ಲಸಿಕೆ ಗೊಂದಲಕ್ಕೆ CM ಉತ್ತರ, ಬಿಗ್‌ಬಾಸ್ ಸ್ಪರ್ಧಿಯ ಮದುವೆ ಸಮಾಚಾರ; ಮೇ.13ರ ಟಾಪ್ 10 ಸುದ್ದಿ!

By Suvarna NewsFirst Published May 13, 2021, 6:14 PM IST
Highlights

18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾ, ಆಕ್ಸಿಜನ್ ಪೂರೈಕೆ ಸೇರಿದಂತೆ ಹಲವು ಗೊಂದಲಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ನೀಡಿದ್ದಾರೆ. ಕೊರೋನಾ ಮಧ್ಯೆ ರೈತರಿಗೆ ಪ್ರಧಾನಿ ಮೋದಿ ಗುಡ್‌ ನ್ಯೂಸ್ ನೀಡಿದ್ದಾರೆ.  ಚಂಡಮಾರುತ ಕಾರಣ ರಾಜ್ಯದ 8 ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಟೆಸ್ಟ್ ರ್ಯಾಕಿಂಗ್‌ನಲ್ಲಿ ವಿರಾಟ್‌‌ಗೆ ಅಗ್ರಸ್ಥಾನ, ಮದುವೆ ವಿಚಾರ ಹೇಳಿದ ಶುಭಾಪೂಂಜಾ ಸೇರಿದಂತೆ ಮೇ.13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

18 ವರ್ಷ ಮೇಲ್ಪಟ್ಟವರ ಲಸಿಕೆ ಅಭಿಯಾನಕ್ಕೆ ತಾತ್ಕಾಲಿಕ ಬ್ರೇಕ್; ಸಿಎಂ ಯಡಿಯೂರಪ್ಪ ಸುದ್ಧಿಗೋಷ್ಠಿ!...

ರಾಜ್ಯದಲ್ಲಿ ಎದ್ದಿರುವ ಲಸಿಕೆ ಸಮಸ್ಯೆ, ಕೊರೋನಾ ಸೋಂಕಿತಿರ ಚಿಕಿತ್ಸೆ, ಆಕ್ಸಿಜನ್ ಸೇರಿದಂತೆ ಹಲವು ಗೊಂದಲಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಇಂದು(ಮೇ.13) ಸಂಜೆ ಸುದ್ಧಿಗೋಷ್ಠಿ ನಡೆಸಿದ ಯಡಿಯೂರಪ್ಪ, ಅಂಕಿ ಅಂಶ ಸಮೇತ ಉತ್ತರ ನೀಡಿದ್ದಾರೆ.

ಆಕ್ಸಿಜನ್, ಲಸಿಕೆ, ಔಷಧ ಜೊತೆ ಪಿಎಂ ಮೋದಿಯೂ ಮಾಯ: ರಾಹುಲ್ ವ್ಯಂಗ್ಯ!...

ಕೊರೋನಾ ಅಬ್ಬರದಿಂದಾಗಿ ದೇಶದಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಇಂತಹ ಸಮಯದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಮಾದರಿಯಾಗಬೇಕಿದ್ದ ಜನನಾಯಕರು, ಕಿತ್ತಾಡುವಲ್ಲಿ ತಲ್ಲೀನರಾಗಿದ್ದಾರೆ. ಸದ್ಯ ಕೊರೋನಾ ವಿಚಾರವಾಗಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪಿಎಂ ಮೋದಿ ವಿರುದ್ಧ ಕಿಡಿ ಕಾರಿದ್ದು, ಕೊರೋನಾ ಕಾಲದಲ್ಲಿ ಆಕ್ಸಿಜನ್, ಲಸಿಕೆ ಮತ್ತು ಔಷಧಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ಮಾಯವಾಗಿದ್ದಾರೆ ಎಂದಿದ್ದಾರೆ.

ಕೊರೋನಾ ಮಧ್ಯೆ ರೈತರಿಗೆ ಗುಡ್‌ ನ್ಯೂಸ್: PM-KISAN ನಿಧಿ ಬಿಡುಗಡೆ, ಹೀಗೆ ಚೆಕ್ ಮಾಡಿ!...

ಕೊರೋನಾ ಎರಡನೇ ಅಲೆಯಿಂದ ನಲುಗುತ್ತಿರುವ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದು ಬಹುದೊಡ್ಡ ಸವಾಲಾಗಿದೆ. ಈ ಸಂಕಟದ ನಡುವೆಯೂ ಭಾರತದ ರೈತರಿಗೆ ಒಂದು ಶುಭ ಸಮಾಚಾರ ಲಭಿಸಿದೆ.

ಅಪಘಾತದಿಂದ ಉಳಿದಿದ್ದ ಒಂದು ಶ್ವಾಸಕೋಶಕ್ಕೆ ಸೋಂಕು; ಯೋಗದಿಂದ ಗುಣಮುಖರಾದ ನರ್ಸ್!...

ಮಧ್ಯಪ್ರದೇಶದ ನರ್ಸ್ ಪ್ರಫುಲ್ಲಿತ್ ಪೀಟರ್ ಕತೆ ತಿಳಿಯಲೇಬೇಕು. ಬಾಲ್ಯದಲ್ಲಿ ನಡೆದ ಅಪಘಾತದಲ್ಲಿ ಒಂದು ಶ್ವಾಸಕೋಶ ಕಳೆದುಕೊಂಡ ಪ್ರಫುಲ್ಲಿತ್, ಬಾಕಿ ಉಳಿದ ಒಂದು ಶ್ವಾಸಕೋಶಕ್ಕೆ ಕೊರೋನಾ ತಗುಲಿ ಇನ್ನಿಲ್ಲದ ಕಷ್ಟ ಅನುಭವಿಸಿದರು. ಆದರೆ ಯೋಗ, ಉಸಿರಾಟದ ವ್ಯಾಯಾಮದಿಂದ ನರ್ಸ್ 14 ದಿನದಲ್ಲಿ ಕೊರೋನಾ ಗೆದ್ದಿದ್ದಾರೆ.

ರಾಜ್ಯಕ್ಕಪ್ಪಳಿಸಲಿದೆ ತೌಕ್ತೆ ಚಂಡಮಾರುತ : 8 ಜಿಲ್ಲೆಯಲ್ಲಿ ಭಾರೀ ಮಳೆ...

ಒಂದೆಡೆ ಕೊರೋನಾ ಮಹಾಮಾರಿ ರಣಕೇರೆ ಹಾಕುತ್ತಿದೆ. ನಿಲ್ಲದೇ ನಾಗಲೋಟದಲ್ಲಿ ಮುಂದುವರಿದಿದ್ದು ಇದೇ ವೇಳೆ ವರುಣನ ಆಗಮನದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಅಗತ್ಯವಿರುವ ರಾಜ್ಯಕ್ಕೆ ಹಂಚಿಕೆ ಮಾಡಿ: 1 ಲಕ್ಷ ರೆಮ್‌ಡೆಸಿವಿರ್‌ ಮರಳಿಸಿದ ಕೇರಳ!...

ದೇಶಾದ್ಯಂತ ಕೊಲೋನಾ ಲಸಿಕೆ ಹಾಗೂ ಸೋಂಕಿತರ ಗುಣಮುಖಕ್ಕೆ ವೈದ್ಯರು ಸೂಚಿಸಲಾಗುತ್ತಿರುವ ರೆಮ್‌ಡೆಸಿವಿರ್‌ ಔಷಧದ ಹಾಹಾಕಾರ ಉದ್ಭವವಾಗಿರುವಾಗಲೇ, ಬಳಸದೆ ಉಳಿಸಿಕೊಂಡಿದ್ದ 1 ಲಕ್ಷದಷ್ಟು ರೆಮ್‌ಡೆಸಿವಿರ್‌ ಔಷಧವನ್ನು ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ ವಾಪಸ್‌ ನೀಡಿದ್ದು, ಅವುಗಳನ್ನು ಅಗತ್ಯವಿರುವ ರಾಜ್ಯಗಳಿಗೆ ಮರು ಹಂಚಿಕೆ ಮಾಡುವಂತೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡಿಗನಿಗೆ ನೆರವು ಕೇಳಿದ ಭಜ್ಜಿ; ಡೋಂಟ್‌ ವರಿ ಎಂದ ಸೋನು ಸೂದ್‌..!...

ಕೋವಿಡ್ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೊರೋನಾ ಹೆಮ್ಮಾರಿಗೆ ದಿನಂಪ್ರತಿ ಸಾವಿರಾರು ಜನ ಬಲಿಯಾಗುತ್ತಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಾಯ್ದುಕೊಂಡ ಟೀಂ ಇಂಡಿಯಾ...

 ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಂ.1 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.  ಆದರೆ ಐಸಿಸಿ ಟೆಸ್ಟ್‌ ಚಾಂಪಿಯನ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿರುವ ನ್ಯೂಜಿಲೆಂಡ್ ತಂಡವು ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಕೊರೋನಾ ಮುಗಿದ ಮೇಲೆ ನನ್ನ ಮದುವೆ: ಶುಭಾ ಪೂಂಜಾ...

ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್ ರಿಯಾಲಿಟಿ ಶೋ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಮನೆಯಿಂದ ಆಚೆ ಬಂದಿರುವ ಬಿಗ್ ಬಾಸ್ 8ನೇ ಆವೃತ್ತಿಯ ಸ್ಪರ್ಧಿ ಶುಭಾ ಪೂಂಜಾ ಮಾತುಗಳು ಇಲ್ಲಿವೆ.

ಲಸಿಕೆ ಹಾಕಿಸಿಕೊಂಡಿದ್ದೀರಾ? CoWinನಿಂದ ವಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಹೇಗೆ?...

CoWin ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದೀರಾ? ನೀವು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದೀರಾ? ಲಸಿಕೆ ಹಾಕಿಸಿಕೊಂಡ ಬಳಿಕ ನಿಮಗೆ ಎಸ್ಸೆಮ್ಮೆಸ್ ಬಂದಿದೆ. ಆದರೆ, ಕೋವಿನ್ ಜಾಲತಾಣದಿಂದ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಹೇಗೆಂದು ಗೊತ್ತಾಗುತ್ತಿಲ್ಲವೇ? ಚಿಂತೆ ಬಿಡಿ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಡೌನ್‌ಲೋಡ್ ಮಾಡಿಕೊಳ್ಳುವುದು ತುಂಬ ಸರಳ. 

click me!