ರೇಪಿಸ್ಟ್‌ಗಳಿಗೆ ಮರಣದಂಡನೆ ಫಿಕ್ಸ್, ಉದ್ಯೋಗಿಗಳ ವೇತನ ಕಟ್; ಡಿ.10ರ ಟಾಪ್ 10 ಸುದ್ದಿ!

By Suvarna NewsFirst Published Dec 10, 2020, 5:16 PM IST
Highlights

ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೇರವೇರಿಸಿದ್ದಾರೆ. ರೇಪಿಸ್ಟ್‌ಗಳಿಗೆ ಮರಣದಂಡನೆ ಕಾನೂನು ತರುಲ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿಭಟನಾ ನಿರತ ರೈತರು ರಿಲಾಯನ್ಸ್, ಅದಾನಿ, ಜಿಯೋ ಸಿಮ್ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಿದ್ದಾರೆ. ಬಡಜನರಿಗೆ ಹಣ ಸಂಗ್ರಹಿಸಲು ಸೋನು ಸೂದ್ 6 ಫ್ಲಾಟ್ ಸೇರಿ 8 ಪ್ರಾಪರ್ಟಿ ಅಡವಿಟ್ಟಿದ್ದಾರೆ. ಡಿಸೆಂಬರ್ 10ರಂದು ಸಂಚನ ಮೂಡಿಸಿದ ಪ್ರಮುಖ ಸುದ್ದಿಗಳ ವಿವರ ಇಲ್ಲಿವೆ.

ಪ್ರತಿಭಟನಾ ರೈತರಿಂದ ಜಿಯೋ ಸಿಮ್, ರಿಲಾಯನ್ಸ್,ಅದಾನಿ ಉತ್ಪನ ಬಹಿಷ್ಕಾರ!...


ಭಾರತ್ ಬಂದ್ ಬಳಿಕ ರೈತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.  ಮತ್ತೊಂದು ಸುತ್ತಿನ ಮಾತುಕತೆಗೂ ರೈತರು ಹಿಂದೇಟು ಹಾಕಿದ್ದಾರೆ. ಇತ್ತ ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ  ಕೇಂದ್ರ ಸರ್ಕಾರ MSP ಕುರಿತಿ ಲಿಖಿತ ಭರವಸೆ ಮೂಲಕ ಕಳುಹಿಸಿದ ಪ್ರಸ್ತಾವನೆಯನ್ನು ರೈತರು ತಿರಸ್ಕರಿಸಿದ್ದಾರೆ. ಇದರ ಜೊತೆ ರಿಲಾಯನ್ಸ್ ಹಾಗೂ ಅದಾನಿ ಉತ್ಪನ್ನಕ್ಕೆ ಬಹಿಷ್ಕಾರ ಹಾಕಿದ್ದಾರೆ, 

ಸಿಂಧೂ ನಾಗರೀಕತೆ ಜನರಿಂದ ದನದ ಮಾಂಸ ಬಳಕೆ; ಅಧ್ಯಯನದಿಂದ ಸ್ಫೋಟಕ ಮಾಹಿತಿ ಬಹಿರಂಗ!...

ಗೋ ಹತ್ಯೆ ನಿಷೇಧಕ್ಕೆ ಕಾನೂನು ಮುದ್ರೆ ಹಾಕಲು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಭಾರಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ಇದೀಗ ಬರೋಬ್ಬರಿ 4,6000 ವರ್ಷಗಳ ಹಿಂದಿನ ಸಿಂಧೂ ಕಣಿವೆ ನಾಗರೀಕತೆಯಲ್ಲಿ ದನ, ಎಮ್ಮೆ ಮಾಂಸಗಳನ್ನು ಬಳಸುತ್ತಿದ್ದರು ಅನ್ನೋ ಬಲವಾದ ಪುರಾವೆ ಸಿಕ್ಕಿದೆ. 

ನೂತನ ಸಂಸತ್ ಭವನಕ್ಕೆ ಶೃಂಗೇರಿ ಮಠದ ಪುರೋಹಿತರಿಂದ ಭೂಮಿ ಪೂಜೆ...

ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಶೃಂಗೇರಿ ಮಠದ ಪುರೋಹಿತರು ಭೂಮಿ ಪೂಜೆ ನೆರವೇರಿಸಿರುವುದು ಹೆಮ್ಮೆಯ ವಿಚಾರ. 

ರೇಪಿಸ್ಟ್‌ಗಳಿಗೆ ಮರಣದಂಡನೆ ಫಿಕ್ಸ್; ಕಠಿಣ ಕಾನೂನಿಗೆ ಸಂಪುಟ ಒಪ್ಪಿಗೆ...

 ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್ ಆಗಿದ್ದರೆ ಅತ್ತ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಮುಖ   ಕಾನೂನಿಗೆ ಅನುಮೋದನೆ ಸಿಗುವ ಲಕ್ಷಣಗಳು ಎದುರಾಗಿವೆ

ಏಪ್ರಿಲ್‌ನಿಂದ ಉದ್ಯೋಗಿಗಳ ಕೈಗೆ ಸಿಗುವ ಸಂಬಳ ಮತ್ತಷ್ಟು ಕಡಿತ!...

ಎಲ್ಲ ಕಡಿತಗಳನ್ನು ಕಳೆದು ಉದ್ಯೋಗಿಗಳ ಕೈಗೆ ಸಿಗುತ್ತಿರುವ ಸಂಬಳ ಬರುವ ಏಪ್ರಿಲ್‌ನಿಂದ ಇನ್ನಷ್ಟುಕಡಿಮೆಯಾಗುವ ಸಾಧ್ಯತೆ ಇದೆ. ಹೊಸ ವೇತನ ನಿಯಮದಡಿ ಕೇಂದ್ರ ಸರ್ಕಾರ ಕರಡು ನಿಯಮಗಳನ್ನು ಪ್ರಕಟಿಸಿದ್ದು, ಅದರ ಪ್ರಕಾರ ಭತ್ಯೆಗಳು ಸಂಬಳದ ಶೇ.50ರಷ್ಟುಮಿತಿ ಮೀರುವಂತಿಲ್ಲ,

ಬಡಜನರಿಗೆ ಹಣ ಸಂಗ್ರಹಿಸಲು 6 ಫ್ಲಾಟ್ ಸೇರಿ 8 ಪ್ರಾಪರ್ಟಿ ಅಡವಿಟ್ಟ ಸೋನು ಸೂದ್...

ಬಾಲಿವುಡ್ ನಟ ಸೋನು ಸೂದ್ ಬಡಜನರಿಗೆ ನೆರವಾಗಲು 10 ಕೋಟಿ ಸಂಗ್ರಹಿಸುವ ಕೆಲಸದಲ್ಲಿದ್ದಾರೆ. ತಮ್ಮ ಪ್ರಾಪರ್ಟಿಯನ್ನೇ ಅಡವಿಟ್ಟಿದ್ದಾರೆ ನಟ

ಧರ್ಮಸ್ಥಳ ಲಕ್ಷ ದೀಪೋತ್ಸವ : ಇದೆ ಹಲವು ಕಂಡೀಶನ್...

 ಇಂದಿನಿಂದ ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭಗೊಂಡು ಡಿ.14ರಂದು ಗೌರಿಮಾರುಕಟ್ಟೆಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಎಸ್‌ಟಿಡಿ ಬೂತ್ ರೀತಿ ವೈ-ಫೈ ಬೂತ್, ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಉತ್ತೇಜನಕ್ಕೆ ಯೋಜನೆ!...

ಕೊರೋನಾ ಲಾಕ್‌ಡೌನ್‌ ಬಳಿಕ ಮನೆಯಿಂದಲೇ ಕೆಲಸ ಮಾಡುವವರು ಹಾಗೂ ಹೈಸ್ಪೀಡ್‌ ಇಂಟರ್ನೆಟ್‌ ಬಳಸುವವರ ಪ್ರಮಾಣ ಅಗಾಧವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ವೈ-ಫೈ ಕ್ರಾಂತಿಗೆ ಮುಂದಾಗಿದೆ. 

ಬಿಹಾರದ ಈ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ, ಇಮ್ರಾನ್ ಹಶ್ಮಿ ಅಪ್ಪ..!...

ಬಿಹಾರದ ಈ ವಿದ್ಯಾರ್ಥಿಗೆ ಸನ್ನಿ ಲಿಯೋನ್ ಅಮ್ಮ ಅಂತೆ, ನಟ ಇಮ್ರಾನ್ ಹಶ್ಮಿ ಅಪ್ಪ ಅಂತೆ. ನಿಜಾನಾ..? ಏನಪ್ಪಾ ಇದು..?

ಆರ್‌ಬಿಐ ಮಹತ್ವದ ಘೋಷಣೆ: ಬ್ಯಾಂಕ್ ಖಾತೆದಾರರಿಗೆ ಗುಡ್‌ ನ್ಯೂಸ್!...

ಹೆಚ್ಚು ಮೌಲ್ಯದ ಹಣ ವರ್ಗಾವಣೆ ವ್ಯವಸ್ಥೆಯಾದ ಆರ್‌ಟಿಜಿಎಸ್‌ ಸೇವೆಯನ್ನು ಜನ ಸಾಮಾನ್ಯರು ದಿನದ 24 ಗಂಟೆಯೂ ಬಳಕೆ ಮಾಡಬಹುದಾದ ಕಾಲ ದೂರವಿಲ್ಲ.

click me!