BSY ನಡೆಯಿಂದ ಹಲವು ಅನುಮಾನ, ಗದ್ದಲದ ಗೂಡಾದ ಅಧಿವೇಶನ; ಜು.19ರ ಟಾಪ್ 10 ಸುದ್ದಿ!

By Suvarna NewsFirst Published Jul 19, 2021, 4:42 PM IST
Highlights

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕಸರತ್ತು ತರೆಮರೆಯಲ್ಲಿ ನಡೆಯುತ್ತಿದೆ ಅನ್ನೋ ಮಾತುಗಳು ಬಲವಾಗುತ್ತಿದ್ದಂತೆ ಬಿಎಸ್ ಯಡಿಯೂರಪ್ಪ ನಡೆ ಅನುಮಾನ ಮೂಡಿಸಿದೆ. ಇದ್ದ ಮುಂಗಾರು ಅಧಿವೇಶನ ನಾಳೆಗೆ ಮುಂದೂಡಲಾಗಿದೆ. ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಸಿಧು ನೇಮಕ, ಟೀಂ ಇಂಡಿಯಾ ಬೆಂಬಲಿಸಲು ಕೊಹ್ಲಿ ಕರೆ ಸೇರಿದಂತೆ ಜುಲೈ 19ರ ಟಾಪ್ 10 ಸುದ್ದಿ ಇಲ್ಲಿವೆ.

ದಲಿತರು, ಮಹಿಳೆಯರು, ಹಿಂದುಳಿದವರು, ರೈತರ ಮಕ್ಕಳು ಸಚಿವರಾದ್ರೆ ಕೆಲವರಿಗೆ ಹಿಡಿಸಲ್ಲ'

ಸಂಸತ್ತಿನ ಮಾನ್ಸೂನ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ಆಗಸ್ಟ್ 13 ರವರೆಗೆ ಮುಂದುವರಿಯಲಿದೆ. ನಿರೀಕ್ಷೆಯಂತೆ ಸಂಸತ್ ಕಲಾಪ ಆರಂಣಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಗಲಾಟೆ ಆರಂಭಿಸಿವೆ. 

Spyware Pegasus: ತನ್ನ ವಿರುದ್ಧದ ಆರೋಪ ಸುಳ್ಳೆಂದ ಇಸ್ರೇಲ್ ಕಂಪನಿ!

ಎನ್ಎಸ್ಒ ಗ್ರೂಪ್ ಖಾಸಗಿ ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆಯಾಗಿದೆ. ಜುಲೈ 18 ರಂದು, ಈ ಪೆಗಾಸಸ್ ಸ್ಪೈವೇರ್ ಬೇಹುಗಾರಿಕೆ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

ರಾಜ್ಯದಲ್ಲಿ ಸಿಎಂ ಬದಲಾವಣೆ ನಿಶ್ಚಿತ? ಸಂಶಯ ಮೂಡಿಸಿದೆ ಬಿಎಸ್‌ವೈ ನಡೆ!

ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ವಿಚಾರ ಕಾವು ಪಡೆದಿದೆ. ಬಿಎಸ್‌ವೈ ದೆಹಲಿಯಿಂದ ಮರಳಿದ ಬಳಿಕ ಈ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ಇದಕ್ಕೆ ತಕ್ಕಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ರದ್ದು ಎನ್ನಲಾದ ಆಡಿಯೋ ಕೂಡಾ ಈ ಮಾತಿಗೆ ಮತ್ತಷ್ಟು ಬಲ ಕೊಟ್ಟಿದೆ. ಆದರೀಗ ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿ. ಎಸ್‌ ಯಡಿಯೂರಪ್ಪರವರು ಖುದ್ದು ತಾವೇ ನೀಡಿದ ಸೂಚನೆಯೊಂದು ಈ ಸಂಧಶಯಕ್ಕೆ ಮುನ್ನುಡಿ ಹಾಕಿದೆ.

ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷರಾಗಿ ಸಿಧು ನೇಮಕ!

ಪಕ್ಷದಲ್ಲಿ ಉನ್ನತ ಹುದ್ದೆಗಾಗಿ ಬಂಡಾಯ ಬಾವುಟ ಹಾರಿಸಿದ್ದ ಮಾಜಿ ಕ್ರಿಕೆಟಿಗನ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್‌, ನವಜೋತ್‌ಸಿಂಗ್‌ ಸಿಧು ಅವರನ್ನು ಪಂಜಾಬ್‌ ರಾಜ್ಯ ಕಾಂಗ್ರೆಸ್‌ ಘಟಕದ ನೂತನ ಅಧ್ಯಕ್ಷರಾಗಿ ನೇಮಿಸಿದೆ. ಜೊತೆಗೆ ಇತರೆ ನಾಲ್ವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿ ಭಾನುವಾರ ಆದೇಶ ಹೊರಡಿಸಿದೆ.

ಟೋಕಿಯೋ ಒಲಿಂಪಿಕ್ಸ್‌: ಟೀಂ ಇಂಡಿಯಾ ಬೆಂಬಲಿಸಲು ಕೊಹ್ಲಿ ಕರೆ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುವಂತೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಕರೆ ನೀಡಿದ್ದಾರೆ. 

ಗೂಬೆ, ಕೋತಿ, ಬಾವಲಿಗಳನ್ನೆಲ್ಲ ಮನೇಲಿಟ್ಟು ಸಾಕ್ತಾರೆ ಈ ಕೆಜಿಎಫ್‌ 2 ನಟಿ!

ನಟಿ ಬೇರೆ ಸೆಲೆಬ್ರೆಟಿಗಳಿಗಿಂತ ಕೊಂಚ ಭಿನ್ನ. ಬೇರೆ ಸೆಲೆಬ್ರಿಟಿಗಳು, ರೆಸಾರ್ಟ್, ಶಾಪಿಂಗ್‌ ಅಂತೆಲ್ಲ ಸುತ್ತಾಡುತ್ತಿದ್ದರೆ ಈಕೆ ಸದಾ ಕಾಡು, ಕಾಡುಪ್ರಾಣಿಗಳ ನಡುವೆ ಇರುತ್ತಾರೆ. ಸಾವು ಬದುಕಿನ ನಡುವೆ ಹೋರಾಡುವ ಪ್ರಾಣಿಗಳನ್ನು ರಕ್ಷಿಸಿ ತಂದು ಮನೆಯಲ್ಲೇ ಇಟ್ಟು ಸಾಕ್ತಾರೆ. 

ಏನಿದು ಪೆಗಾಸಸ್ ಸ್ಪೈವೇರ್? ಹೇಗೆ ಫೋನ್‌ ಒಳಗೆ ನುಸುಳುತ್ತದೆ?

ಭಾರತೀಯ ಸಚಿವರು, ಪ್ರತಿಪಕ್ಷದ ನಾಯಕರು, ನ್ಯಾಯಾಧೀಶರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಅನೇಕ ಫೋನ್‌ಗಳನ್ನು ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್‌ ಮಾಡಿರುವ ಸುದ್ದಿ ಸದ್ದು ಮಾಡುತ್ತಿದೆ. ಇಸ್ರೇಲ್ ಮೂಲದ ಕಂಪನಿಯ ಈ ಸ್ಪೈವೇರ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ಜೀವಿತಾವಧಿಗೆ ರಕ್ಷಣೆ ನೀಡಲಿದೆ ಆಸ್ಟ್ರಾಜೆನೆಕಾ ಲಸಿಕೆ; ಅಧ್ಯಯನ ವರದಿ ಬಹಿರಂಗ!

ಕೊರೋನಾ ವೈರಸ್ ವಿರುದ್ಧ ಹಲವು ಲಸಿಕೆಗಳು ಮಾರುಕಟ್ಟೆಯಲ್ಲಿವೆ. ಇದರಲ್ಲಿ ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಲಸಿಕೆ ಜೀವಿತಾವಧಿವರೆಗೆ ರಕ್ಷಣೆ ನೀಡಲಿದೆ ಎಂದು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ. ಯೆಕೆನ ದಿ ಸನ್ ಈ ಕುರಿತ ಅಧ್ಯಯನ ವರದಿಯನ್ನು ಪ್ರಕಟಿಸಿದೆ.

ಇತ್ತ ಬಿಎಸ್‌ವೈ ರಾಜೀನಾಮೆ ಸುದ್ದಿ, ಅತ್ತ ದಿಲ್ಲಿಗೆ ತೆರಳಿದ ರಾಜ್ಯಪಾಲರ ನಡೆ ಕುತೂಹಲ

ಸದ್ಯ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಬಹಿರಂಗವಾಗುತ್ತಿದ್ದಂತೆಯೇ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.
 

click me!