ಕೇಂದ್ರದಿಂದ ಜನಸಂಖ್ಯಾ ನಿಯಂತ್ರಣ?ಬಾಲಿವುಡ್‌ಗೆ ಹಾರಿದ ಮಂದಣ್ಣ; ಡಿ.18ರ ಟಾಪ್ 10 ಸುದ್ದಿ!

By Suvarna NewsFirst Published Dec 18, 2020, 4:37 PM IST
Highlights

ಕೃಷಿ ಮಸೂದೆ ರೈತ ವಿರೋಧಿಯಲ್ಲಿ, ರೈತರ ಹಾದಿ ತಪ್ಪಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರುವ ಪ್ರಯತ್ನದಲ್ಲಿದೆಯಾ? ಸಚಿವರ ಹೇಳಿಕೆ ಈ ಅನುಮಾನಕ್ಕೆ ಕಾರಣವಾಗಿದೆ. THO ನಾಪತ್ತೆ ಪ್ರಕರಣದ ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ರವಿ. ಡಿ. ಚನ್ನಣ್ಣನವರ್, ರಶ್ಮಿಕ ಮಂದಣ್ಣ ಬಾಲಿವುಡ್ ಜರ್ನಿ ಸೇರಿದಂತೆ ಡಿಸೆಂಬರ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಜನಸಂಖ್ಯಾ ನಿಯಂತ್ರಣಕ್ಕೆ ಹೆಜ್ಜೆ ಇಟ್ಟಿತಾ ಕೇಂದ್ರ? ಸಚಿವರ ಸ್ಫೋಟಕ ಹೇಳಿಕೆಯಿಂದ ಸಂಚಲನ!...

ಜನಸಂಖ್ಯಾ ನಿಯಂತ್ರಣ ಕುರಿತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಗುಡುಗಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರ ಮುಂದಿನ ನೀತಿ ಜನಸಂಖ್ಯಾ ನಿಯಂತ್ರಣವಾಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಅಷ್ಟಕ್ಕೂ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕುರಿತು ಸಟಿವರು ನೀಡಿದ ಹೇಳಿಕೆಯೇನು? ಇಲ್ಲಿದೆ ವಿವರ.

ನೂತನ ಕೃಷಿ ಮಸೂದೆ ಒಂದೇ ರಾತ್ರಿಯಲ್ಲಿ ಜಾರಿಗೆ ಬಂದಿಲ್ಲ; ರೈತರ ಹಾದಿ ತಪ್ಪಿಸಬೇಡಿ; ಮೋದಿ...

ರೈತರ ಪ್ರತಿಭಟನೆ ನಡುವೆ ಪ್ರಧಾನಿ ಮೋದಿ ಭಾಷಣ ತೀವ್ರ ಕುತೂಹಲ ಕೆರಳಿಸಿತ್ತು. ಮಧ್ಯ ಪ್ರದೇಶ ರೈತರನ್ನುದ್ದೇಶಿ ಮೋದಿ ಮಾಡಿದ ಭಾಷಣದಲ್ಲಿ ನೂತನ ಕೃಷಿ ಮಸೂದೆಯನ್ನು ಸರಳ ರೂಪದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ರೈತರಲ್ಲಿ ಕೈಮುಗಿದು ವಿನಂತಿಯನ್ನು ಮಾಡಿಕೊಂಡಿದ್ದಾರೆ. ರೈತರನ್ನುದ್ದೇಶಿ ಪ್ರಧಾನಿ ಮೋದಿ ಮಾಡಿದ ಭಾಷಣದ ವಿವರ ಇಲ್ಲಿದೆ.

ವಂದೇ ಮಾತರಾಂ, ಜೈ ಶ್ರೀರಾಮ್ ಬ್ಯಾನರ್ ಹಾಕಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲು!...

ಸ್ಥಳೀಯ ಸಂಸ್ಥೆ ಚುನಾವಣೆ ಗೆಲುವಿನ ಸಂಭ್ರಮದಲ್ಲಿ ಪುರಸಭೆ ಕಟ್ಟದಲ್ಲಿ ಜೈ ಶ್ರೀರಾಮ್ ಹಾಗೂ ವಂದೇ ಮಾತರಾಂ ಬ್ಯಾನರ್ ಹಾಕಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸ್ ದಾಖಲಾಗಿದೆ. 

ಪಾಕಿಸ್ತಾನ ಕ್ರಿಕೆಟಿಗ ಆಮೀರ್‌ ದಿಢೀರ್‌ ನಿವೃತ್ತಿ...

ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಮೊಹಮ್ಮದ್ ಆಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬಾಲಿವುಡ್‌ಗೆ ಹಾರಿದ ರಶ್ಮಿಕಾ; ಬಾದ್‌ಷಾ ವೀಡಿಯೋ ಆಲ್ಬಂನಲ್ಲಿ ನ್ಯಾಶನಲ್‌ ಕ್ರಷ್‌!...

ಬಾಲಿವುಡ್‌ ಕ್ರಷ್‌ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ ಮಂದಿಯ ನಿದ್ದೆ ಕೆಡಿಸಲು ಹೊರಟಿದ್ದಾರೆ. ಅವರೀಗ ಫೇಮಸ್‌ ರಾರ‍ಯಪರ್‌ ಬಾದ್‌ಷಾ ಅವರ ವೀಡಿಯೋ ಆಲ್ಬಂನಲ್ಲಿ ಮೈ ಬಳುಕಿಸಲಿದ್ದಾರೆ.  

ನಿಮ್ಮ ವಾಟ್ಸಾಪ್‌ಗೆ ಈ ಮೆಸೇಜ್‌ ಬಂತಾ? ಹುಷಾರ್‌...

ನಿಮ್ಮ ವಾಟ್ಸಾಪ್‌ಗೆ ಈ ಸಂದೇಶ ಬಂತಾ ಎಚ್ಚರ ಎಚ್ಚರ.. ಅದನ್ನು ಓಪನ್ ಮಾಡಿದರೂ ಎದುರಾಗಲಿದೆ ಭಾರೀ ಸಮಸ್ಯೆ

THO ನಾಪತ್ತೆ ಪ್ರಕರಣ: ಪ್ರಾಥಮಿಕ ಮಾಹಿತಿ ಬಿಚ್ಚಿಟ್ಟ ರವಿ. ಡಿ. ಚನ್ನಣ್ಣನವರ್...

ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹೊಸಕೋಟೆ ಟಿಎಚ್​ಒ ಮಂಜುನಾಥ್​ ಪತ್ತೆಯಾಗಿದ್ದಾರೆ. ಆದ್ರೆ, ನಾಪತ್ತೆಗೆ ಕಾರಣ ಏನು ಎನ್ನುವುದು ಮಾತ್ರ ನಿಗೂಢವಾಗಿದೆ. ಇನ್ನು ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್ ಪ್ರತಿಕ್ರಿಯಿಸಿದ್ದು ಹೀಗೆ....

2ನೇ ದಿನ ಕ್ಯಾಚ್ ಕೈ ಚೆಲ್ಲಿದ ಶಾ; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌..!...

ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕ್ಯಾಚ್‌ ಕೈಚೆಲ್ಲಿ ಪೃಥ್ವಿ ಶಾ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. 

PFI ಸಂಘಟನೆ ಮೇಲೆ ಖಾಕಿ ಹದ್ದಿನ ಕಣ್ಣು : ಸೂಪರ್ ಕಾಪ್ ನಿಗಾ...

ಪಿಎಫ್‌ಐ ಕಾರ್ಯಕರ್ತರ ಚಟುವಟಿಕೆ ಮೇಲೆ ಸೂಪರ್ ಕಾಪ್ ನಿಗಾ ವಹಿಸಿದೆ. ಬೆಂಗಳೂರು,ಮೈಸೂರು,ಹುಬ್ಬಳ್ಳಿ-ಧಾರವಾಡ,ಮಂಗಳೂರು ಬೆಳಗಾವಿ,ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. 

ಪತ್ರ ಬರೆದ 23 ಹಿರಿಯ ಮುಖಂಡರ ಜೊತೆ ಸೋನಿಯಾ ಸಭೆ: ಕಾಂಗ್ರೆಸ್‌ನಲ್ಲಿ ದೊಡ್ಡ ಬದಲಾವಣೆ..?...

ಸೋನಿಯಾ ಗಾಂಧಿ ಅವರು ಶನಿವಾರ ಪಕ್ಷದ 23 ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕು ಎಂದು ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದ ಹಿರಿಯ ಕಾಂಗ್ರೆಸ್ ನಾಯಕರು ಪೂರ್ಣಾವಧಿ ನಾಯಕತ್ವ, ಪಾರದರ್ಶಕತೆ, ಸಕ್ರಿಯ ರಾಜಕಾರಣದ ಬಗ್ಗೆ ಪತ್ರಗಳಲ್ಲಿ ಬರೆದಿದ್ದರು.

click me!