ದಿನ ನಿತ್ಯದ ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರು ಬೇಸತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರ ಉಳಿತಾಯ ಪ್ರಮಾಣ ಕಡಿಮೆಯಾಗುತ್ತಿದೆ. ಯಾವ ರಾಜ್ಯದಲ್ಲಿ ಹೆಚ್ಚು ಬೆಲೆ ಏರಿಕೆಯಾಗಿದೆ ಗೊತ್ತಾ?
ನವದೆಹಲಿ: ದೇಶದಲ್ಲಿ ಕಳೆದೊಂದು ತಿಂಗಳಿನಿಂದ ಬೆಲೆ ಏರಿಕೆ ಹೆಚ್ಚಾಗುತ್ತಿದೆ. ಬೆಲೆ ಏರಿಕೆಗೆ ನಾನಾ ಕಾರಣಗಳಿವೆ. ಆದ್ರೆ ದೇಶದ ಕೆಲವು ರಾಜ್ಯಗಳಲ್ಲಿ ಅಧಿಕ ಚಿಲ್ಲರೆ ಹಣದುಬ್ಬರ ಉಂಟಾಗುತ್ತಿದೆ. ಈ ರಾಜ್ಯಗಳಲ್ಲಿ ತರಕಾರಿ ಸೇರಿದಂತೆ ದಿನನಿತ್ಯ ಬಳಕೆಯ ಬೆಲೆಗಳು ಏರಿಕಯಾಗಿದ್ದು, ಜನರ ಜೇಬು ಸುಡುತ್ತಿದೆ. ಇಷ್ಟು ಮಾತ್ರವಲ್ಲ ಜನರ ಉಳಿತಾಯದ ಪ್ರಮಾಣ ಸಹ ಇಳಿಕೆಯಾಗಿದೆ.
ಅಂಕಿಅಂಶಗಳ ಪ್ರಕಾರ ಒಡಿಶಾದಲ್ಲಿ ಹಣದುಬ್ಬರ ಶೇ.7ಕ್ಕಿಂತ ಹೆಚ್ಚಿದೆ. ಇದು ದೇಶದ ಸರಾಸರಿ ಹಣದುಬ್ಬರಕ್ಕಿಂತಲೂ ಅಧಿಕವಾಗಿದೆ. ಇತ್ತ ದೆಹಲಿಯಲ್ಲಿ ಹಣದುಬ್ಬರ ಇಳಿಕೆಯಾಗಿದೆ. ಇದು ಕಳೆದ ಐದು ತಿಂಗಳಲ್ಲಿ ಕಡಿಮೆ ಎಂದು ಅಂಕಿಅಂಶಗಳು ಹೇಳುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೇ.2ರಷ್ಟು ಹಣದುಬ್ಬರವಿದೆ.
ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯ
ಭಾರತದಲ್ಲಿ ಶೇ.4.8ರಷ್ಟು ಹಣದುಬ್ಬರವಿದ್ರೆ, ಒಡಿಶಾ ಅತಿ ಹೆಚ್ಚು ಹಣದುಬ್ಬರ ಹೊಂದಿರುವ ರಾಜ್ಯವಾಗಿದೆ. 2023 ನವೆಂಬರ್ ವೇಳೆ ಓಡಿಶಾದಲ್ಲಿ ಶೇ.7.7ರಷ್ಟು ಹಣದುಬ್ಬರ ದಾಖಲಾಗಿತ್ತು. ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ.8.7ಕ್ಕೆ ತಲುಪಿಯ್ತು. ಒಂದು ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಶೇ.1ರಷ್ಟು ಹೆಚ್ಚಳವಾಗಿತ್ತು.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ. ಈ ವರ್ಷ ಏಪ್ರಿಲ್‌ನಲ್ಲಿ ಶೇ.2.2ರಷ್ಟಿತ್ತು. ಕಳೆದ ವರ್ಷ 2023 ನವೆಂಬರ್‌ನಲ್ಲಿ ದೆಹಲಿಯಲ್ಲಿ ಹಣದುಬ್ಬರ ಶೇ.3.1ರಷ್ಟಿತ್ತು. ಏಪ್ರಿಲ್‌ನಲ್ಲಿ ಹಣದುಬ್ಬರ ಇಳಿಕೆಯಾಗಿದೆ.
13 ರಾಜ್ಯಗಳಲ್ಲಿ ಹೆಚ್ಚು ಬೆಲೆ ಏರಿಕೆ
ದೇಶದ 22 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ 13 ರಾಜ್ಯಗಳಲ್ಲಿ ಹಣದುಬ್ಬರ ದರವು ರಾಷ್ಟ್ರೀಯ ಸರಾಸರಿ 4.8% ಗಿಂತ ಹೆಚ್ಚಾಗಿದೆ. ಕೆಲವು ವಸ್ತುಗಳ ಬೆಲೆ ಏರಿಕೆ ಮತ್ತು ಸರಕುಗಳ ಕೊರತೆಯಿಂದಾಗಿ13 ರಾಜ್ಯಗಳಲ್ಲಿ ಹಣದುಬ್ಬರ ಪ್ರಮಾಣ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.
ಉದಾಹರಣೆಗೆ ಕಳೆದ ಕೆಲವು ವಾರಗಳಿಂದ ಮಾರುಕಟ್ಟೆಯಲ್ಲಿ ಟೊಮೆಟೋ, ಆಲೂಗಡ್ಡೆ, ಈರುಳ್ಳಿ ಸೇರಿದಂತೆ ಬಹುತೇಕ ತರಕಾರಿ ಬೆಲೆ ಏರಿಕೆಯತ್ತ ಸಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಆಲೂಗೆಡ್ಡೆ ಬೆಲೆ ಶೇ.53.6 ರಷ್ಟು ಏರಿಕೆಯಾಗಿದೆ, ಟೊಮೆಟೋ ಬೆಲೆ ಶೇ.41.8 ಮತ್ತು ಈರುಳ್ಳಿ ಬೆಲೆ ಶೇ.36.6 ರಷ್ಟು ಹೆಚ್ಚಾಗಿದೆ.
ಕೆಲವು ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿಯೇ ಸಗಟು ಬೆಲೆ ಹಣದುಬ್ಬರವು ಕಳೆದ 13 ತಿಂಗಳ ಗರಿಷ್ಠ ಪ್ರಮಾಣ ಅಂದ್ರೆ ಶೇ.1.3ಕ್ಕೆ ತಲುಪಿದೆ. ಆಹಾರ ಪದಾರ್ಥ ಮತ್ತು ಇಂಧನ ಬೆಲೆ ಏರಿಕೆ ಏಪ್ರಿಲ್‌ನಲ್ಲಿ ಹಣದುಬ್ಬರ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ.
ಪಿಎಂ ಮೋದಿ ವಿರುದ್ಧ ಸ್ಪರ್ಧೆ ಮಾಡಿರೋ ಅಭ್ಯರ್ಥಿಗಳು ಯಾರು? ಇಲ್ಲಿದೆ ಮಾಹಿತಿ
ಎಚ್ಚರಿಕೆ ನೀಡಿತ್ತು ರಿಸರ್ವ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ತಿಂಗಳು ಆಹಾರದ ಬೆಲೆಗಳ ಮೇಲೆ ನಿಯಂತ್ರಣದ ಮೇಲೆ ಅನಿಶ್ಚಿತತೆ ಉಂಟಾಗುತ್ತಿದೆ ಎಂದ ಎಚ್ಚರಿಕಯನ್ನು ನೀಡಿತ್ತು. ರಬಿ ಗೋಧಿ ಉತ್ಪಾದನೆಯು ಬೆಲೆ ಕಡಿಮೆ ಆದ್ರೆ ಸರ್ಕಾರದ ಸಂಗ್ರಹ ಪ್ರಮಾಣದ ಹೆಚ್ಚಳಕ್ಕೆ ಸಹಾಯವಾಗಲಿದೆ. ಇದರ ಜೊತೆಗೆ ವಿವಿಧ ಬೇಳೆಕಾಳುಗಳು ಮತ್ತು ಪ್ರಮುಖ ತರಕಾರಿಗಳ ಉತ್ಪಾದನೆಯನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯತೆ ಇದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ಬಾರಿಯ ದೇಶದಲ್ಲಿ ದಾಖಲಾದ ಅತಿಯಾದ ಬಿಸಿಲು ಸಹ ಹಣದುಬ್ಬರಕ್ಕೆ ಕಾರಣವಾಗಿದೆ. ಬಿಸಿಗಾಳಿ, ಮಳೆ ಪ್ರಮಾಣ ಕ್ಷೀಣವಾಗಿದ್ದರಿಂದ ಬೆಳೆ ಉತ್ಪಾದನೆಯಲ್ಲಿ ಕುಂಠಿತವಾಗಿದೆ.
ಪತ್ನಿಯ ಕೊಂದು ಆಕೆಯ ಮೃತದೇಹದ ಜೊತೆ ಸೆಲ್ಫಿ ತೆಗೆದು ಸಂಬಂಧಿಕರಿಗೆ ಕಳಿಸಿದ ಪತಿ!
ಅತಿ ಹೆಚ್ಚು ಹಣದುಬ್ಬರ ಹೊಂದಿರುವ ಟಾಪ್ 5 ರಾಜ್ಯಗಳು
1.ಓಡಿಶಾ: ಶೇ.7.1
2.ಅಸ್ಸಾಂ: ಶೇ.5.7
3.ಛತ್ತೀಸಗಢ: ಶೇ.5.7
4.ತೆಲಂಗಾಣ: ಶೇ.5.7
5.ಹರಿಯಾಣ: ಶೇ.5.7
ಕಡಿಮೆ ಹಣದುಬ್ಬರ ಹೊಂದಿರುವ ಟಾಪ್ 5 ರಾಜ್ಯಗಳು
1.ದೆಹಲಿ: ಶೇ.2.2
2.ಪಶ್ಚಿಮ ಬಂಗಾಳ: ಶೇ.3.5
3.ಉತ್ತರಾಖಂಡ: ಶೇ.3.6
4.ಮಹಾರಾಷ್ಟ್ರ: ಶೇ.3.7
5.ಜಾರ್ಖಾಂಡ: ಶೇ.4