ಶಿಕ್ಷಕಿ ಕುಳಿತ ಕುರ್ಚಿಯಡಿ ರಿಮೋಟ್‌ ಚಾಲಿತ ಬಾಂಬ್‌ ಸ್ಫೋಟಿಸಿದ ವಿದ್ಯಾರ್ಥಿಗಳು! ಇವರು ಮಕ್ಕಳಲ್ಲ..!

By Kannadaprabha News  |  First Published Nov 15, 2024, 8:19 AM IST

ಇಲ್ಲಿನ ಬೊಪಾರಾ ಗ್ರಾಮದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನ ಶಿಕ್ಷಕಿಯ ಕುರ್ಚಿಯ ಅಡಿ ಬಾಂಬ್‌ ರೀತಿಯ ಪಟಾಕಿ ಇರಿಸಿ ಸ್ಫೋಟಿಸಿದ ಘಟನೆ ನಡೆದಿದೆ. 


ಭಿವಾನಿ (ನ.15): ಇಲ್ಲಿನ ಬೊಪಾರಾ ಗ್ರಾಮದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನ ಶಿಕ್ಷಕಿಯ ಕುರ್ಚಿಯ ಅಡಿ ಬಾಂಬ್‌ ರೀತಿಯ ಪಟಾಕಿ ಇರಿಸಿ ಸ್ಫೋಟಿಸಿದ ಘಟನೆ ನಡೆದಿದೆ. 

ಘಟನೆಯಲ್ಲಿ ಶಿಕ್ಷಕಿ ಹಾಗೂ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದುಷ್ಕೃತ್ಯ ನಡೆಸಿದ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

Tap to resize

Latest Videos

undefined

ತರಗತಿಯಲ್ಲಿದ್ದ 15 ವಿದ್ಯಾರ್ಥಿಗಳ ಪೈಕಿ ಅಂದು ಹಾಜರಿದ್ದ ಎಲ್ಲಾ 13 ಜನ ಈ ಯೋಜನೆಯಲ್ಲಿ ಭಾಗಿಯಾಗಿದ್ದು, ಒಬ್ಬರು ಸ್ಫೋಟಕ ತಯಾರಿಸಿದರೆ, ಇನ್ನೊಬ್ಬರು ಅದನ್ನು ಕುರ್ಚಿಯ ಕೆಳಗಿರಿಸಿ, ಮತ್ತೊಬ್ಬರು ರಿಮೋಟ್‌ ಸಹಾಯದಿಂದ ಸ್ಫೋಟಿಸಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್‌ ಮೆಹ್ತಾ ಹೇಳಿದ್ದಾರೆ.

ಕೋವಿಡ್‌ ವೇಳೆ ನೆರವಾಗಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಗೌರವ!

‘ಮಕ್ಕಳು ಏನಾದರೂ ತಯಾರಿಸಿ ತೋರಿಸಿದ್ದರೆ ಶ್ಲಾಘಿಸಬಹುದಿತ್ತು. ಆದರೆ ಈ ಪ್ರಕರಣದಲ್ಲಿ ಹಾಗಾಗದು. ವಿದ್ಯಾರ್ಥಿಗಳನ್ನು ಶಾಲೆಯಿಂದಲೇ ಹೊರಹಾಕಲು ಯೋಚಿಸಿದ್ದೆವಾದರೂ ಪೊಷಕರು ಕ್ಷಮೆ ಕೇಳಿದ್ದರಿಂದ ಶಿಕ್ಷೆಯನ್ನು ಅಮಾನತಿಗೆ ಸೀಮಿತಗೊಳಿಸಲಾಗಿದೆ. ಶಿಕ್ಷಕಿ ಕೂಡ ಮಕ್ಕಳನ್ನು ಕ್ಷಮಿಸಿದ್ದಾರೆ’ ಎಂದರು.

click me!