ಹಿಗ್ಗಬೇಡ ಅಮೆರಿಕ: ಐಸಿಸ್ ಹೊಸ ಮುಖ್ಯಸ್ಥನ ಸೇಡಿನ ಸಂದೇಶ!

By Web DeskFirst Published Nov 1, 2019, 1:56 PM IST
Highlights

ಐಸಿಸ್ ಮುಖ್ಯಸ್ಥನನ್ನು ಹತ್ಯೆ ಮಾಡಿ ಸಂಭ್ರಮಿಸುತ್ತಿರುವ ಅಮೆರಿಕ|  ಅಬುಕ್ ಬಕರ್ ಅಲ್ ಬಾಗ್ದಾದಿ ಹತ್ಯೆಗೆ ಅಮೆರಿಕದಾದ್ಯಂತ ಸಂಭ್ರಮಾಚರಣೆ| ಹಿಗ್ಗಬೇಡ ಅಮೆರಿಕ..ಎಂಬ ಎಚ್ಚರಿಕೆಯ ಸಂದೇಶ ಕಳುಹಿಸಿದ ಐಸಿಸ್| ಶೀಘ್ರದಲ್ಲೇ ಬಾಗ್ದಾದಿ ಹತ್ಯೆಯ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಐಸಿಸ್| ಬಾಗ್ದಾದಿ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಂ ಅಲ್ ಹಷಿಮಿ ಅಲ್ ಖುರೇಶಿ ನೇಮಕ| ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಳೆಯ ಮೂರ್ಖ ಎಂದ ಐಸಿಸ್| 'ಸಂಭ್ರಮಾಚರಣೆಯ ಮೂಡ್‌ನಿಂದ ಆದಷ್ಟು ಬೇಗ ಹೊರ ಬಂದರೆ ಒಳ್ಳೆಯದು'|

ವಾಷಿಂಗ್ಟನ್(ನ.01): ಐಸಿಸ್ ಮುಖ್ಯಸ್ಥ ಅಬುಕ್ ಬಕರ್ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಿ ಸಂಭ್ರಮದಲ್ಲಿರುವ ಅಮೆರಿಕಕ್ಕೆ, ಈ ಸಂತೋಷ ಬಹಳ ದಿನ ಇರಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಐಸಿಸ್ ರವಾನಿಸಿದೆ.

ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ

ನಮ್ಮ ಮುಖ್ಯಸ್ಥನನ್ನು ಕೊಂದಿದ್ದಕ್ಕೆ ಬಹಳ ಸಂಭ್ರಮಿಸದಿರಿ ಎಂದು ಹರಿಹಾಯ್ದಿರುವ ಐಸಿಸ್, ಶೀಘ್ರದಲ್ಲೇ ಬಾಗ್ದಾದಿ ಹತ್ಯೆಯ ಸೇಡು ತೀರಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ. 

ಬಾಗ್ದಾದಿ ಸಾವು: ಹೇಡಿ, ನಾಯಿ ಸತ್ತ ಎಂದ ಅಮೆರಿಕ ಅಧ್ಯಕ್ಷ ಟ್ರಂಪ್

ಈ ಕುರಿತು ಆಡಿಯೋ ಟೇಪ್ ಬಿಡುಗಡೆ ಮಾಡಿರುವ ಐಸಿಸ್,  ನಮ್ಮ ಬಾಹುಳ್ಯ ವಿಸ್ತರಿಸಲು ಬಾಗ್ದಾದಿ ಉತ್ತರಾಧಿಕಾರಿಯಾಗಿ ಅಬು ಇಬ್ರಾಹಂ ಅಲ್ ಹಷಿಮಿ ಅಲ್ ಖುರೇಶಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದೆ. 

ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!

ಬಾಗ್ದಾದಿ ಪರಮಾಪ್ತನಾದ ಹಷಿಮಿ ಅಲ್ ಖುರೇಷಿ, ಈ ಹಿಂದೆ ಇರಾಕ್ ಸರ್ವಾಧಿಕಾರಿ ಸದ್ಧಾಮ್ ಹುಸೇನ್ ಆಪ್ತ ವಲಯದ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ತನ್ನ ಶತ್ರುಗಳನ್ನು ನಿಗ್ರಹಿಸಲು ಸದ್ದಾಮ್ ಬಳಸುತ್ತಿದ್ದ ವಿಶೇಷ ಸೇನೆಯ ತಂಡದಲ್ಲಿದ್ದ ಈತನನ್ನು ಡಿಸ್ಟ್ರಾಯರ್ (ವಿಧ್ವಂಸಕ) ಎಂದೇ ಕರೆಯಲಾಗುತ್ತಿತ್ತು. 

ಐಸಿಸ್ ಡೆಡ್ ಚೀಫ್ ಬಾಗ್ದಾದಿ: ಏಜೆಂಟ್‌ರು ಅಂಡರ್‌ವೇರ್ ಕದ್ದಿದ್ದು ಯಾಕಾಗಿ?

ಖುರೇಷಿ ಅಲ್ ಖೈದಾ ಮತ್ತು ಐಸಿಸ್ ಎರಡಲ್ಲೂ ಅನುಭವ ಹೊಂದಿರುವುದರಿಂದ, ಈತನೇ ತನ್ನ ಉತ್ತರಾಧಿಕಾರಿ ಎಂದು ಬಾಗ್ದಾದಿ ಬಹಿರಂಗವಾಗಿ ಈ ಹಿಂದೆ ಘೋಷಿಸಿದ್ದ ಎನ್ನಲಾಗಿದೆ.

ಹೆಸರು ಹೇಳಲ್ಲ, ಫೋಟೋ ನೋಡಿ: ಬಾಗ್ದಾದಿ ಬೆನ್ನತ್ತಿದ್ದ ನಾಯಿ ತೋರಿಸಿದ ಟ್ರಂಪ್!

 ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಳೆಯ ಮೂರ್ಖ ಎಂದು ವ್ಯಂಗ್ಯವಾಡಿರುವ ಐಸಿಸ್, 'ಹೆಚ್ಚು ಹಿಗ್ಗಬೇಡ ಅಮೆರಿಕ, ಶೀಘ್ರದಲ್ಲಿಯೇ ನಾವು ನಮ್ಮ ಸೇಡು ತೀರಿಸಿಕೊಳ್ಳುತ್ತೇವೆ..' ಎಂದು ಬೆದರಿಕೆಯ ಸಂದೇಶ ಕಳುಹಿಸಿದೆ. 

ಬಾಗ್ದಾದಿ ಮಾಹಿತಿ ನೀಡಿದಾತನಿಗೆ 175 ಕೋಟಿ ಬಹುಮಾನ

ನಿಮ್ಮ ದೇಶದ ವಯಸ್ಸಾದ ಮೂರ್ಖನಿಂದ ಆಳಲ್ಪಡುತ್ತಿದ್ದು, ಸಂಭ್ರಮಾಚರಣೆಯ ಮೂಡ್‌ನಿಂದ ಆದಷ್ಟು ಬೇಗ ಹೊರ ಬಂದರೆ ಒಳ್ಳೆಯದು ಎಂದು ಅಮೆರಿಕದ ಜನತೆಗೂ ಐಸಿಸ್ ಎಚ್ಚರಿಸಿದೆ. 

ಬಾಗ್ದಾದಿ ಕೊನೆ ಕ್ಷಣಗಳು: ಪೆಂಟಗನ್ ಬಿಡುಗಡೆ ಮಾಡಿದ ವಿಡಿಯೋ ತುಣುಕುಗಳು!

ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!