ಅಮಿತ್ ಶಾ ಕರೆಗೆ BSY ಶಾಕ್, ಕನ್ನಡಕ್ಕೆ ಕತ್ರಿನಾ ಕೈಫ್?ನ.27ರ ಟಾಪ್ 10 ಸುದ್ದಿ!

By Suvarna NewsFirst Published Nov 27, 2020, 5:03 PM IST
Highlights

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿರುವ ಸಾವಿರಾರು ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಯಡಿಯೂರಪ್ಪನವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. 3 ಕೊರೋನಾ ಲಸಿಕಾ ಕೇಂದ್ರಗಳಿಗೆ ಪ್ರಧಾನಿ ಮೋದಿ ನಾಳೆ ಬೇಟಿ ನೀಡಲಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿಯಾಗಿದೆ. ಕನ್ನಡಕ್ಕೆ ಬರ್ತಿದ್ದಾರೆ ಕತ್ರಿನಾ ಕೈಫ್, ಅಳಿಯನಿಗೆ AK-47 ಗಿಫ್ಟ್ ಕೊಟ್ಟ ಅತ್ತೆ ಸೇರಿದಂತೆ ನವೆಂಬರ್ 27ರ ಟಾಪ್ 10 ಸುದ್ದಿ ಇಲ್ಲಿವೆ.
 

ಲಾಠಿಚಾರ್ಜ್‌, ಮುಳ್ಳು ತಂತಿ, ಅಶ್ರುವಾಯು: ರಾಷ್ಟ್ರ ರಾಜಧಾನಿಗೆ ತೆರಳಲು ಮುನ್ನ ರೈತನ ಸಂಘರ್ಷ!...

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯತ್ತ ಪ್ರತಿಭಟನೆಗೆ ತೆರಳುತ್ತಿರುವ ಸಾವಿರಾರು ರೈತರನ್ನು ರಾಷ್ಟ್ರ ರಾಜಧಾನಿ ತಲುಪುವುದಕ್ಕೂ ಮುನ್ನ ತಡೆಯಲು ಭಾರೀ ತಯಾರಿ ನಡೆಸಲಾಗಿದೆ. ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಸಿಡಿಸಿದ್ದಾರೆ. 

ಮದುವೆ ಬಳಿಕ ಅಳಿಯನಿಗೆ AK-47 ಗಿಫ್ಟ್ ಕೊಟ್ಟ ಅತ್ತೆ!...

ಮದುವೆ ಬಳಿಕ ವಧು ವರರಿಗೆ ಅತಿಥಿಗಳು ಹಾಗೂ ಕುಟುಂಬಸ್ಥರು ಏನಾದರೊಂದು ಗಿಫ್ಟ್ ಕೊಡುವುದು ಸಾಮಾನ್ಯ. ಆದರೆ ಯಾವುದಾದರೂ ಮದುವೆಯಲ್ಲಿ AK-47 ಗಿಫ್ಟ್ ಆಗಿ ಕೊಟ್ಟಿರುವ ಬಗ್ಗೆ ನೀವು ಯಾವತ್ತಾದರೂ ಕೇಳಿದ್ದೀರಾ? ಅರೆ.... ನಿಜಾನಾ? ಅನ್ನೋರು ಈ ಸುದ್ದಿ ಓದಲೇಬೇಕು.

ಖಾಲಿ ಬೆಂಚಿನ ಮೇಲೆ ಚಂದದ ನಾಯಿ ಮತ್ತು ಮನಮುಟ್ಟುವ ಪತ್ರ..!...


ಮೆಕ್ಸಿಕೋದ ಪಾರ್ಕ್‌ನಲ್ಲಿ ಖಾಲಿ ಬೆಂಚಿನಲ್ಲಿ ನಾಯಿಯೊಂದನ್ನು ಕಟ್ಟಲಾಗಿತ್ತು. ಮಾಲೀಕನೇ ಬಿಟ್ಟು ಹೋಗಿದ್ದ ನಾಯಿ ಬಚಾವಾಗಿದ್ದು ಹೇಗೆ...? 

ದಿಲ್ಲಿಯಿಂದ ಅಮಿತ್ ಶಾ ಫೋನ್ ಕಾಲ್: ಸಿಎಂ ಬಿಎಸ್‌ವೈ ಫುಲ್ ಶಾಕ್...!...

ಇತ್ತೀಚೆಗೆ ಸಿಎಂ ಬಿಎಸ್ ಯಡಿಯೂರಪ್ಪನವರ ನಾಗಾಲೋಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದ್ದಲ್ಲದೇ, ಬಿಗ್ ಶಾಕ್ ಕೊಟ್ಟಿದೆ.

3 ಲಸಿಕೆ ತಯಾರಿಕೆ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಪರಿಶೀಲನೆ!...

ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಜಾಗತಿಕ ಔಷಧ ಕಂಪನಿ ಆಸ್ಟ್ರಾಜೆನೆಕಾ ಕಂಪನಿಗಳ ಕೊರೋನಾ ಲಸಿಕೆ ಶೇ.90ರಷ್ಟುಪರಿಣಾಮಕಾರಿಯಾಗಿರುವುದು ಖಚಿತಪಟ್ಟಬೆನ್ನಲ್ಲೇ, ಆ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೀರಂ ಸಂಸ್ಥೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲು ಮುಂದಾಗಿದ್ದಾರೆ. ಇದೇ ವೇಳೆ, ಭಾರತ್‌ ಬಯೋಟೆಕ್‌ ಕಂಪನಿಯ ಕೋವ್ಯಾಕ್ಸಿನ್‌ ಕುರಿತ ಪ್ರಗತಿ ವೀಕ್ಷಿಸಲು ಹೈದರಾಬಾದ್‌ಗೂ ತೆರಳಲಿದ್ದಾರೆ.

ಟೆಸ್ಟ್‌ ಸರಣಿಯಲ್ಲಿ ರೋಹಿತ್‌ ಶರ್ಮಾ ಆಡುವುದು ಅನುಮಾನ..!...

ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಆಡುವುದು ಅನುಮಾನ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 

ವಿಕ್ರಾಂತ್ ರೋಣನ ಕೋಟೆಯಿಂದ ಗುಡ್ ನ್ಯೂಸ್‌; ಕನ್ನಡಕ್ಕೆ ಕತ್ರಿನಾ ಕೈಫ್ ಎಂಟ್ರಿ?...

ಹಾಲಿವುಡ್ ರೇಂಜ್‌ನಲ್ಲಿ ತಯಾರಾಗುತ್ತಿರುವ 'ಫ್ಯಾಂಟಮ್' ಚಿತ್ರ ತಂಡದಿಂದ ಗುಡ್‌ ನ್ಯೂಸ್‌ವೊಂದು ಹೊರ ಬಂದಿದೆ. ವಿಕ್ರಾಂತ್‌ ರೋಣನಾಗಿ ಮಿಂಚುತ್ತಿರುವ ಕಿಚ್ಚ ಸುದೀಪ್‌ ಜೊತೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್‌ ಸೊಂಟ ಬಳುಕಿಸಲು ಬರ್ತಿದ್ದಾರೆ ಎಂಬ ಮಾತಿದೆ. 

ನಿಖಾಹ್‌ ಆದ್ರೂ ಪತಿ ದೂರ: ನ್ಯಾಯಕ್ಕಾಗಿ ಮಸೀದಿ ಮೊರೆ ಹೋದ ಮತಾಂತರಿತ ಪತ್ನಿ...

ದೇಶದಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮದುವೆಗಾಗಿ ಮತಾಂತರ ತಡೆಗೆ ಕಾನೂನು ಜಾರಿಗೊಳಿಸುತ್ತಿರುವುದು ವ್ಯಾಪಕ ಸುದ್ದಿಯಲ್ಲಿದೆ. ಇದೇ ವೇಳೆ ಮದುವೆಗಾಗಿ ಮತಾಂತರಗೊಂಡು, ಬಳಿಕ ಪತಿ ದೂರವಾದ ಪ್ರಕರಣದಲ್ಲಿ ಸಂತ್ರಸ್ತೆಗೊಂಡ ಮತಾಂತರಿತ ಪತ್ನಿ ನ್ಯಾಯಕ್ಕಾಗಿ ಮಸೀದಿಯ ಮೊರೆ ಹೋಗಲು ತೀರ್ಮಾನಿಸಿರುವ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.

ನಿವೃತ್ತ ಸೇನಾ ಯೋಧರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗವಕಾಶ!...

ಇ ಕಾಮರ್ಸ್‌-ವೇದಿಕೆಯಲ್ಲಿ ನಿವೃತ್ತ ಯೋಧರಿಗೆ ಉದ್ಯೋಗಾವಕಾಶ ಕಲ್ಪಿಸಲು ರಕ್ಷಣಾ ಪಡೆಗಳೊಂದಿಗೆ ಪಾಲದಾರಿಕೆಯನ್ನು ಪ್ಲಿಫ್‌ಕಾರ್ಟ್ ಘೋಷಿಸಿದೆ.  ಸೇನಾ ಕಲ್ಯಾಣ ನಿಯೋಜನಾ ಸಂಘಟನೆ (ಎಡಬ್ಯುಪಿಒ) ಜೊತೆ ಪಾಲುದಾರಿಕೆಯಲ್ಲಿ ಇದೀಗ ಈ ಅವಕಾಶ ಘೋಷಿಸಲಾಗಿದೆ.

ಪೆಟ್ರೋಲ್, ಡೀಸೆಲ್ ಮತ್ತಷ್ಟು ದುಬಾರಿ; ಸಂಕಷ್ಟದಲ್ಲಿ ಬದುಕು!...

ಪೆಟ್ರೋಲ್, ಡೀಸೆಲ್ ಬೆಲೆ ಶತಕದತ್ತ ಮುನ್ನಗ್ಗುತ್ತಿದೆ. ಕಳೆದೊಂದು ವಾರದಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ವಸ್ತುಗಳ ಬೆಲೆಯೂ ಏರಿಕೆಯಾಗುವ ಸೂಚನೆ ಸಿಕ್ಕಿದೆ. ಮೊದಲೇ ಕೊರೋನಾದಿಂದ ಹೈರಾಣಾಗಿರುವ ಜನರ ಬದುಕಿಗೆ ಇದೀಗ ಪೆಟ್ರೋಲ್, ಡೀಸೆಲ್ ಕೊಳ್ಳಿ ಇಡುವಂತಿದೆ.

click me!