ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ: ಇಂದಿನಿಂದ ಮಂಡಲ ಪೂಜೆ, ಡಿ.26ರ ತನಕ ದರ್ಶನಕ್ಕೆ ಅವಕಾಶ!

Published : Nov 15, 2024, 08:01 AM IST
ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ: ಇಂದಿನಿಂದ ಮಂಡಲ ಪೂಜೆ, ಡಿ.26ರ ತನಕ ದರ್ಶನಕ್ಕೆ ಅವಕಾಶ!

ಸಾರಾಂಶ

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮಂಡಲ ಪೂಜೆಗಾಗಿ ನ.15ರಂದು ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ. 

ಪತ್ತನಂತಿಟ್ಟ (ನ.15): ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ಮಂಡಲ ಪೂಜೆಗಾಗಿ ನ.15ರಂದು ತೆರೆಯಲಿದ್ದು, ಡಿ.26ರ ತನಕ ದರ್ಶನಕ್ಕೆ ಅವಕಾಶವಿದೆ. ನಿತ್ಯ 70000 ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದ್ದು, ಒಂದು ವೇಳೆ ಜನಸಂದಣಿ ತೀರಾ ಹೆಚ್ಚಾದಲ್ಲಿ ಅರ್ಧಗಂಟೆ ಕಾಲ ದರ್ಶನದ ಸಮಯ ವಿಸ್ತರಿಸಲು ಚಿಂತಿಸಲಾಗಿದೆ. 

ಈಗಾಗಲೇ ವರ್ಚುವಲ್‌ ಕ್ಯೂ ಮೂಲಕ ಲಕ್ಷಾಂತರ ಭಕ್ತರು ನ.15- ಡಿ.29ರವರೆಗಿನ ಸಮಯವನ್ನು ಮುಂಗಡವಾಗಿ ಭೇಟಿಗಾಗಿ ಕಾದಿರಿಸಿದ್ದಾರೆ. ಇದರ ಜೊತೆಗೆ , ಪಂಪಾ, ಎರುಮೆಲಿ, ವಂದಿಪೆರಿಯಾರ್‌ಗಳಲ್ಲಿಯೂ ನಿತ್ಯ 10,000 ಭಕ್ತರಿಗೆ ಬುಕಿಂಗ್‌ ಮಾಡಿಸಲು ಅವಕಾಶವಿದ್ದು, ಇದಕ್ಕೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಾಸ್‌ಪೂರ್ಟ್‌ ಪ್ರತಿ ತೋರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಶಬರಿಮಲೆ ಅಯ್ಯಪ್ಪ ದರ್ಶನ ಟೂರ್ ಪ್ಯಾಕೆಜ್ ಘೋಷಿಸಿದ ಭಾರತೀಯ ರೈಲ್ವೇ, ಟಿಕೆಟ್ ದರ ಎಷ್ಟು?

ಶಬರಿಮಲೆ ಯಾತ್ರಿಗರಿಗೆಂದೇ ಪ್ರತ್ಯೇಕ ಹವಾಮಾನ ಮಾಹಿತಿ

ತಿರುವನಂತಪುರ: ಅಮರನಾಥ ಹಾಗೂ ಚಾರ್‌ಧಾಮ್‌ ಯಾತ್ರೆಯ ವೇಳೆ ನೀಡಲಾಗುವಂತೆ, ಶಬರಿಮಲೆ ಯಾತ್ರಾರ್ಥಿಗಳಿಗೆಂದೇ ಪ್ರತ್ಯೇಕ ಹವಾಮಾನ ಮುನ್ಸೂಚನೆ ನೀಡಲು ಭಾರತೀಯ ಹವಾಮಾನ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಶಬರಿಮಲೆಯ 3 ಜಾಗಗಳಲ್ಲಿ ಮಳೆ, ಉಷ್ಣಾಂಶ ಮಾಪಕಗಳನ್ನು ಸ್ಥಾಪಿಸಲಾಗಿದೆ.

ಅಯ್ಯಪ್ಪ ದರ್ಶನಕ್ಕೆ ಬರುವ ಎಲ್ಲರಿಗೂ ಅವಕಾಶ: ಸ್ಪಾಟ್‌ ಬುಕ್ಕಿಂಗ್ ಇಲ್ಲ

ಮೊದಲ ಹಂತದಲ್ಲಿ ಮುಂದಿನ ಮೂರು ದಿನಗಳ ಹವಾಮಾನ ಮಾಹಿತಿ ಹಂಚಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇದನ್ನು ತತ್‌ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಐಎಂಡಿಯ ಸ್ಥಳೀಯ ನಿರ್ದೇಶಕಿ ನೀತಾ ಕೆ. ಗೋಪಾಲ್‌ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಉಂಟಾಗುವ ತಾಪಮಾನ ಏರಿಕೆ, ಅಧಿಕ ತೇವಾಂಶ, ಭಾರೀ ಮಳೆಯನ್ನು ಗಮನದಲ್ಲಿಟ್ಟುಕೊಂಡು ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ಮಾಡಿದ ಮನವಿಯಿಂದ ಈ ವ್ಯವಸ್ಥೆ ಮಾಡಲಾಗಿದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ