ಕರ್ನಾಟಕದಲ್ಲಿ ಮತ್ತೆ ಕೊರೋನಾ ಎಚ್ಚರಿಕೆ, 6 ನಗರದಲ್ಲಿ ಐಪಿಎಲ್ ಕೇಕೆ: ಫೆ.28ರ ಟಾಪ್ 10 ಸುದ್ದಿ!

By Suvarna NewsFirst Published Feb 28, 2021, 4:48 PM IST
Highlights

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಕಳೆದ 24 ತಾಸುಗಳಲ್ಲಿ ಕೊರೋನಾ ವೈರಸ್ ಗಣನೀಯವಾಗಿ ಹೆಚ್ಚಾಗಿದೆ. ಕುಮಾರಸ್ವಾಮಿಯನ್ನು ಯೋಗೇಶ್ವರ್ ಸ್ಪರ್ಧೆ ಕುರಿತ ಭವಿಷ್ಯ ಹೊರಬಿದ್ದಿದೆ. ಐಪಿಎಲ್ ಟೂರ್ನಿ ಆಯೋಜಿಸಲು 6 ನಗರಗಳನ್ನು ಬಿಸಿಸಿಐ ಆಯ್ಕೆ ಮಾಡಿದೆ. ಸಾಯಿ ಪಲ್ಲವಿ ಲವ್ ಸ್ಟೋರಿ, ಎಐಎಡಿಎಂಕೆಯಿಂದ ಬಿಜೆಪಿಗೆ 15 ಸ್ಥಾನಗಳ ಆಫರ್‌ ಸೇರಿದಂತೆ ಫೆಬ್ರವರಿ 28ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಕರ್ನಾಟಕ ಸೇರಿ 6 ರಾಜ್ಯದಲ್ಲಿ ಸೋಂಕು ಹೆಚ್ಚಳ!...

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ ಕಳೆದ 24 ತಾಸುಗಳಲ್ಲಿ ದೈನಂದಿನ ಪ್ರಕರಣಗಳು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಅಭಿನಂದನ್‌ ‘ಬಂಧನ’ದ ವೇಳೆಯ 60 ತಾಸಿನ ತೆರೆಮರೆಯ ವಿಷಯ ಬಹಿರಂಗ!...

ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಇಂತಹ ಬಂಧನದಿಂದ ಅಭಿನಂದನ್‌ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಅನ್ವಯ ಅಂದಿನ ಭಾರತೀಯ ಗುಪ್ತಚರ ದಳದ (ರಾ) ಮುಖ್ಯಸ್ಥ ಅನಿಲ್‌ ಧಸ್ಮಾನಾ ನೀಡಿದ ಒಂದು ಖಡಕ್‌ ಸಂದೇಶ.

ಪ್ರೇಮಂ ನಟಿಯ ಲವ್‌ಸ್ಟೋರಿ: ಸಾಯಿ ಪಲ್ಲವಿ ದಾವಣಿ ಲುಕ್ ವೈರಲ್...

ಸೌತ್ ನಟಿ ಸಾಯಿ ಪಲ್ಲವಿ ಫಿದಾ ನಂತರ ಮತ್ತೊಮ್ಮೆ ಹಳ್ಳಿ ಹುಡುಗಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಕ್ಯೂಟ್ ಲುಕ್ ವೈರಲ್ ಆಗಿದೆ. ಇಲ್ನೋಡಿ ಫೋಟೋಸ್

ತಿರುಪತಿ ತಿಮ್ಮಪ್ಪನದು ಈ ವರ್ಷ 2938 ಕೋಟಿ ರೂ ಬಜೆಟ್‌!...

ತಿರುಮಲ ತಿರುಪತಿ ದೇವಾಲಯ ಆಡಳಿತ ಮಂಡಳಿ (ಟಿಟಿಡಿ)ಯು 2021-22ನೇ ಸಾಲಿನಲ್ಲಿ 2,938 ಕೋಟಿ ರು. ಬಜೆಟ್‌ ಮಂಡನೆಗೆ ಶನಿವಾರ ಅನುಮೋದನೆ ನೀಡಿದೆ. ದೇಗುಲವು ಪ್ರಸಕ್ತ ವರ್ಷ 2938 ಕೋಟಿ ರು. ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ಈ ಮೊತ್ತದ ಬಜೆಟ್‌ಗೆ ಅನುಮೋದಿಸಲಾಗಿದೆ.

ಓಲಾದಿಂದ ಜಗತ್ತಿನ ಅತಿದೊಡ್ಡ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಯಾಕ್ಟರಿ!...

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ಮಾಡಿದ, ಆಪ್ ಆಧರಿತ ಕ್ಯಾಬ್ ಸೇವೆ ಒದಗಿಸುವ ಓಲಾ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಇದಕ್ಕಾಗಿ ಕಂಪನಿ ತಮಿಳುನಾಡಿನಲ್ಲಿ ಜಗತ್ತಿನ ಅತಿದೊಡ್ಡ ದ್ವಿಚಕ್ರವಾಹನ ಉತ್ಪದನಾ ಘಟಕವನ್ನು ನಿರ್ಮಿಸುತ್ತಿದೆ. 2000 ಸಾವಿರ ಕೋಟಿ ರೂ.ಗೂ ಅಧಿಕ  ಹೂಡಿಕೆ ಮಾಡುತ್ತಿರುವ ಕಂಪನಿ 10 ಸಾವಿರ ಉದ್ಯೋಗ ಸೃಷ್ಟಿಸಲಿದೆ.

ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯನ್ನು ಯೋಗೇಶ್ವರ್ ಸೋಲಿಸ್ತಾರೆ: ಹೀಗೊಂದು ಭವಿಷ್ಯ...

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ರಾಜಕೀಯ ಕಿತ್ತಾಟ ಶುರುವಾಗಿದ್ದು, ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗೇಶ್ವರ್ ನಡುವಿನ ರಾಜಕೀಯ ಫೈಟ್ ಮಧ್ಯೆ ಡಿಸಿಎಂ ಭವಿಷ್ಯ ನುಡಿದಿದ್ದಾರೆ.

IPL 2021: ಆರು ನಗರದಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ನಿರ್ಧಾರ!...

ಐಪಿಎಲ್ 2021 ಆಯೋಜನೆಗೆ ಬಿಸಿಸಿಐ ಭರ್ಜರಿ ತಯಾರಿ ನಡೆಸುತ್ತಿದೆ. ಕಳೆದ ಬಾರಿ ಕೊರೋನಾ ಕಾರಣ ದುಬೈನಲ್ಲಿ ಐಪಿಎಲ್ ಆಯೋಜಿಸಿದ ಬಿಸಿಸಿಐ ಈ ಬಾರಿ ಭಾರತದಲ್ಲಿ ಟೂರ್ನಿ ಆಯೋಜಿಸಲು ಸಿದ್ಧತೆ ನಡೆಸಿದೆ. 6 ನಗರಗಳಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿದೆ. ಯಾವ ನಗರಕ್ಕೆ ಐಪಿಎಲ್ ಭಾಗ್ಯ ದೊರೆಯಲಿದೆ? ಇಲ್ಲಿದೆ ವಿವರ.

ನಾಳೆಯಿಂದ 2ನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ| 10000 ಸರ್ಕಾರಿ, 20000 ಖಾಸಗಿ ಆಸ್ಪತ್ರೆಗಳಲ್ಲಿ ವಿತರಣೆ| 60 ಮೇಲ್ಪಟ್ಟವರು, 45 ಮೀರಿದ ಕಾಯಿಲೆಪೀಡಿತರಿಗೆ ಲಸಿಕೆ| ದೇಶಾದ್ಯಂತ 27 ಕೋಟಿ ಜನರಿಗೆ ಲಸಿಕೆ ವಿತರಣೆಯ ಗುರಿ

ಬಿಜೆಪಿಗೆ 60 ಸ್ಥಾನದ ಆಸೆ: ಎಐಎಡಿಎಂಕೆಯಿಂದ 15 ಸ್ಥಾನಗಳ ಆಫರ್‌!...

ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ಬಿಜೆಪಿ ಹಾಗೂ ಅಣ್ಣಾಡಿಎಂಕೆ ಪಕ್ಷದ ಮಧ್ಯೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆ ಆರಂಭವಾಗಿದೆ. 234 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 60 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಎಐಎಡಿಎಂಕೆ ಬಿಜೆಪಿಗೆ ಕೇವಲ 15 ಸ್ಥಾನಗಳನ್ನು ಬಿಟ್ಟುಕೊಡುವ ಆಫರ್‌ ನೀಡಿದೆ.

IPL 2021 ಟೂರ್ನಿಗೂ ಮುನ್ನ ದಿಯೋರಿ ಮಂದಿರಕ್ಕೆ ಭೇಟಿ; ಹೊಸ ಲುಕ್‌ನಲ್ಲಿ CSK ನಾಯಕ!...

ಟೀಂ ಇಂಡಿಯಾದಿಂದ ವಿದಾಯ ಹೇಳಿದ ಬಳಿಕ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಸಕ್ರಿಯವಾಗಿರುವ ಎಂ.ಎಸ್.ಧೋನಿ ಇದೀಗ 2021ರ ಐಪಿಎಲ್ ಟೂರ್ನಿಗೆ ತಯಾರಿ ನಡೆಸಿದ್ದಾರೆ. ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಧೋನಿ, ರಾಂಚಿಯಲ್ಲಿನ ದಿಯೋರಿ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

click me!