ಕಾಯ್ದೆ ರದ್ದಾದರೂ ರೈತರ ಹೋರಾಟ, ಟೆಸ್ಟ್‌ಗೂ ಮುನ್ನ ಭಾರತಕ್ಕೆ ಆಘಾತ; ಜ.11ರ ಟಾಪ್ 10 ಸುದ್ದಿ!

By Suvarna NewsFirst Published Jan 12, 2021, 5:10 PM IST
Highlights

ಕೃಷಿ ಕಾಯ್ದೆ ಸಾಧಕ ಬಾಧಕ ಚರ್ಚೆ ನಡೆಸಲು ಸಮಿತಿ ರಚಿಸಲು ಸುಪ್ರೀಂ ಹೇಳಿದರೂ, ರೈತರ ಮಾತ್ರ ಒಪ್ಪುತ್ತಿಲ್ಲ, ಸಮಿತಿ ಬೇಡ, ಏನೂ ಬೇಡ, ಕಾಯ್ದೆ ರದ್ದು ಮಾಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. 1.1 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿ ಮಾಡಲಾಗಿದೆ. 4ನೇ ಟೆಸ್ಟ್‌ಗೂ ಮುನ್ನ ಮತ್ತೊಬ್ಬ ಕ್ರಿಕೆಟಿಗ ಟೀಂ ಇಂಡಿಯಾದಿಂದ ಹೊರಬಿದಿದ್ದಾರೆ. ಕಾಲೆಳೆದ ನೆಟ್ಟಿಗನಿಗೆ ಬಿಗ್ ಬಾಸ್‌ ಸಂಜನಾ ಉತ್ತರ, ಗೂಗಲ್ ಮ್ಯಾಪ್‌ನಿಂದ ಸಾವೀಗೀಡಾದ ಚಾಲಕ ಸೇರಿದಂತೆ ಜಜನವರಿ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಕೇಂದ್ರ ಕೃಷಿ ಕಾಯ್ದೆಗೆ ಸುಪ್ರೀಂ ತಡೆ ನೀಡಿದರೂ ನಿಲ್ಲದ ರೈತರ ಹೋರಾಟ!

ಕೃಷಿ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದರೂ, ರೈತರು ತಮ್ಮ ಹೋರಾಟ ನಿಲ್ಲಿಸಲು ಮುಂದಾಗಿಲ್ಲ. ಮತ್ತೊಂದು ವಿಶೇಷ ಅಂದರೆ, ಸುಪ್ರೀಂ ಕೋರ್ಟ್ ಸೂಚಿಸಿದ ತಜ್ಞರ ಸಮಿತಿಗೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವ ಸಮಿತಿಯೂ ಬೇಡ, ಕೃಷಿ ಕಾಯ್ದೆ ಹಿಂಪಡೆಯಿರಿ ಎಂದು ರೈತರು ಆಗ್ರಹಿಸಿದ್ದಾರೆ. 

1.1 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿ!...


 
 ಜ.16ರಿಂದ ಮೊದಲ ಹಂತದ ಕೊರೋನಾ ಲಸಿಕೆ ವಿತರಣೆಗೆ ನಿರ್ಧರಿಸಿರುವ ಕೇಂದ್ರ ಸರ್ಕಾರ, ಸೋಮವಾರ ಈ ಸಂಬಂಧ 1.1 ಕೋಟಿ ಡೋಸ್‌ ಕೋವಿಶೀಲ್ಡ್‌ ಲಸಿಕೆ ಖರೀದಿಗೆ ಬೇಡಿಕೆ ಸಲ್ಲಿಸಿದೆ. ಬ್ರಿಟನ್‌ ಮೂಲದ ಆಕ್ಸ್‌ಫರ್ಡ್‌ ವಿವಿ ಮತ್ತು ಆ್ಯಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಉತ್ಪಾದಿಸುವ ಗುತ್ತಿಗೆಯನ್ನು ಪುಣೆಯಲ್ಲಿನ ಸೀರಂ ಇನ್‌ಸ್ಟಿಸ್ಟೂಟ್‌ ಪಡೆದುಕೊಂಡಿದೆ. 

ಡ್ರಗ್ಸ್ ಕೇಸ್ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವಾ ಬಂಧನ...

ಕಾಟನ್ ಪೇಟೆ ಡ್ರಗ್ಸ್ ಕೇಸ್ ಪ್ರಕರಣದ  A6 ಆರೋಪಿ, ಕಳೆದ ನಾಲ್ಕು ತಿಂಗಳಿಂದ ತಲೆ ಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾರನ್ನು ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಚನ್ನೈನಲ್ಲಿ ಬಂಧಿಸಿದ್ದಾರೆ. 

ಜಡ್ಡು, ವಿಹಾರಿ ಬಳಿಕ ಟೀಂ ಇಂಡಿಯಾದ ಮತ್ತೋರ್ವ ಸ್ಟಾರ್ ಆಟಗಾರ ಬ್ರಿಸ್ಬೇನ್‌ ಟೆಸ್ಟ್‌ನಿಂದ ಔಟ್‌..!...

ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಬಳಿಕ ಇದೀಗ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ತಂಡದಿಂದ ಹೊರಬಿದ್ದಿದ್ದಾರೆ. 

ಫಸ್ಟ್ ನೈಟ್‌ಗೆ ಏನು ಬೇಕು?; ಕಾಲೆಳೆದ ನೆಟ್ಟಿಗನಿಗೆ ಬಿಗ್ ಬಾಸ್‌ ಸಂಜನಾ ಉತ್ತರ...

ಬಿಗ್ ಬಾಸ್‌ ಸಂಜನಾ ಕಾಲೆಳೆದ ನೆಟ್ಟಿಗರು. ಕೇಳೋದು ಕೇಳಿದರು, ಆದರೆ ಇಂಥ ಪ್ರಶ್ನೆನಾ ಕೇಳೋದು?

ವಾಟ್ಸಾಪ್‌ನಲ್ಲಿ ದೋಷ: ಗೂಗಲ್‌ನಲ್ಲಿ ಗ್ರೂಪ್ ಮಾಹಿತಿ ಸೋರಿಕೆ!...

ಸ್ನೇಹಿತರು, ಕುಟುಂಬ ಸದಸ್ಯರ ನಡುವಿನ ಖಾಸಗಿ ಮಾಹಿತಿ ವಿನಿಮಯಕ್ಕೆಂದು ಸ್ಥಾಪಿಸಲಾದ ಖಾಸಗಿ ವಾಟ್ಸಾಪ್‌ ಗ್ರೂಪ್‌ಗಳು ಗೂಗಲ್‌ ಸಚ್‌ರ್‍ನಲ್ಲಿ ಲಭ್ಯವಾಗುತ್ತಿದೆ ಎಂಬ ಕಳವಳಕಾರಿ ಮಾಹಿತಿ ಹೊರಬಿದ್ದಿದೆ. ವಾಟ್ಸಾಪ್‌ ತನ್ನ ಬಳಕೆದಾರರ ಮಾಹಿತಿಯನ್ನು ಮಾತೃಸಂಸ್ಥೆ ಫೇಸ್‌ಬುಕ್‌ ಜೊತೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡುತ್ತಿರುವ ಬೆನ್ನಲ್ಲೇ ಹೊರಬಿದ್ದ ಈ ಮಾಹಿತಿ ವಾಟ್ಸಾಪ್‌ನ ಸುರಕ್ಷತೆ ಬಗ್ಗೆ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

ಗೂಗೂಲ್ ಮ್ಯಾಪ್ ನಂಬಿ ಡ್ರೈವ್; ಡ್ಯಾಮ್ ನೀರಿನಲ್ಲಿ ಮುಳುಗಿತು ಕಾರು, ಚಾಲಕ ಸಾವು!...

ಗೂಗಲ್ ಮ್ಯಾಪ್ ಹೇಳಿದ ದಾರಿಯಲ್ಲಿ ಸಂಚರಿಸಿ ಕೊನೆಗೆ ಕಾಡಿಗೆ ತೆರಳಿದ, ತಲುಪಬೇಕಾದ ಸ್ಥಳಕ್ಕಿಂತ ಇನ್ನೆಲ್ಲೋ ಪ್ರಯಾಣ ಮಾಡಿದ ಸಾಕಷ್ಟು ಘಟನೆಗಳು ಭಾರತದಲ್ಲಿ ನಡೆದಿದೆ. ಸಾಕಷ್ಟು ಜನರು ಪರದಾಡಿದ ಊದಾಹರಣೆಗಳಿವೆ. ಆದರೆ ಭಾರತದಲ್ಲಿ ಗೂಗಲ್ ಮ್ಯಾಪ್ ನಂಬಿ ಸಾವನ್ನಪ್ಪಿದ್ದು ಇದೇ ಮೊದಲು. ಗೂಗಲ್ ಮ್ಯಾಪ್ ಹೇಳಿದ ದಾರಿಯಲ್ಲಿ  ಸಂಚರಿಸಿದ ಚಾಲಕ, ನೋಡ ನೋಡುತ್ತಿದ್ದಂತೆ ಕಾರು ಡ್ಯಾಮ್ ನೀರಿನಲ್ಲಿ ಮುಳುಗಡೆಯಾಗಿದೆ. 

ಮತ್ತೆ ಸುದ್ದಿಯಾದ ರೇಣುಕಾಚಾರ್ಯ, ಏನ್ಮಾಡಿದ್ರೂ ಅಂತ ಫೋಟೋಗಳನ್ನ ನೋಡಿ..!...

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ತೆಪ್ಪ, ಬಸ್ ಓಡಿಸಿ ಸುದ್ದಿಯಾಗಿದ್ದ ರೇಣುಕಾಚಾರ್ಯ ಇದೀಗ ಮತ್ತೊಂದು ರೀತಿಯಲ್ಲಿ ಸುದ್ದಿಯಾಗಿದ್ದಾರೆ.

ಹಿಂದೂ ದಿಲೀಪ್‌ ಕುಮಾರ್‌, ಮುಸ್ಲಿಂ ಎ.ಆರ್.ರಹಮಾನ್‌ ಆದದ್ದು ಹೇಗೆ?...

ಹಿಂದೂ ಹುಡುಗ ದಿಲೀಪ್ ಕುಮಾರ್, ಸೂಫಿ ಮುಸ್ಲಿಂ ಎ.ಆರ್.ರಹಮಾನ್ ಆಗಿ ದೊಡ್ಡ ಸಂಗೀತ ನಿರ್ದೇಶಕನಾದ ಕತೆ ನಿಮಗೆ ಗೊತ್ತೆ?

ಯಾರ್ಯಾರಿಗೋ ಸೆಕ್ಯುರಿಟಿ ಇರತ್ತೆ, ಲಸಿಕೆ ವ್ಯಾನ್‌ಗೆ ಮಾತ್ರ ಇಲ್ಲ ನೋಡಿ! ಇದೆಂಥಾ ಅವ್ಯವಸ್ಥೆ...

ಲಸಿಕೆಯನ್ನು ಏರ್‌ಪೋರ್ಟ್‌ನಿಂದ ಡಿಪೋವರೆಗೆ ವ್ಯಾಕ್ಸಿನ್ ಸಾಗಿಸಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಯಾರ್ಯಾರಿಗೂ ವಿಐಪಿ ಅಂತ ಬಿಗಿ ಭದ್ರತೆ ಕೊಡಲಾಗುತ್ತೆ, ಜೀರೋ ಟ್ರಾಫಿಕ್ ಮಾಡಲಾಗುತ್ತೆ, ಆದರೆ ವ್ಯಾಕ್ಸಿನ್ ಮಾತ್ರ ಅಬ್ಬೇಪಾರಿ ತರ ಸಾಗಿಸಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. 

click me!