EMI ವಿನಾಯ್ತಿಗೆ ಚಕ್ರಬಡ್ಡಿ ಮನ್ನಾ, 6 ಸಿಮ್‌ನಲ್ಲಿ ಅನುಶ್ರಿ ಪುರಾಣ; ಅ.4ರ ಟಾಪ್ 10 ಸುದ್ದಿ!

By Suvarna NewsFirst Published Oct 4, 2020, 5:03 PM IST
Highlights

ಕೊರೋನಾ ಕಾರಣ ಸಾಲ ಮರುಪಾತಿ ಕಂತು ವಿನಾಯಿತಿ ಪಡೆದವರ ಚಕ್ರಬಡ್ಡಿ ಮನ್ನಾ ಮಾಡಲು ಕೇಂದ್ರ ಒಪ್ಪಿಗೆ ಸೂಚಿಸಿದೆ.  ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅನುಶ್ರೀ ಮೊಬೈಲ್‌ನಿಂದ ಪ್ರಭಾವಿಗಳಿಗೆ ಕರೆ ಹೋಗಿತ್ತಾ? 6ಸಿಮ್ ಕಾರ್ಡ್‌ನಲ್ಲಿ ರಹಸ್ಯ ಅಡಿಗಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ, ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಅಕ್ಟೋಬರ್ 4ರ ಟಾಪ್ 10  ಸುದ್ದಿ ವಿವರ ಇಲ್ಲಿವೆ.

ನಕ್ಸಲರಿಂದ ನಕ್ಸಲ್‌ ನಾಯಕನ ಹತ್ಯೆ: ಇದೇ ಮೊದಲು!...

ಹಲವು ಹತ್ಯೆಗಳಿಗೆ ಕಾರಣನಾಗಿದ್ದ ಹಿರಿಯ ಮಾವೋವಾದಿ ನಾಯಕ ಮತ್ತು ವಿಭಾಗೀಯ ಸಮಿತಿ ಸದಸ್ಯ ಮೋದಿಯಂ ವಿಜ್ಜ (39) ಎಂಬಾತನನ್ನು ಆತನ ಸಹಚರನೇ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಛತ್ತೀಸ್‌ಘಡದ ಬಿಜಾಪುರ ಜಿಲ್ಲೆಯ ಬಸ್ತಾರ್‌ನಲ್ಲಿ ನಡೆದಿದೆ.

ಟ್ರಂಪ್‌ಗೆ ಕೊರೋನಾ: ಅಮೆರಿಕ ಅಧ್ಯಕ್ಷರಿಗೆ ವಯಸ್ಸು, ಬೊಜ್ಜು ಮುಳುವು!...

ಕೊರೋನಾ ಸೋಂಕಿಗೆ ಒಳ​ಗಾ​ದರೂ ತಮ್ಮ ಅಧಿ​ಕೃತ ನಿವಾ​ಸ​ವಾದ ಅಮೆ​ರಿ​ಕದ ಶ್ವೇತ​ಭ​ವ​ನ​ದಲ್ಲೇ ಚಿಕಿತ್ಸೆ ಪಡೆ​ಯು​ತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವ​ರನ್ನು ‘ವಾ​ಲ್ಟರ್‌ ರೀಡ್‌ ಸೇನಾ ಆಸ್ಪ​ತ್ರೆ​’ಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ.

ಅನುಶ್ರೀ 6 ಸಿಮ್ ರಹಸ್ಯ, 30 ಪ್ರಭಾವಿಗಳಿಗೆ ನಡುಕ!...

ಅನುಶ್ರೀ ಮೊಬೈಲ್‌ನಿಂದ ಪ್ರಭಾವಿಗಳಿಗೆ ಕರೆ ಹೋಗಿತ್ತಾ? ಇಂತಹುದ್ದೊಂದು ಪ್ರಶ್ನೆ ಮೂಡಲಾರಂಭಿಸಿದೆ. ಅನುಶ್ರೀ ಬಳಸುತ್ತಿದ್ದ ಆರು ಸಿಮ್‌ ಕಾರ್ಡ್‌ಗಳಲ್ಲಿ ಗಣ್ಯರ ರಹಸ್ಯವಿದೆ.

'ಸಿಬಿಐ ಬಗ್ಗೆ ನಮಗೆ ವಿಶ್ವಾಸವಿಲ್ಲ, ಸುಪ್ರೀಂ ಕಣ್ಗಾವಲಿನ ತನಿಖೆಯಾಗಲಿ'...

ಇಲ್ಲಿನ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. 3 ದಿನಗಳ ಹಿಂದೆ ಅಂತಿಮ ಸಂಸ್ಕಾರಕ್ಕೆ ಒಳಪಟ್ಟಶವ ತಮ್ಮ ಮಗಳದ್ದಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಅಲ್ಲದೆ, ಘಟನೆ ಕುರಿತು ಎಸ್‌ಐಟಿ ಅಥವಾ ಸಿಬಿಐ ತನಿಖೆ ಬಗ್ಗೆ ತಮಗೆ ವಿಶ್ವಾಸವಿಲ್ಲ, ಸುಪ್ರೀಂಕೋರ್ಟ್‌ ಕಣ್ಗಾವಲಿನಲ್ಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಲಿ!...

ಆಫ್ಘಾನಿಸ್ತಾನದಲ್ಲಿ ಮಹತ್ವದ ಶಾಂತಿ ಮಾತುಕತೆ ಬಳಿಕ ಬಾಂಬ್ ಸ್ಫೋಟ, ಆತ್ಮಾಹುತಿ ದಾಳಿಗಳ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಮತ್ತೆ ಆಫ್ಘಾನಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಆಫ್ಘಾನಿಸ್ತಾನದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಬಲಿಯಾಗಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ 27 ವರ್ಷದ ಯುವ ನಟಿ...

ಡಯಟ್‌ ಹಾಗೂ ಫಿಟ್ನೆಸ್‌ ಫ್ರೀಕ್ ಆಗಿದ್ದ ಮಿಷ್ಟಿ ಮುಖರ್ಜಿ ನಿನ್ನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. 

ಬಾಹ್ಯಾಕಾಶ ನೌಕೆಗೆ ಕಲ್ಪನಾ ಚಾವ್ಲಾ ಹೆಸರು!

 2003ರ ಬಾಹ್ಯಾಕಾಶಯಾನದ ವೇಳೆ ಸಾವನ್ನಪ್ಪಿದ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಬಾಹ್ಯಾಕಾಶ ನೌಕೆಯೊಂದಕ್ಕೆ ಇಡುವ ಮೂಲಕ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಗೌರವ ಸಲ್ಲಿಸಿದೆ.

ಕೇಂದ್ರದಿಂದ ಗುಡ್‌ ನ್ಯೂಸ್: ಇಎಂಐ ವಿನಾಯ್ತಿ ಪಡೆದವರಿಗೆ ಚಕ್ರಬಡ್ಡಿ ಮನ್ನಾ!...

ಕೊರೋನಾ ಹಿನ್ನೆಲೆಯಲ್ಲಿ ಸಾಲ ಮರುಪಾವತಿಯಿಂದ ಆರು ತಿಂಗಳು ವಿನಾಯಿತಿ ಪಡೆದಿದ್ದ ವೈಯಕ್ತಿಕ ಸಾಲಗಾರರು ಹಾಗೂ ಸಣ್ಣ- ಮಧ್ಯಮ ಉದ್ದಿಮೆಗಳ 2 ಕೋಟಿ ರು.ವರೆಗಿನ ಸಾಲದ ಮೇಲಿನ ಚಕ್ರ ಬಡ್ಡಿ (ಬಡ್ಡಿ ಮೇಲೆ ಬಡ್ಡಿ)ಯನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.

ಎಲೆಕ್ಟ್ರಿಕ್ ವಾಹನ ಖರೀದಿಸುವವರ ಖಾತೆಗೆ ಸಬ್ಸಿಡಿ ಹಣ; ಸರ್ಕಾರ ಮಹತ್ವದ ನಿರ್ಧಾರ!.

ಎಲೆಕ್ಟ್ರಿಕ್ ವಾಹನ ಖರೀದಿ ಉತ್ತೇಜಿಸಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ. ಕಾರು, ದ್ವಿಚಕ್ರ ವಾಹನ, ಇ ರಿಕ್ಷಾಗೆ ಅನುಗುಣವಾಗಿ ಸರ್ಕಾರ ಸಬ್ಸಿಡಿ ಹಣ ನೀಡಲಿದೆ. ಇದೀಗ  ಸಬ್ಸಿಡಿ ಹಣವನ್ನು ಖರೀದಿದಾರರ ಖಾತೆಗೆ ನೇರವಾಗಿ ಹಾಕಲು ನಿರ್ಧರಿಸಿದೆ. ಇದರಿಂದ ಹಲವು ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ.

ಡಿ. ಕೆ. ರವಿ ಪತ್ನಿ ಕುಸುಮಾ ಕಾಂಗ್ರೆಸ್‌ಗೆ ಸೇರ್ಪಡೆ!...

ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಹೀಗಿರುವಾಗಲೇ ಡಿ. ಕೆ. ರವಿ ಪತ್ನಿ ಕುಸುಮಾ ಭಾನುವಾರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

click me!