ಹೈಕಮಾಂಡ್ ಹೇಳಿದ್ರೆ BSY ರಿಸೈನ್, 777 ಚಾರ್ಲಿಗೆ ಸಖತ್ ರೆಸ್ಪಾನ್ಸ್; ಜೂ.6ರ ಟಾಪ್ 10 ಸುದ್ದಿ!

By Suvarna NewsFirst Published Jun 6, 2021, 4:40 PM IST
Highlights

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಹೈಕಮಾಂಡ್ ಹೇಳಿದರೆ ರಾಜೀನಾಮೆ ಎಂದು ಸಿಎಂ ಹೇಳಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಅಭಿಯನದ  777 ಚಾರ್ಲಿ ಟೀಸರ್ ಬಿಡುಗಡೆಯಾಗಿದೆ. ಸಿಲಿಕಾನ್ ವ್ಯಾಲಿ ಬದಲು ಬೆಂಗಳೂರಿಗೆ ಟೆಕ್ ಹಳ್ಳಿ ನಾಮಕರಣ ಮಾಡಲಾಗಿದೆ. ಕರ್ನಾಟಕದಲ್ಲಿ ಶತಕ ದಾಟಿದ ಪೆಟ್ರೋಲ್ ಬೆಲೆ ಸೇರಿದಂತೆ ಜೂನ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಮಲಯಾಳಂ ಬೇಡ, ಹಿಂದಿ- ಇಂಗ್ಲೀಷ್ ಮಾತ್ರ ಸಾಕು: ಭುಗಿಲೆದ್ದ ವಿವಾದ, ಆದೇಶ ವಾಪಾಸ್!...

ಜಿ. ಬಿ. ಪಂತ್ ಆಸ್ಪತ್ರೆ ಆಡಳಿತ ಮಂಡಳಿಯು ತನ್ನ ನರ್ಸಿಂಗ್ ಸಿಬ್ಬಂದಿಗೆ ಕರ್ತವ್ಯದ ಸಮಯದಲ್ಲಿ ಮಲಯಾಳಂನಲ್ಲಿ ಮಾತನಾಡದಂತೆ ನೀಡಿದ್ದ ತನ್ನ ಆದೇಶವನ್ನು ಹಿಂಪಡೆದಿದೆ. ಪ್ರಕರಣ ಗಂಭೀರಗೊಂಡ ಬೆನ್ನಲ್ಲೇ ಆದೇಶ ಹಿಂಡಪೆದಿರುವ ಆಡಳಿತ ಮಂಡಳಿ, ತಮ್ಮ ಗಮನಕ್ಕೆ ಬಾರದೆ ಈ ಬೆಳವಣಿಗೆ ನಡೆದಿದೆ. ಹೀಗಾಗಿ ಈ ಆದೇಶ ಹಿಂಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿಗೆ ಹೊಸ ಹೆಸರು ಕೊಟ್ಟ ಮಹೀಂದ್ರಾ, ನಿಲೇಕಣಿ: 'ವ್ಯಾಲಿ'ಯಿಂದ 'ಹಳ್ಳಿ' ಕಡೆ!...

ಸಿಲಿಕಾನ್‌ ವ್ಯಾಲಿ ಆಫ್‌ ಇಂಡಿಯಾ ಎಂದೇ ಕರೆಯಲಾಗುವ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ, ಬೇರೇನು ಹೆಸರು ಕೊಡಬಹುದೆಂಬ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ಸದ್ಯ ಈ ಸ್ಪರ್ಧೆಯ ಫಲಿತಾಂಶ ಹೊರ ಬಿದ್ದಿದ್ದು, ಸ್ಪರ್ಧಿಯೊಬ್ಬರು ಸೂಚಿಸಿದ 'ಟೆಕ್‌ ಹಳ್ಳಿ' ಹೆಸರು ತೀರ್ಪುಗಾರರಾದ ಆನಂದ್ ಮಹೀಂದ್ರಾ ಹಾಗೂ ನಂದನ್ ನಿಲೇಕಣಿಯವರ ಮನ ಗೆದ್ದಿದೆ. ಇನ್ನು ಈ ಹೆಸರು ತಮಗೆ ಇಷ್ಟೊಂದು ಯಾಕೆ ಇಷ್ಟ ಆಯಿತು ಎಂದೂ ಅವರು ಬಹಿರಂಗಪಡಿಸಿದ್ದಾರೆ.

ಆಪರೇಶನ್ ಬ್ಲೂ ಸ್ಟಾರ್‌ಗೆ 37ನೇ ವರ್ಷ; ಸ್ವರ್ಣ ಮಂದಿರದಲ್ಲಿ ಮತ್ತೆ ಹಾರಾಡಿದ ಖಲಿಸ್ತಾನ ಧ್ವಜ!...

ಪಂಜಾಬ್‌ನ ಖಲಿಸ್ತಾನ ಉಗ್ರಗಾಮಿಗಳ ಗುಂಪು ಹತ್ತಿಕ್ಕಲು ನಡೆಸಿದ ಕಾರ್ಯಚರಣೆ ಆಪರೇಶನ್ ಬ್ಲೂ ಸ್ಟಾರ್. 1984, ಜೂನ್ 6 ರಂದು ಅಂತ್ಯಗೊಂಡ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆಗೆ ಇಂದು 37 ವರ್ಷ ಸಂದಿದೆ. ಇದರ ಹಿನ್ನಲೆಯಲ್ಲಿ ಸಿಖ್ ಸಂಘಟನೆಗಳು ಅಮೃತ ಸರದ ಸ್ವರ್ಣ ಮಂದಿರದಲ್ಲಿ ಕೆಲ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಸ್ವರ್ಣಮಂದಿರದಲ್ಲಿ ಉಗ್ರಗಾಮಿಗಳ ಖಲಿಸ್ತಾನ ಧ್ವಜ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.

ನಾಯಕತ್ವ ಬದಲಾವಣೆ ಮತ್ತೆ ಮುನ್ನೆಲೆಗೆ, ಸಿಎಂ ಶಾಕಿಂಗ್​ ಪ್ರತಿಕ್ರಿಯೆ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

4 ಭಾಷೆಗಳಲ್ಲಿ 777 ಚಾರ್ಲಿ ಟೀಸರ್ ಬಿಡುಗಡೆ: 6 ಲಕ್ಷಕ್ಕೂ ಹೆಚ್ಚು ವ್ಯೂಸ್...

ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಟೀಸರ್‌ಗೆ ಸಖತ್ ರೆಸ್ಪಾನ್ಸ್ ಬಂದಿದೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಸಿನಿಮಾದ ಕನ್ನಡ ಟೀಸರ್‌ಗೆ ಈಗಾಗಲೇ 299,666 ವ್ಯೂಸ್ ಬಂದಿದೆ.

ಕೊರೋನಾ ಸಮಯದಲ್ಲಿ ಗಾಯದ ಮೇಲೆ ಬರೆ: 35 ದಿನಗಳಲ್ಲಿ 18 ಬಾರಿ ಇಂಧನ ಬೆಲೆ ಏರಿಕೆ...

 

ಬರೀ 35 ದಿನದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಬರೋಬ್ಬರಿ 18 ಬಾರಿ ಏರಿಕೆಯಾಗಿದೆ! ಪ್ರತಿ ಲೀಟರ್‌ಗೆ 4ಗೂ ಅಧಿಕ ಹೆಚ್ಚಳವಾಗಿದ್ದು, ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಕೊರೋನಾದಿಂದ ಮೊದಲೇ ತತ್ತರಿಸಿರುವ ಜನತೆಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರತದಿಂದ ಪಲಾಯನ ಮಾಡಿಲ್ಲ, ಚಿಕಿತ್ಸೆಗಾಗಿ ಬಂದಿದ್ದೇನೆ; ಹೊಸ ವಾದ ಮಂಡಿಸಿದ ಚೋಕ್ಸಿ!...

 ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗಣರದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಆ್ಯಂಟಿಗುವಾ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಡೋಮಿನಿಕಾದಿಂದ ಆ್ಯಂಟಿಗುವಾ ಪ್ರವೇಶಿಸಿದ ವೇಳೆ ಬಂಧನಕ್ಕೊಳಗಾಗಿರುವ ಚೋಕ್ಸಿ ಕರೆತರುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇದರ ನಡುವೆ ಚೋಕ್ಸಿ ಹೇಳಿಕೆಗಳು ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.

ಲಸಿಕೆ ಜಾಗೃತಿ: ಅಕ್ಷಯ್ ಕುಮಾರ್ ಜೊತೆ ಅಪ್ಪು...

ಅಣ್ಣಾವ್ರ ಕುಟುಂಬ ಹಾಗೂ ಅವರ ಮಕ್ಕಳಿಗೆ ಇತರ ಚಿತ್ರರಂಗದ ಪ್ರಮುಖರು ಕಾಮನ್ ಫ್ರೆಂಡ್‌ಗಳು. ಇದೀಗ ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಅಭಿಯಾನದ ಭಾಗವಾಗಿದ್ದಾರೆ ಅಪ್ಪು. ಜಾಗೃತಿ ಅಭಿಯಾನದಲ್ಲಿ ಪುನೀತ್ ರಾಜ್‌ಕುಮಾರ್, ನಟ ಅಕ್ಷಯ್ ಕುಮಾರ್ ಸೇರಿ ಭಾರತದ ಟಾಪ್ ನಟರು ಒಂದಾಗಿದ್ದಾರೆ.

ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಮಹತ್ವದ ಹೆಜ್ಜೆ, ಮಕ್ಕಳಿಗೂ ಸಿಗಲಿದೆ ಲಸಿಕೆ, ಇದು ಕೊರೋನಾ ಗುಡ್‌ನ್ಯೂಸ್..!...

ಕೊರೋನಾ ವಿರುದ್ಧ ಹೋರಾಟದಲ್ಲಿ, ವ್ಯಾಕ್ಸಿನ್ ಪರಿಣಾಮಕಾರಿ ಅಸ್ತ್ರ. ಅದರಲ್ಲೂ ಎರಡೂ ಡೋಸ್ ಪಡೆಯುವುದರಿಂದ ಕೊರೋನಾದಿಂದ ಸೇಫ್ ಆಗಬಹುದು ಎಂದು ಏಮ್ಸ್ ವರದಿ ನೀಡಿದೆ.

ರಾಜೀನಾಮೆ ವಾಪಸ್ ಪಡೆದಿದ್ದೇನೆ : ರೋಹಿಣಿ ವಿರುದ್ದ ಮತ್ತೆ ಗುಡುಗಿದ ಶಿಲ್ಪಾ...

ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ ಎಂದು ಮೈಸೂರು ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿಕೆ ನೀಡಿದ್ದಾರೆ. 

click me!