ಶ್ರದ್ಧಾಳನ್ನು 35 ತುಂಡು ಮಾಡಿದ್ದ ಅಫ್ತಾಬ್‌, ಬಿಷ್ಣೋಯಿ ಗ್ಯಾಂಗ್ ಹಿಟ್‌ಲಿಸ್ಟಲ್ಲಿ!

By Kannadaprabha News  |  First Published Nov 15, 2024, 9:47 AM IST

ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ರನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು, ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅಫ್ತಾಬ್‌ ಪೂನಾವಾಲಾ, ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯೊಂದು ಹೇಳಿದೆ. 


ನವದೆಹಲಿ (ನ.15): ತನ್ನ ಲಿವ್‌ ಇನ್‌ ಸಂಗಾತಿ ಶ್ರದ್ಧಾ ವಾಕರ್‌ರನ್ನು ಕೊಲೆ ಮಾಡಿ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿಟ್ಟು, ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಅಫ್ತಾಬ್‌ ಪೂನಾವಾಲಾ, ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾನೆ ಎಂದು ವರದಿಯೊಂದು ಹೇಳಿದೆ. 

ಇತ್ತೀಚೆಗೆ ಮಹಾರಾಷ್ಟ್ರದ ಎನ್‌ಸಿಪಿಯ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಆರೋಪಿ ಶುಭಂ ಲೋಂಕರ್‌ ತನಿಖೆ ವೇಳೆ ಈ ಮಾಹಿತಿ ಬಹಿರಂಗ ಪಡಿಸಿದ್ದಾನೆ ಎಂದು ಹೇಳಲಾಗಿದೆ.

Tap to resize

Latest Videos

ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ, 2 ಕೋಟಿ ರೂ. ಬೇಡಿಕೆ!

ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಮುಂಬೈ ಕ್ರೈಂ ಬ್ರಾಂಚ್ ಇದುವರೆಗೆ 24 ಶಂಕಿತರನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಮೋಸ್ಟ್ ವಾಂಟೆಡ್ ಆರೋಪಿಗಳಾದ ಜೀಶನ್ ಅಖ್ತರ್ ಮತ್ತು ಶುಭಂ ಲೋಂಕರ್ ಆಗಿದ್ದಾರೆ. ಪುಣೆಯಲ್ಲಿ ನೆಲೆಸಿರುವ ಶುಭಂ ಲೋಂಕರ್ ನನ್ನು ಬಂಧಿಸಲು ಮುಂಬೈ ಕ್ರೈಂ ಬ್ರಾಂಚ್ ವ್ಯಾಪಕ ಪ್ರಯತ್ನ ನಡೆಸುತ್ತಿದೆ. ಮೂಲಗಳ ಪ್ರಕಾರ, ಈ ವರ್ಷದ ಜನವರಿಯಲ್ಲಿ ಅಕೋಲಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶುಭಂ ಲೋಂಕರ್ ಅವರನ್ನು ಬಂಧಿಸಿದ್ದರು. ಆ ವೇಳೆ ಪೊಲೀಸರು ಶುಭಂ ಲೋಂಕರ್‌ನಿಂದ ಮೂರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಅಕೋಲಾ ಪೊಲೀಸ್ ವರದಿಯು ಶುಭಂ ಲೋಂಕರ್ ಅವರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವರ ಸಹೋದರ ಅನ್ಮೋಲ್ ಬಿಷ್ಣೋಯ್ ಅವರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಅವರು ಬಂದೂಕುಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸೂಚಿಸುತ್ತದೆ.

ಗ್ಯಾಂಗ್‌ಸ್ಟರ್‌ ಬಿಷ್ಣೋಯ್ ಗಿಂತ ಸಲ್ಮಾನ್ ಖಾನ್‌ ಕೆಟ್ಟವ, ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ

ಮರ್ಡರ್ ಕೇಸ್ ಬಗ್ಗೆ

ಮೇ 2022 ರಲ್ಲಿ,  ಯುವತಿ ಶ್ರದ್ಧಾ 'ವಾಲ್ಕರ್, ದೆಹಲಿಯಲ್ಲಿ ಆಕೆಯ ಗೆಳೆಯ ಅಫ್ತಾಬ್ ಪೂನಾವಾಲಾನಿಂದ ತುಂಡು ತುಂಡಾಗಿ ಕತ್ತರಿಸಿದ ಭೀಕರ ಸ್ಟಿತಿಯಲ್ಲಿ ಹತ್ಯೆಗೀಡಾಗಿದ್ದರು. ಈ ಪ್ರಕರಣವು ನವೆಂಬರ್ 2022 ರಲ್ಲಿ ಬೆಳಕಿಗೆ ಬಂದಿತು. ನಂತರ ದೆಹಲಿ ಪೊಲೀಸರು ಅಫ್ತಾಬ್ ಅನ್ನು ಬಂಧಿಸಿದರು. ಪ್ರಸ್ತುತ ಅಫ್ತಾಬ್ ತಿಹಾರ್‌ನಲ್ಲಿದ್ದಾನೆ ಮತ್ತು ಅವನು ಬಿಷ್ಣೋಯ್ ಗ್ಯಾಂಗ್‌ನ ಗುರಿಯಾಗಿದ್ದಾನೆ ಎಂದು ವರದಿಯಾಗಿದೆ. ಈ ಮಾಹಿತಿಯು ಮಹಾರಾಷ್ಟ್ರ ಎಟಿಎಸ್ ಮತ್ತು ಗುಪ್ತಚರ ಸಂಸ್ಥೆಗಳನ್ನು ಎಚ್ಚರಿಸಿದೆ.

click me!