ಅಯೋಧ್ಯೆ ಅಭಿವೃದ್ಧಿ ಪರಿಶೀಲಿಸಿದ ಮೋದಿ, ಸುಗಮವಾಯ್ತಾ ಡಿಕೆಶಿ ಹಾದಿ?ಜೂ.26ರ ಟಾಪ್ 10 ಸುದ್ದಿ!

By Suvarna NewsFirst Published Jun 26, 2021, 4:59 PM IST
Highlights

ಯುಪಿ ಎಲೆಕ್ಷನ್‌ಗೂ ಮುನ್ನ 20 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಲಡಾಖ್‌ಗೆ ನಾಳೆ ರಾಜನಾಥ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಆಯೋಗ್ಯ ಹಾಡಿಗೆ ಫಿದಾ ಆದ ರಮ್ಯಾ, ಮಾಜಿ ಬಿಗ್‌ಬಾಸ್‌ ಸ್ಪರ್ಧಿಗೆ ಲೈಂಗಿಕ ಕಿರುಕುಳ ಸೇರಿದಂತೆ ಜೂನ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಚೀನಾ ಗಡಿ ತಂಟೆ ಬೆನ್ನಲ್ಲೇ ನಾಳೆ ಲಡಾಖ್‌ಗೆ ರಾಜನಾಥ್ ಸಿಂಗ್ ಭೇಟಿ!

ಸತತ ಮಾತುಕತೆ, ತಕ್ಕ ತಿರುಗೇಟುಗಳಿಂದ ಕಳೆದ ವರ್ಷ ಚೀನಾ ಆರಂಭಿಸಿದ ಗಡಿ ತಂಟೆ ತಣ್ಣಗಾಗಿತ್ತು. ಆದರೆ ಇದೀಗ ಮತ್ತೆ ಚೀನಾ ಗಡಿಯಲ್ಲಿ ರಸ್ತೆ ಅಭಿವೃದ್ಧಿ, ಯುದ್ದವಿಮಾನಗಳ ಹಾರಾಟ ಸೇರಿದಂತೆ ಹಲವು ಕಸರತ್ತು ನಡೆಸುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಳೆ(ಜೂ.27) ಲಡಾಖ್‌ಗೆ ಭೇಟಿ ನೀಡಲಿದ್ದಾರೆ.

ಯುಪಿ ಎಲೆಕ್ಷನ್‌ಗೂ ಮುನ್ನ 20 ಸಾವಿರ ಕೋಟಿ ರೂ. ಪ್ರಾಜೆಕ್ಟ್ ಪರಿಶೀಲಿಸಿದ ಮೋದಿ!...

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಪರವಾಗಿ ಮಾಸ್ಟರ್ ಪ್ಲ್ಯಾನ್‌ನಲ್ಲಿ ಸೇರಿಸಲಾದ 20,000 ಕೋಟಿ ರೂ. ಮೊತ್ತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಪರಿಶೀಲಿಸಿದ್ದಾರೆ. ವರ್ಚುವಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ 14 ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ರಾಜ್ಯ ಸರ್ಕಾರ ಅಯೋಧ್ಯೆಯ ಅಭಿವೃದ್ಧಿಯನ್ನು ವೇಗಗೊಳಿಸಲು ನಿರ್ಧರಿಸಿದೆ.

ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಐಸಿಸಿ ಟಿ20 ವಿಶ್ವಕಪ್‌ ಆರಂಭದ ದಿನಾಂಕ ಪ್ರಕಟ..!...

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಅಕ್ಟೋಬರ್ 17ರಿಂದ ಯುಎಇನಲ್ಲಿ ನಡೆಯಲಿದೆ. ಐಪಿಎಲ್‌ ಫೈನಲ್‌ ಪಂದ್ಯ ಮುಗಿದ ಕೆಲವೇ ದಿನಗಳಲ್ಲಿ ವಿಶ್ವಕಪ್‌ ಆರಂಭಗೊಳ್ಳಲಿದೆ ಎಂದು ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಟೂರ್ನಿಯ ಫೈನಲ್‌ ಪಂದ್ಯ ನವೆಂಬರ್ 14ಕ್ಕೆ ನಡೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ ...

ಅಯೋಗ್ಯ ಚಿತ್ರದ ಈ ಹಾಡಿಗೆ ನಟಿ ರಮ್ಯಾ ಫಿದಾ. ಫ್ಲೀಸ್ ಸೀರಿಯಸ್ ಆಗಿ ಫಾಲೋ ಮಾಡಬೇಡಿ ಎಂದು ನೆಟ್ಟಿಗರಿಗೆ ಸಲಹೆ

ಕೊರೋನಾ ಚಿಕಿತ್ಸೆಗೆ ಮಾಡಿದ ವೆಚ್ಚ, ಸ್ವೀಕರಿಸಿದ ಹಣಕ್ಕಿಲ್ಲ ತೆರಿಗೆ!...

ಕೊರೋನಾ ಚಿಕಿತ್ಸೆ ಮಾಡಿದ ವೆಚ್ಚ ಮತ್ತು ಅದಕ್ಕಾಗಿ ಸ್ವೀಕರಿಸಿದ ನೆರವಿನ ಹಣಕ್ಕೆ ತೆರಿಗೆ ವಿನಾಯ್ತಿ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಈ ಕ್ರಮದ ಅನ್ವಯ, ಯಾವುದೇ ಕಂಪನಿ ಅಥವಾ ವ್ಯಕ್ತಿ ಇನ್ನೊಬ್ಬರ ಕೊರೋನಾ ಚಿಕಿತ್ಸೆಗೆ ನೀಡಿದ ಹಣಕ್ಕೆ ಸರ್ಕಾರ ವಿನಾಯಿತಿ ನೀಡಲಿದೆ. 

ಹೋಟೆಲ್‌ನಲ್ಲಿ ಮಾಜಿ ಬಿಗ್‌ಬಾಸ್‌ ಸ್ಪರ್ಧಿಗೆ ಲೈಂಗಿಕ ಕಿರುಕುಳ...

ಜನಪ್ರಿಯ ಗಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಜೂನ್ 24 ರಂದು ನೋಯ್ಡಾದ ಹೋಟೆಲ್‌ನಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದಾರೆ.

ಮೂರನೇ ಅಲೆ ಆತಂಕದ ಮಧ್ಯೆ ದೇಶಕ್ಕೆ ಗುಡ್‌ ನ್ಯೂಸ್‌ ಕೊಟ್ಟ ICMR!...

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಡೆಸಿದ ಅಧ್ಯಯನದಿಂದ ಜನರನ್ನು ನಿರಾಳಗೊಳಿಸವ ಸುದ್ದಿ ಲಭಿಸಿದೆ. ಹೌದು ಮೂರನೇ ಅಲೆ ದಾಳಿ ಇಡಬಹುದು, ಆದರೆ ಈ ಅಲೆ ಎರಡನೇ ಅಲೆಯಷ್ಟು ಗಂಭೀರವಾಗಿರುವುದಿಲ್ಲ ಎಂದು ಈ ಅಧ್ಯಯನ ಸ್ಪಷ್ಟಪಡಿಸಿದೆ.

2,800 ಬಿಲ್‌ಗೆ 11 ಲಕ್ಷ ಟಿಪ್ಸ್ ಕೊಟ್ಟ ಗ್ರಾಹಕ..!...

ರೆಸ್ಟೋರೆಂಟ್‌ಗೆ ಹೋಗಿ ತಿಂದು ಬಿಲ್ ಕೊಡುತ್ತೇವೆ, ನೂರೋ, ಇನ್ನೂರೋ ಟಿಪ್ಸ್ ಕೊಡುತ್ತೇವೆ. ಆದರೆ ಈತ ಬರೋಬ್ಬರಿ 11 ಲಕ್ಷ ಟಿಪ್ಟ್ ಕೊಟ್ಟಿದ್ದಾನೆ.

ಮುಂದಿನ ಸಿಎಂ ಅಂತರ್‌ ಯುದ್ಧದ ನಡುವೆ ಡಿಕೆ ಶಿವಕುಮಾರ್ ಮಹತ್ವದ ಸಭೆ...

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಬಹಿರಂಗ ಹೇಳಿಕೆ ಕಾಂಗ್ರೆಸ್‌ನಲ್ಲಿ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಕಾರ್ಯಧ್ಯಕ್ಷರ ಜೊತೆ ಸಭೆ ನಡೆಸಿರುವುದು ಭಾರೀ ಕುತೂಹಲ ಮೂಡಿಸಿದೆ.

click me!