯ ನಟ, ಹೀರೋ ಕೋಮಲ್​ ವಿರುದ್ಧ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ಸಂಘಟನೆಗಳ ವತಿಯಿಂದ ಗಂಭೀರ ಆರೋಪ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಸ್ವೆಟರ್​ ಯೋಜನೆಯ ಹಣವನ್ನ ತಮ್ಮ ಲಾಭಕ್ಕೆ ಕೋಮಲ್​ ಬಳಸಿಕೊಂಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿದೆ.

click me!