ರೇಪಿಸ್ಟ್‌ಗಳಿಗೆ ಮರಣದಂಡನೆ ಫಿಕ್ಸ್; ಕಠಿಣ ಕಾನೂನಿಗೆ ಸಂಪುಟ ಒಪ್ಪಿಗೆ

ಅತ್ಯಾಚಾರಿಗಳಿಗೆ ಇದಕ್ಕಿಂತ ಕಠಿಣ ಶಿಕ್ಷೆ ಇನ್ನೊಂದಿಲ್ಲ/ ಶಕ್ತಿ ಆಕ್ಟ್ ಜಾರಿ ಮಾಡಲು ಮುಂದಾದ ಮಹಾರಾಷ್ಟ್ರ ಸರ್ಕಾರ/ ಅತ್ಯಾಚಾರಿಗಳಿಗೆ ಮರಣದಂಡನೆ ಫಿಕ್ಸ್/ ಕಾಯಿದೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ

Maharashtra Cabinet okays 2 bills with death penalty provisions for rape, acid attack mah

ಮುಂಬೈ(ಡಿ. 10)  ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಪಾಸ್ ಆಗಿದ್ದರೆ ಅತ್ತ ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಮುಖ   ಕಾನೂನಿಗೆ ಅನುಮೋದನೆ ಸಿಗುವ ಲಕ್ಷಣಗಳು ಎದುರಾಗಿವೆ

ಬಾಲಕಿಯರು ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಂತಹ ತಡೆಗೆ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಮಹಾರಾಷ್ಟ್ರ ಸರ್ಕಾರ 'ಶಕ್ತಿ ಆಕ್ಟ್' ಜಾರಿಗೆ ತರಲು ಹೊರಟಿದ್ದು, ಇದರಲ್ಲಿ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲಾಗುವುದು. ಮಸೂದೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು ಶಾಸನ ಸಭೆಯಲ್ಲಿಯೂ ಮಂಡನೆ ಮಾಡಲಾಗುತ್ತದೆ.

ಗೋಹತ್ಯೆ ನಿಷೇಧ ಮಸೂದೆ ಪಾಸ್; ಪ್ರಮುಖಾಂಶಗಳು

ಶಕ್ತಿ ಕಾಯ್ದೆ ಮಸೂದೆಯ ಕರಡನ್ನು ಕ್ಯಾಬಿನೆಟ್ ಅಂಗೀಕರಿಸಿದೆ ಎಂದು ಗೃಹ ಸಚಿವ ಅನಿಲ್ ದೇಶ್ಮುಖ್ ತಿಳಿಸಿದ್ದಾರೆ. ಈ ಮಸೂದೆಯಲ್ಲಿ ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾದರೆ, ಆರೋಪಿಗಳಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಖಚಿತ. ಈ ಕಾಯ್ದೆಯಲ್ಲಿ ಆಸಿಡ್ ದಾಳಿಗೆ ಒಳಗಾದವರಿಗೆ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಚಿಕಿತ್ಸೆಗಾಗಿ 10 ಲಕ್ಷ ರೂ.ಗಳನ್ನು ನೀಡಲಾಗುವುದು ಮತ್ತು ಅಪರಾಧಿಗಳಿಗೆ ದಂಡವನ್ನು ಸಹ ವಿಧಿಸಲಾಗುತ್ತದೆ ಎಂದು ಶಕ್ತಿ ಕಾನೂನಿನ ಪರಿಚಯ ಮಾಡಿದರು.

ಇಂಥ ಪ್ರಕರಣಗಳ ತನಿಖೆ ಪೂರ್ಣಮಾಡಲು ಡೆಡ್ ಲೈನ್ ಸಹ ಫಿಕ್ಸ್  ಮಾಡಲಾಗುತ್ತಿದೆ.  ಎರಡು ತಿಂಗಳ ಒಳಗೆ ಪೊಲೀಸ್ ಇಲಾಖೆ ಎಲ್ಲ ಕೆಲಸಗಳನ್ನು ಪೂರ್ಣ ಮಾಡಬೇಕಾಗುತ್ತದೆ.

ಹಾರಾಷ್ಟ್ರ ವಿಧಾನಸಭೆಯ ಎರಡು ದಿನಗಳ ಚಳಿಗಾಲದ ಅಧಿವೇಶನ ಡಿಸೆಂಬರ್ 14 ರಿಂದ ಆರಂಭವಾಗಲಿದೆ. ಅಧಿವೇಶನದಲ್ಲಿ ಈ 'ಶಕ್ತಿ ಕಾಯ್ದೆ' ಮಸೂದೆಯನ್ನು ವಿಧಾನಸಭೆಯಲ್ಲಿ ಪರಿಚಯಿಸಲಾಗುವುದು. ವಿಧಾನಸಭೆಯ ಉಭಯ ಸದನಗಳಲ್ಲಿ ಚರ್ಚೆ ಮತ್ತು ಅನುಮೋದನೆಯ ನಂತರ ಅದನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡಲಾಗುವುದು. ಮಹಿಳೆ ಮತ್ತು ಮಕ್ಕಳ ಹಕ್ಕು ರಕ್ಷಣೆಯಲ್ಲಿ ಇದೊಂದು ದೊಡ್ಡ ಸಾಹಸ ಎಂದು ಗೃಹ ಮಂತ್ರಿ  ಹೇಳಿದ್ದಾರೆ. 

Latest Videos
Follow Us:
Download App:
  • android
  • ios