ಬಿಜಾಪುರ(ಅ.04): ಹಲವು ಹತ್ಯೆಗಳಿಗೆ ಕಾರಣನಾಗಿದ್ದ ಹಿರಿಯ ಮಾವೋವಾದಿ ನಾಯಕ ಮತ್ತು ವಿಭಾಗೀಯ ಸಮಿತಿ ಸದಸ್ಯ ಮೋದಿಯಂ ವಿಜ್ಜ (39) ಎಂಬಾತನನ್ನು ಆತನ ಸಹಚರನೇ ಹತ್ಯೆ ಮಾಡಿರುವ ಘಟನೆ ಶುಕ್ರವಾರ ಛತ್ತೀಸ್‌ಘಡದ ಬಿಜಾಪುರ ಜಿಲ್ಲೆಯ ಬಸ್ತಾರ್‌ನಲ್ಲಿ ನಡೆದಿದೆ.

ನಕ್ಸಲರು ತಮ್ಮ ನಾಯಕನನ್ನೇ ಹತ್ಯೆ ಮಾಡಿರುವ ಮೊದಲ ಘಟನೆ ಇದಾಗಿದೆ. ಪೊಲೀಸರ ಪ್ರಕಾರ, ಬಿಜಾಪುರ ಜಿಲ್ಲೆಯಲ್ಲಿ ನಡೆದ ಹಲವು ಹತ್ಯೆಗಳ ಹಿಂದೆ ವಿಜ್ಜನ ಕೈವಾಡವಿತ್ತು. ಹಾಗೆಯೇ ಮಾವೋವಾದಿ ಸಂಘಟನೆಯ ಹಿರಿಯ ಮತ್ತು ಸ್ಥಳೀಯ ಕಾರ‍್ಯಕರ್ತರ ನಡುವೆ ಹಲವಾರು ಭಿನ್ನಾಭಿಪ್ರಾಯಗಳಿದ್ದವು. ಈ ಭಿನ್ನಾಭಿಪ್ರಾಯವೇ ಹತ್ಯೆಗೆ ಕಾರಣವಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.